Vanshika: ವಂಶಿಕಾ ಈಗ ನಿರೂಪಕಿ; ‘ನನ್ನಮ್ಮ ಸೂಪರ್​ ಸ್ಟಾರ್​ 2’ ಶೋ ನಡೆಸಿಕೊಡಲಿರುವ ಮಿನಿ ಪಟಾಕಿ

| Updated By: ಮದನ್​ ಕುಮಾರ್​

Updated on: Sep 26, 2022 | 9:56 AM

Nannamma Superstar 2: ವಂಶಿಕಾ ನಿರೂಪಕಿಯಾಗಿ ಆಯ್ಕೆ ಆಗಿರುವುದಕ್ಕೆ ಆಕೆಯ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಆದರೆ ಬೇರೆ ಮಕ್ಕಳಿಗೂ ಅವಕಾಶ ಕೊಡಿ ಎಂದು ಕೆಲವರು ಸಲಹೆ ನೀಡಿದ್ದಾರೆ.

Vanshika: ವಂಶಿಕಾ ಈಗ ನಿರೂಪಕಿ; ‘ನನ್ನಮ್ಮ ಸೂಪರ್​ ಸ್ಟಾರ್​ 2’ ಶೋ ನಡೆಸಿಕೊಡಲಿರುವ ಮಿನಿ ಪಟಾಕಿ
ವಂಶಿಕಾ
Follow us on

ಕನ್ನಡದ ಕಿರುತೆರೆಯಲ್ಲಿ ವಂಶಿಕಾ ಅಂಜನಿ ಕಶ್ಯಪ್​ (Vanshika Anjani Kashyapa) ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಾಳೆ. ಮಾಸ್ಟರ್​ ಆನಂದ್​ ಪುತ್ರಿ ಎಂಬ ಟ್ಯಾಗ್​ ಆಕೆಗೆ ಇತ್ತು. ಆದರೆ ಅದು​ ಬದಲಾಗುವ ರೀತಿಯಲ್ಲಿ ಅವಳು ಸ್ವಂತವಾಗಿ ಗುರುತಿಸಿಕೊಂಡಿದ್ದಾಳೆ. ಈಗ ವಂಶಿಕಾ ಎಂದರೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ‘ಕಲರ್ಸ್​ ಕನ್ನಡ’ ವಾಹಿನಿಯ ‘ನನ್ನಮ್ಮ ಸೂಪರ್​ ಸ್ಟಾರ್​’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ಆಕೆಗೆ ಭರಪೂರ ಜನಪ್ರಿಯತೆ ಸಿಕ್ಕಿತು. ಆ ಬಳಿಕ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲೂ ವಂಶಿಕಾ ಧೂಳೆಬ್ಬಿಸಿದಳು. ಈ ಎರಡೂ ಶೋಗಳನ್ನು ವಿನ್​ ಆಗಿರುವ ಆಕೆಗೆ ಈಗ ನಿರೂಪಕಿಯಾಗಿ ಬಡ್ತಿ ಸಿಗುತ್ತಿದೆ! ಹೌದು, ‘ನನ್ನಮ್ಮ ಸೂಪರ್​ ಸ್ಟಾರ್​ 2’ (Nannamma Superstar 2) ನಿರೂಪಣೆ ಮಾಡಲು ವಂಶಿಕಾ ಸಜ್ಜಾಗುತ್ತಿದ್ದಾಳೆ. ಶೀಘ್ರದಲ್ಲೇ ಈ ಶೋ ಆರಂಭ ಆಗಲಿದೆ. ವಂಶಿಕಾಗೆ ನಿರಂಜನ್​ ದೇಶಪಾಂಡೆ (Niranjan Deshpande) ಸಾಥ್​ ನೀಡಲಿದ್ದಾರೆ.

‘ನನ್ನಮ್ಮ ಸೂಪರ್​ ಸ್ಟಾರ್​’ ಮೊದಲ ಸೀಸನ್​ ಅನ್ನು ನಟಿ ಅನುಪಮಾ ಗೌಡ ನಿರೂಪಣೆ ಮಾಡಿದ್ದರು. ಆದರೆ ಈಗ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ ಸ್ಪರ್ಧಿಯಾಗಿದ್ದಾರೆ. ಅವರು ದೊಡ್ಮನೆಗೆ ಎಂಟ್ರಿ ನೀಡಿರುವುದರಿಂದ ‘ನನ್ನಮ್ಮ ಸೂಪರ್​ ಸ್ಟಾರ್ 2​’ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಸ್ಥಾನಕ್ಕೆ ವಂಶಿಕಾ ಮತ್ತು ನಿರಂಜನ್​ ದೇಶಪಾಂಡೆ ಬಂದಿದ್ದಾರೆ.

ಇದನ್ನೂ ಓದಿ
ಕಿರುತೆರೆಯಿಂದ ಹಿರಿತೆರೆಗೆ ಮಾಸ್ಟರ್ ಆನಂದ್ ಮಗಳು ವಂಶಿಕಾ; ಮಾತಿನ ಮಲ್ಲಿಗೆ ಸಿನಿಮಾ ಆಫರ್
‘ನನ್ನಮ್ಮ ಸೂಪರ್​ ಸ್ಟಾರ್​’ ವಿನ್ನರ್​ ವಂಶಿಕಾ-ಯಶಸ್ವಿನಿ; ಟ್ರೋಫಿ ಜೊತೆ ಸಿಕ್ಕಿರುವ ಬಹುಮಾನದ ಹಣ ಎಷ್ಟು?
ರಶ್ಮಿಕಾ ರೀತಿಯಲ್ಲಿ ಸೂಪರ್ ಆಗಿ​ ಡಾನ್ಸ್ ಮಾಡಿದ ವಂಶಿಕಾ; ‘ಪುಷ್ಪ ಪಾರ್ಟ್​ 10’ನಲ್ಲಿ ನೀನೇ ಇರ್ತೀಯಾ ಎಂದ ಸೃಜನ್
‘ಮಗಳು ವಂಶಿಕಾಳಿಂದ ಜನರು ನನ್ನನ್ನು ಮತ್ತೆ ಪ್ರೀತಿಸುತ್ತಿದ್ದಾರೆ’; ಮಾಸ್ಟರ್​ ಆನಂದ್ ಭಾವುಕ ನುಡಿ

ಎಲ್ಲರಿಗೂ ಗೊತ್ತಿರುವಂತೆ ವಂಶಿಕಾ ಮಾತಿನ ಮಲ್ಲಿ. ವೇದಿಕೆ ಮೇಲೆ ನಿಲ್ಲಿಸಿ ಮೈಕ್​ ಕೊಟ್ಟರೆ ಪಟಪಟ ಪಟಾಕಿ ರೀತಿ ಸಿಡಿಯುತ್ತವೆ ಅವಳ ಮಾತುಗಳು. ಇನ್ನು, ನಟನೆಯಲ್ಲೂ ಅವಳು ಪ್ರತಿಭಾವಂತೆ. ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಆಕೆ ಮಾಡಿದ ಸ್ಕಿಟ್​ಗಳು ಎಲ್ಲರ ಗಮನ ಸೆಳೆದಿವೆ. ಈಗ ವಂಶಿಕಾಳ ನಿರೂಪಣೆಯನ್ನು ನೋಡುವ ಸಮಯ ಹತ್ತಿರ ಬಂದಿದೆ.

ವಂಶಿಕಾ ‘ನನ್ನಮ್ಮ ಸೂಪರ್​ ಸ್ಟಾರ್​ 2’ ನಿರೂಪಣೆ ಮಾಡುತ್ತಾಳೆ ಎಂಬುದನ್ನು ತಿಳಿಸಲು ಕಲರ್ಸ್ ಕನ್ನಡ ವಾಹಿನಿ ಒಂದು ಪ್ರೋಮೋ ರಿಲೀಸ್​ ಮಾಡಿದೆ. ಇದು ತುಂಬ ತಮಾಷೆಯಾಗಿ ಮೂಡಿಬಂದಿದ್ದು, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ವಂಶಿಕಾ ಆಯ್ಕೆ ಬಗ್ಗೆ ಅನೇಕರು ಕಮೆಂಟ್​ಗಳ ಮೂಲಕ ತಮ್ಮ ಅನಿಸಿಕೆ ತಿಳಿಸಿದ್ದಾರೆ.

ಈ ಕಾರ್ಯಕ್ರಮವನ್ನು ವಂಶಿಕಾ ನಿರೂಪಣೆ ಮಾಡಲಿರುವುದರಿಂದ ಆಕೆಗೆ ಕಲರ್ಸ್​ ಕನ್ನಡ ವಾಹಿನಿಯ ಬ್ಯಾಕ್​ ಟು ಬ್ಯಾಕ್​ ಮೂರು ಶೋನಲ್ಲಿ ಚಾನ್ಸ್​ ಸಿಕ್ಕಂತೆ ಆಗುತ್ತದೆ. ಕರ್ನಾಟಕದಲ್ಲಿ ಬೇರೆ ಮಕ್ಕಳೂ ಕೂಡ ಇದ್ದಾರೆ. ಅವರಿಗೂ ಅವಕಾಶ ಕೊಡಿ ಎಂದು ಕೆಲವರು ಸಲಹೆ ನೀಡಿದ್ದಾರೆ. ವಂಶಿಕಾ ನಿರೂಪಕಿಯಾಗಿ ಆಯ್ಕೆ ಆಗಿರುವುದಕ್ಕೆ ಆಕೆಯ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.