Honganasu: ರಾತ್ರೋರಾತ್ರಿ ವಸು ಹುಡುಕಿ ಹೊರಟ ರಿಷಿ; ಗಾಬರಿಯಾದ ಜಗತಿ
Honganasu Serial Update: ವಸು ಬಗ್ಗೆ ಕೇಳಲು ರಿಷಿ ಓಡಿ ಬಂದ. ಆತ ಬಂದಿರುವ ಕಾರಣ ಏನು ಅಂತ ಮಹೇಂದ್ರನಿಗೆ ಗೊತ್ತಾಯಿತು. ರಿಷಿ ಕೇಳದೇ ವಸು ಬಗ್ಗೆ ಏನೂ ಹೇಳಬಾರದು ಎಂದು ಜಗತಿಗೂ ಮಹೇಂದ್ರ ಹೇಳಿದ.
ಧಾರಾವಾಹಿ: ಹೊಂಗನಸು
ಪ್ರಸಾರ: ಸ್ಟಾರ್ ಸುವರ್ಣ
ಸಮಯ: ಮಧ್ಯಾಹ್ನ 1.30
ನಿರ್ದೇಶನ: ಅನಿಲ್ ಆನಂದ್, ಕುಮಾರ್
ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು.
ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?
ರಿಷಿ ಆಸೆಯಂತೆ ಮಹೇಂದ್ರ ಮನೆಗೆ ವಾಪಸ್ ಆಗಿದ್ದಾನೆ. ಮಹೇಂದ್ರನ ಇಷ್ಟದಂತೆ ಜಗತಿ ಕೂಡ ಮನೆಗೆ ಬಂದಿದ್ದಾಳೆ. ಆದರೆ ಜಗತಿ ಜೊತೆಯಲ್ಲಿದ್ದ ವಸು ಒಂಟಿಯಾಗಿದ್ದಾಳೆ. ವಸುಧರಾ ಎಲ್ಲಿ ಇರುತ್ತಾಳೆ? ಇನ್ಮುಂದೆ ಹೇಗೆ ಅವಳ ಜೀವನ ಎಂದು ರಿಷಿಗೆ ಯೋಚನೆಯಾಗಿದೆ. ಮತ್ತೊಂದು ಕಡೆ ಜಗತಿ ಎಲ್ಲವನ್ನೂ ಸರಿ ಮಾಡುತ್ತಾಳೆ ಎನ್ನುವ ನಂಬಿಕೆ ರಿಷಿಗೆ.
ಊಟನೂ ಮಾಡದೇ ಕುಳಿತಿದ್ದ ವಸುಧರಾಳನ್ನು ಕರೆದುಕೊಂಡು ಹೋದ ರಿಷಿ. ಇಬ್ಬರೂ ಜೊತೆಯಲ್ಲೇ ಕುಳಿತು ಊಟ ಮಾಡಿದರು. ತನ್ನ ಮೇಲೆ ಯಾಕಿಷ್ಟು ಕಾಳಜಿ ಎಂದು ರಿಷಿಗೆ ಕೇಳಿದಳು ವಸು. ರಿಷಿ ತಕ್ಷಣ ಅದೇ ಪ್ರಶ್ನೆಯನ್ನೇ ತಿರುಗಿ ವಸುಗೆ ಕೇಳಿದ. ವಸು ಯೋಚಿಸಿ ‘ಜಗತಿ ಮಗ ಎನ್ನುವ ಕಾರಣಕ್ಕೆ ತುಂಬಾ ಕಾಳಜಿ’ ಎಂದು ಉತ್ತರಿಸಿದಳು. ಬಳಿಕ ರಿಷಿ ‘ನೀನು ತುಂಬಾ ಸ್ಪೆಷಲ್, ಬುದ್ಧಿವಂತೆ ಹಾಗಾಗಿ ನೀನೆಂದರೆ ತುಂಬಾ ಇಷ್ಟ’ ಎಂದು ವಸುಗೆ ಹೇಳಿದ. ಇಬ್ಬರ ಮಾತಕತೆಯನ್ನು ಜಗತಿ ಮತ್ತು ಮಹೇಂದ್ರ ಕೇಳಿಸಿಕೊಳ್ಳುತ್ತಿದ್ದರು. ರಿಷಿ ಮನಸ್ಸಲ್ಲಿದ್ದ ಪ್ರೀತಿಯನ್ನು ವಸುಗೆ ಹೇಳ್ತಾನಾ ಎಂದು ಕಾತರದಿಂದ ಕಾಯುತ್ತಿದ್ದರು. ಆದರೆ ರಿಷಿ ಏನೂ ಹೇಳದೆ ‘ಬುದ್ಧಿವಂತೆ ಆಗಿದ್ದಕ್ಕೆ ನಿನ್ನನ್ನು ಅಸಿಸ್ಟೆಂಟ್ ಆಗಿ ಮಾಡಿಕೊಂಡಿದ್ದು’ ಎಂದು ಹೇಳಿ ಸೈಲೆಂಟ್ ಆದ.
ಕಾಲೇಜು ಮುಗಿಸಿ ಮನೆಗೆ ಹೊರಟ ರಿಷಿ. ಆಗ ಗೌತಮ್ ಎಂಟ್ರಿ ಕೊಟ್ಟ. ಇಷ್ಟೊತ್ತಿಗೆ ಕಾಲೇಜು ಕಡೆ ಯಾಕೆ ಬಂದಿದ್ದು ಎಂದು ಗೌತಮ್‌ಗೆ ಕೇಳಿದ ರಿಷಿ. ‘ವಸುಧರಾಳನ್ನು ಹುಡುಕಿಕೊಂಡು ಬಂದೆ, ಆಕೆ ನನ್ನ ಏಂಜಲ್’ ಎಂದೆಲ್ಲ ರಿಷಿ ಮುಂದೆ ತನ್ನ ಪ್ರೀತಿ ವ್ಯಕ್ತಪಡಿಸಿದ ಗೌತಮ್. ‘ಇನ್ಮಂದೆ ಹಾಗೆಲ್ಲ ಹೇಳಬೇಡ’ ಎಂದು ಗೌತಮ್‌ಗೆ ಎಚ್ಚರಿಕೆ ನೀಡಿದ. ‘ವಸುಧರಾ ಎಲ್ಲಿ ಇರುತ್ತಾಳೆ ಅಂತ ಅತ್ತಿಗೆ ಕೇಳ್ಕೊಂಡು ಬರಲಿಕ್ಕೆ ಹೇಳಿದ್ರು ಆದಕ್ಕೆ ಬಂದಿದ್ದು’ ಎಂದು ಗೌತಮ್ ವಿವರಿಸಿದ. ಬಳಿಕ ರಿಷಿಗೆ ವಸುದೇ ಚಿಂತೆಯಾಯಿತು. ಎಲ್ಲಿರುತ್ತಾಳೋ ಏನೋ ಎಂದು ಯೋಚಿಸುತ್ತಲೇ ಮನೆಗೆ ಹೋದ. ಕಾಲ್ ಮಾಡಿದರೂ ವಸು ರಿಸೀವ್ ಮಾಡಲಿಲ್ಲ. ರಿಷಿಗೆ ಮತ್ತಷ್ಟು ಗಾಬರಿಯಾಯಿತು. ಅಷ್ಟರಲ್ಲೇ ವಸುಧರಾಳನ್ನು ಹೊಸ ಮನೆಗೆ ಶಿಫ್ಟ್ ಮಾಡಿ ಮಹೇಂದ್ರ ಮತ್ತು ಜಗತಿ ಮನೆಗೆ ಬಂದರು.
ವಸು ಬಗ್ಗೆ ಕೇಳಲು ರಿಷಿ ಓಡಿ ಬಂದ. ಆತ ಬರುವ ವಿಷಯ ಮಹೇಂದ್ರನಿಗೆ ಗೊತ್ತಾಯಿತು. ರಿಷಿ ಕೇಳದೇ ವಸು ಬಗ್ಗೆ ಏನೂ ಹೇಳಬಾರದು ಎಂದು ಜಗತಿಗೂ ಮಹೇಂದ್ರ ಹೇಳಿದ. ರಿಷಿ ಬಂದವನೇ ಎಲ್ಲಿಗೆ ಹೋಗಿದ್ದೀರಿ ಎಂದು ಪ್ರಶ್ನೆ ಮಾಡಿದ. ಆದರೆ ಮಹೇಂದ್ರ ಲಾಂಗ್ ಡ್ರೈವ್ ಹೋಗಿದ್ವಿ ಎಂದು ಸುಳ್ಳು ಹೇಳಿದ. ರಿಷಿ ಏನೇನೋ ಪ್ರಶ್ನೆ ಕೇಳಿದ. ಆದರೆ ಮಹೇಂದ್ರ ಮಾತ್ರ ವಸು ಬಗ್ಗೆ ಏನೂ ಹೇಳದೆ ಹೊರಟು ಹೋದ. ಅಷ್ಟಕ್ಕೆ ಸುಮ್ಮನಾಗದ ರಿಷಿ ಮಹೇಂದ್ರನ ರೂಮಿನ ಮುಂದೆಯೇ ಓಡಾಡುತ್ತಿದ್ದ. ರೂಮಿನ ಬಾಗಿಲು ತೆಗೆದು ‘ಏನಾದ್ರು ಕೇಳಬೇಕಿತ್ತಾ’ ಎಂದು ರಿಷಿಯನ್ನು ಕೇಳಿದ ಮಹೇಂದ್ರ. ಆಗ ‘ವಸುಧರಾ..’ ಎಂದ ರಿಷಿ. ‘ಅವಳೆಲ್ಲಿದ್ದಾಳೆ ಅಂತ ನಾನು ಹೇಳಲ್ಲ, ನೀನೇ ಹುಡುಕು ಲೊಕೇಶನ್ ಕೊಡುತ್ತೀನಿ’ ಎಂದ ಮಹೇಂದ್ರ.
ರಿಷಿ ರಾತ್ರೋರಾತ್ರಿ ವಸು ಹುಡುಕಿಕೊಂಡು ಹೊರಟ. ರಿಷಿ ಹೊರಟಿದ್ದು ನೋಡಿ ಜಗತಿ ಗಾಬರಿಯಾದಳು. ಮಹೇಂದ್ರ ಕಳುಹಿಸಿದ ಲೊಕೇಶನ್‌ಗೆ ರಿಷಿ ಎಂಟ್ರಿ ಕೊಡುತ್ತಿದ್ದಂತೆ ವಸು ಫೋನ್ ಮಾಡಿದಳು. ವಸುಧರಾಳನ್ನು ನೋಡಿ ರಿಷಿಗೆ ಸಮಾಧಾನ ಆಯಿತು. ಇಷ್ಟು ಚಿಕ್ಕ ರೂಮಿಲ್ಲಿ ಹೇಗಿರುತ್ತೀಯ ಎಂದು ವಸುನ ಕೇಳಿದ ರಿಷಿ. ಇದೇ ತನ್ನ ಪ್ರಪಂಚ ಎಂದು ವಸು ರೂಮನ್ನು ಖುಷಿಯಿಂದ ತೋರಿಸಿದಳು. ಒಂಟಿಯಾಗಿರುವ ವಸುಧರಾಳನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನಾ ರಿಷಿ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.