Weekend With Ramesh: ಈ ವಾರ ವೀಕೆಂಡ್ ವಿತ್ ರಮೇಶ್​ಗೆ ಇಬ್ಬರು ಅತಿಥಿಗಳು

Weekend With Ramesh: ವೀಕೆಂಡ್ ವಿತ್ ರಮೇಶ್​ ಸೀಸನ್ 5ರ ಈ ವಾರದ ಅತಿಥಿಗಳಾಗಿ ಒಬ್ಬರು ಸಿನಿಮಾ ಕ್ಷೇತ್ರದವರು ಹಾಗೂ ಮತ್ತೊಬ್ಬರು ಬಹುಮುಖ ಪ್ರತಿಭೆ ಆಗಮಿಸಲಿದ್ದಾರೆ.

Weekend With Ramesh: ಈ ವಾರ ವೀಕೆಂಡ್ ವಿತ್ ರಮೇಶ್​ಗೆ ಇಬ್ಬರು ಅತಿಥಿಗಳು
ವೀಕೆಂಡ್ ವಿತ್ ರಮೇಶ್
Follow us
ಮಂಜುನಾಥ ಸಿ.
|

Updated on:May 09, 2023 | 4:21 PM

ವೀಕೆಂಡ್ ವಿತ್ ರಮೇಶ್ (Weekend With Ramesh) ಸೀಸನ್ 5 ಯಶಸ್ವಿಯಾಗಿ ಟೆಲಿಕಾಸ್ಟ್ ಆಗುತ್ತಿದೆ. ಈಗಾಗಲೇ ಹಲವು ಮಂದಿ ಸಾಧಕರು ವೀಕೆಂಡ್ ವಿತ್ ರಮೇಶ್​ನ ಸಾಧಕರ ಕುರ್ಚಿ ಏರಿದ್ದಾರೆ. ಇದೀಗ ಮತ್ತೊಂದು ವೀಕೆಂಡ್ ಬರಲಿದ್ದು ಈ ಬಾರಿ ಸಾಧಕರ ಕುರ್ಚಿ ಏರಲಿರುವ ಅತಿಥಿಗಳು ಯಾರು ಎಂಬ ಕುತೂಹಲ ಮನೆ ಮಾಡಿದೆ. ಅಂದಹಾಗೆ ಈ ವಾರ ಒಬ್ಬರು ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದವರಾದರೆ ಮತ್ತೊಬ್ಬರು ವೈದ್ಯಕೀಯ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದವರಾಗಿದ್ದಾರೆ.

ಕಳೆದ ವಾರ ಲವ್ಲಿ ಸ್ಟಾರ್ ಪ್ರೇಮ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಶನಿವಾರ ಹಾಗೂ ಭಾನುವಾರ ಎರಡೂ ದಿನ ಅವರದ್ದೇ ಎಪಿಸೋಡ್ ನಡೆದಿತ್ತು. ಇದೀಗ ಈ ವೀಕೆಂಡ್​ಗೆ ಇಬ್ಬರು ಅತಿಥಿಗಳು ಶೋಗೆ ಆಗಮಿಸಲಿದ್ದು ಶನಿವಾರ ಒಬ್ಬರು ಭಾನುವಾರ ಒಬ್ಬರು ಸಾಧಕರು ಸಾಧಕರ ಕುರ್ಚಿ ಏರಲಿದ್ದಾರೆ.

ಶನಿವಾರದ ಎಪಿಸೋಡ್​ಗೆ ಜನಪ್ರಿಯ ಡ್ಯಾನ್ಸ್ ಕೊರಿಯೋಗ್ರಫರ್ ಆಗಿರುವ ಚಿನ್ನಿ ಪ್ರಕಾಶ್ ಮಾಸ್ಟರ್ ಆಗಮಿಸಲಿದ್ದರೆ, ಭಾನುವಾರದ ಎಪಿಸೋಡ್​ಗೆ ವೈದ್ಯ, ಲೇಖಕ, ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕ ನಾ ಸೋಮೇಶ್ವರ್ ಆಗಮಿಸಲಿದ್ದಾರೆ. ಇವರಿಬ್ಬರ ಕಾರ್ಯಕ್ರಮದ ಪ್ರೋಮೊಗಳನ್ನು ಜೀ ಕನ್ನಡ ವಾಹಿನಿ ಈಗಾಗಲೇ ಪ್ರಸಾರ ಮಾಡುತ್ತಿದೆ. ಚಿನ್ನ ಪ್ರಕಾಶ್ ಮಾಸ್ಟರ್ ಅವರ ಸಿನಿ ಜೀವನದ ಜರ್ನಿ, ಅಮಿತಾಬ್ ಬಚ್ಚನ್ ಸೇರಿದಂತೆ ಬಾಲಿವುಡ್​ನ ಹಲವು ದಿಗ್ಗಜರು, ಕನ್ನಡದಲ್ಲಿ ರವಿಚಂದ್ರನ್, ವಿಷ್ಣುವರ್ಧನ್ ಇನ್ನೂ ಹಲವು ತಾರೆಯರಿಗೆ ಡ್ಯಾನ್ಸ್ ಹೇಳಿಕೊಟ್ಟಿದ್ದನ್ನು ನೆನಪು ಮಾಡಿಕೊಂಡಿದ್ದಾರೆ. ಚಿನ್ನ ಮಾಸ್ಟರ್​ಗಾಗಿ ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಖ್ಯಾತ ತಾರೆಯರು ವಿಶೇಷ ವಿಡಿಯೋ ಕಳುಹಿಸಿದ್ದಾರೆ.

ಶೋನಲ್ಲಿ ಚಿನ್ನಿ ಮಾಸ್ಟರ್ ಪತ್ನಿ ಸಹ ಭಾಗವಹಿಸಿದ್ದು ಇಬ್ಬರೂ ಸಹ ಹಾಡುಗಳಿಗೆ ನರ್ತಿಸಿ ಪ್ರೇಕ್ಷಕರಿಗೆ ನೃತ್ಯ ರಸದೌತಣ ನೀಡಿದ್ದಾರೆ. ಚಿನ್ನಿ ಮಾಸ್ಟರ್ ಪತ್ನಿ ತಾರಾ ಸಹ ಅದ್ಭುತ ನೃತ್ಯಗಾರ್ತಿ. ಮಾಧುರಿ ದೀಕ್ಷಿತ್ ಸೇರಿದಂತೆ ಹಲವು ನಟಿಯರಿಗೆ ಅವರು ನೃತ್ಯ ತಾಲೀಮು ಮಾಡಿಸಿದ್ದಾರೆ.

ಇನ್ನು ನಾ ಸೋಮೇಶ್ವರ್ ಅವರು ತಮ್ಮ ಬಾಲ್ಯ, ಶಿಕ್ಷಣ ಎಲ್ಲವನ್ನೂ ನೆನಪಿಸಿಕೊಳ್ಳುತ್ತಾ ವೀಕೆಂಡ್ ವಿತ್ ರಮೇಶ್​ ವೇದಿಕೆಯ ಮೇಲೆಯೇ ಥಟ್ ಅಂತ ಹೇಳಿ ಕಾರ್ಯಕ್ರಮ ನಡೆಸಿದ್ದಾರೆ. ಅಲ್ಲದೆ ಶೋಗೆ ಆಗಮಿಸಿದ ಅವರ ಗುರುಗಳ ಪಾದಗಳಿಗೆ ವೇದಿಕೆ ಮೇಲೆ ನಮಿಸಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ನಾ ಸೋಮೇಶ್ವರರು ಮಾಡುತ್ತಿರುವ ಕನ್ನಡ ಕೆಲಸಕ್ಕೆ ಭಾರಿ ಪ್ರಶಂಸೆಯನ್ನು ಶೋಗೆ ಬಂದ ಅತಿಥಿಗಳು ವ್ಯಕ್ತಪಡಿಸಿದ್ದಾರೆ.

ವೀಕೆಂಡ್ ವಿತ್ ರಮೇಶ್ ಸೀಸನ್ 5 ರಲ್ಲಿ ಈವರೆಗೆ ಹಲವು ಜನಪ್ರಿಯ ಸೆಲೆಬ್ರಿಟಿಗಳು ಸಾಧಕರ ಕುರ್ಚಿ ಏರಿದ್ದಾರೆ. ನಟಿ ರಮ್ಯಾ, ಪ್ರಭುದೇವ, ಹೃದ್ರೋಗ ತಜ್ಞ ಮಂಜುನಾಥ, ಮಂಡ್ಯ ರಮೇಶ್, ಅವಿನಾಶ್, ಗುರುರಾಜ ಕರಜಗಿ, ಸಿಹಿ-ಕಹಿ ಚಂದ್ರು ಇನ್ನೂ ಹಲವು ಸಾಧಕರು ಈ ಬಾರಿ ಸಾಧಕರ ಕುರ್ಚಿ ಏರಿದ್ದು, ನೂರನೇ ಎಪಿಸೋಡ್​ಗೆ ವಿಶೇಷ ಅತಿಥಿಯನ್ನು ಕರೆತರಲಿದ್ದಾರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:07 pm, Tue, 9 May 23

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ