AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lata Mangeshkar Hit Songs : ಹೇಮಾ ಹೋಗಿ ಲತಾ ಆಗಿ ನೀವು ಇಂಥ ಸೂಪರ್ ಹಿಟ್ ಹಾಡುಗಳನ್ನು ಧಾರೆ ಎರೆದಿರಿ

Singer : ಲತಾ ಎಂದೂ ಔಪಚಾರಿಕ ಶಿಕ್ಷಣಕ್ಕೆ ತೆರೆದುಕೊಳ್ಳಲಿಲ್ಲ. ತಮ್ಮತಂಗಿಯರೊಂದಿಗೆ ಶಾಲೆಗೆ ಹೋಗಿದ್ದಕ್ಕೆ ಶಿಕ್ಷಕರು ಗದರಿದ ಪರಿಣಾಮ ಇನ್ನೆಂದೂ ಶಾಲೆಗೆ ಹೋಗುವುದಿಲ್ಲವೆಂದು ನಿರ್ಧರಿಸಿಬಿಟ್ಟರು. ಮುಂದೆ ನಾಟಕ, ಸಂಗೀತವನ್ನೇ ಮೈಗೂಡಿಸಿಕೊಂಡ ಈ ಬಾಲೆಯ ಭವಿಷ್ಯ ಯಾರಿಗೆ ಗೊತ್ತಿತ್ತು?

Lata Mangeshkar Hit Songs : ಹೇಮಾ ಹೋಗಿ ಲತಾ ಆಗಿ ನೀವು ಇಂಥ ಸೂಪರ್ ಹಿಟ್ ಹಾಡುಗಳನ್ನು ಧಾರೆ ಎರೆದಿರಿ
ಲತಾ ಮಂಗೇಶ್ಕರ್
TV9 Web
| Updated By: ಶ್ರೀದೇವಿ ಕಳಸದ|

Updated on:Feb 06, 2022 | 11:44 AM

Share

ಲತಾ ಮಂಗೇಶ್ಕರ್ | Laha Mangeshkar : ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ರಂಗಕಲಾವಿದ ಪಂಡಿತ್ ದೀನಾನಾಥ ಮಂಗೇಶ್ಕರ್ ಅವರ ಮೊದಲ ಹೆಂಡತಿ ನರ್ಮದಾ. ಅವರು ತೀರಿದ ನಂತರ ಅವರ ತಂಗಿ ಸೇವಂತಾ ಜೊತೆ ಇವರ ವಿವಾಹವಾಯಿತು. ಸೇವಂತಾಳಿಗೆ ಶುದ್ಧಮತಿ ಎಂಬ ಹೆಸರಿನಿಂದ ದೀನಾನಾಥ ಕರೆದರು. ಲತಾ ಮಂಗೇಶ್ಕರ್ ಹುಟ್ಟಿದ್ದು ಮಧ್ಯಪ್ರದೇಶದ ಇಂದೋರಿನಲ್ಲಿ. ನಂತರ ಆಶಾ, ಮೀನಾ, ಉಷಾ ಮತ್ತು ಹೃದಯನಾಥ ಜನಿಸಿದರು. ದೀನಾನಾಥರ ಬಲವಂತ ಸಂಗೀತ ಮಂಡಳಿ ಮುಚ್ಚಿದ ನಂತರ ಮನೆಯಲ್ಲಿಯೇ ಮಕ್ಕಳಿಗೆ ಸಂಗೀತ ಪಾಠವನ್ನು ಅವರು ಹೇಳಿಕೊಡುತ್ತಿದ್ದರು. ಇದೆಲ್ಲವನ್ನೂ ಲತಾ ಗಮನಿಸುತ್ತಿದ್ದರು. ಯಾರಾದರೂ ಬೇಸುರ್ ಹಾಡಿದಲ್ಲಿ ಅದನ್ನು ತಿದ್ದುತ್ತಿದ್ದ ಲತಾರ ಸಂಗೀತಪ್ರತಿಭೆಯನ್ನು ಗುರುತಿಸಿದ ದೀನಾನಾಥ್ ಲತಾ ಕಡೆಗೆ ವಿಶೇಷ ಗಮನ ಕೊಡಲಾರಂಭಿಸಿದರು. ಶಿಸ್ತಿನಿಂದ ಸಂಗೀತ ಪಾಠ ಹೇಳಿಕೊಡಲಾರಂಭಿಸಿದರು. ಲತಾ ಅವರ ಮೂಲ ಹೆಸರು ಹೇಮಾ. ಹೇಳಿಕೊಟ್ಟಿದ್ದನ್ನೆಲ್ಲ ಎಡೆಬಿಡದೆ ಅಭ್ಯಾಸ ಮಾಡಿ ಕರಗತ ಮಾಡಿಕೊಳ್ಳುತ್ತಿದ್ದ ಮಗಳ ಚುರುಕುತನ ತಂದೆಯನ್ನು ಸೆಳೆಯುತ್ತ ಹೋಯಿತು.

*

ಲತಾ ಭಾವಬಂಧನ್ ನಾಟಕದಲ್ಲಿ ಅಭಿನಯಿಸಿದ ನಂತರ ಹೇಮಾ ಹೋಗಿ ಲತಾ ಎಂಬ ಹೆಸರು ಅವರಿಗೆ ಬಂದಿತು. ಲತಾ ಎಂದೂ ಔಪಚಾರಿಕ ಶಿಕ್ಷಣಕ್ಕೆ ತೆರೆದುಕೊಳ್ಳಲಿಲ್ಲ. ತಮ್ಮತಂಗಿಯರೊಂದಿಗೆ ಶಾಲೆಗೆ ಹೋಗಿದ್ದಕ್ಕೆ ಶಿಕ್ಷಕರು ಗದರಿದ ಪರಿಣಾಮ ಇನ್ನೆಂದೂ ಶಾಲೆಗೆ ಹೋಗುವುದಿಲ್ಲವೆಂದು ನಿರ್ಧರಿಸಿಬಿಟ್ಟರು. ಮುಂದೆ ನಾಟಕ, ಸಂಗೀತವನ್ನೇ ಮೈಗೂಡಿಸಿಕೊಂಡ ಈ ಬಾಲೆ ಹೀಗೆ ತನ್ನ ಕಂಠಸಿರಿಯಿಂದ ಜಗತ್ತಿನ ಗಮನ ಸೆಳೆಯುತ್ತಾಳೆಂದು ಯಾರಿಗೆ ಗೊತ್ತಿತ್ತು? ಇವರು ಹಾಡಿದ ಸೂಪರ್ ಹಿಟ್​ ಹಾಡುಗಳು ಹೀಗಿವೆ.

1950ರ ದಶಕದಲ್ಲಿ ಕಮಲ್ ಅಮ್ರೋಹಿ ನಿರ್ದೇಶಿಸಿದ ಮಹಲ್ ಸಿನೆಮಾದಲ್ಲಿ ಲತಾ ಮಂಗೇಶ್ಕರ್ ಆಯೇಗಾ ಆನೇವಾಲಾ ಹಾಡನ್ನು ಹಾಡಿದರು.  ಖೇಮಚಂದ್ರ ಸಂಗೀತ ನಿರ್ದೇಶನದ ಈ ಹಾಡು ಲತಾ ಅವರ ಮೊದಲ ಸೂಪರ್ ಹಿಟ್ ಹಾಡಾಯಿತು.

1960 ರ ದಶಕದ ಕಿಶೋರ್ ಸಾಹು ನಿರ್ದೇಶನದ ದಿಲ್ ಅಪನಾ ಹೈ ಪ್ರೀತ್ ಪರಾಯಿ ಸಿನೆಮಾದ ಅಜೀಬ್ ದಾಸ್ತಾನ್ ಹೈ ಸೂಪರ್ ಹಿಟ್ ಹಾಡುಗಳಲ್ಲಿ ಒಂದಾಯಿತು.

1970ರ ದಶಕದಲ್ಲಿ ರಮಾನಂದ ಸಾಗರ ನಿರ್ದೇಶಿಸಿದ ಚರಸ್ ಸಿನೆಮಾದ ಆಜ್ ತೇರೀ ಯಾದ್ ಆಯೀ ಹಾಡನ್ನು ಲತಾ ಹಾಡಿದರು. ಆನಂದ ಭಕ್ಷಿ ಈ ಗೀತೆಯನ್ನು ರಚಿಸಿದ್ದರು. ಆ ದಶಕದ ಸೂಪರ್ ಹಿಟ್ ಹಾಡಿನಲ್ಲಿ ಇದೂ ಒಂದಾಯಿತು.

1980 ದಶಕದ ಹಾಯ್ ವೋ ಪರದೇಸಿ ಹಾಡು ಸೂಪರ್ ಹಿಟ್ ಹಾಡುಗಳಲ್ಲಿ ಒಂದಾಯಿತು. ಶಕ್ತಿ ಸಮಂತಾ ನಿರ್ದೇಶನದ ಬರಸಾತ್ ಕೀ ರಾತ್ ಸಿನೆಮಾ ಬೆಂಗಾಲಿ ಮತ್ತು ಹಿಂದಿಯಲ್ಲಿ ಬಿಡುಗಡೆಯಾಯಿತು. ಶಕ್ತಿಪಾದ ರಾಜಗುರು ಕಾದಂಬರಿಯಾಧಾರಿತ ಸಿನೆಮಾ ಇದಾಗಿತ್ತು.

1990 ದಶಕದಲ್ಲಿ ಕೆ. ಸಿ. ಬೊಕಾಡಿಯಾ ನಿರ್ದೇಶಿಸಿದ ಆಜ್​ ಕಾ ಅರ್ಜುನ್ ಸಿನೆಮಾದ ಹಾಡು ಗೋರಿ ಹೈ ಕಲೈಂಯಾ ಸೂಪರ್ ಹಿಟ್ ಹಾಡುಗಳಲ್ಲಿ ಒಂದಾಯಿತು. ಇದು ಲತಾ ಅವರ ಖ್ಯಾತಿಯನ್ನು ಇನ್ನೂ ಉತ್ತುಂಗಕ್ಕೇರಿಸಿತು.

2000 ದಶಕದಲ್ಲಿ ಸೂರಜ್ ಬರ್ಜತ್ಯಾ ನಿರ್ದೇಶಿಸಿದ ಚಿತ್ರ ಮೈನೇ ಪ್ಯಾರ್ ಕಿಯಾ. ಈ ಸಿನೆಮಾದಲ್ಲಿ ಲತಾ ಹಾಡಿದ ಹಾಡು ಕಬೂತರ್ ಜಾ ಜಾ ಜಾ ಪ್ರೇಮಿಗಳ ಮನಸೂರೆಗೊಂಡಿತು.

ಇದನ್ನೂ ಓದಿ : Lata Mangeshkar: ಲತಾ ಮಂಗೇಶ್ಕರ್ ಕೊನೆವರೆಗೂ ಏಕೆ ಮದುವೆಯೇ ಆಗಲಿಲ್ಲ?

Published On - 11:36 am, Sun, 6 February 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!