AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ-ವಿಜಯ್ ನಟನೆಯ ‘ರಣಬಾಲಿ’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ

Ranabaali movie twitter review: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮೂರನೇ ಬಾರಿ ಒಟ್ಟಿಗೆ ನಟನೆ ಮಾಡಿರುವ ‘ರಣಬಾಲಿ’ ಸಿನಿಮಾ ಇಂದು (ಅಕ್ಟೋಬರ್ 16) ರಿಲೀಸ್ ಆಗಿದೆ. ರಾಹುಲ್ ಸಾಂಕೃತ್ಯಾಯನ ನಿರ್ದೇಶನ ಮಾಡಿರುವ ಈ ಸಿನಿಮಾನಲ್ಲಿ ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೊ ನಟಿಸಿದ್ದಾರೆ. ಸಿನಿಮಾ ನೋಡಿದವರು ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ.

ರಶ್ಮಿಕಾ-ವಿಜಯ್ ನಟನೆಯ ‘ರಣಬಾಲಿ’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
Ranabaali
ಮಂಜುನಾಥ ಸಿ.
|

Updated on: Oct 16, 2026 | 2:56 PM

Share

ಮುಖ್ಯಾಂಶಗಳು

  • ರಶ್ಮಿಕಾ-ವಿಜಯ್ ನಟಿಸಿರುವ ‘ರಣಬಾಲಿ’ ಸಿನಿಮಾ
  • ‘ರಣಬಾಲಿ’ ಸಿನಿಮಾ ಇಂದು ರಿಲೀಸ್ ಆಗಿದೆ.
  • ‘ರಣಬಾಲಿ’ ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕೆಲ ವರ್ಷಗಳ ಬಳಿಕ ಒಟ್ಟಿಗೆ ನಟನೆ ಮಾಡಿರುವ ‘ರಣಬಾಲಿ’ ಸಿನಿಮಾ ಇಂದು (ಅಕ್ಟೋಬರ್ 16) ರಿಲೀಸ್ ಆಗಿದೆ. ಇದೊಂದು ಸ್ವಾತಂತ್ರ್ಯ ಹೋರಾಟದ ಕತೆ ಹೊಂದಿರುವ ಸಿನಿಮಾ ಆಗಿದೆ. ಸಿನಿಮಾನಲ್ಲಿ ವಿಜಯ್ ದೇವರಕೊಂಡ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ಹಾಲಿವುಡ್​ ಸ್ಟಾರ್ ನಟ ಅರ್ನಾಲ್ಡ್ ವೋಸ್ಲೊ ವಿಲನ್ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಸಿನಿಮಾದ ಬಗ್ಗೆ ವಿಜಯ್​​ ದೇವರಕೊಂಡ ಅವರಿಗೆ ಭಾರಿ ನಿರೀಕ್ಷೆಗಳಿದ್ದು, ಸಿನಿಮಾ ನೋಡಿದ ಹಲವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ಸಿನಿಮಾದ ವಿಮರ್ಶೆ. ಬಹುತೇಕ ಮಂದಿ, ಸಿನಿಮಾ ಸಾಧಾರಣವಾಗಿದೆ ಎಂದಿದ್ದಾರೆ. ಅಲ್ಲೊಬ್ಬರು, ಇಲ್ಲೊಬ್ಬರು ಸಿನಿಮಾ ಬಹಳ ಚೆನ್ನಾಗಿದೆ ಎಂದೂ ಸಹ ಹೇಳಿದ್ದಾರೆ.

ವರುಣ್ ರಾಜಾ ವಾಸಿರೆಡ್ಡಿ ಹೆಸರಿನ ಟ್ವಿಟ್ಟರ್ ಬಳಕೆದಾರರೊಬ್ಬರು ಮಾಡಿರುವ ಟ್ವೀಟ್ ಅಂತೆ, ವಿಜಯ್ ದೇವಕರೊಂಡ ನಟನೆ ಬಹಳ ಚೆನ್ನಾಗಿದೆ. ರಶ್ಮಿಕಾ ನಟನೆ, ರಾಹುಲ್ ನಿರ್ದೇಶನ ಎಲ್ಲವೂ ಅದ್ಭುತವಾಗಿದೆ. ಹಿನ್ನೆಲೆ ಸಂಗೀತ ಸೂಪರ್. ‘ರಣಬಾಲಿ’ ಈ ವರ್ಷದ ಅದ್ಭುತ ಹಿಟ್ ಎನಿಸಿಕೊಳ್ಳಲಿದೆಯಂತೆ.

‘ಇದೊಂದು ಅದ್ಭುತವಾದ ಸಿನಿಮಾ. ಕತೆ, ಚಿತ್ರಕತೆ, ನಿರ್ದೇಶನದಲ್ಲಿ ರಾಹುಲ್ ಸಾಂಕೃತ್ಯಾಯನ ಅದ್ಭುತ ಮಾಡಿದ್ದಾರೆ. ವಿಜಯ್ ಹಾಗೂ ರಶ್ಮಿಕಾರ ನಟನೆಯೂ ಸಹ ಅದ್ಭುತ. ಅವರಿಬ್ಬರ ಆನ್​ ಸ್ಕ್ರೀನ್ ಕೆಮಿಸ್ಟ್ರಿ ಅದ್ಭುತವಾಗಿದೆ. ಅಜಯ್-ಅತುಲ್ ಸಂಗೀತವೂ ಸೂಪರ್. ವಿಜಯ್ ದೇವಕರೊಂಡಗೆ ಇಂಥಹದ್ದೊಂದು ಸಿನಿಮಾ ಬೇಕಿತ್ತು’ ಎಂದಿದ್ದಾರೆ ‘269 ಸೈನಿಂಗ್ ಆಫ್’ ಎಂಬ ಟ್ವಿಟ್ಟರ್ ಖಾತೆಯಿಂದ.

‘ರಣಬಾಲಿ’ಗೆ ದೊಡ್ಡ ಬಜೆಟ್, ಒಳ್ಳೆಯ ನಟರು ಎಲ್ಲವೂ ಇದೆ. ಆದರೆ ಸಿನಿಮಾದ ಚಿತ್ರಕತೆಯೇ ವೀಕ್ ಆಗಿದೆ. ಬಹಳ ಬೋರಿಂಗ್ ಆದ ಚಿತ್ರಕತೆ. ಸಿನಿಮಾನಲ್ಲಿ ಬಹಳ ಒಳ್ಳೆಯ ದೃಶ್ಯಗಳಿವೆ, ವಿಎಫ್​​ಎಕ್ಸ್ ಅದ್ಭುತವಾಗಿದೆ. ಸೆಟ್​​ಗಳು ಸಹ ಗಮನ ಸೆಳೆಯುತ್ತವೆ. ಆದರೆ ಒಟ್ಟಾರೆಯಾಗಿ ಸಿನಿಮಾಕ್ಕೆ ಇವು ಯಾವುದೇ ಸಹಾಯ ಮಾಡುವುದಿಲ್ಲ.ಸಾಧಾರಣ ಸಿನಿಮಾ ಇದಷ್ಟೆ ಎಂದು 10ಕ್ಕೆ 4 ಅಂಕ ಕೊಟ್ಟಿದ್ದಾರೆ ‘ಯಾರೋ ಒಬ್ಬ’ ಎಂಬ ಟ್ವಿಟ್ಟರ್ ಬಳಕೆದಾರ.

ವೈಲ್ಡ್ ಸಾಲೆ ಎಂಬ ಮತ್ತೊಬ್ಬ ಬಳಕೆದಾರರು ಬರೆದಿರುವಂತೆ, ‘ಪಾಪ ಬಹಳ ಶ್ರಮಪಟ್ಟು ಸಿನಿಮಾ ಮಾಡಿದ್ದಾರೆ. ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಆದರೆ ಚಿತ್ರಕತೆಯಲ್ಲಿ ಶಕ್ತಿ ಇಲ್ಲ. ಸಿನಿಮಾದ ಕತೆಯೇ ಔಟ್​​ಡೇಟೆಡ್ ಅನಿಸುತ್ತದೆ. ಸ್ವಾತಂತ್ರ್ಯ ಹೋರಾಟದ ಸಿನಿಮಾಗಳು ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತೆಲುಗಿನಲ್ಲಿ ಒಳ್ಳೆಯ ಪ್ರದರ್ಶನ ಕಂಡಿದ್ದು ವಿರಳ. ‘ರಣಬಾಲಿ’ ಸಹ ಇದಕ್ಕೆ ಹೊರತಲ್ಲ ಅನಿಸುತ್ತದೆ. ವಿಜಯ್ ಸಹ ಪಾತ್ರಕ್ಕೆ ಸರಿಯಾಗಿ ಸೂಟ್ ಆಗುತ್ತಿಲ್ಲ. ರಶ್ಮಿಕಾ ನಟನೆ ಚೆನ್ನಾಗಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More