‘ಸಿನಿಮಾದಲ್ಲಿ ಮುಸ್ಲಿಮರನ್ನು ಉಗ್ರರನ್ನಾಗಿ ತೋರಿಸಿದ ನಿಮಗೆ ಈಗ ನಮ್ಮ ವೋಟ್ ಬೇಕೇ?’; ದಳಪತಿ ವಿಜಯ್ಗೆ ಮುಸ್ಲಿಮರ ಪ್ರಶ್ನೆ
ದಳಪತಿ ವಿಜಯ್ ಅವರು ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಸಮಾಜ ವಿರೋಧಿಗಳನ್ನು ಆಹ್ವಾನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಮುಸ್ಲಿಂ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿ, ಮೌಲಾನಾ ಶಹಾಬುದ್ದೀನ್ ರಜ್ವಿ, ಫತ್ವಾ ಹೊರಡಿಸಿದ್ದಾರೆ. ವಿಜಯ್ ಅವರು ಚಲನಚಿತ್ರಗಳಲ್ಲಿ ಮುಸ್ಲಿಮರನ್ನು ಉಗ್ರರಾಗಿ ತೋರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ (Thalapathy Vijay) ಅವರು ರಂಜಾನ್ ಹಬ್ಬದ ಸಂದರ್ಭದಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಿದ್ದರು. ಈ ವೇಳೆ ಅವರು ಮುಂಜಾನೆಯಿಂದ ಉಪವಾಸ ಇದ್ದು, ರಾತ್ರಿ ಊಟ ಸೇವನೆ ಮಾಡಿದ್ದರು. ಅವರು ಆಯೋಜಿಸಿದ್ದ ಇಫ್ತಾರ್ ಕೂಟದ ಫೋಟೋಗಳು ವೈರಲ್ ಆಗಿತ್ತು. ಇದಕ್ಕೆ ಈಗ ಮುಸ್ಲಿಂ ಸಮುದಾಯದ ಕೆಲವರು ವಿರೋಧ ಹೊರಹಾಕಿದ್ದರೆ. ಅಲ್ಲದೆ, ದಳಪತಿ ವಿಜಯ್ ವಿರುದ್ಧ ಫತ್ವಾ ಕೂಡ ಹೊರಡಿಸಿದ್ದಾರೆ.
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಹೆಸರಿನ ಪಕ್ಷವನ್ನು ವಿಜಯ್ ಆರಂಭಿಸಿದ್ದಾರೆ. ಈ ಕಾರಣಕ್ಕೆ ಅವರು ಸಮಾಜದ ಜೊತೆ ಬೆರೆಯುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ಇಫ್ತಾರ್ ಕೂಟದಲ್ಲಿ ಮದ್ಯವ್ಯಸನಿಗಳು ಮತ್ತು ಜೂಜುಕೋರರು ಸೇರಿದಂತೆ ಸಮಾಜ ವಿರೋಧಿ ಅಂಶಗಳನ್ನು ಆಹ್ವಾನಿಸಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ಧ ಫತ್ವಾ ಹೊರಡಿಸಲಾಗಿದೆ.
ಉತ್ತರ ಪ್ರದೇಶದ ಬರೇಲಿಯ ‘ಅಖಿಲ ಭಾರತ ಮುಸ್ಲಿಂ ಜಮಾತ್’ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ‘ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದಾಗ ವಿಜಯ್ ಅವರು ನಮ್ಮ ಸಮುದಾಯದವನ್ನು ಟೆರರಿಸ್ಟ್ ಎಂದು ಕರೆದರು. ಈಗ ರಾಜಕೀಯ ಲಾಭಕ್ಕಾಗಿ ಅವರಿಗೆ ನಮ್ಮ ಸಮುದಾಯ ಬೇಕಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.
‘ವಿಜಯ್ ಇತ್ತೀಚೆಗೆ ಇಫ್ತಾರ್ ಕೂಟ ಆಯೋಜನೆ ಮಾಡಿದ್ದರು. ಇದಕ್ಕೆ ಅವರು ಜೂಜುಕೋರರು, ಕುಡುಕರು ಸೇರಿದಂತೆ ಇತರ ಸಮಾಜಘಾತುಕ ಚಟುವಟಿಕೆ ಮಾಡುವವರನ್ನು ಆಹ್ವಾನಿಸಿದ್ದರು. ಇದು ತಮಿಳುನಾಡಿನ ಮುಸ್ಲಿಂ ಸಮುದಾಯವನ್ನು ಕೆರಳಿಸಿದೆ’ ಎಂದು ಅವರು ಹೇಳಿದ್ದಾರೆ.
Bareilly, Uttar Pradesh: National President of All India Muslim Jamaat, Maulana Shahabuddin Razvi has issued a fatwa against TVK party President and actor Vijay Thalapathy
He says, “There is a prominent personality from Tamil Nadu named Vijay Thalapathy, who has formed a party… pic.twitter.com/OHhEtDb4BS
— IANS (@ians_india) April 16, 2025
‘ತಮಿಳುನಾಡು ಮುಸ್ಲಿಮರು ಅವರ ಜೊತೆ ಕೈ ಜೋಡಿಸಬಾರದು. ಅವರನ್ನು ಭೇಟಿ ಮಾಡಬಾರದು. ತಮಿಳುನಾಡು ಜನರು ತಮ್ಮ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು. ವಿಜಯ್ ಅವರನ್ನು ಎಂದಿಗೂ ನಂಬ ಬಾರದು’ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಏನೋ ಮಾಡಲು ಹೋಗಿ ಏನೋ ಆಯ್ತು, ದಳಪತಿ ವಿಜಯ್ ವಿರುದ್ಧ ಮುಸ್ಲೀಮರ ದೂರು
ಫತ್ವಾ ಎಂದರೇನು?
ಫತ್ವಾಗಳು ಇಸ್ಲಾಮಿಕ್ ಕಾನೂನಿನಡಿಯಲ್ಲಿ ಧರ್ಮ ಗುರುಗಳು (ಮುಫ್ತಿ) ಹೊರಡಿಸುವ ಆದೇಶ. ಭಾರತದಲ್ಲಿ ಮತ್ತು ಎಲ್ಲಾ ಮುಸ್ಲಿಮೇತರ ದೇಶಗಳಲ್ಲಿ, ಹಾಗೆಯೇ ಕೆಲವು ಮುಸ್ಲಿಂ ದೇಶಗಳಲ್ಲಿ ಫತ್ವಾಗಳಿಗೆ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಅಧಿಕಾರವಿಲ್ಲ. ಅವುಗಳಿಗೆ ಯಾವುದೇ ಕಾನೂನುಬದ್ಧ ಅವಕಾಶ ಇಲ್ಲದ ಕಾರಣ, ಅವು ಮುಸ್ಲಿಮರು ನಿರ್ಲಕ್ಷಿಸಬಹುದಾದ ಆದೇಶಗಳಾಗಿವೆ. ಅವು ಇತರ ಧರ್ಮಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:38 am, Thu, 17 April 25