ಟ್ರೋಲ್ ಮಾಡಿದವರಿಗೆ ‘ನಡುಗುತ್ತಲೇ’ ಪಂಚ್ ಕೊಟ್ಟ ವಿಶಾಲ್

Vishal Viral Video: ಕೆಲ ದಿನಗಳ ಹಿಂದಷ್ಟೆ ತಮಿಳು ನಟ ವಿಶಾಲ್ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ವಿಡಿಯೋನಲ್ಲಿ ವಿಶಾಲ್​ ಮೈಕ್ ಹಿಡಿದು ಮಾತನಾಡಲು ಕಷ್ಟಪಡುತ್ತಿದ್ದರು. ಅವರ ಕೈ ನಡುಗುತ್ತಿತ್ತು, ನಿಲ್ಲಲು ಸಹ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆ ವಿಡಿಯೋ ಸಖತ್ ಟ್ರೋಲ್ ಆಗಿತ್ತು. ಇದೀಗ ವಿಶಾಲ್ ತಮ್ಮದೇ ಶೈಲಿಯಲ್ಲಿ ಟ್ರೋಲರ್​ಗಳಿಗೆ ಪಂಚ್ ಕೊಟ್ಟಿದ್ದಾರೆ.

ಟ್ರೋಲ್ ಮಾಡಿದವರಿಗೆ ‘ನಡುಗುತ್ತಲೇ’ ಪಂಚ್ ಕೊಟ್ಟ ವಿಶಾಲ್
Vishal
Follow us
ಮಂಜುನಾಥ ಸಿ.
|

Updated on: Jan 18, 2025 | 2:11 PM

ತಮಿಳಿನ ನಟ ವಿಶಾಲ್ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ವಿಶಾಲ್​ರ ವಿಡಿಯೋ ಒಂದು ವೈರಲ್ ಆಗಿತ್ತು. ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ವಿಶಾಲ್​ಗೆ ಮೈಕ್ ಹಿಡಿಯಲು ಸಹ ಆಗುತ್ತಿರಲಿಲ್ಲ. ಅವರ ಕೈಯೆಲ್ಲ ನಡುಗುತ್ತಿತ್ತು. ವಿಡಿಯೋ ನೋಡಿದ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದರೆ ಇತರರು ಟ್ರೋಲ್ ಮಾಡಿದ್ದರು. ಕೆಲವರಂತೂ ಅತಿಯಾದ ಮಾದಕ ವ್ಯಸನದಿಂದ ಹೀಗಾಗಿದೆ ಎಂದು ಆಡಿಕೊಂಡಿದ್ದರು. ಇನ್ನು ಕೆಲವರು ವಿಶಾಲ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅವರಿಗೆ ನಡೆದಾಡಲು ಸಹ ಸಾಧ್ಯವಾಗುತ್ತಿಲ್ಲ ಎಂದೆಲ್ಲ ಸುದ್ದಿ ಹಬ್ಬಿಸಿದ್ದರು. ಆದರೆ ಈಗ ವಿಶಾಲ್, ತಮ್ಮದೇ ಶೈಲಿಯಲ್ಲಿ ತಮ್ಮನ್ನು ಟ್ರೋಲ್ ಮಾಡಿದವರಿಗೆ ಉತ್ತರ ನೀಡಿದ್ದಾರೆ.

ವಿಶಾಲ್ ನಟನೆಯ 12 ವರ್ಷ ಹಳೆಯ ಸಿನಿಮಾ ಈಗ ಬಿಡುಗಡೆ ಆಗಿದ್ದು, ಸಿನಿಮಾ ಯಶಸ್ಸು ಗಳಿಸಿದೆ. ಕೆಲವೇ ದಿನಗಳಲ್ಲಿ ಸಿನಿಮಾ 30 ಕೋಟಿ ಕಲೆಕ್ಷನ್ ದಾಟಿ 50 ಕೋಟಿಯತ್ತ ದಾಪುಗಾಲು ಹಾಕಿದೆ. ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ವಿಶಾಲ್, ವೇದಿಕೆ ಮೇಲೆ ಮಾತನಾಡಲು ಮೈಕ್ ಕೈಗೆ ಎತ್ತಿಕೊಳ್ಳುತ್ತಲೇ ಅವರ ಕೈ ನಡುಗಲು ಪ್ರಾರಂಭವಾಯ್ತು. ಕೂಡಲೇ ಇನ್ನೊಂದು ಕೈಯಿಂದ ನಡುಗುತ್ತಿರುವ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ ವಿಶಾಲ್, ಕಾರ್ಯಕ್ರಮದ ನಿರೂಪಕಿಯನ್ನು ಉದ್ದೇಶಿಸಿ, ‘ಅಯ್ಯೋ ಏನಿದು ನಡುಗುವುದು ನಿಲ್ಲುತ್ತಲೇ ಇಲ್ಲವಲ್ಲ. ಮತ್ತೊಮ್ಮೆ ಯೂಟ್ಯೂಬ್​ನಲ್ಲಿ ವೈರಲ್ ವಿಡಿಯೋ ಆಗಿಬಿಡುತ್ತದೆಯಾ’ ಎಂದರು.

ಇದನ್ನೂ ಓದಿ:ವಿಶಾಲ್ ಸಿಂಹನಂತೆ ಮರಳಬೇಕು ಎಂದು ಆಶಿಸಿದ ಸ್ಟಾರ್ ಹೀರೋ  

ಅಸಲಿಗೆ ವಿಶಾಲ್ ಕೈ ನಡುಗುತ್ತಿರಲಿಲ್ಲ ಬದಲಿಗೆ ಅವರೇ ಬೇಕೆಂದು ತಮಾಷೆಗೆ ಹಾಗೆ ಮಾಡಿದರು. ಅದೇ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಾವು ಆರೋಗ್ಯವಾಗಿಯೇ ಇರುವುದಾಗಿಯೂ ಹೇಳಿದರು. ಹಿಂದಿಗಿಂತಲೂ ಹೆಚ್ಚು ಉತ್ಸಾಹದಲ್ಲಿಯೂ ಇರುವುದಾಗಿ ವಿಶಾಲ್ ಹೇಳಿದರು. ಈ ಹಿಂದೆ ವೈರಲ್ ಆಗಿದ್ದ ವಿಡಿಯೋದ ಅಸಲಿಯತ್ತೆಂದರೆ ವಿಶಾಲ್​ಗೆ ಅಂದು ವಿಪರೀತ ಜ್ವರ ಇತ್ತು, ಆದರೆ ಸಿನಿಮಾ ಪ್ರಚಾರ ಕಾರ್ಯಕ್ರಮವಾದ್ದರಿಂದ, ಅನಾರೋಗ್ಯವನ್ನೂ ಲೆಕ್ಕಿಸದೆ ಅವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಹಾಗಾಗಿ ಅವರ ಕೈ ನಡುಗುತ್ತಿತ್ತು, ಮುಖ ಕಳೆಗುಂದಿತ್ತು. ವಿಶಾಲ್ ಆರೋಗ್ಯದಲ್ಲಿ ಏನೂ ಸಮಸ್ಯೆ ಇಲ್ಲ. ಅವರು ಆರೋಗ್ಯವಾಗಿಯೇ ಇದ್ದಾರೆ.

ಇನ್ನು ವಿಶಾಲ್ ನಟನೆಯ ‘ಮದ ಜಗ ರಾಜ’ ಹೆಸರಿನ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಈ ಸಿನಿಮಾ 12 ವರ್ಷಗಳ ಹಿಂದೆ ಬಿಡುಗಡೆ ಆಗಬೇಕಿತ್ತು. ಆದರೆ ಹಣಕಾಸಿನ ಸಮಸ್ಯೆ, ನ್ಯಾಯಾಲಯದಲ್ಲಿ ಹೂಡಲಾಗಿದ್ದ ದಾವೆಯ ಕಾರಣದಿಂದಾಗಿ ಸಿನಿಮಾ ಇಷ್ಟು ವರ್ಷ ಬಿಡುಗಡೆ ಆಗಿರಲಿಲ್ಲ. ಆದರೆ ಎಲ್ಲವನ್ನೂ ಇತ್ಯರ್ಥ ಮಾಡಿ ಕಳೆದ ಶುಕ್ರವಾರ ಸಿನಿಮಾ ಬಿಡುಗಡೆ ಮಾಡಲಾಗಿದೆ. ಹಳೆಯ ಸಿನಿಮಾ ಆದರೂ ಸಹ ಜನರನ್ನು ತಲುಪಿದ್ದು, ಕೇವಲ ಐದು ದಿನದಲ್ಲಿ 30 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಇನ್ನೂ ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆ ಹುಟ್ಟಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್