AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಶ್ನ್-ಎ-ರಿವಾಜ್: ದೀಪಾವಳಿಗೆ ಗೂಬೆ ಬಲಿಕೊಟ್ಟು, 1 ಕೆಜಿ ಹತ್ತಿಯಿಂದ ದೀಪ ಬೆಳಗಿಸುವ ಸಂಪ್ರದಾಯ.. ಯಾವಾಗ ಪ್ರಾರಂಭವಾಯಿತು ಅಂದರೆ

Deepavali 2023: ಇತಿಹಾಸಕಾರರ ಪ್ರಕಾರ ಮೊಘಲ್ ಸಾಮ್ರಾಜ್ಯ ಬಾಬರನ ಭಾರತ ಪ್ರವೇಶದಿಂದ ಪ್ರಾರಂಭವಾಯಿತು.. ಆದರೆ ಬಾಬರ್ ಮತ್ತು ಹುಮಾಯೂನ್ ಆಳ್ವಿಕೆಯಲ್ಲಿ ದೀಪಾವಳಿ ಪ್ರಾರಂಭವಾಗಲಿಲ್ಲ.. ದೀಪಾವಳಿಯನ್ನು ಆಚರಿಸುವ ಪ್ರಕ್ರಿಯೆಯು ಅಕ್ಬರನ ಆಳ್ವಿಕೆಯಲ್ಲಿ ಪ್ರಾರಂಭವಾಯಿತು ಎಂದು ಕಂಡುಬರುತ್ತದೆ.

ಜಶ್ನ್-ಎ-ರಿವಾಜ್: ದೀಪಾವಳಿಗೆ ಗೂಬೆ ಬಲಿಕೊಟ್ಟು, 1 ಕೆಜಿ ಹತ್ತಿಯಿಂದ ದೀಪ ಬೆಳಗಿಸುವ ಸಂಪ್ರದಾಯ.. ಯಾವಾಗ ಪ್ರಾರಂಭವಾಯಿತು ಅಂದರೆ
ಜಶ್ನ್-ಎ-ರಿವಾಜ್: ದೀಪಾವಳಿಗೆ ಗೂಬೆ ಬಲಿಕೊಟ್ಟು, 1 ಕೆಜಿ ಹತ್ತಿಯಿಂದ ದೀಪ ಬೆಳಗಿಸುವ ಸಂಪ್ರದಾಯ
ಸಾಧು ಶ್ರೀನಾಥ್​
|

Updated on: Nov 09, 2023 | 2:53 PM

Share

ದೇಶಾದ್ಯಂತ ದೀಪಾವಳಿ ಸಂಭ್ರಮ ಜೋರಾಗಿದೆ. ಮನೆ ಮನೆಗಳಲ್ಲಿ ಮಾರುಕಟ್ಟೆಗಳಲ್ಲಿ ದೀಪಾವಳಿಯ ವೈಭವ ಕಾಣುತ್ತಿದೆ. ಮೊಘಲರ ಕಾಲದಲ್ಲಿಯೂ ದೀಪಾವಳಿಯನ್ನು ಆಚರಿಸಲಾಗುತ್ತಿತ್ತು. ಅಂದಿನ ದೀಪಾವಳಿಗೂ ಇಂದಿನ ದೀಪಾವಳಿಗೂ ವ್ಯತ್ಯಾಸವಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಹಬ್ಬಗಳಿಗೆ ಹೊಸ ಹೆಸರುಗಳನ್ನು ಇಡುವ ಸಂಪ್ರದಾಯ ಮೊಘಲರ ಕಾಲದಲ್ಲೂ ಇತ್ತು. ದೀಪಾವಳಿಯ ವಿಷಯದಲ್ಲೂ ಅದೇ ಆಯಿತು. ಆ ಸಮಯದಲ್ಲಿ ದೀಪಾವಳಿಯನ್ನು ಜಶ್ನ್-ಎ-ರಿವಾಜ್ ಎಂದು ಕರೆಯಲಾಗುತ್ತಿತ್ತು.

ಇತಿಹಾಸಕಾರರ ಪ್ರಕಾರ ಮೊಘಲ್ ಸಾಮ್ರಾಜ್ಯ ಬಾಬರನ ಭಾರತ ಪ್ರವೇಶದಿಂದ ಪ್ರಾರಂಭವಾಯಿತು.. ಆದರೆ ಬಾಬರ್ ಮತ್ತು ಹುಮಾಯೂನ್ ಆಳ್ವಿಕೆಯಲ್ಲಿ ದೀಪಾವಳಿ ಪ್ರಾರಂಭವಾಗಲಿಲ್ಲ.. ದೀಪಾವಳಿಯನ್ನು ಆಚರಿಸುವ ಪ್ರಕ್ರಿಯೆಯು ಅಕ್ಬರನ ಆಳ್ವಿಕೆಯಲ್ಲಿ ಪ್ರಾರಂಭವಾಯಿತು ಎಂದು ಕಂಡುಬರುತ್ತದೆ. ಆದರೆ ಮೊಘಲರು ಹಿಂದೂ ಹಬ್ಬಗಳಲ್ಲಿ ಏಕೆ ಹೆಚ್ಚು ಆಸಕ್ತಿ ವಹಿಸಿದರು ಎಂಬುದಕ್ಕೆ ಅನೇಕ ಉಲೇಮಾಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಇಸ್ಲಾಮಿಕ್ ಆಚರಣೆಗೆ ವಿರುದ್ಧವಾಗಿದೆ ಎಂದು ಹೇಳಲಾಗುತ್ತದೆ. ಮೊಘಲರ ದೃಷ್ಟಿಯಲ್ಲಿ ದೀಪಾವಳಿ ಹಬ್ಬವು ಕೇವಲ ಮಿನುಗುವ ರಾತ್ರಿಯಾಗಿತ್ತು. ಆ ಕಾಲದಲ್ಲಿ ಮೂಢನಂಬಿಕೆಗಳು ಪ್ರಬಲವಾಗಿದ್ದವು. ದೀಪಾವಳಿಯಂದು ಗೂಬೆಗಳನ್ನು ಬಲಿ ಕೊಡುವ ವಾಡಿಕೆ ಶುರುವಾಗಿತ್ತು.

ಮೊಘಲರಿಗೆ ದೀಪಾವಳಿ ಎಂದರೇನು? ಮೊಘಲ್ ಸಾಮ್ರಾಜ್ಯದ ಚಕ್ರವರ್ತಿಗಳಿಂದ ದೀಪಾವಳಿ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತಿತು. ಮೂರನೇ ತಲೆಮಾರಿನ ಮೊಘಲ್ ಚಕ್ರವರ್ತಿ ಅಕ್ಬರ್ ಹಿಂದೂ ಹಬ್ಬಗಳಿಗೆ ವಿಶೇಷ ಗಮನವನ್ನು ನೀಡುತ್ತಿದ್ದರು. ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿ ನಿರ್ಮಾಣ ಪ್ರಕ್ರಿಯೆಯು ಅಕ್ಬರನ ಆಳ್ವಿಕೆಯಲ್ಲಿ ಪ್ರಾರಂಭವಾಯಿತು. ಬೇಗಂ ಜೋಧಾಬಾಯಿ ಮತ್ತು ಬೀರಬಲ್ ಇಲ್ಲಿ ವಾಸಿಸುತ್ತಿದ್ದರು.

ಷಹಜಹಾನ್ ಮತ್ತು ಜಹಾಂಗೀರ್ ದೀಪಾವಳಿಯನ್ನು ಆಚರಿಸುವ ಉತ್ಸಾಹವನ್ನು ಹೊಂದಿರಲಿಲ್ಲ. ಅದೇ ಸಮಯದಲ್ಲಿ, ಔರಂಗಜೇಬನ ಆಳ್ವಿಕೆಯಲ್ಲಿ, ದೀಪಾವಳಿ ಹಬ್ಬವನ್ನು ರಜಪೂತ ಕುಟುಂಬಗಳಿಂದ ಬರುತ್ತಿದ್ದ ಉಡುಗೊರೆಗಳಿಗೆ ವಿಶೇಷ ಮನ್ನಣೆ ಕೊಡುತ್ತಿದ್ದರು. ಜೋಧಪುರದ ರಾಜಾ ಜಸ್ವಂತ್ ಸಿಂಗ್ ಮತ್ತು ಜೈಪುರ ಸುಲ್ತಾನ ರಾಜಾ ಜೈ ಸಿಂಗ್ ಅವರಂತಹ ಅನೇಕ ಕುಟುಂಬಗಳು ಔರಂಗಜೇಬ್ ಗೆ ಉಡುಗೊರೆಗಳನ್ನು ಕಳುಹಿಸುತ್ತಿದ್ದರು.

Also Read: Owl ಯಾವ ಸಮಯದಲ್ಲಿ ಗೂಬೆ ಕಂಡ್ರೆ ಶುಭ

ಇತಿಹಾಸಕಾರರ ಪ್ರಕಾರ ದೆಹಲಿ ಕೋಟೆಯಲ್ಲಿ ದೀಪಾವಳಿಯ ವಿಶೇಷ ಆಚರಣೆಯ ಸಂಪ್ರದಾಯವಿದೆ. ಆಗಿನ ಕಾಲದಲ್ಲಿ ವೈಭವದಿಂದ ನಡೆಯುತ್ತಿದ್ದ ದೀಪಾವಳಿ ಆಚರಣೆಗೆ ದೆಹಲಿ ಕೋಟೆ ಸಾಕ್ಷಿಯಾಗಿತ್ತು. 1720 ಮತ್ತು 1748 ರ ನಡುವೆ ಮಹಮ್ಮದ್ ಷಾ ಆಳ್ವಿಕೆಯಲ್ಲಿ ದೀಪಾವಳಿಯನ್ನು ಪ್ರತ್ಯೇಕವಾಗಿ ಆಚರಿಸಲಾಯಿತು. ಅರಮನೆ ಮುಂಭಾಗದ ದೊಡ್ಡ ಮೈದಾನದಲ್ಲಿ ಕಾರ್ಯಕ್ರಮಗಳು ನಡೆದವು. ಅರಮನೆಯು ದೀಪಗಳಿಂದ ಪ್ರಕಾಶಮಾನವಾಗಿ ಬೆಳಗುತ್ತಿತ್ತು.

ಅರಮನೆಯ ಅತಿ ಎತ್ತರದ ಮೇಲೆ ದೊಡ್ಡ ದೀಪ ದೀಪಾವಳಿಯಂದು ಮೊಘಲ್ ಅರಮನೆಯ ಮೇಲ್ಭಾಗದಲ್ಲಿ ಬೃಹತ್ ದೀಪವನ್ನು ಬೆಳಗಿಸುವ ಸಂಪ್ರದಾಯವಿತ್ತು. ಈ ದೀಪವನ್ನು ಬೆಳಗಿಸಲು ಸುಮಾರು ಒಂದು ಕೆಜಿ ಹತ್ತಿ ಮತ್ತು ಹಲವಾರು ಲೀಟರ್ ಹರಳೆ ಎಣ್ಣೆಯನ್ನು ಬಳಸಲಾಗುತ್ತಿತ್ತು. ರಾತ್ರಿಯಿಡೀ ದೀಪ ಬೆಳಗಲು ಕಾವಲು ಕಾಯುತ್ತಿದ್ದರು. ದೀಪ ಹಚ್ಚಲು ಏಣಿಯಿಂದ ಅರಮನೆಯನ್ನು ಹತ್ತಿ ದೀಪಕ್ಕೆ ಎಣ್ಣೆ ಹಾಕುತ್ತಾರೆ.

ಮೊಘಲ್ ದೊರೆಗಳು ದೀಪಾವಳಿಯನ್ನು ಆಚರಿಸಲು ವಿಭಿನ್ನ ಆಲೋಚನೆಗಳನ್ನು ಹೊಂದಿದ್ದರು. ಕೆಲವು ರಾಜರಿಗೆ ಇದು ದೀಪಗಳ ಬೆಳಕಿನ ಹಬ್ಬ. ಕೆಲವರು ಇದನ್ನು ಸಿಹಿತಿಂಡಿಗಳು ಮತ್ತು ನೆಚ್ಚಿನ ಆಹಾರವನ್ನು ತಿನ್ನುವ ಹಬ್ಬವೆಂದು ಆಚರಿಸುತ್ತಾರೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!