AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚು ಸ್ಟ್ರೆಸ್‌ ಮಾಡಿಕೊಂಡರೆ ಕೂದಲು, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆಯೇ?

ಇತ್ತೀಚಿನ ದಿನಗಳಲ್ಲಿ ಅನೇಕರು ನಾನಾ ರೀತಿಯ ಕಾರಣಗಳಿಗೆ ಒತ್ತಡ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಆದರೆ ಇದನ್ನು ಸಾಮಾನ್ಯ ಅಭ್ಯಾಸವೆಂದು ಪರಿಗಣಿಸಿ ನಿರ್ಲಕ್ಷಿಸಬಾರದು, ಏಕೆಂದರೆ ಇದು ಚರ್ಮ ಮತ್ತು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಹೌದು, ನಮಗೆ ಅರಿವಿಲ್ಲದಂತೆ ದೇಹದಲ್ಲಿ ನಾನಾ ರೀತಿಯ ಬದಲಾವಣೆಗೆ ಕಾರಣವಾಗಬಹುದು. ಹಾಗಾಗಿ ಸ್ಟ್ರೆಸ್ ಮಾಡಿಕೊಳ್ಳುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತವೆ, ಅದನ್ನು ತಡೆಯಲು ಏನು ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಹೆಚ್ಚು ಸ್ಟ್ರೆಸ್‌ ಮಾಡಿಕೊಂಡರೆ ಕೂದಲು, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆಯೇ?
Stress Causing Hair And Skin Problems
ಪ್ರೀತಿ ಭಟ್​, ಗುಣವಂತೆ
|

Updated on: Apr 02, 2026 | 7:35 PM

Share

ಇತ್ತೀಚಿನ ದಿನಗಳಲ್ಲಿ ಯುವಜನತೆ ಹೆಚ್ಚು ಒತ್ತಡ (ಸ್ಟ್ರೆಸ್) ಅನುಭವಿಸುತ್ತಿದ್ದಾರೆ. ಕೆಲಸದ ಒತ್ತಡ, ಸಮಯದ ಕೊರತೆ, ನಿದ್ರೆ ಸರಿಯಾಗಿ ಆಗದಿರುವುದು ಮತ್ತು ವೈಯಕ್ತಿಕ ಸಮಸ್ಯೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ನಿರಂತರ ಒತ್ತಡ ದೇಹದ ಒಳಗಿನ ವ್ಯವಸ್ಥೆಗೆ ಅರಿವಿಲ್ಲದಂತೆ ಹಾನಿ ಉಂಟುಮಾಡಿ, ನಿಧಾನವಾಗಿ ಪರಿಣಾಮ ಬೀರುತ್ತದೆ. ಅನೇಕರು ಇದನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ, ಆದರೆ ಇದು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ತಜ್ಞರ ಪ್ರಕಾರ, ಹೆಚ್ಚು ಸ್ಟ್ರೆಸ್‌ನಿಂದ ದೇಹದಲ್ಲಿ ಹಾರ್ಮೋನ್ ಸಮತೋಲನ ಹದಗೆಟ್ಟು ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ದಣಿವು, ಗಮನ ಕೊರತೆ, ತಲೆನೋವು ಮತ್ತು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರುವುದು ಸಾಮಾನ್ಯವಾಗಿದೆ. ಅಷ್ಟೇಅಲ್ಲ, ಅದರ ಜೊತೆಗೆ ಕೂದಲು ಮತ್ತು ಚರ್ಮದಲ್ಲೂ ಬದಲಾವಣೆಗಳು ಕಾಣಿಸಬಹುದು. ಹಾಗಾದರೆ ಸ್ಟ್ರೆಸ್‌ (Stress) ಮಾಡಿಕೊಳ್ಳುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತವೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೆಚ್ಚು ಸ್ಟ್ರೆಸ್‌ನಿಂದ ಕೂದಲಿಗಾಗುವ ಸಮಸ್ಯೆಗಳು:

ಡರ್ಮಟಾಲಜಿಸ್ಟ್ ಡಾ. ಸೌಮ್ಯ ಸಚ್‌ದೇವ ಅವರ ಪ್ರಕಾರ, ಹೆಚ್ಚು ಒತ್ತಡ ಕೂದಲಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ನಿರಂತರ ಸ್ಟ್ರೆಸ್‌ನಿಂದ ಕೂದಲು ದುರ್ಬಲವಾಗಿ ಹೇರ್ ಫಾಲ್ ಹೆಚ್ಚಾಗಬಹುದು, ಕೂದಲು ತೆಳುವಾಗಿ ಬೆಳವಣಿಗೆ ನಿಧಾನಗೊಳ್ಳಬಹುದು, ಡ್ಯಾಂಡ್ರಫ್ ಮತ್ತು ಹೇನಿನ ಸಮಸ್ಯೆ ಕಾಣಿಸಬಹುದು, ಜೊತೆಗೆ ಸಮಯಕ್ಕೂ ಮುಂಚೆ ಕೂದಲು ಬಿಳಿಯಾಗಬಹುದು, ಕೂದಲಿನ ಹೊಳಪು ಕಡಿಮೆಯಾಗಿ ಒಣಗಿದಂತೆ ಕಾಣಬಹುದು. ಅಷ್ಟು ಮಾತ್ರವಲ್ಲ, ದೀರ್ಘಕಾಲದ ಒತ್ತಡ ಕೂದಲಿನ ದಟ್ಟತೆಯನ್ನೂ ಕಡಿಮೆ ಮಾಡಬಹುದು.

ಇದನ್ನೂ ಓದಿ: ಸ್ಟ್ರೆಸ್ ಮಲಬದ್ದತೆಗೆ ಹೇಗೆ ಕಾರಣವಾಗುತ್ತೆ ಗೊತ್ತಾ? ಈ ಬಗ್ಗೆ ಡಾ ಅನುರಾಗ್ ಶೆಟ್ಟಿ ಏನ್ ಹೇಳ್ತಾರೆ ನೋಡಿ

ಹೆಚ್ಚು ಸ್ಟ್ರೆಸ್‌ನಿಂದ ಚರ್ಮಕ್ಕಾಗುವ ಸಮಸ್ಯೆಗಳು:

ಸ್ಟ್ರೆಸ್‌ನ ಪರಿಣಾಮ ಚರ್ಮದಲ್ಲಿಯೂ ಸ್ಪಷ್ಟವಾಗಿ ಕಾಣಿಸುತ್ತದೆ. ಚರ್ಮ ದಣಿದಂತೆ ಕಾಣಿಸುತ್ತದೆ, ಪಿಂಪಲ್ಸ್, ಅಕ್ನೆ ಮತ್ತು ರ್ಯಾಶ್ ಸಮಸ್ಯೆಗಳು ಹೆಚ್ಚಾಗುತ್ತದೆ. ಒಣ ಚರ್ಮದ ಸಮಸ್ಯೆ ಕಾಡಬಹುದು. ಮುಂಚಿತವಾಗಿ ಫೈನ್ ಲೈನ್ಸ್ ಕಾಣಿಸಬಹುದು, ಚರ್ಮ ಸಂವೇದನಾಶೀಲವಾಗಿ, ಉರಿ ಹೆಚ್ಚಾಗಬಹುದು.

ಸ್ಟ್ರೆಸ್‌ನಿಂದ ಹೇಗೆ ರಕ್ಷಿಸಿಕೊಳ್ಳುವುದು?

  • ಸ್ಟ್ರೆಸ್ ಕಡಿಮೆ ಮಾಡಲು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳು ಅಗತ್ಯ
  • ಪ್ರತಿದಿನ ಸರಿಯಾಗಿ ನಿದ್ರೆ ಮಾಡಿ
  • ಸಮಯಕ್ಕೆ ಸರಿಯಾಗಿ ಮಲಗುವ ಮತ್ತು ಎದ್ದೇಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ
  • ಯೋಗ, ಧ್ಯಾನ ಮತ್ತು ಲಘು ವ್ಯಾಯಾಮ ಮಾಡಿ
  • ಕೆಲಸದ ನಡುವೆ ವಿರಾಮ ತೆಗೆದುಕೊಳ್ಳಿ
  • ಪೌಷ್ಟಿಕ ಆಹಾರ ಸೇವಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ
  • ನಿಮಗಾಗಿ ಸಮಯ ಮೀಸಲಿಟ್ಟು ಇಷ್ಟದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us