ಮಲಬದ್ಧತೆಯಿಂದ ತಕ್ಷಣ ಆರಾಮ ಪಡೆಯಲು ಈ 5 ಪಾನೀಯಗಳನ್ನು ಟ್ರೈ ಮಾಡಿ

ಮಲಬದ್ಧತೆ ಬಾರದಂತೆ ತಡೆಯಲು ಸುಲಭ ಉಪಾಯವೆಂದರೆ ಹೆಚ್ಚು ದ್ರವ ಪದಾರ್ಥವನ್ನು ಸೇವಿಸುವುದು. ಈ 5 ಪಾನೀಯಗಳು ನಿಮ್ಮ ದೇಹದ ಎಲ್ಲಾ ಅಸಹ್ಯ ಜೀವಾಣುಗಳನ್ನು ಹೊರಹಾಕಲು ಮತ್ತು ಒಟ್ಟಾರೆ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಲಬದ್ಧತೆಯಿಂದ ತಕ್ಷಣ ಆರಾಮ ಪಡೆಯಲು ಈ 5 ಪಾನೀಯಗಳನ್ನು ಟ್ರೈ ಮಾಡಿ
ಸಾಂದರ್ಭಿಕ ಚಿತ್ರImage Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 05, 2023 | 7:11 PM

ಮಲಬದ್ಧತೆ ಒಂದು ಜೀರ್ಣಕಾರಿ ಸಮಸ್ಯೆಯಾಗಿದ್ದು, ಪ್ರತಿಯೊಬ್ಬರಿಗೂ ಈ ಸಮಸ್ಯೆ ಆಗಾಗ ಉಂಟಾಗುತ್ತಲೇ ಇರುತ್ತದೆ. ಕೆಲವು ಜನರು ಮಲಬದ್ಧತೆಯ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಇನ್ನು ಕೆಲವರು ಈ ರೋಗಕ್ಕೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ. ಇದರಿಂದ ಮಲಬದ್ಧತೆ ಸಮಸ್ಯೆ ನಿಮ್ಮ ಬೇರೆ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ, ನಿಮಗೆ ಮಲಬದ್ಧತೆ ಉಂಟಾದರೆ ಮನೆಯಲ್ಲೇ ತಯಾರಿಸಿದ ಈ 5 ಪಾನೀಯಗಳನ್ನು ಸೇವಿಸುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಮಲಬದ್ಧತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಿಂದ ತ್ವರಿತ ಪರಿಹಾರವನ್ನು ಪಡೆಯಲು ಸಹಾಯ ಮಾಡುವ ಹಲವಾರು ಮನೆಮದ್ದುಗಳಿವೆ. ಅರಿಶಿನ, ಬಾಳೆಹಣ್ಣು, ಸೌತೆಕಾಯಿ, ನಾರಿನಂಶವಿರುವ ಸೊಪ್ಪುಗಳು, ಹಣ್ಣುಗಳು, ತರಕಾರಿಗಳನ್ನು ಸೇವಿಸಿದರೆ ಮಲಬದ್ಧತೆ ಕಡಿಮೆಯಾಗುತ್ತದೆ. ಮಲಬದ್ಧತೆ ಬಾರದಂತೆ ತಡೆಯಲು ಸುಲಭ ಉಪಾಯವೆಂದರೆ ಹೆಚ್ಚು ದ್ರವ ಪದಾರ್ಥವನ್ನು ಸೇವಿಸುವುದು. ಇದು ಮಲಬದ್ಧತೆಯಿಂದ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ. ಈ 5 ಪಾನೀಯಗಳು ನಿಮ್ಮ ದೇಹದ ಎಲ್ಲಾ ಅಸಹ್ಯ ಜೀವಾಣುಗಳನ್ನು ಹೊರಹಾಕಲು ಮತ್ತು ಒಟ್ಟಾರೆ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬೂದಿಕುಂಬಳಕಾಯಿ ಜ್ಯೂಸ್​ ಕುಡಿದರೆ ಬೊಜ್ಜು ಕರಗುವುದರಲ್ಲಿ ಅನುಮಾನವೇ ಇಲ್ಲ!

1. ಬೆರಿ ಬ್ಲಾಸ್ಟ್ ಸ್ಮೂಥಿ:

ಹೆಚ್ಚಿನ ಫೈಬರ್ ಅಂಶದಿಂದ ಮಾಡಿದ ಸ್ಮೂಥಿಗಳು ಮಲಬದ್ಧತೆಯಿಂದ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ. ಹಣ್ಣುಗಳು ನಾರಿನಿಂದ ಕೂಡಿರುತ್ತದೆ. ಮೊಸರು, ಚಿಯಾ ಬೀಜಗಳು ಅಥವಾ ಅಗಸೆ ಬೀಜಗಳು ಮತ್ತು ಬೆರಿಗಳನ್ನು ಒಟ್ಟಿಗೆ ಬೆರೆಸುವುದರ ಮೂಲಕ ಸ್ಮೂಥಿ ತಯಾರಿಸಬಹುದು.

2. ಲಿಂಬೆ ಜ್ಯೂಸ್:

ಲಿಂಬೆ ಜ್ಯೂಸ್ ಮಲಬದ್ಧತೆ ಸಮಸ್ಯೆಗಳಿಗೆ ಮನೆಯಲ್ಲಿ ತಯಾರಿಸಬಹುದಾದ ಅತ್ಯಂತ ಸುಲಭ ಮತ್ತು ಪರಿಣಾಮಕಾರಿ ಪಾನೀಯವಾಗಿದೆ. ನಿಂಬೆಯಲ್ಲಿ ವಿಟಮಿನ್ ಸಿ ಅಥವಾ ಸಿಟ್ರಿಕ್ ಆಮ್ಲವಿದೆ. ಇದು ಹೊಟ್ಟೆಯ ಸಮಸ್ಯೆಯನ್ನು ನಿವಾರಿಸುತ್ತದೆ.

3. ಅಲೋವೆರಾ ಜ್ಯೂಸ್:

ಮಲಬದ್ಧತೆಗೆ ಚಿಕಿತ್ಸೆ ನೀಡಲು ಅಲೋವೆರಾ ಜ್ಯೂಸ್ ಅತ್ಯಂತ ಪರಿಣಾಮಕಾರಿಯಾದ ಪಾನೀಯವಾಗಿದೆ. ಅಲೋವೆರಾ ಜ್ಯೂಸ್ ಕರುಳಿನ ಚಲನೆಗೆ ಸಹಾಯ ಮಾಡುವ ಕೆಲವು ಸಂಯುಕ್ತಗಳನ್ನು ಹೊಂದಿರುತ್ತದೆ. 1 ಗ್ಲಾಸ್ ಅಲೋವೆರಾ ಜ್ಯೂಸ್ ಕುಡಿದರೆ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.

ಇದನ್ನೂ ಓದಿ: Lemon Water: ನಿಂಬೆ ಜ್ಯೂಸ್ ಸೇವನೆಯಿಂದ ಪ್ರಯೋಜನಗಳು ಹತ್ತು ಹಲವು!

4. ಪುದೀನ ಮತ್ತು ಶುಂಠಿ ಟೀ:

ಶುಂಠಿ ಮತ್ತು ಪುದೀನಾ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಈ ಗಿಡಮೂಲಿಕೆ ಚಹಾಗಳು ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳು, ಅಮೈನೋ ಆಮ್ಲಗಳು, ಕೆಫೀನ್, ಫ್ಲೇವನಾಯ್ಡ್‌ಗಳನ್ನು ಹೊಂದಿದ್ದು, ಇದು ಇತರ ಆರೋಗ್ಯ ಪ್ರಯೋಜನಗಳ ಜೊತೆಗೆ ಮಲಬದ್ಧತೆಗೆ ಚಿಕಿತ್ಸೆ ನೀಡಲು ಆರೋಗ್ಯಕರ ಆಯ್ಕೆಯಾಗಿದೆ.

5. ಕಾಫಿ:

ಮಲಬದ್ಧತೆ ನಿವಾರಣೆಗೆ ಒಂದು ಕಪ್ ಕಾಫಿ ಸಾಕು. ಕೆಫೀನ್ ಅಂಶವು ಗ್ಯಾಸ್ಟ್ರೋಕೊಲಿಕ್ ರಿಫ್ಲೆಕ್ಸ್ ಅನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಗೆ ಚಿಕಿತ್ಸೆ ನೀಡಲು ದೇಹಕ್ಕೆ ಸಹಾಯ ಮಾಡುತ್ತದೆ.

ಇದರ ಜೊತೆಗೆ ಆಹಾರದಲ್ಲಿ ಫೈಬರ್ ಹೆಚ್ಚಿರುವಂತೆ ನೋಡಿಕೊಳ್ಳಿ. ಹಣ್ಣುಗಳು ಮಲಬದ್ಧತೆಗೆ ಚಿಕಿತ್ಸೆ ನೀಡಲು ಅತ್ಯುತ್ತಮ ನೈಸರ್ಗಿಕ ಮೂಲಗಳಾಗಿವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ