ಕೊವಿಡೋ ಸೋಮ್ನಿಯಾ ಎಂಬ ನಿದ್ರಾಹೀನತೆಯ ಗುಮ್ಮ, ಈ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

ನಿದ್ರಾಹೀನತೆಗೆ ಹಲವಾರು ಕಾರಣಗಳಿರಬಹುದು. ಅದರಲ್ಲಿ ಮಾನಸಿಕ ಒತ್ತಡ, ರಕ್ತದೊತ್ತಡ ಅಥವಾ ಅನಗತ್ಯ ಚಿಂತೆಯಿಂದ ಸರಿಯಾದ ನಿದ್ರೆ ಬರುವುದಿಲ್ಲ. ಇದರಿಂದಾಗಿ ನಿದ್ರಾಹೀನತೆಯಿಂದ ಬಳಲುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಾ ಸಾಗಿತು. ಯಾವ ಯಾವ ಕಾರಣಗಳಿಂದ ನಿದ್ರಾಹೀನತೆ ಉಂಟಾಗುತ್ತದೆ ಎಂಬದನ್ನು ಮುಂಬೈನ ವೈದ್ಯ ಡಾ.ಅನಾಮಿಕಾ ರಾಥೋಡ್​ ವಿವರಿಸಿದ್ದಾರೆ.

ಕೊವಿಡೋ ಸೋಮ್ನಿಯಾ ಎಂಬ ನಿದ್ರಾಹೀನತೆಯ ಗುಮ್ಮ, ಈ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು
ನಿದ್ರಾಹೀನತೆ ಸಮಸ್ಯೆ
Follow us
shruti hegde
| Updated By: Skanda

Updated on: May 28, 2021 | 8:41 AM

ಕೊರೊನಾ ಸೋಂಕು ಜಗತ್ತಿನಾದ್ಯಂತ ಹರಡುತ್ತಿದ್ದಂತೆಯೇ ಜನರ ನೆಮ್ಮದಿಯನ್ನೇ ಕಿತ್ತುಕೊಂಡಿದೆ. ಇದರಿಂದ ಒಂದಲ್ಲಒಂದು ಸಮಸ್ಯೆ ಉಂಟಾಗುತ್ತಲೇ ಇದೆ. ಮಾನಸಿಕ ನೆಮ್ಮದಿ ಇಲ್ಲ. ಚಿಂತೆ, ರಕ್ತದೊತ್ತಡದಂತಹ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ. ಇವುಗಳಲ್ಲಿ ನಿದ್ರಾಹೀನತೆಯೂ ಕೂಡಾ ಹೌದು ಇದನ್ನು ವೈದ್ಯರು ಕೊವಿಡೋ ಸೋಮ್ನಿಯಾ ಅಥವಾ ಕೊರೊನಾ ಸೋಮ್ನಿಯಾ ಎಂದೂ ಕರೆದಿದ್ದಾರೆ.

ನಿದ್ರಾಹೀನತೆಗೆ ಹಲವಾರು ಕಾರಣಗಳಿರಬಹುದು. ಅದರಲ್ಲಿ ಮಾನಸಿಕ ಒತ್ತಡ, ರಕ್ತದೊತ್ತಡ ಅಥವಾ ಅನಗತ್ಯ ಚಿಂತೆಯಿಂದ ಸರಿಯಾದ ನಿದ್ರೆ ಬರುವುದಿಲ್ಲ. ಇದರಿಂದಾಗಿ ನಿದ್ರಾಹೀನತೆಯಿಂದ ಬಳಲುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಾ ಸಾಗಿತು. ಯಾವ ಯಾವ ಕಾರಣಗಳಿಂದ ನಿದ್ರಾಹೀನತೆ ಉಂಟಾಗುತ್ತದೆ ಎಂಬದನ್ನು ಮುಂಬೈನ ವೈದ್ಯ ಡಾ.ಅನಾಮಿಕಾ ರಾಥೋಡ್​ ವಿವರಿಸಿದ್ದಾರೆ.

ಒತ್ತಡ ಕೊವಿಡ್​ ಸೋಂಕಿಗೆ ಒಳಗಾಗುವ ಭಯ, ಸೋಂಕು ಹರಡುವುದು, ಕೊವಿಡ್​ ಸೋಂಕಿಗೆ ಒಳಗಾದವರ ಕುರಿತಾದ ಹೆಚ್ಚು ಸುದ್ದಿ ನೋಡುವುದು. ಅಸಹಾಯಕ ಭಾವನೆ, ಕೊವಿಡ್​ ಸೋಂಕಿತ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಆತಂಕ ಇವೆಲ್ಲವೂ ನಿದ್ರಾಹೀನ ಸ್ಥಿತಿಗೆ ಕಾರಣಗಳಾಗಿವೆ.

ದೈನಂದಿನ ದಿನಚರಿಯಲ್ಲಿ ಬದಲಾವಣೆ ಆನ್​ಲೈನ್​ ಮೂಲಕ ಕೆಲಸ, ವಿರಾಮ ಇಲ್ಲದಿರುವುದು, ಮನೆಯಲ್ಲಿ ಹೆಚ್ಚು ಕೆಲಸ, ಕೆಲವೊಮ್ಮೆ ಹಗಲಿನಲ್ಲಿ ಅತಿಯಾದ ನಿದ್ರೆ ಇವುಗಳಿಂದ ನಿದ್ರಾಹೀನತೆಯ ಸಮಸ್ಯೆ ಕಾಡತೊಡಗುತ್ತದೆ.

ಆರ್ಥಿಕ ಒತ್ತಡ ಉದ್ಯೋಗ ಕಳೆದುಕೊಂಡಿರುವ ಚಿಂತೆ, ಕಡಿಮೆ ಸಂಬಳ, ಆದಾಯವಿಲ್ಲದೇ ಹೆಚ್ಚುತ್ತಿರುವ ಖರ್ಚು ಇವುಗಳೆಲ್ಲ ಮನುಷ್ಯನನ್ನು ಚಿಂತೆಗೀಡು ಮಾಡುತ್ತವೆ. ಇವುಗಳಿಂದ ಮನುಷ್ಯನಿಗೆ ನಿದ್ರಾಹೀನತೆಯ ಸಮಸ್ಯೆ ಕಾಣತೊಡಗುತ್ತದೆ.

ಇವುಗಳು ಸಾಮಾನ್ಯ ಸಮಸ್ಯೆ ಆದರೆ, ಆರೋಗ್ಯದಲ್ಲಿನ ಏರು-ಪೇರಿನಿಂದಾಗಿ ನಿದ್ರಾಹೀನತೆ ಕಂಡುಬರುತ್ತದೆ. ಉಸಿರಾಟದ ತೊಂದರೆ, ಆತಂಕ, ಖಿನ್ನತೆ, ಕೆಟ್ಟ ಸ್ವಪ್ನಗಳು, ಮೈ ಕೈ ನೋವು ಇತ್ಯಾದಿ ಸಮಸ್ಯೆಗಳು ಮನುಷ್ಯನ ನಿದ್ರೆಯನ್ನು ಹಾಳು ಮಾಡುತ್ತವೆ. ಒಟ್ಟಾರೆಯಾಗಿ ನಿದ್ರೆಯ ಕೊರತೆಯು ಮನುಷ್ಯನಲ್ಲಿ ರೋಗಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.

ಪರಿಹಾರ ಕೊವಿಡ್​ ಸೋಂಕಿತರನ್ನು ನೋಡುತ್ತ ಮಾನಸಿಕ ಒತ್ತಡಕ್ಕೆ ಒಳಗಾಗುವವರು ಹೆಚ್ಚಾಗಿ ಅಂತಹ ಸುದ್ದಿಗಳನ್ನು ಕೇಳುವುದು ಅಥವಾ ಅಂತಹ ವಿಷಯಗಳಿಂದ ದೂರವಿರಿ. ಆ ಕುರಿತಾಗಿ ಹೆಚ್ಚಾಗಿ ಗಮನಕೊಡಬಾರದು. ಆರೋಗ್ಯಕರ ಆಹಾರ ಪದ್ಧತಿ ಜತೆಗೆ ವ್ಯಾಯಾಮವನ್ನು ಪ್ರತಿನಿತ್ಯ ರೂಢಿಯಲ್ಲಿಟ್ಟುಕೊಳ್ಳಿ. ಅನಗತ್ಯ ಚಿಂತೆ ಮಾಡುವುದರ ಬದಲು ಸಂಗೀತ ಕೇಳುವುದು, ಪುಸ್ತಕ ಓದುವುದು ಅಥವಾ ಆರೋಗ್ಯಕರವಾದ ತಿನಿಸುಗಳನ್ನು ಮಾಡುವಲ್ಲಿ ನಿಮ್ಮ ಸಮಯವನ್ನು ಮೀಸಲಿಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಮದ್ಯ ಸೇವನೆ, ಧೂಮಪಾನ ಇವುಗಳು ನಿಮ್ಮ ಆರೋಗ್ಯವನ್ನು ಕೆಡಿಸುತ್ತದೆ. ಜತೆಗೆ ನಿದ್ಯಾಹೀನತೆಯ ಸಮಸ್ಯೆಗೂ ಕಾರಣವಾಗಿದೆ. ಇವುಗಳ ಸೇವನೆಯಿಂದ ದೂರವಿರಿ. ಈ ರೀತಿಯ ನಿಮಗಳ ಪಾಲನೆಯಿಂದ ನಿದ್ರಾ ಹೀನತೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದ್ದಾರೆ.

ಕೊವಿಡ್​ ಸೋಂಕಿಗೆ ಅದೆಷ್ಟೋ ಜನ ನೋವು ಅನುಭವಿಸುತ್ತಿದ್ದಾರೆ. ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ವೈರಸ್​ ವಿರುದ್ಧ ಹೋರಾಡಲು ನಿರಂತರ ಪ್ರಯತ್ನದಲ್ಲಿದ್ದಾರೆ. ಈ ಸಮಸ್ಯೆಯಿಂದ ಒಂದು ದಿನ ಹೊರಬರುತ್ತೇವೆ. ಮಾನಸಿಕ ಸ್ಥೈರ್ಯ ಹೊಂದಿರಿ ಎಂದು ವೈದ್ಯರು ಹೇಳಿದ್ದಾರೆ. ಈ ಕುರಿತಂತೆ ಇಂಡಿಯನ್​ ಎಕ್ಸ್​ಪ್ರೆಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ:

ನಿದ್ರಾಹೀನತೆಯಿಂದ ಕೆಲಸ ಕಳೆದುಕೊಳ್ಳುವ ಭಯ ಹುಟ್ಟುತ್ತೆ ಎಚ್ಚರ!

World Sleep Day; ನಿದ್ದೆ ಎಂಬ ಪದಕವಡೆ : ನಿದ್ರಾಯೋಗ ಮತ್ತು ಮುಕ್ತ ವಿಶ್ವವಿದ್ಯಾಲಯದ ನಡುವಿನ ಬಿಟ್ಟಸ್ಥಳವಿದು