ಕೆಲಸದ ಮಧ್ಯವೇ ಗಡಿಬಿಡಿಯಲ್ಲಿ ಆಹಾರ ಸೇವಿಸುವುದರಿಂದ ಉಂಟಾಗುವ ಅನಾರೋಗ್ಯದ ಬಗ್ಗೆ ಎಚ್ಚರವಿರಲಿ!

ಯಾವಾಗಲೂ ನೆನಪಿಟ್ಟುಕೊಳ್ಳುವಂತಹ ವಿಚಾರವೆಂದರೆ ಊಟ ಮಾಡುವಾಗ ಅಥವಾ ಆಹಾರವನ್ನು ಸೇವಿಸುವಾಗ ಗಡಿಬಿಡಿ ಮಾಡುವುದು ಒಳ್ಳೆಯದಲ್ಲ. ಇದು ನಿಮ್ಮ ಅನಾರೋಗ್ಯವನ್ನೂ ಇನ್ನೂ ಹೆಚ್ಚಿಸುತ್ತದೆ.

ಕೆಲಸದ ಮಧ್ಯವೇ ಗಡಿಬಿಡಿಯಲ್ಲಿ ಆಹಾರ ಸೇವಿಸುವುದರಿಂದ ಉಂಟಾಗುವ ಅನಾರೋಗ್ಯದ ಬಗ್ಗೆ ಎಚ್ಚರವಿರಲಿ!
ಸಾಂದರ್ಭಿಕ ಚಿತ್ರ

ವರ್ಷಗಟ್ಟಲೆ ಮನೆಯಲ್ಲೇ ಇದ್ದು ಕೆಲಸ ಮಾಡುತ್ತಾ ಇರುವುದರಿಂದ ಜನರು ಮನೆಯಿಂದ ಕೆಲಸ ಮಾಡಲು ಒಗ್ಗಿಕೊಂಡಿದ್ದಾರೆ. ಊಟ ತಿಂಡಿ ಜತೆಗೆ ಮಧ್ಯಂತರ ಆಹಾರಗಳೆಲ್ಲವೂ ಸಹ ಕೆಲಸದ ಮಧ್ಯವೇ ನಡೆಯುತ್ತಿದೆ. ಸಮಯದ ಉಳಿತಾಯದ ದೃಷ್ಟಿಯಿಂದ ಕೆಲಸಕ್ಕೆ ಕೂತಿರುವ ಜಾಗದಲ್ಲಿಯೇ ಊಟ, ತಿಂಡಿ – ತಿನಿಸುಗಳನ್ನು ಸೇವಿಸುವುದು ಒಳ್ಳೆಯದು ಅನಿಸಬಹುದು. ಆದರೆ ಇದು ನಿಮ್ಮ ಆರೋಗ್ಯಕ್ಕೆ ಅಡ್ಡ ಪರಿಣಾಮಗಳನ್ನು ಬೀರುತ್ತದೆ ಎಂಬುದರ ಬಗ್ಗೆ ಎಚ್ಚರವಿರಲಿ!

ಕೆಲಸದ ಸ್ಥಳದಲ್ಲಿಯೇ ಒಂದು ಕಡೆ ಲ್ಯಾಪ್ಟಾಪ್ ಮತ್ತೊಂದು ಕಡೆ ಊಟದ ತಟ್ಟೆ. ಕೆಲಸದ ಮಧ್ಯವೇ ಚಮಚದಲ್ಲಿ ಊಟ ಮಾಡುವುದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆ. ಈ ಪ್ರಕ್ರಿಯೆಯಲ್ಲಿ ಒಬ್ಬೊಬ್ಬರು ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸುತ್ತಾರೆ. ಇದು ಹೊಟ್ಟೆ ನೋವು ಮತ್ತು ಹೊಟ್ಟೆ ಉಬ್ಬುವ ಸಮಸ್ಯೆಗೆ ಕಾರಣವಾಗಬಹುದು.

ಕೆಲಸದ ಮಧ್ಯೆ ಅವಸರದಲ್ಲಿ ಕುಳಿತಲ್ಲಿಯೇ ಲಘುಬಗೆಯಿಂದ ಊಟ ಮಾಡುವಿರಿ. ಅನ್ನವನ್ನು ಸರಿಯಾಗಿ ಅಗಿಯುವುದೂ ಇಲ್ಲ. ಅತಿಯಾಗಿ ತಿನ್ನುವುದು ಜತೆಗೆ ಅತಿ ವೇಗದಲ್ಲಿ ಊಟ ಮಾಡುವುದೂ ಸಹ ಆರೋಗ್ಯಕ್ಕೆ ಹಾನಿಕಾರಕ. ಅವಸರದಲ್ಲಿ ಕಡಿಮೆ ಊಟವನ್ನು ಮಾಡುವುದು ಸಹ ಅನಾರೋಗ್ಯವನ್ನು ಉಂಟು ಮಾಡುತ್ತವೆ.

ಆಹಾರದ ಮೂಲಕ ನಮ್ಮ ದೇಹಕ್ಕೆ ಕಾರ್ಬೊಹೈಡ್ರೆಟ್, ಫೈಬರ್, ಪ್ರೊಟೀನ್ ಮತ್ತು ಆರೋಗ್ಯಕರ ಕೊಬ್ಬುಗಳು ಸಿಗುತ್ತವೆ. ಅದನ್ನು ಬಿಟ್ಟು ಕೆಲಸದ ಒತ್ತಡದಲ್ಲಿ ಸ್ಯಾಂಡ್​ವಿಚ್​, ಬರ್ಗರ್, ನೂಡಲ್ಸ್​​ಗಳಂಥಹ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ.

ಯಾವಾಗಲೂ ನೆನಪಿಟ್ಟುಕೊಳ್ಳುವಂತಹ ವಿಚಾರವೆಂದರೆ ಊಟ ಮಾಡುವಾಗ ಅಥವಾ ಆಹಾರವನ್ನು ಸೇವಿಸುವಾಗ ಗಡಿಬಿಡಿ ಮಾಡುವುದು ಒಳ್ಳೆಯದಲ್ಲ. ಇದು ನಿಮ್ಮ ಅನಾರೋಗ್ಯವನ್ನೂ ಇನ್ನೂ ಹೆಚ್ಚಿಸುತ್ತದೆ. ಒಳ್ಳೆಯ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯ ಜತೆಗೆ ಆಹಾರವನ್ನು ಚೆನ್ನಾಗಿ ಅಗಿದು ಸೇವಿಸುವುದು ಬಹಳ ಮುಖ್ಯ.

ಇದನ್ನೂ ಓದಿ:

Health Tips: ರಾತ್ರಿ ಎಡಭಾಗಕ್ಕೆ ತಿರುಗಿ ಮಲಗುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಗಮನಿಸಿ

Health Tips: ಗೋಡಂಬಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

Click on your DTH Provider to Add TV9 Kannada