Sleep : ಹನ್ನೆರಡಾಯ್ತು, ಒಂದಾಯ್ತು ಇನ್ನೂ ನಿದ್ರೆ ಬರ್ತಿಲ್ವಾ?

| Updated By: ಶ್ರೀದೇವಿ ಕಳಸದ

Updated on: Jun 28, 2022 | 2:43 PM

Insomnia : ಯಾಕೆ ನಿದ್ರೆ ಬರುತ್ತಿಲ್ಲ ಎನ್ನುವುದಕ್ಕೆ ಹಲವಾರು ಕಾರಣಗಳಿವೆ. ಆದರೆ ನಾವು ಹಿಂದೆ ಚಲಿಸಲಾರೆವು, ಏನಿದ್ದರೂ ಮುಂದೆ. ಅದೂ ಉಪಾಯಗಳಿಂದಲೇ, ಪರ್ಯಾಯಗಳಿಂದಲೇ. ಹಾಗಿದ್ದರೆ ನಿದ್ರಾಹೀನತೆಯಿಂದ ಹೊರಬರಲು ಏನು ಮಾಡಬೇಕು?

Sleep : ಹನ್ನೆರಡಾಯ್ತು, ಒಂದಾಯ್ತು ಇನ್ನೂ ನಿದ್ರೆ ಬರ್ತಿಲ್ವಾ?
ಸೌಜನ್ಯ : ಅಂತರ್ಜಾಲ
Follow us on

Insomnia : ನಿದ್ರಾಹೀನತೆಗೆ ಕಾರಣ ಹೆಚ್ಚಿಪಾಲು ನಮ್ಮ ಜೀವನಶೈಲಿಯೇ. ನಿದ್ರಾಹೀನತೆಯಿಂದಾಗಿ ಸುಸ್ತು, ಸೋಮಾರಿತನ, ಮಾನಸಿಕ ಕಿರಿಕಿರಿ ಉಂಟಾಗುತ್ತದೆ. ಇದು ಹೀಗೇ ಮುಂದುವರೆದರೆ ದೀರ್ಘಾವಧಿಯಲ್ಲಿ ದೈಹಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ  ದಿನಕ್ಕೆ ಕನಿಷ್ಟ ಏಳರಿಂದ ಎಂಟು ಗಂಟೆಗಳ ಕಾಲ ಪ್ರತಿಯೊಬ್ಬರೂ ನಿದ್ರೆ ಮಾಡಬೇಕು ಎನ್ನುತ್ತಾರೆ ತಜ್ಞರು. ಅನೇಕರು ಒತ್ತಡ, ಆತಂಕ, ಆಘಾತ, ಒಂಟಿತನದಿಂದಾಗಿಯೇ ನಿದ್ರೆಗೆ ಜಾರುವಲ್ಲಿ ತೊಂದರೆ ಅನುಭವಿಸುತ್ತಾರೆ. ಅದರಲ್ಲೂ ನಗರಜೀವನಶೈಲಿಯಂದಾಗಿ ಉಂಟಾಗುವ ನಿದ್ರಾಹೀನತೆ ಮತ್ತದರ ಪರಿಣಾಮಗಳು ಅಪಾಯಕಾರಿ. ಕೊವಿಡ್​ ನಂತರ ಈ ಸಮಸ್ಯೆ ಇನ್ನೂ ಕ್ಲಿಷ್ಟಕರವಾಗಿದೆ ಎನ್ನುವುದು ಅಧ್ಯಯನಗಳಿಂದ ತಿಳಿದುಬರುತ್ತಿದೆ. ಮನುಷ್ಯರಿಗಿಂತ ಮೊಬೈಲ್​ ಸಹವಾಸವೇ ಹೆಚ್ಚಾಗಿರುವುದೂ ನಿದ್ರಾಹೀನತೆಯ ಕಾರಣಗಳಲ್ಲಿ ಒಂದು. ಸ್ವಕೇಂದ್ರ ಜೀವನಶೈಲಿ ಮತ್ತದರಿಂದ ಉಂಟಾಗುವ ಅಡ್ಡ ಪರಿಣಾಮಗಳು ಚಿಕ್ಕಮಕ್ಕಳಿಂದ ವಯಸ್ಸಾದವರವರೆಗೂ ಗಂಭೀರವಾಗಿ ಕಾಡುತ್ತಲೇ ಇದೆ. ಇಂದು ಏನೂ ಬೇಕಾದರೂ ಕೊಳ್ಳಬಹುದು. ಆದರೆ ಶಾಂತ ನಿದ್ರೆಯನ್ನು?

ಹದಿಹರೆಯದವರಲ್ಲಿ ಹೆಚ್ಚುತ್ತಿದೆ 

ಹದಿಹರೆಯದವರಲ್ಲಿ ನಿದ್ರಾಹೀನತೆ ಹೆಚ್ಚುತ್ತಿದ್ದು, ಬಲುಬೇಗನೆ ರಕ್ತದೊತ್ತಡದಂಥ  ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಆತಂಕ, ಖಿನ್ನತೆಗೆ ಎಡೆಮಾಡಿಕೊಡುತ್ತದೆ. ಹೈಪರ್ ಆಕ್ಟಿವ್ ಡಿಸಾರ್ಡರ್​ ಗೂ ಇದು ದಾರಿಯಾಗಬಹುದು ಎನ್ನುತ್ತಾರೆ ವೈದ್ಯರು. ಹಾಗಾಗಿ ನಿದ್ರೆಯ ಅವಧಿ ಜೊತೆಗೆ ಆರಾಮಾಗಿ ನಿದ್ರಿಸಲು ಬೇಕಿರುವುದು ಸ್ವಚ್ಛ ವಾತಾವರಣ. ಮಲಗುವ ಎರಡು ಗಂಟೆಗಳ ಮೊದಲು ಮಾತ್ರ ಕಿಟಕಿ ಪರದೆಯನ್ನು ತೆರೆಯಬೇಕು. ಮಲಗುವಾಗ ಮುಚ್ಚಬೇಕು. ಇನ್ನು ಹಗಲಿನಲ್ಲಿ ಕಿಟಿಕಿಗಳು ಆದಷ್ಟು ಮುಚ್ಚಿರಲಿ. ಕಾಫಿ ಅಥವಾ ಕೆಫೀನ್ ಅಂಶವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

ಇದನ್ನೂ ಓದಿ
ಹಾದಿಯೇ ತೋರಿದ ಹಾದಿ: ನಮ್ಮ ಹಾವಾಡಿಗರು ಎಲ್ಲೂ ಹೋಗಿಲ್ಲ ಇಲ್ಲೇ ಹೀಗೇ ಇದ್ದಾರೆ
ಹಾದಿಯೇ ತೋರಿದ ಹಾದಿ: ನೀರಿನಾಳಕ್ಕಿಳಿದು ಶವತೆಗೆವ ಬಾಬಾ ಅಣ್ಣು ಸಿದ್ದಿ ಸಾಹಸಗಾಥೆ
ಹಾದಿಯೇ ತೋರಿದ ಹಾದಿ: ಈ ‘ಅರಸು’ ಆಳಾಗಿ ದುಡಿಯಲು ಸಿದ್ಧನಿದ್ದಾನೆ
Nomad: ಹಾದಿಯೇ ತೋರಿದ ಹಾದಿ; ‘ನಮ್ಮ ದೇಶದ ಸ್ಥಿತಿಗತಿಯನ್ನೇ ಕಲೆಯ ಮೂಲಕ ತೋರಿಸುತ್ತ ಹೊರಟಿದ್ದೇವೆ’

ಅಶ್ವಗಂಧ: ಅಶ್ವಗಂಧದಲ್ಲಿರುವ ವಿಥನೋಲೈಡ್‌, ಥ್ರೈಥಿಲಿನ್ ಗ್ಲಿಕೋಲ್ ಮಾನಸಿಕ ಒತ್ತಡವನ್ನು ತಗ್ಗಿಸುವ ಸಾಮರ್ಥ್ಯ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಆರಾಮದಾಯಕ ನಿದ್ರೆಗಾಗಿ, ಮಲಗುವ ಅರ್ಧಗಂಟೆ ಮೊದಲು ವೈದ್ಯರ ಸಲಹೆ ಮೇರೆಗೆ ಅಶ್ವಗಂಧವುಳ್ಳ ಪೇಯ, ಲೇಹ್ಯ, ಮಾತ್ರೆ ಸೇವಿಸಬಹುದು.

ಇದನ್ನೂ ಓದಿ : ನಾಡಿಯನ್ನು ಒತ್ತಿ ಹಿಡಿದರೆ ನಿದ್ರಾಹೀನತೆ ಸಮಸ್ಯೆ ಮಾಯ!

ಕ್ಯಾಮೊಮೈಲ್ ಟೀ: ಇದು ಅತ್ಯುತ್ತಮ ಪರಿಹಾರ. ಸ್ವಲ್ಪ ಬೆಚ್ಚಗಿನ ನೀರು, ಒಂದು ಕಪ್ ಮತ್ತು ಕ್ಯಾಮೊಮೈಲ್ ಟೀ ಬ್ಯಾಗ್. ಕ್ಯಾಮೊಮೈಲ್ ಚಹಾ ಎಪಿಜೆನಿನ್‌ ಅಂಶಗಳಿಂದ ಕೂಡಿರುತ್ತದೆ. ಇದು ಮೆದುಳಿಗೆ ಸಂದೇಶ ಕಳಿಸಿ ನಿದ್ರಿಸಲು ಪ್ರಚೋದಿಸುತ್ತದೆ.

ಬಾದಾಮಿ: ಬಾದಾಮಿಯಲ್ಲಿ ಫೈಬರ್, ಕೊಬ್ಬಿನಂಶವಿದ್ದು ಸಂಕೀರ್ಣ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಲ್ಲಿ ಮ್ಯಾಗ್ನೀಶಿಯಮ್‌ನ ಪ್ರಮಾಣ ಹೇರಳವಾಗಿದ್ದು, ಸ್ನಾಯುಗಳನ್ನು  ಸಡಿಲಗೊಳಿಸಿ ನಿದ್ರೆ ಆವರಿಸಲು ಅವಕಾಶ ಮಾಡಿಕೊಡುತ್ತದೆ.

ಇದನ್ನೂ ಓದಿ : Insomnia: ಕಡಿಮೆ ವಯಸ್ಸಿನಲ್ಲೇ ನಿದ್ರಾಹೀನತೆ, ನಿವೃತ್ತಿ ಜೀವನದಲ್ಲಿ ಈ ಸಮಸ್ಯೆಗಳಿಗೆ ಕಾರಣವಾಗುತ್ತೆ

ಕುಂಬಳಕಾಯಿ ಬೀಜಗಳು: ಪೆಪಿಟಾಸ್ ಎಂದರೆ ಕುಂಬಳಕಾಯಿ ಬೀಜ. ಟ್ರಿಪ್ಟೊಫಾನ್ ಮತ್ತು ಸತುವಿನ ಅಂಶವನ್ನು ಈ ಬೀಜ ಹೊಂದಿದೆ. ಇವೆರಡೂ ಮೆಲಟೋನಿನ್‌ಗೆ ಪೂರಕವಾಗಿ ಟ್ರಿಪ್ಟೊಫಾನ್ ಅಂಶವನ್ನು ಸಿರೊಟೋನಿನ್ ಆಗಿ ಪರಿವರ್ತಿಸಲು ಸಹಾಯ ಮಾಡುತ್ತವೆ.

ಜಾಯಿಕಾಯಿ ಹಾಲು: ಒಂದು ಲೋಟ ಹಾಲಿನೊಂದಿಗೆ ಜಾಯಿಕಾಯಿ ಪುಡಿ ಬೆರೆಸಿ ಕುಡಿಯುವುದರಿಂದ ನಿದ್ರಾಹೀನತೆಯಿಂದ ದೂರವಿರಬಹುದು. ಹಾಲಿನಲ್ಲಿ ಟ್ರಿಪ್ಟೊಫಾನ್ ಇರುತ್ತದೆ. ಇದು ದೇಹದಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Published On - 2:42 pm, Tue, 28 June 22