Panic Attack: ಪ್ಯಾನಿಕ್ ಅಟ್ಯಾಕ್ ಎಂದರೇನು? ಲಕ್ಷಣಗಳೇನು? ಇಲ್ಲಿದೆ ಮಾಹಿತಿ
ಸಾಮಾನ್ಯವಾಗಿ ಸರಿಯಾಗಿ ಉಸಿರಾಡಲು ಸಾಧ್ಯವಾಗದ ಪರಿಸ್ಥಿತಿಯಿದ್ದಾಗ ಪ್ಯಾನಿಕ್ ಅಟ್ಯಾಕ್ ಆಗುತ್ತದೆ. ಅಂತಹ ಸಂದರ್ಭಗಳಲ್ಲಿ ಫ್ರೆಶ್ಗಾಳಿ ಸಿಗುವಂತೆ ನೋಡಿಕೊಳ್ಳಿ.
ಕೆಲವರು ಇದ್ದಕಿದ್ದ ಹಾಗೇ ಏನೋ ಆಯಿತು ಎಂಬಂತೆ ಗಾಬರಿಯಾದ ರೀತಿ ವರ್ತಿಸುತ್ತಾರೆ. ಒಂದು ಕ್ಷಣದಲ್ಲಿ ಸರಿಯಾಗಿದ್ದವರು, ಇನ್ನೊಂದು ಕ್ಷಣದಲ್ಲಿ ಪ್ರಜ್ಞೆ ತಪ್ಪಿ ಬೀಳುತ್ತಾರೆ ಇದನ್ನು ಪ್ಯಾನಿಕ್ ಅಟ್ಯಾಕ್ ಅಥವಾ ಥಟ್ಟನೆ ದಿಗಿಲುಗೊಳ್ಳುವುದು ಎನ್ನುತ್ತಾರೆ. ಮಾನಸಿಕ ಸಮಸ್ಯೆಯಿಂದ ಈ ಸಮಸ್ಯೆ ಉಲ್ಬಣವಾಗುತ್ತದೆ. ಅತಿಯಾದ ಯೋಚನೆ, ಒತ್ತಡದ ಬದುಕು, ಸರಿಯಾದ ರೀತಿಯಲ್ಲಿ ಊಟ, ನಿದ್ದೆ ಇಲ್ಲದೆ ಇರುವುದು ಈ ರೀತಿಯ ಸಮಸ್ಯೆಗಳ ಆರಂಭಕ್ಕೆ ಕಾರಣವಾಗುತ್ತದೆ. ಪ್ಯಾನಿಕ್ ಅಟ್ಯಾಕ್ ಆದ ಸಂದರ್ಭದಲ್ಲಿ ಎದೆಯ ಬಡಿತ ಜೋರಾಗಿ, ಉಸಿರಾಡಲೂ ಕಷ್ಟವಾಗುವಂತೆ ಆಗುತ್ತದೆ. ಇದರಿಂದ ಮೆದುಳಿಗೆ ಸರಿಯಾಗಿ ರಕ್ತಸಂಚಾರವಾಗದೆ ವ್ಯಕ್ತಿ ಪ್ರಜ್ಞೆ ತಪ್ಪಿ ಬೀಳುತ್ತಾನೆ.
ಪ್ಯಾನಿಕ್ ಅಟ್ಯಾಕ್ನ ಲಕ್ಷಣಗಳೇನು?
ತೀವ್ರ ಎದೆಬಡಿತ ಹೈಪರ್ವೆಂಟಿಲೇಷನ್ ಎದೆ ನೋವು ತಲೆತಿರುಗುವಿಕೆ ಮುಖ್ಯವಾಗಿ ವ್ಯಕ್ತಿಗೆ ತಾನು ಸತ್ತೇ ಹೋಗುತ್ತೇನೆ. ಬದುಕುವ ಸಾಧ್ಯತೆಗಳೇ ಇಲ್ಲ ಎನ್ನುವ ಭಾವನೆ ಕಾಡುತ್ತದೆ.
ಪ್ಯಾನಿಕ್ ಅಟ್ಯಾಕ್ ಆಗಿರುವವರನ್ನು ಹೇಗೆ ಸರಿಪಡಿಸಬೇಕು? ಪ್ಯಾನಿಕ್ ಅಟ್ಯಾಕ್ ಅಥವಾ ಥಟ್ಟನೆ ದಿಗಿಲುಗೊಳ್ಳುವ ವ್ಯಕ್ತಿಯನ್ನು ಅದಷ್ಟು ನೆಮ್ಮದಿಯಾಗಿರುವಂತೆ ನೋಡಿಕೊಳ್ಳಿ. ಜತೆಗೆ ಅವರಿಗೆ ಅವರದ್ದೇ ಆದ ಕೆಲಸಗಳನ್ನು ಮಾಡಲು, ಯೋಚಿಸಲು ಸಮಯ ನೀಡಿ. ಅದರ ಹೊರತಾಗಿಯೂ ಪ್ಯಾನಿಕ್ ಅಟ್ಯಾಕ್ ಆದ ವೇಳೆ ಏನು ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ.
ನಿಯಂತ್ರಿಸಿ ಪ್ಯಾನಿಕ್ ಅಟ್ಯಾಕ್ ಅದ ವೇಳೆ ಆ ವ್ಯಕ್ತಿಯನ್ನು ಉದ್ವೇಗದಿಂದ ಶಾಂತಗೊಳಿಸಲು ಪ್ರಯತ್ನಿಸಿ. ಯಾವುದೇ ರೀತಿಯ ಹಾನಿ ಸಂಭವಿಸುವುದಿಲ್ಲ ಎನ್ನುವದನ್ನು ಮನದಟ್ಟು ಮಾಡಿಕೊಡಿ.
ಉಸಿರಾಟದ ವ್ಯಾಯಾಮ ಮಾಡಿಸಿ ಥಟ್ಟನೆ ದಿಗಿಲುಗೊಂಡ ವ್ಯಕ್ತಿಗೆ ಉಸಿರಾಟದ ವ್ಯಾಯಅಮ ಮಾಡಿಸಿ. ನೆನಪಿಡಿ ಅವರಿಗೇ ಮಾಡಲು ಹೇಳಬೇಡಿ. ಅವರೊಂದಿಗೆ ನೀವೂ ಮಾಡುತ್ತಾ ಮಾರ್ಗದರ್ಶನ ನೀಡಿ. ಮೂಗಿನ ಎಡಹೊಳ್ಳೆಯಿಂದ ಉಸಿರನ್ನು ತೆಗೆದುಕೊಂಡು ಅದೇ ಬದಿಯಲ್ಲಿ ಉಸಿರನ್ನು ಹೊರಬಿಡುವಂತೆ ಮಾಡಿಸಿ. ಈ ರೀತಿಯ ಉಸಿರಾಟ ಅವರ ದಿಗಿಲನ್ನು ಶಮನಗೊಳಿಸುತ್ತದೆ.
ಸಂಖ್ಯೆಗಳೊಂದಿಗೆ ಉಸಿರಾಟ ದಿಗಿಲುಗೊಂಡ ವ್ಯಕ್ತಿಯನ್ನು ಶಾಂತಗೊಳಿಸುವುದು ಮುಖ್ಯವಾಗಿರುತ್ತದೆ. ಹೀಗಾಗಿ ಸ್ಕ್ವಾರ್ ಬ್ರೀಥಿಂಗ್ ಮಾಡಿಸಿ. ಅಂದರೆ ಸಂಖ್ಯೆಗಳನ್ನು ಹೇಳುತ್ತಾ ಉಸಿರಾಡುವಂತೆ ಮಾಡಿ 1ರಿಂದ 4 ವರೆಗೆ ಹೇಳಿ ಉಸಿರನ್ನು ಬಿಗಿ ಹಿಡಿದು ನಂತರ ಮತ್ತೆ 1 ರಿಂದ 4ರವರೆಗೆ ಹೇಳುತ್ತಾ ನಿಧಾನವಾಗಿ ಉಸಿರನ್ನು ಬಿಡುವಂತೆ ಸಲಹೆ ನೀಡಿ.
ಗಾಳಿ ಬೀಸಿ ಸಾಮಾನ್ಯವಾಗಿ ಸರಿಯಾಗಿ ಉಸಿರಾಡಲು ಸಾಧ್ಯವಾಗದ ಪರಿಸ್ಥಿತಿಯಿದ್ದಾಗ ಪ್ಯಾನಿಕ್ ಅಟ್ಯಾಕ್ ಆಗುತ್ತದೆ. ಅಂತಹ ಸಂದರ್ಭಗಳಲ್ಲಿ ಫ್ರೆಶ್ಗಾಳಿ ಸಿಗುವಂತೆ ನೋಡಿಕೊಳ್ಳಿ. ಕಿಟಕಿಯನ್ನು ತೆರೆದಿಟ್ಟು ಗಾಳಿ ಸೋಕುವಂತೆ ನೋಡಿಕೊಳ್ಳಿ
ನೀರು ಕುಡಿಸಿ ದಿಗಿಲುಗೊಂಡಾಗ ದೇಹಕ್ಕೆ ನೀರಿನ ಅವಶ್ಯಕತೆ ಇರುತ್ತದೆ. ಹೀಗಾಗಿ ಪ್ಯಾನಿಕ್ ಅಟ್ಯಾಕ್ ಆದ ಸಂದರ್ಭದಲ್ಲಿ ಎರಡು ಲೋಟ ತಣ್ಣನೆಯ ನೀರು ಕುಡಿಸಿ. ಇದು ವ್ಯಕ್ತಿ ಹಿತವಾದ ಅನುಭವ ನೀಡುತ್ತದೆ.
(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್ನ ಅಭಿಪ್ರಾಯವಾಗಿರುವುದಿಲ್ಲ. ಇಂಡಿಯಾ ಟಿವಿಗೆ ಮಣಿಪಾಲ್ ಆಸ್ಪತ್ರೆಯ ವೈದ್ಯೆ ಡಾ.ಪಲ್ಲವಿ ಅರವಿಂದ್ ಜೋಶಿ ಅವರು ನೀಡಿದ ಮಾಹಿತಿಯನ್ನು ಆಧರಿಸಿದೆ)
ಇದನ್ನೂ ಓದಿ:
Mulethi Benefits: ಅತಿಮಧುರದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಫೋಟೋ ಸಹಿತ ಸಂಪೂರ್ಣ ಮಾಹಿತಿ