ಅಪಾಯಕಾರಿ ಕ್ಯಾನ್ಸರ್​ ಬಗ್ಗೆ ನಿಮಗೆ ತಿಳಿಯದ ಸಂಗತಿಗಳ ಮಾಹಿತಿ ಇಲ್ಲಿದೆ

ಕ್ಯಾನ್ಸರ್ ಸ್ಪರ್ಶದಿಂದ ಹರಡುವುದಿಲ್ಲ ಆದ್ದರಿಂದ ಕ್ಯಾನ್ಸರ್ ರೋಗಿಯ ಹತ್ತಿರದಿಂದ ಕ್ಯಾನ್ಸರ್ ಬರುವ ಬಗ್ಗೆ ಚಿಂತಿಸಬೇಕಾಗಿಲ್ಲ.

ಅಪಾಯಕಾರಿ ಕ್ಯಾನ್ಸರ್​ ಬಗ್ಗೆ ನಿಮಗೆ ತಿಳಿಯದ ಸಂಗತಿಗಳ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Mar 23, 2022 | 10:48 AM

ಕ್ಯಾನ್ಸರ್ (Cancer) ಅತ್ಯಂತ ಭಯಾನಕ ಕಾಯಿಲೆಗಳಲ್ಲಿ ಒಂದಾಗಿದೆ. ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್​ ಆರಂಭಿಕ ರೋಗ ಲಕ್ಷಣಗಳನ್ನು ತೋರಿಸದೆ ದೇಹವನ್ನು ಹೊಕ್ಕಿ ಹಿಂಸೆ ನೀಡುತ್ತದೆ  2020 ರಲ್ಲಿ ಸುಮಾರು 10 ಮಿಲಿಯನ್ ಸಾವುಗಳಿಗೆ ಕ್ಯಾನ್ಸರ್ ಕಾರಣವೆಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಕೆಲವು ಸಾಮಾನ್ಯ ರೀತಿಯ ಕ್ಯಾನ್ಸರ್​ಗಳೆದರೆ ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್, ಚರ್ಮದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಇತ್ಯಾದಿಗಳಾಗಿವೆ. ಆಲ್ಕೋಹಾಲ್​ ಸೇವನೆ, ಧೂಮಪಾನ, ದೇಹಕ್ಕೆ ಸರಿಯಾಗಿ ವ್ಯಾಯಾಮ ಇಲ್ಲದೆ ಇರುವುದು ಸೇರಿದಂತೆ ದೈನಂದಿನ ಹಲವು  ಅಸಂಬದ್ಧ ಚಟುವಟಿಕೆಗಳಿಂದ ದೇಹಕ್ಕೆ ರೋಗ ಅಂಟಿಕೊಳ್ಳುತ್ತದೆ. ಕ್ಯಾನ್ಸರ್​ಗೆ ಇಂತಹದ್ದೇ ಆದ ಚಿಕಿತ್ಸೆ ಎನ್ನುವುದಿಲ್ಲ. ಆದರೆ ಅದರ ಅಪಾಯವನ್ನು ತಡೆಯಬಲ್ಲ ಚಿಕಿತ್ಸೆಯನ್ನು ವೈದ್ಯಲೋಕ ನೀಡಬಲ್ಲದು. ಕ್ಯಾನ್ಸರ್​ ಬಗೆಗೆ ಹಲವರಿಗೆ ಹಲವು ವಿಚಾರಗಳು ತಿಳಿದಿಲ್ಲ. ಇಲ್ಲಿ ಕ್ಯಾನ್ಸರ್​ ಬಗೆಗಿನ ಗೊತ್ತಿರದ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಗಿದೆ ನೋಡಿ,

ಸ್ತನ ಕ್ಯಾನ್ಸರ್​ ಪ್ರಕರಣಗಳೇ ಹೆಚ್ಚು: ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 2020 ರ ಅಂದಾಜಿನ ಪ್ರಕಾರ ಸ್ತನ ಕ್ಯಾನ್ಸರ್ ಹೊಸ ಕ್ಯಾನ್ಸರ್ ಪ್ರಕರಣಗಳ ಪಟ್ಟಿಯಲ್ಲಿ 2.26 ಮಿಲಿಯನ್ ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇದು 685,000 ಸಾವುಗಳನ್ನು ಹೊಂದಿದೆ.

ಎಲ್ಲಾ ಗಡ್ಡೆಗಳು ಕ್ಯಾನ್ಸರ್​ಗೆ ಕಾರಣವಾಗದು: ಗೆಡ್ಡೆಗಳು ಕ್ಯಾನ್ಸರ್​ಗೆ ಸಾಮಾನ್ಯ ಕಾರಣವೆಂದು ಗುರುತಿಸಲಾಗಿದೆ. ಆದರೆ ಎಲ್ಲಾ ಗೆಡ್ಡೆಗಳು ಕ್ಯಾನ್ಸರ್ ಅಲ್ಲ. ಮಾರಣಾಂತಿಕ ಗೆಡ್ಡೆಗಳಂತಲ್ಲದೆ, ಹಾನಿಕರವಲ್ಲದ ಗೆಡ್ಡೆಗಳು ಸಾಮಾನ್ಯವಾಗಿ ಕ್ಯಾನ್ಸರ್​ ಎನ್ನುಲಾಗುತ್ತದೆ. ಆದರೆ ಅವು ದೇಹದ ಬೇರೆ ಯಾವುದೇ ಭಾಗದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಬಹುದು.

ಕ್ಯಾನ್ಸರ್​ ಸಾಂಕ್ರಾಮಿಕವಲ್ಲ: ಕ್ಯಾನ್ಸರ್ ಸ್ಪರ್ಶದಿಂದ ಹರಡುವುದಿಲ್ಲ ಆದ್ದರಿಂದ ಕ್ಯಾನ್ಸರ್ ರೋಗಿಯ ಹತ್ತಿರದಿಂದ ಕ್ಯಾನ್ಸರ್ ಬರುವ ಬಗ್ಗೆ ಚಿಂತಿಸಬೇಕಾಗಿಲ್ಲ. ಆದಾಗ್ಯೂ, ಕ್ಯಾನ್ಸರ್ ಇತಿಹಾಸ ಹೊಂದಿರುವ ರೋಗಿಯಿಂದ ಅಂಗ ಅಥವಾ ಅಂಗಾಂಶ ಕಸಿ ಸಂದರ್ಭದಲ್ಲಿ, ಕೆಲವು ಹಂತದಲ್ಲಿ ಕ್ಯಾನ್ಸರ್ ಅನ್ನು ತಗಲುವ ಸಾಧ್ಯತೆ ಇದೆ ಎನ್ನಲಾಗಿದೆ.

ಅನುವಂಶಿಕ ಅಭ್ಯಾಸಗಳು ಕ್ಯಾನ್ಸರ್​ಗೆ ಕಾರಣವಾಘಬಲ್ಲದು: ಧೂಮಪಾನ, ಆಹಾರ ಪದ್ಧತಿ, ಟಾಕ್ಸಿನ್‌ಗೆ ಒಡ್ಡಿಕೊಳ್ಳುವುದು ಮುಂತಾದ ಹಲವಾರು ಅಂಶಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು ಮತ್ತು ಜೀನ್‌ಗಳು ಅವುಗಳಲ್ಲಿ ಒಂದಾಗಬಹುದು. ಕೆಲವು ಆನುವಂಶಿಕ ರೂಪಾಂತರಗಳು ಒಬ್ಬ ವ್ಯಕ್ತಿಗೆ ಕ್ಯಾನ್ಸರ್ ಅಪಾಯವನ್ನುಂಟುಮಾಡುತ್ತವೆ ಆದರೆ 5 ರಿಂದ 10 ಪ್ರತಿಶತದಷ್ಟು ಕ್ಯಾನ್ಸರ್ ಮಾತ್ರ ಅದೇ ಸಂಬಂಧವನ್ನು ಹೊಂದಿದೆ. ಆದ್ದರಿಂದ, ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸವಿದ್ದರೆ, ಸಕಾಲಿಕ ಸ್ಕ್ರೀನಿಂಗ್ಗಳನ್ನು ಕೈಗೊಳ್ಳಲು ಸೂಚಿಸಲಾಗುತ್ತದೆ.

ಎಲ್ಲಾ ಕ್ಯಾನ್ಸರ್​ ಸಾವಿಗೆ ಕಾರಣವಾಗದು: ಕ್ಯಾನ್ಸರ್​​ ಬಂದರೇ ಸಾವೇ ಗತಿ ಎನ್ನುವ ಮನೋಭಾವನೆ ಇದೆ. ಅದರೆ ವಿಜ್ಞಾನ, ಜೀವಶಾಸ್ತ್ರ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಯಿಂದಾಗಿ ಸುಧಾರಿತ ಚಿಕಿತ್ಸೆಗಳು, ಸಮಯೋಚಿತ ತಪಾಸಣೆ ಇತ್ಯಾದಿಗಳೊಂದಿಗೆ, ಆರೋಗ್ಯ ಸೇವೆಯು ಗಣನೀಯವಾಗಿ ಸುಧಾರಿಸಿದೆ ಮತ್ತು ಇದು ಕ್ಯಾನ್ಸರ್ ರೋಗಿಗಳ ಬದುಕುಳಿಯುವಿಕೆಯ ಪ್ರಮಾಣವನ್ನು ಹೆಚ್ಚಿಸಿದೆ.

ಇದನ್ನೂ ಓದಿ:

ಕೊವಿಡ್​ ಸೋಂಕಿನಿಂದ ಟೈಪ್ 2 ಮಧುಮೇಹದ ಅಪಾಯ ಹೆಚ್ಚಳ; ಅಧ್ಯಯನದಲ್ಲಿ ಬಹಿರಂಗ

Published On - 10:47 am, Wed, 23 March 22

ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್