AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೆಂಗ್ಯೂ ಲಸಿಕೆಗೆ ಸಿಕ್ಕಿದೆ ಗ್ರೀನ್ ಸಿಗ್ನಲ್; ಭಾರತದ ಮೊದಲ ‘ಕ್ಯೂಡೆಂಗಾ’ ಲಸಿಕೆಯನ್ನು ಯಾರ್ಯಾರು ಪಡೆಯಬಹುದು

QDENGA Vaccine in India: ಭಾರತವು ತನ್ನ ಮೊದಲ ಡೆಂಗ್ಯೂ ಲಸಿಕೆಯಾದ ಕ್ಯೂಡೆಂಗಾ (QDENGA) ಅನ್ನು ಅನುಮೋದಿಸಿದೆ. ಆದರೆ, ಈ ಲಸಿಕೆ ತೆಗೆದುಕೊಳ್ಳುವ ಮುನ್ನ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಹಾಗಾದರೆ ಇದು ಡೆಂಗ್ಯೂ ವಿರುದ್ಧ ಸಂಪೂರ್ಣ ರಕ್ಷಣೆ ನೀಡುತ್ತದೆಯೇ, ಎಲ್ಲರೂ ಇದನ್ನು ತೆಗೆದುಕೊಳ್ಳಬೇಕೇ, ಯಾರಿಗೆ ಈ ಲಸಿಕೆ ಸೂಕ್ತವಲ್ಲ ಎಂಬ ಪ್ರಶ್ನೆಗಳಿಗೆ ತಜ್ಞರು ನೀಡಿರುವ ಮಾಹಿತಿ ಸ್ಟೋರಿಯಲ್ಲಿದೆ.

ಡೆಂಗ್ಯೂ ಲಸಿಕೆಗೆ ಸಿಕ್ಕಿದೆ ಗ್ರೀನ್ ಸಿಗ್ನಲ್; ಭಾರತದ ಮೊದಲ 'ಕ್ಯೂಡೆಂಗಾ' ಲಸಿಕೆಯನ್ನು ಯಾರ್ಯಾರು ಪಡೆಯಬಹುದು
ಭಾರತದ ಮೊದಲ ಡೆಂಗ್ಯೂ ಲಸಿಕೆ 'ಕ್ಯೂಡೆಂಗಾ'Image Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 21, 2026 | 5:05 PM

Share

ಮುಖ್ಯಾಂಶಗಳು

  • ಡೆಂಗ್ಯೂ ತಡೆಗೆ ಹೊಸ ಭರವಸೆ 'ಕ್ಯೂಡೆಂಗಾ: ವೈದ್ಯರು ಹೇಳಿದ ಪ್ರಮುಖ ಮಾಹಿತಿ ಇಲ್ಲಿದೆ
  • QDENGA 100% ರಕ್ಷಣೆ ನೀಡುತ್ತದೆಯೇ? ಲಸಿಕೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು
  • ಡೆಂಗ್ಯೂ ಲಸಿಕೆ ಬಂದರೂ ಎಚ್ಚರ ಅಗತ್ಯ: ಸೊಳ್ಳೆ ನಿಯಂತ್ರಣ ಏಕೆ ಮುಖ್ಯ?

ಮಳೆಗಾಲ ಆರಂಭವಾದರೆ ಸಾಕು, ದೇಶದ ಹಲವು ರಾಜ್ಯಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತವೆ. ಪ್ರತಿ ವರ್ಷ ಸಾವಿರಾರು ಮಂದಿ ಡೆಂಗ್ಯೂ ಸೋಂಕಿಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಡೆಂಗ್ಯೂ ತಡೆಗಟ್ಟಲು ಕ್ಯೂಡೆಂಗಾ (QDENGA) ಎಂಬ ಮೊದಲ ಲಸಿಕೆಯನ್ನು ಬಿಡುಗಡೆ ಮಾಡಿದೆ. ಇದನ್ನು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಜಪಾನ್‌ನ ಔಷಧ ಕಂಪನಿ ಟಕೆಡಾ (Takeda) ಅಭಿವೃದ್ಧಿಪಡಿಸಿದ್ದು ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಆದರೆ, ಈ ಲಸಿಕೆ ತೆಗೆದುಕೊಳ್ಳುವ ಮುನ್ನ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಹಾಗಾದರೆ ಇದು ಡೆಂಗ್ಯೂ ವಿರುದ್ಧ ಸಂಪೂರ್ಣ ರಕ್ಷಣೆ ನೀಡುತ್ತದೆಯೇ, ಎಲ್ಲರೂ ಇದನ್ನು ತೆಗೆದುಕೊಳ್ಳಬೇಕೇ, ಯಾರಿಗೆ ಈ ಲಸಿಕೆ ಸೂಕ್ತವಲ್ಲ ಎಂಬ ಪ್ರಶ್ನೆಗಳಿಗೆ ಪಿಎಸ್ಆರ್ಐ ಆಸ್ಪತ್ರೆಯ ಪಲ್ಮನರಿ, ಕ್ರಿಟಿಕಲ್ ಕೇರ್ ಮತ್ತು ಸ್ಲೀಪ್ ಮೆಡಿಸಿನ್ ವಿಭಾಗದ ಹಿರಿಯ ತಜ್ಞೆ ಡಾ. ನೀತು ಜೈನ್ ಉತ್ತರ ನೀಡಿದ್ದಾರೆ.

ಕ್ಯೂಡೆಂಗಾ (QDENGA) ಲಸಿಕೆ ಎಂದರೇನು?

QDENGA ಎಂಬುದು ಡೆಂಗ್ಯೂ ವೈರಸ್‌ನ ಎಲ್ಲಾ ನಾಲ್ಕು ಸೆರೋಟೈಪ್‌ಗಳ (DENV-1, DENV-2, DENV-3 ಮತ್ತು DENV-4) ವಿರುದ್ಧ ರೋಗನಿರೋಧಕ ಶಕ್ತಿಯನ್ನು ಬೆಳೆಸಲು ವಿನ್ಯಾಸಗೊಳಿಸಲಾದ ಲಸಿಕೆಯಾಗಿದೆ. ಒಮ್ಮೆ ಒಂದು ವಿಧದ ಡೆಂಗ್ಯೂ ಸೋಂಕು ಬಂದರೆ ಉಳಿದ ಮೂರು ವಿಧಗಳ ವಿರುದ್ಧ ಸಂಪೂರ್ಣ ರಕ್ಷಣೆ ದೊರೆಯುವುದಿಲ್ಲ. ಆದ್ದರಿಂದ ವ್ಯಕ್ತಿಗೆ ಜೀವನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಡೆಂಗ್ಯೂ ಬರುವ ಸಾಧ್ಯತೆ ಇರುತ್ತದೆ. ಈ ಅಪಾಯವನ್ನು ಕಡಿಮೆ ಮಾಡಲು ಈ ಲಸಿಕೆ ಸಹಾಯಕವಾಗಬಹುದು.

ಲಸಿಕೆಯನ್ನು ಹೇಗೆ ನೀಡಲಾಗುತ್ತದೆ?

ಕ್ಯೂಡೆಂಗಾ ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಸಾಮಾನ್ಯವಾಗಿ ಮೊದಲ ಡೋಸ್‌ನ ನಂತರ ಮೂರು ತಿಂಗಳ ಅಂತರದಲ್ಲಿ ಎರಡನೇ ಡೋಸ್ ನೀಡಲಾಗುತ್ತದೆ. ತಜ್ಞರ ಪ್ರಕಾರ, ಉತ್ತಮ ರಕ್ಷಣೆಯನ್ನು ಪಡೆಯಲು ಎರಡೂ ಡೋಸ್‌ಗಳನ್ನು ಪೂರ್ಣಗೊಳಿಸುವುದು ಅಗತ್ಯ.

ಈ ಲಸಿಕೆ 100% ರಕ್ಷಣೆ ನೀಡುತ್ತದೆಯೇ?

ಇಲ್ಲ. ತಜ್ಞರ ಪ್ರಕಾರ, ಈ ಲಸಿಕೆ 100 ಪ್ರತಿಶತ ಡೆಂಗ್ಯೂ ಸೋಂಕನ್ನು ತಡೆಯುವುದಿಲ್ಲ. ಲಸಿಕೆ ಪಡೆದವರಿಗೂ ಡೆಂಗ್ಯೂ ಬರಬಹುದು. ಆದರೆ, ತೀವ್ರ ಸ್ವರೂಪದ ಡೆಂಗ್ಯೂ, ಆಸ್ಪತ್ರೆ ದಾಖಲಾತಿ ಹಾಗೂ ಗಂಭೀರ ತೊಂದರೆಗಳ ಅಪಾಯವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಅದಕ್ಕಾಗಿ ಲಸಿಕೆ ಪಡೆದ ನಂತರವೂ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು. ಅಂದರೆ ಮನೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕೂಲರ್, ಹೂವಿನ ಕುಂಡ, ಟೈರ್, ಬಕೆಟ್‌ಗಳಲ್ಲಿ ನೀರು ಸಂಗ್ರಹವಾಗದಂತೆ ಸ್ವಚ್ಛಗೊಳಿಸಬೇಕು. ಸೊಳ್ಳೆ ನಿವಾರಕ ಕ್ರೀಮ್ ಅಥವಾ ಸ್ಪ್ರೇ ಬಳಸಿ. ಮೈ ಸರಿಯಾಗಿ ಮುಚ್ಚುವಂತಹ ಬಟ್ಟೆ ಧರಿಸಿ, ಸಾಧ್ಯವಾದಲ್ಲಿ ಕಿಟಕಿ ಮತ್ತು ಬಾಗಿಲುಗಳಿಗೆ ಸೊಳ್ಳೆ ಜಾಲರಿ ಅಳವಡಿಸಿ.

ಇದನ್ನೂ ಓದಿ: ಮೊದಲ ಡೆಂಗ್ಯೂ ಲಸಿಕೆಗೆ ಭಾರತ ಅನುಮೋದನೆ: ವ್ಯಾಕ್ಸಿನ್ ಪರಿಣಾಮಕಾರಿತ್ವ, ಬೆಲೆ ಬಗ್ಗೆ ಇಲ್ಲಿದೆ ಮಾಹಿತಿ

ಡೆಂಗ್ಯೂ ಬಂದ ನಂತರ ಈ ಲಸಿಕೆ ಇಲಾಜು ನೀಡುತ್ತದೆಯೇ?

ಇಲ್ಲ. QDENGA ಡೆಂಗ್ಯೂ ತಡೆಗಟ್ಟುವ ಲಸಿಕೆ ಮಾತ್ರ. ಈಗಾಗಲೇ ಡೆಂಗ್ಯೂ ಸೋಂಕು ಬಂದಿರುವವರಿಗೆ ಇದು ಔಷಧೋಪಚಾರವಾಗಿ ಕೆಲಸ ಮಾಡುವುದಿಲ್ಲ. ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು:

  • ಹೆಚ್ಚಿನ ಜ್ವರ
  • ತೀವ್ರ ತಲೆನೋವು
  • ಕಣ್ಣುಗಳ ಹಿಂದೆ ನೋವು
  • ಸ್ನಾಯು ಹಾಗೂ ಕೀಲು ನೋವು
  • ವಾಂತಿ
  • ಹೊಟ್ಟೆ ನೋವು
  • ರಕ್ತಸ್ರಾವ
  • ತೀವ್ರ ಆಯಾಸ
  • ಉಸಿರಾಟದ ತೊಂದರೆ
  • ಅತಿಯಾದ ನಿದ್ರಾವಸ್ಥೆ ಲಸಿಕೆ ಪಡೆದಿದ್ದೇವೆ ಎಂಬ ಕಾರಣಕ್ಕೆ ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಎಲ್ಲರೂ ತಕ್ಷಣ ಲಸಿಕೆ ಪಡೆಯಬೇಕೇ?

ಅಗತ್ಯವಿಲ್ಲ. ಯಾವ ವಯೋಮಾನದವರು ಮತ್ತು ಯಾವ ಪ್ರದೇಶದ ಜನರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದನ್ನು ಸರ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆ ಸ್ಥಳೀಯ ಡೆಂಗ್ಯೂ ಸೋಂಕಿನ ಪ್ರಮಾಣ, ಲಸಿಕೆಯ ಲಭ್ಯತೆ ಹಾಗೂ ಸುರಕ್ಷತೆಯ ಆಧಾರದ ಮೇಲೆ ನಿರ್ಧರಿಸಲಿದೆ. ವೈದ್ಯರ ಸಲಹೆ ಪಡೆಯದೇ ಸ್ವಯಂ ನಿರ್ಧಾರದಿಂದ ಲಸಿಕೆ ಪಡೆಯಬಾರದು.

ಯಾರಿಗೆ ಕ್ಯೂಡೆಂಗಾ ಲಸಿಕೆ ಸೂಕ್ತವಲ್ಲ?

  • ಗರ್ಭಿಣಿಯರು
  • ಹಾಲುಣಿಸುವ ತಾಯಂದಿರು
  • ರೋಗನಿರೋಧಕ ಶಕ್ತಿ ಕಡಿಮೆ ಇರುವವರು
  • ಇಮ್ಯುನೋಸಪ್ರೆಸ್ಸಿವ್ ಔಷಧಿಗಳನ್ನು ಸೇವಿಸುತ್ತಿರುವವರು
  • ಹಿಂದೆಯೇ ಲಸಿಕೆಗೆ ತೀವ್ರ ಅಲರ್ಜಿ ಉಂಟಾಗಿರುವವರು

ತಜ್ಞರ ಅಭಿಪ್ರಾಯದಂತೆ, QDENGA ಲಸಿಕೆ ಡೆಂಗ್ಯೂ ನಿಯಂತ್ರಣದಲ್ಲಿ ಮಹತ್ವದ ಸಾಧನೆಯಾಗಿದ್ದರೂ, ಇದು ಒಂದೇ ಪರಿಹಾರವಲ್ಲ. ಲಸಿಕೆ, ಸೊಳ್ಳೆ ನಿಯಂತ್ರಣ, ಆರಂಭಿಕ ರೋಗ ಪತ್ತೆ, ಸಮಯಕ್ಕೆ ಸರಿಯಾದ ಪರಿಹಾರ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಹೀಗೆ ಎಲ್ಲ ಕ್ರಮಗಳನ್ನು ಒಟ್ಟಾಗಿ ಅನುಸರಿಸಿದಾಗ ಮಾತ್ರ ಡೆಂಗ್ಯೂನಿಂದ ಉಂಟಾಗುವ ಗಂಭೀರ ಪರಿಣಾಮಗಳನ್ನು ಕಡಿಮೆ ಮಾಡಬಹುದು.

ಸೂಚನೆ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಡೆಂಗ್ಯೂ ಲಸಿಕೆ ಪಡೆಯುವ ಮೊದಲು ಅಥವಾ ಯಾವುದೇ ಆರೋಗ್ಯ ಸಂಬಂಧಿತ ನಿರ್ಧಾರ ಕೈಗೊಳ್ಳುವ ಮೊದಲು ಅರ್ಹ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಫುಟ್​ಪಾತ್ ತೆರವು ವೇಳೆ ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ
ಫುಟ್​ಪಾತ್ ತೆರವು ವೇಳೆ ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ
ಚೆನ್ನಮ್ಮ ಸಮಾಧಿ ಬಳಿ ವಿಷ್ಣು ಸಹಸ್ರನಾಮ ಪಠಣ ವೇಳೆ ಗರುಡ ಪ್ರತ್ಯಕ್ಷ
ಚೆನ್ನಮ್ಮ ಸಮಾಧಿ ಬಳಿ ವಿಷ್ಣು ಸಹಸ್ರನಾಮ ಪಠಣ ವೇಳೆ ಗರುಡ ಪ್ರತ್ಯಕ್ಷ
ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ
ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ
5 ವರ್ಷ ಲವರ್​ನನ್ನು ಸಾಕಿ ಮದುವೆಯಾದಳು! ಆದ್ರೆ ಆತ ಬೇರೊಬ್ಬಳೊಂದಿಗೆ ಪರಾರಿ
5 ವರ್ಷ ಲವರ್​ನನ್ನು ಸಾಕಿ ಮದುವೆಯಾದಳು! ಆದ್ರೆ ಆತ ಬೇರೊಬ್ಬಳೊಂದಿಗೆ ಪರಾರಿ
ಕಲುಷಿತ ಕಾವೇರಿ ನೀರಿನ ಪೂರೈಕೆಗೆ ಕತ್ರಿಗುಪ್ಪೆ ನಿವಾಸಿಗಳ ಆಕ್ರೋಶ
ಕಲುಷಿತ ಕಾವೇರಿ ನೀರಿನ ಪೂರೈಕೆಗೆ ಕತ್ರಿಗುಪ್ಪೆ ನಿವಾಸಿಗಳ ಆಕ್ರೋಶ
ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳದ್ದೇ ಕಾರುಬಾರು! ವಿಡಿಯೋ ವೈರಲ್
ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳದ್ದೇ ಕಾರುಬಾರು! ವಿಡಿಯೋ ವೈರಲ್