Health Tips: ಅರಿಶಿನ ಹಾಲಿನಿಂದ ಪ್ರಯೋಜನ ಮಾತ್ರವಲ್ಲ ಹಾನಿಯೂ ಇದೆ
ಅರಿಶಿನದಲ್ಲಿರುವ ' ಕರ್ಕ್ಯುಮಿನ್ ' ಅಂಶ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದರಿಂದ, ಋತುವಿನ ಬದಲಾವಣೆ ಕಾಲದಲ್ಲಿ ಅಂದರೆ ಬೇಸಿಗೆ ಕಾಲದಿಂದ ಮಳೆಗಾಲ, ಮಳೆಗಾಲದಿಂದ ಚಳಿಗಾಲ ಹೀಗೆ ಇಂತಹ ಸಂದರ್ಭಗಳಲ್ಲಿ ಹಾಲಿಗೆ ಅರಿಶಿನವನ್ನು ಬೆರೆಸಿ ಕುಡಿಯುವುದರಿಂದ ಶೀತ, ಕೆಮ್ಮು, ಕಫ ಮತ್ತು ಜ್ವರ ದೂರಾಗುತ್ತದೆ ಅಥವಾ ಈ ರೀತಿಯ ಸಮಸ್ಯೆಗಳು ಬರದಂತೆ ತಡೆಯಬಹುದು. ಆದರೆ ಅರಿಶಿನ ಹಾಲು ಕೆಲವು ಜನರಿಗೆ ಹಾನಿಕಾರಕವೆಂದು ಸಾಬೀತಾಗಿದೆ. ಹಾಗಾದರೆ ಇದನ್ನು ಯಾರು ಸೇವನೆ ಮಾಡಬಾರದು? ಏಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ನಿಮಗೆ ತಿಳಿದಿರಬಹುದು ಹಾಲಿಗಿಂತಲೂ ಹಳದಿ ಹಾಲು ಅಥವಾ ಅರಿಶಿನದ ಹಾಲು ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಪ್ರತಿನಿತ್ಯ ಅರಿಶಿನ ಹಾಲನ್ನು ಕುಡಿಯುವ ಮೂಲಕ ಹೆಚ್ಚಿನವರು ತಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಅರಿಶಿನದಲ್ಲಿರುವ ‘ ಕರ್ಕ್ಯುಮಿನ್ ‘ ಅಂಶ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದರಿಂದ, ಋತುವಿನ ಬದಲಾವಣೆ ಕಾಲದಲ್ಲಿ ಅಂದರೆ ಬೇಸಿಗೆ ಕಾಲದಿಂದ ಮಳೆಗಾಲ, ಮಳೆಗಾಲದಿಂದ ಚಳಿಗಾಲ ಹೀಗೆ ಇಂತಹ ಸಂದರ್ಭಗಳಲ್ಲಿ ಹಾಲಿಗೆ ಅರಿಶಿನವನ್ನು ಬೆರೆಸಿ ಕುಡಿಯುವುದರಿಂದ ಶೀತ, ಕೆಮ್ಮು, ಕಫ ಮತ್ತು ಜ್ವರ ದೂರಾಗುತ್ತದೆ ಅಥವಾ ಈ ರೀತಿಯ ಸಮಸ್ಯೆಗಳು ಬರದಂತೆ ತಡೆಯಬಹುದು. ಆದರೆ ಅರಿಶಿನ ಹಾಲು ಕೆಲವು ಜನರಿಗೆ ಹಾನಿಕಾರಕವೆಂದು ಸಾಬೀತಾಗಿದೆ. ಹಾಗಾದರೆ ಇದನ್ನು ಯಾರು ಸೇವನೆ ಮಾಡಬಾರದು? ಏಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.
- ಅರಿಶಿನ ಹಾಲು ಆರೋಗ್ಯಕ್ಕೆ ವರದಾನವಾಗಿದ್ದರೂ ಕೂಡ ಇದನ್ನು ಅತಿಯಾಗಿ ಕುಡಿಯುವುದರಿಂದ ಕೆಲವರ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವ ಬದಲು ನಕಾರಾತ್ಮಕ ಪರಿಣಾಮ ಬೀರಬಹುದು.
- ಗ್ಯಾಸ್ ಅಥವಾ ಹೊಟ್ಟೆಯುಬ್ಬರದಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿರುವವರು ಅರಿಶಿನ ಹಾಲನ್ನು ಸೇವನೆ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿರುವ ಪದಾರ್ಥಗಳು ನಿಮ್ಮ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು.
- ಮಧುಮೇಹದಂತಹ ಸೈಲೆಂಟ್ ಕಿಲ್ಲರ್ ಕಾಯಿಲೆಗಳಿಂದ ಬಳಲುತ್ತಿರುವವರು ವೈದ್ಯರನ್ನು ಸಂಪರ್ಕಿಸದೆ ಅರಿಶಿನ ಹಾಲನ್ನು ಕುಡಿಯಬಾರದು.
- ಆಗಾಗ ಕಡಿಮೆ ರಕ್ತದೊತ್ತಡದಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅರಿಶಿನದ ಹಾಲು ತುಂಬಾ ಹಾನಿಕಾರಕವಾಗಿದ್ದು ಇದು ರಕ್ತದೊತ್ತಡವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.
- ಕೆಲವರಿಗೆ ಹಾಲಿನಿಂದ ಅಲರ್ಜಿ ಇದ್ದರೆ ನಿಮ್ಮ ಆಹಾರದಲ್ಲಿ ಅರಿಶಿನ ಹಾಲನ್ನು ಸೇರಿಸುವುದನ್ನು ತಪ್ಪಿಸುವುದು ಒಳ್ಳೆಯದು.
- ಮಳೆಗಾಲ ಅಥವಾ ಚಳಿಗಾಲದ ಸಮಯದಲ್ಲಿ ಅರಿಶಿನ ಹಾಲನ್ನು ಅತಿಯಾಗಿ ಸೇವನೆ ಮಾಡಬಾರದು. ಆಯುರ್ವೇದದ ಪ್ರಕಾರ, ಅರಿಶಿನ ಹಾಲನ್ನು ಮಿತಿಯೊಳಗೆ ಸೇವಿಸಿದರೆ ಮಾತ್ರ ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಯಾವುದನ್ನಾದರೂ ಅತಿಯಾಗಿ ಸೇವಿಸುವುದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
(ಸೂಚನೆ: ಈ ಲೇಖನವು ಮಾಹಿತಿಗಾಗಿ ಮಾತ್ರ. ಇದನ್ನು ಬಳಸುವ ಮೊದಲು ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಿ.)
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ