AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥೈರಾಯ್ಡ್ ಬಗ್ಗೆ ಇರುವ ಈ ತಪ್ಪು ಕಲ್ಪನೆಗಳನ್ನು ನಂಬಬೇಡಿ! ಹಾಗಿದ್ರೆ ಯಾವುದು ನಿಜ? ತಜ್ಞರಿಂದ ತಿಳಿದುಕೊಳ್ಳಿ

ಥೈರಾಯ್ಡ್ ಅನ್ನು ಹಗುರವಾಗಿ ಪರಿಗಣಿಸಿದರೆ, ದೇಹವು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳ ತವರೂರಾಗಬಹುದು. ಅದರಲ್ಲಿಯೂ ಈ ಬಗ್ಗೆ ಜನ ಸುಲಭವಾಗಿ ನಂಬುವ ಅನೇಕ ತಪ್ಪು ಕಲ್ಪನೆಗಳಿವೆ. ಅದರಲ್ಲಿ, ಈ ರೋಗವು ಮಹಿಳೆಯರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂಬುದು ಕೂಡ ಒಂದು. ಆದರೆ ಅದು ನಿಜವಲ್ಲ ಎಂಬುದು ನಿಮಗೆ ತಿಳಿದಿರಲಿ. ಹೌದು, ಈ ರೀತಿ ಥೈರಾಯ್ಡ್ ಬಗ್ಗೆ ತಿಳಿದುಕೊಂಡಿರುವುದೆಲ್ಲವೂ ಸತ್ಯವಲ್ಲ. ಹಾಗಾಗಿ ಆರೋಗ್ಯ ತಜ್ಞರು ಹೇಳಿರುವ ಕೆಲವು ಸತ್ಯಗಳ ಬಗ್ಗೆ ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಥೈರಾಯ್ಡ್ ಬಗ್ಗೆ ಇರುವ ಈ ತಪ್ಪು ಕಲ್ಪನೆಗಳನ್ನು ನಂಬಬೇಡಿ! ಹಾಗಿದ್ರೆ ಯಾವುದು ನಿಜ? ತಜ್ಞರಿಂದ ತಿಳಿದುಕೊಳ್ಳಿ
Don’t Fall For These Thyroid MythsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: May 25, 2026 | 5:32 PM

Share

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ (Thyroid) ಸಮಸ್ಯೆ ಸಾಮಾನ್ಯ ಆರೋಗ್ಯ ಸಮಸ್ಯೆಯಾಗುತ್ತಿದೆ. ಆದರೆ ಈ ಕಾಯಿಲೆಯ ಬಗ್ಗೆ ಜನರಲ್ಲಿ ಹಲವಾರು ತಪ್ಪು ಕಲ್ಪನೆಗಳು ಇನ್ನೂ ಹರಿದಾಡುತ್ತಿವೆ. ಕೆಲವರು ಥೈರಾಯ್ಡ್ ಬಂದರೆ ಜೀವಪೂರ್ತಿ ಔಷಧಿ ತಿನ್ನಲೇಬೇಕು ಎಂದು ಹೇಳುತ್ತಾರೆ ಮತ್ತೊಂದಿಷ್ಟು ಜನ ಇದು ಮಹಿಳೆಯರಿಗೆ ಮಾತ್ರ ಬರುವ ಕಾಯಿಲೆ ಎಂದು ಭಾವಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ಯಾವುದು ಸತ್ಯ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಅನಿವಾರ್ಯ. ಅದಕ್ಕಾಗಿಯೇ ಜನರಿಗೆ ಈ ಬಗ್ಗೆ ಸರಿಯಾಗಿ ಅರ್ಥಮಾಡಿಸಲು ಪ್ರತಿ ವರ್ಷ ಮೇ 25 ರಂದು ವಿಶ್ವ ಥೈರಾಯ್ಡ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಉದ್ದೇಶ ಜನರಲ್ಲಿ ಥೈರಾಯ್ಡ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಇದರ ಲಕ್ಷಣಗಳನ್ನು ಸಮಯಕ್ಕೆ ಗುರುತಿಸುವ ಮಹತ್ವವನ್ನು ತಿಳಿಸುವುದಾಗಿದೆ.

ಥೈರಾಯ್ಡ್ ಎಂದರೇನು?

ನಮ್ಮ ಗಂಟಲಿನಲ್ಲಿ ಚಿಟ್ಟೆಯಾಕಾರದ ಥೈರಾಯ್ಡ್ ಗ್ರಂಥಿ ಇರುತ್ತದೆ. ಇದು ದೇಹದ ಮೆಟಾಬಾಲಿಸಂ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಾವು ತಿನ್ನುವ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಕೆಲಸವನ್ನು ಈ ಗ್ರಂಥಿ ಮಾಡುತ್ತದೆ. ಈ ಗ್ರಂಥಿಯಿಂದ ಹಾರ್ಮೋನ್‌ಗಳು ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಥೈರಾಯ್ಡ್ ಸಮಸ್ಯೆ ಉಂಟಾಗಬಹುದು.

ಥೈರಾಯ್ಡ್ ಬಗ್ಗೆ ಇರುವ ಪ್ರಮುಖ ತಪ್ಪು ಕಲ್ಪನೆಗಳು:

ಥೈರಾಯ್ಡ್ ಬಂದರೆ ಜೀವಪೂರ್ತಿ ಔಷಧಿ ತಿನ್ನಬೇಕು: ವೈದ್ಯರ ಪ್ರಕಾರ, ಎಲ್ಲಾ ರೋಗಿಗಳಿಗೂ ಜೀವಪೂರ್ತಿ ಔಷಧಿ ಅಗತ್ಯವಿಲ್ಲ. ಕೆಲವರಿಗೆ ಮಾತ್ರ ದೀರ್ಘಕಾಲ ಚಿಕಿತ್ಸೆ ಬೇಕಾಗಬಹುದು. ಸರಿಯಾದ ಜೀವನಶೈಲಿ, ಆಹಾರ ಪದ್ಧತಿ ಮತ್ತು ವೈದ್ಯಕೀಯ ಚಿಕಿತ್ಸೆಯಿಂದ ಔಷಧಿಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ.

ಥೈರಾಯ್ಡ್ ಮಹಿಳೆಯರಿಗೆ ಮಾತ್ರ ಬರುತ್ತದೆ: ಮಹಿಳೆಯರಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುವುದಾದರೂ, ಪುರುಷರು ಮತ್ತು ಮಕ್ಕಳಿಗೂ ಥೈರಾಯ್ಡ್ ಸಮಸ್ಯೆ ಕಾಣಿಸಬಹುದು. ಪುರುಷರಲ್ಲಿ ಲಕ್ಷಣಗಳನ್ನು ನಿರ್ಲಕ್ಷಿಸುವ ಸಾಧ್ಯತೆ ಹೆಚ್ಚಿರುವುದರಿಂದ ಸಮಸ್ಯೆ ತಡವಾಗಿ ಪತ್ತೆಯಾಗುತ್ತದೆ.

ಇದು ಕೇವಲ ಗಂಟಲಿನ ಸಮಸ್ಯೆ: ಥೈರಾಯ್ಡ್ ಗ್ರಂಥಿ ಗಂಟಲಿನಲ್ಲಿ ಇದ್ದರೂ ಇದರ ಪರಿಣಾಮ ಸಂಪೂರ್ಣ ದೇಹದ ಮೇಲೆ ಬೀರುತ್ತದೆ. ಹೃದಯದ ಬಡಿತ, ನಿದ್ರೆ, ಶಕ್ತಿ ಮಟ್ಟ, ತೂಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಕಾಣಿಸಬಹುದು.

ಇದನ್ನೂ ಓದಿ: ಪುರುಷರಲ್ಲಿ ಈ ಲಕ್ಷಣಗಳು ಕಂಡುಬಂದರೆ ಎಂದಿಗೂ ನಿರ್ಲಕ್ಷಿಸಬೇಡಿ

ಥೈರಾಯ್ಡ್ ಸಮಸ್ಯೆಗೆ ಕಾರಣಗಳೇನು?

  • ಜನ್ಯ ಕಾರಣಗಳು (Genetic)
  • ಹೆಚ್ಚು ಐಯೋಡಿನ್ ಇರುವ ಔಷಧಿಗಳು
  • ಐಯೋಡಿನ್ ಕೊರತೆಯ ಉಪ್ಪು ಬಳಕೆ
  • ಸ್ವಪ್ರತಿರೋಧಕ ಕಾಯಿಲೆಗಳು (Autoimmune diseases)
  • ರಕ್ತಹೀನತೆ
  • ಟೈಪ್-1 ಸಿಲಿಯಾಕ್ ರೋಗ
  • ಲ್ಯುಪಸ್
  • ಸಂಧಿವಾತ
  • ಸ್ಜೋಗ್ರೆನ್ ಸಿಂಡ್ರೋಮ್

ಥೈರಾಯ್ಡ್‌ನ ಪ್ರಮುಖ ಪ್ರಕಾರಗಳು:

ಹೈಪೋಥೈರಾಯ್ಡಿಸಮ್ (Hypothyroidism): ಈ ಸ್ಥಿತಿಯಲ್ಲಿ ಥೈರಾಯ್ಡ್ ಗ್ರಂಥಿ ಕಡಿಮೆ ಪ್ರಮಾಣದಲ್ಲಿ ಹಾರ್ಮೋನ್ ಉತ್ಪತ್ತಿ ಮಾಡುತ್ತದೆ. ಲಕ್ಷಣಗಳು: ತೂಕ ಹೆಚ್ಚಾಗುವುದು, ಜೀರ್ಣಕ್ರಿಯೆ ಸಮಸ್ಯೆ, ನಿಧಾನ ಹೃದಯ ಬಡಿತ, ಚರ್ಮ ಒಣಗುವುದು, ಮಲಬದ್ಧತೆ, ದೇಹದಲ್ಲಿ ಶಕ್ತಿ ಕಡಿಮೆಯಾಗುವುದು

ಹೈಪರ್‌ಥೈರಾಯ್ಡಿಸಮ್ (Hyperthyroidism): ಈ ಸ್ಥಿತಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಲಕ್ಷಣಗಳು: ತೂಕ ವೇಗವಾಗಿ ಇಳಿಯುವುದು, ಹೃದಯ ಬಡಿತ ಅಸ್ಥಿರವಾಗುವುದು, ಹೆಚ್ಚು ಆಯಾಸ, ಚಿಂತೆ ಮತ್ತು ಅಶಾಂತಿ, ಸ್ನಾಯು ದುರ್ಬಲತೆ, ನಿದ್ರೆ ಸಮಸ್ಯೆ, ಸಂಧಿ ನೋವು

ತಜ್ಞರ ಪ್ರಕಾರ, ಥೈರಾಯ್ಡ್ ಲಕ್ಷಣಗಳನ್ನು ನಿರ್ಲಕ್ಷಿಸದೆ ಸಮಯಕ್ಕೆ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ. ಸರಿಯಾದ ಚಿಕಿತ್ಸೆ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ