AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗ್ಗೆ ಬಾರ್ಲಿ ನೀರು ಕುಡಿಯುವ ಅಭ್ಯಾಸ ಒಳ್ಳೆಯದೇ? ತಜ್ಞರು ಹೇಳುವುದೇನು?

ಬಾರ್ಲಿಯನ್ನು ತೂಕ ಇಳಿಸಿಕೊಳ್ಳಲು ಮಾತ್ರವಲ್ಲ, ಮಧುಮೇಹ, ಮಲಬದ್ಧತೆ, ಜೀರ್ಣಕಾರಿ ಸಮಸ್ಯೆಗಳು ಮತ್ತು ಹೃದಯದ ಆರೋಗ್ಯಕ್ಕೂ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಬಾರ್ಲಿಯಲ್ಲಿರುವ ಫೈಬರ್, ಬೀಟಾ-ಗ್ಲುಕನ್, ಜೀವಸತ್ವಗಳು ಮತ್ತು ಖನಿಜಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಆರೋಗ್ಯ ಸಮಸ್ಯೆಗಳಿರುವವರು ಬಾರ್ಲಿಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.

ಬೆಳಗ್ಗೆ ಬಾರ್ಲಿ ನೀರು ಕುಡಿಯುವ ಅಭ್ಯಾಸ ಒಳ್ಳೆಯದೇ? ತಜ್ಞರು ಹೇಳುವುದೇನು?
Drinking Barley Water Every MorningImage Credit source: Getty images
ಪ್ರೀತಿ ಭಟ್​, ಗುಣವಂತೆ
|

Updated on: Aug 16, 2026 | 12:15 PM

Share

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು, ಜೀರ್ಣಕ್ರಿಯೆ ಸುಧಾರಿಸಿಕೊಳ್ಳಲು ಮತ್ತು ಆರೋಗ್ಯಕರ ಜೀವನಶೈಲಿಗಾಗಿ ಹಲವರು ಬಾರ್ಲಿ ಅಥವಾ ಬಾರ್ಲಿ ನೀರನ್ನು ಆಹಾರದಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ. ಬಾರ್ಲಿಯಲ್ಲಿ ಫೈಬರ್, ವಿಟಮಿನ್‌ಗಳು, ಖನಿಜಾಂಶಗಳು ಹಾಗೂ ಬೀಟಾ-ಗ್ಲೂಕಾನ್ ಸೇರಿದಂತೆ ಹಲವು ಪೋಷಕಾಂಶಗಳಿವೆ. ಇವು ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದಾಗ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಸಹಾಯ ಮಾಡಬಹುದು. ಆದರೆ ಪ್ರತಿದಿನ ಬೆಳಗ್ಗೆ ಒಂದು ಗ್ಲಾಸ್ ಬಾರ್ಲಿ ವಾಟರ್ ಕುಡಿದರೆ ತೂಕ ಕರಗುತ್ತದೆ, ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಮತ್ತು ಕಿಡ್ನಿ ಸ್ಟೋನ್ ನಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಬಾರ್ಲಿ ನಿಜವಾಗಿಯೂ ಆರೋಗ್ಯಕರ ಆಹಾರದ ಒಂದು ಭಾಗವೇ, ಇದರಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.

ತೂಕ ನಿರ್ವಹಣೆ ಮತ್ತು ಜೀರ್ಣಕ್ರಿಯೆಗೆ ಸಹಕಾರಿ

ಬಾರ್ಲಿಯಲ್ಲಿ ಕರಗುವ ಮತ್ತು ಕರಗದ ಫೈಬರ್‌ಗಳಿವೆ. ಫೈಬರ್ ಅಂಶ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ಅನಗತ್ಯವಾಗಿ ಹೆಚ್ಚು ತಿನ್ನುವುದನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಇದರಿಂದ ತೂಕ ನಿರ್ವಹಣೆಗೆ ನೆರವಾಗಬಹುದು. ಫೈಬರ್‌ ಅಂಶವು ಕರುಳಿನ ಚಲನೆಯನ್ನು ಸುಧಾರಿಸಲು ಸಹಾಯ ಮಾಡುವುದರಿಂದ ಮಲಬದ್ಧತೆ ಇರುವವರಿಗೆ ಕೂಡ ಪ್ರಯೋಜನವಾಗಬಹುದು. ಆದರೆ ತೂಕ ಇಳಿಕೆಗೆ ಬಾರ್ಲಿ ಮಾತ್ರ ಸಾಕಾಗುವುದಿಲ್ಲ. ಒಟ್ಟಾರೆ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯೂ ಮುಖ್ಯ.

ಮಧುಮೇಹ ಇರುವವರಿಗೆ ಬಾರ್ಲಿ ಹೇಗೆ ಸಹಾಯ ಮಾಡಬಹುದು?

ಬಾರ್ಲಿಯಲ್ಲಿರುವ ಬೀಟಾ-ಗ್ಲೂಕಾನ್‌ನಂತಹ ಕರಗುವ ಫೈಬರ್‌ಗಳು ಆಹಾರ ಜೀರ್ಣವಾಗುವ ವೇಗವನ್ನು ನಿಧಾನಗೊಳಿಸಲು ಮತ್ತು ಊಟದ ನಂತರ ರಕ್ತದಲ್ಲಿನ ಸಕ್ಕರೆ ಏರಿಕೆಯನ್ನು ನಿಯಂತ್ರಿಸಲು ಸಹಾಯ ಮಾಡಬಹುದು. ಆದರೆ ಮಧುಮೇಹ ಇರುವವರು ಬಾರ್ಲಿ ಸೇವಿಸಿದ ಮಾತ್ರಕ್ಕೆ ಔಷಧಿ ಅಥವಾ ವೈದ್ಯರ ಸಲಹೆ ಪಡೆಯುವ ಅಗತ್ಯವಿರುವುದಿಲ್ಲ ಎಂಬುದು ಸುಳ್ಳು. ಆಹಾರದ ಪ್ರಮಾಣ ಮತ್ತು ವೈಯಕ್ತಿಕ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಡಯಟಿಷಿಯನ್ ಅಥವಾ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಕಿಡ್ನಿ ಸ್ಟೋನ್‌ ನಿಂದ ಮುಕ್ತಿ ಸಿಗುತ್ತದೆಯೇ?

ಬಾರ್ಲಿ ವಾಟರ್ ಹೆಚ್ಚು ನೀರು ಸೇವಿಸುವಂತೆ ಮಾಡುವ ಒಂದು ವಿಧಾನವಾಗಿದ್ದು. ಸಾಕಷ್ಟು ದ್ರವ ಸೇವನೆಯು ಮೂತ್ರದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಕೆಲವು ರೀತಿಯ ಕಿಡ್ನಿ ಸ್ಟೋನ್‌ಗಳು ಮೂತ್ರದ ಮೂಲಕ ಹೊರಹೋಗಲು ಸಹಾಯವಾಗಬಹುದು. ಆದರೆ ಬಾರ್ಲಿ ವಾಟರ್ ಕಿಡ್ನಿ ಸ್ಟೋನ್‌ಗಳನ್ನು ನೇರವಾಗಿ ಕರಗಿಸುತ್ತದೆ ಎಂದು ಹೇಳಲು ಸಾಕಷ್ಟು ಆಧಾರವಿಲ್ಲ. ಕಿಡ್ನಿ ಸ್ಟೋನ್ ಇದ್ದರೆ ಅದರ ಗಾತ್ರ ಮತ್ತು ಪ್ರಕಾರಕ್ಕೆ ಅನುಗುಣವಾಗಿ ವೈದ್ಯರ ಸಲಹೆ ಅಗತ್ಯ.

ಗಾಲ್‌ಬ್ಲಾಡರ್ ಮತ್ತು ಹೃದಯ ಆರೋಗ್ಯಕ್ಕೂ ಉಪಯುಕ್ತವೇ?

ಬಾರ್ಲಿಯಲ್ಲಿರುವ ಫೈಬರ್‌ ಆರೋಗ್ಯಕರ ಆಹಾರದ ಭಾಗವಾಗಿ ಸೇವಿಸಿದಾಗ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡಬಹುದು. ಇದರಿಂದ ಹೃದಯ ಆರೋಗ್ಯಕ್ಕೂ ಪ್ರಯೋಜನ ಸಿಗುವ ಸಾಧ್ಯತೆಯಿದೆ. ತೂಕ ಇಳಿಸುವಾಗ ಅತಿಯಾದ ಕ್ರ್ಯಾಶ್ ಡಯಟ್‌ಗಳನ್ನು ಅನುಸರಿಸುವ ಬದಲು ಫೈಬರ್, ಪ್ರೋಟೀನ್, ತರಕಾರಿಗಳು, ಹಣ್ಣುಗಳು ಮತ್ತು ಸಂಪೂರ್ಣ ಧಾನ್ಯಗಳನ್ನು ಒಳಗೊಂಡ ಸಮತೋಲಿತ ಆಹಾರ ಪದ್ಧತಿ ಹೆಚ್ಚು ಸೂಕ್ತವಾಗಿದೆ.

ಬಾರ್ಲಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಆದರೆ ಒಂದೇ ಆಹಾರವನ್ನು “ಎಲ್ಲಾ ಕಾಯಿಲೆಗಳಿಗೂ ಔಷಧಿ” ಎಂದು ಪರಿಗಣಿಸುವುದು ಸರಿಯಲ್ಲ. ಬಾರ್ಲಿ ಸೇವನೆಯ ಜೊತೆಗೆ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನೀರು ಮತ್ತು ಉತ್ತಮ ನಿದ್ರೆ ಕೂಡ ಅಗತ್ಯ. ಗ್ಲೂಟನ್‌ಗೆ ಅಲರ್ಜಿ ಅಥವಾ ಸಿಲಿಯಾಕ್ ಕಾಯಿಲೆ ಇರುವವರು ಬಾರ್ಲಿ ಸೇವನೆ ಮಾಡುವುದನ್ನು ತಪ್ಪಿಸಬೇಕು, ಏಕೆಂದರೆ ಇದರಲ್ಲಿ ಗ್ಲೂಟನ್ ಇರುತ್ತದೆ. ಯಾವುದೇ ಕಿಡ್ನಿ, ಮಧುಮೇಹ ಅಥವಾ ಇತರ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆಯೊಂದಿಗೆ ಆಹಾರದಲ್ಲಿ ಬದಲಾವಣೆ ಮಾಡುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ
ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ
ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ
ಬಿಗ್​​ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ
ಬಿಗ್​​ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ
ಹೆಬ್ಬಾಳ್ಕರ್​​ ಪರ ನಿಂತ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ?
ಹೆಬ್ಬಾಳ್ಕರ್​​ ಪರ ನಿಂತ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ?
ಸೋಮಾವತಿ ನದಿಗೆ ಬಿದ್ದ ಕಾರು: ಬಂಡೆಯಿಂದಾಗಿ ಉಳಿದ ದಂಪತಿ ಜೀವ
ಸೋಮಾವತಿ ನದಿಗೆ ಬಿದ್ದ ಕಾರು: ಬಂಡೆಯಿಂದಾಗಿ ಉಳಿದ ದಂಪತಿ ಜೀವ