AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vitamin E Benefits: ವಿಟಮಿನ್ ಇ ಕೊರತೆ ನಿವಾರಣೆಗೆ ಈ ಆಹಾರ ಪದಾರ್ಥಗಳನ್ನು ಸೇವಿಸಿ

ನಿಮ್ಮ ಆರೋಗ್ಯ ಸುಧಾರಣೆಗೆ ವಿಟಮಿನ್ ಇ ಬಹಳ ಮುಖ್ಯ. ವಿಟಮಿನ್ ಇ ಚರ್ಮದ ಆರೋಗ್ಯ ಮತ್ತು ಕೂದಲಿನ ಆರೋಗ್ಯಕ್ಕೆ ಸಹಾಯಕವಾಗಿದೆ.

Vitamin E Benefits: ವಿಟಮಿನ್ ಇ ಕೊರತೆ ನಿವಾರಣೆಗೆ ಈ ಆಹಾರ ಪದಾರ್ಥಗಳನ್ನು ಸೇವಿಸಿ
ಸಂಗ್ರಹ ಚಿತ್ರ
TV9 Web
| Edited By: |

Updated on: Nov 30, 2021 | 8:07 AM

Share

ಒತ್ತಡದ ಜೀವನಶೈಲಿ, ಚಿಂತೆ ಎಲ್ಲವೂ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಮಾನಸಿಕ ಸ್ಥಿತಿ ಮತ್ತು ದೈಹಿಕ ಆರೋಗ್ಯ ಸುಧಾರಣೆಗೆ ನೀವು ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯ ಜೊತೆಗೆ ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ಅಗತ್ಯ. ದೇಹದ ಫಿಟ್ನೆಸ್​ಗಾಗಿ ಜೀವಸತ್ವಗಳು ಮತ್ತು ಖನಿಜಗಳು ಅವಶ್ಯಕ. ಹಾಗಿರುವಾಗ ನಿಮ್ಮ ಆರೋಗ್ಯ ಸುಧಾರಣೆಗೆ ವಿಟಮಿನ್ ಇ ಬಹಳ ಮುಖ್ಯ. ವಿಟಮಿನ್ ಇ ಚರ್ಮದ ಆರೋಗ್ಯ ಮತ್ತು ಕೂದಲಿನ ಆರೋಗ್ಯಕ್ಕೆ ಸಹಾಯಕವಾಗಿದೆ. ನಿಮ್ಮ ಆಹಾರ ವ್ಯವಸ್ಥೆಯಲ್ಲಿ ಈ ಕೆಲವು ಆಹಾರ ಪದಾರ್ಥಗಳನ್ನು ಸೇರಿಸುವ ಮೂಲಕ ಅರೋಗ್ಯ ಸುಧಾರಣೆ ಮಾಡಿಕೊಳ್ಳಬಹುದಾಗಿದೆ. ವಿಟಮಿನ್ ಇ ಕೊರತೆಯು ದೇಹದ ಸ್ನಾಯುಗಳಲ್ಲಿ ನೋವು ಮತ್ತು ದೌರ್ಬಲ್ಯವನ್ನು ಉಂಟು ಮಾಡುತ್ತದೆ. ವಿಟಮಿನ್ ಇ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ವಿಟಮಿನ್ ಇ ಸಮೃದ್ಧ ಆಹಾರ ಪದಾರ್ಥಗಳು; ಆಲಿವ್ ಎಣ್ಣೆ ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿರುತ್ತದೆ. ನಿಮ್ಮ ಆಹಾರದಲ್ಲಿ ಆಲಿವ್ ಎಣ್ಣೆ ಸೇರಿಸುವ ಮೂಲಕ ನೀವು ವಿಟಮಿನ್ ಇ ಕೊರತೆ ನಿವಾರಣೆ ಮಾಡಿಕೊಳ್ಳಬಹುದಾಗಿದೆ.

ಅವಕಾಡೊ ಆವಕಾಡೊಗಳು ಪೋಷಕಾಂಶ ಸಮೃದ್ಧ ಮೂಲವಾಗಿದೆ. ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿರುತ್ತದೆ. ಆವಕಾಡೊವನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು. ನಿಮ್ಮ ಚರ್ಮ ಮತ್ತು ದೇಹವು ಆರೋಗ್ಯಕರವಾಗಿರಲು ಇದು ಸಹಾಯ ಮಾಡುತ್ತದೆ.

ಪಪ್ಪಾಯಿ ತೂಕ ನಷ್ಟಕ್ಕೆ ಪಪ್ಪಾಯಿ ಒಳ್ಳೆಯದು. ಪಪ್ಪಾಯಿಯು ವಿಟಮಿನ್ ಇ ಅಂಶವನ್ನು ಹೊಂದಿದೆ. ಇದು ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕಡಲೆಕಾಯಿ ಕಡಲೆಕಾಯಿಯು ವಿಟಮಿನ್ ಇ ಅಂಶದ ಉತ್ತಮ ಮೂಲವಾಗಿದೆ. ನಿಮ್ಮ ಆಹಾರದಲ್ಲಿ ಕಡಲೆಕಾಯಿಯನ್ನು ಸೇವಿಸುವುದರಿಂದ ನೀವು ಆರೋಗ್ಯಕರ ಮತ್ತು ಫಿಟ್ ಆಗಿರಲು ಸಹಾಯವಾಗುತ್ತದೆ. ನಿಮ್ಮ ಆಹಾರ ವ್ಯವಸ್ಥೆಯಲ್ಲಿ ಈ ಕೆಲವು ಆಹಾರ ಪದಾರ್ಥಗಳನ್ನು ಸೇರಿಸುವ ಮೂಲಕ ನೀವು ಆರೋಗ್ಯಕರವಾಗಿರಲು ಸಹಾಯಕ.

ಇದನ್ನೂ ಓದಿ:

Weight Loss: ಚಳಿಗಾಲದಲ್ಲಿ ಆರೋಗ್ಯಕರ ತೂಕ ನಷ್ಟಕ್ಕೆ ಸೇವಿಸಬಹುದಾದ ಆಹಾರ ಪದಾರ್ಥಗಳಿವು

Health Tips: ನಿದ್ರೆಯಿಂದ ಖಿನ್ನತೆ ಹೆಚ್ಚಾಗುತ್ತಾ?; ನಿದ್ರೆಗೂ ಮಾನಸಿಕ ಆರೋಗ್ಯಕ್ಕೂ ಇರುವ ನಂಟೇನು?