AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೂಕ ಇಳಿಸುವ ಪ್ರಯತ್ನಕ್ಕೆ ಅಡ್ಡಿಯಾಗುವ ಅಭ್ಯಾಸಗಳು: ಆಹಾರ, ನಿದ್ರೆ ಮತ್ತು ವ್ಯಾಯಾಮದ ಕಡೆ ಇರಲಿ ಗಮನ

ತೂಕ ಇಳಿಸಿಕೊಳ್ಳಲು ಡಯಟ್ ಮಾಡುತ್ತಿದ್ದರೂ ಫಲಿತಾಂಶ ಸಿಗುತ್ತಿಲ್ಲವೇ? ಸಂಜೆ ಐದು ಗಂಟೆಯ ನಂತರ ಮಾಡುವ ಕೆಲವು ತಪ್ಪುಗಳು ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಅಡ್ಡಿಯಾಗಬಹುದು. ಹಾಗಾದರೆ ಸಂಜೆ 5 ಗಂಟೆಯ ನಂತರ ತಿನ್ನುವುದರಿಂದಲೇ ತೂಕ ಹೆಚ್ಚಾಗುತ್ತದೆಯೇ? ಯಾವ ರೀತಿ ದಿನಚರಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ತೂಕ ಇಳಿಸಿಕೊಳ್ಳಲು ಪಾಲಿಸಬೇಕಾದ ಮುಖ್ಯ ಸಲಹೆಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತೂಕ ಇಳಿಸುವ ಪ್ರಯತ್ನಕ್ಕೆ ಅಡ್ಡಿಯಾಗುವ ಅಭ್ಯಾಸಗಳು: ಆಹಾರ, ನಿದ್ರೆ ಮತ್ತು ವ್ಯಾಯಾಮದ ಕಡೆ ಇರಲಿ ಗಮನ
Weight Loss TipsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on:Oct 11, 2026 | 7:16 PM

Share

ತೂಕ ಇಳಿಸಿಕೊಳ್ಳಲು ಹಲವರು ಆಹಾರ ನಿಯಂತ್ರಣ, ವ್ಯಾಯಾಮ ಸೇರಿದಂತೆ ವಿವಿಧ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆದರೂ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ಅಂತವರು ತಮ್ಮ ದಿನನಿತ್ಯದ ಅಭ್ಯಾಸಗಳನ್ನು ಸರಿಯಾಗಿ ಪರಿಶೀಲಿಸುವುದು ಬಹಳ ಮುಖ್ಯವಾಗುತ್ತದೆ. ವಿಶೇಷವಾಗಿ ಸಂಜೆ ಸಮಯದಲ್ಲಿ ಅತಿಯಾಗಿ ತಿಂಡಿ ತಿನ್ನುವುದು, ರಾತ್ರಿ ನಿದ್ರೆಯನ್ನು ಸರಿಯಾಗಿ ಮಾಡದೆಯೇ ನಿರ್ಲಕ್ಷಿಸುವುದು ಮತ್ತು ಒತ್ತಡದಿಂದ ಆಹಾರ ಸೇವಿಸುವುದು ತೂಕ ನಿರ್ವಹಣೆಗೆ ಅಡ್ಡಿಯಾಗಬಹುದು. ಹಾಗಾದರೆ ಸಂಜೆ 5 ಗಂಟೆಯ ನಂತರ ತಿನ್ನುವುದರಿಂದಲೇ ತೂಕ ಹೆಚ್ಚಾಗುತ್ತದೆ, ತೂಕ ಇಳಿಸಿಕೊಳ್ಳಲು ಪಾಲಿಸಬೇಕಾದ ಮುಖ್ಯ ಸಲಹೆಗಳು ಯಾವವು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಗಲಲ್ಲಿ ಕಡಿಮೆ ತಿಂದು ರಾತ್ರಿ ಅತಿಯಾಗಿ ತಿನ್ನಬೇಡಿ

ತೂಕ ಇಳಿಸಬೇಕೆಂದು ಬೆಳಗಿನ ಉಪಾಹಾರ ಅಥವಾ ಮಧ್ಯಾಹ್ನದ ಊಟವನ್ನು ಬಿಟ್ಟುಬಿಡುವುದು ಕೆಲವರಲ್ಲಿ ಸಂಜೆ ತೀವ್ರ ಹಸಿವಿಗೆ ಕಾರಣವಾಗಬಹುದು. ಇದರಿಂದ ರಾತ್ರಿ ಅಗತ್ಯಕ್ಕಿಂತ ಹೆಚ್ಚು ತಿನ್ನುವ ಸಾಧ್ಯತೆ ಇದೆ. ಹೀಗಾಗಿ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ದಿನವಿಡೀ ಸಮತೋಲನದಿಂದ ಪಡೆಯುವುದು ಉತ್ತಮ.

ಪ್ಯಾಕೆಟ್ ತಿಂಡಿಗಳನ್ನು ಮಿತವಾಗಿ ಸೇವಿಸಿ

ಸಂಜೆ ಚಹಾದೊಂದಿಗೆ ಚಿಪ್ಸ್, ಬಿಸ್ಕತ್ತು ಮತ್ತು ಕರಿದ ತಿಂಡಿಗಳನ್ನು ಸೇವಿಸುವುದು ಸಾಮಾನ್ಯ. ಪ್ಯಾಕೆಟ್‌ನಿಂದ ನೇರವಾಗಿ ತಿನ್ನುವಾಗ ಪ್ರಮಾಣದ ಮೇಲೆ ಗಮನ ಕಡಿಮೆಯಾಗಬಹುದು. ಹಾಗಾಗಿ ಅವುಗಳ ಬದಲು ಹಣ್ಣುಗಳು, ಸಕ್ಕರೆ ಸೇರಿಸದ ಮೊಸರು ಅಥವಾ ಮಿತ ಪ್ರಮಾಣದ ಬೀಜಗಳನ್ನು ಪರ್ಯಾಯವಾಗಿ ಆಯ್ಕೆ ಮಾಡಬಹುದು.

ಇದನ್ನೂ ಓದಿ: ರಾತ್ರಿ ಊಟ ಮಾಡಿದ ತಕ್ಷಣ ಮಲಗುತ್ತೀರಾ? ಆಸಿಡ್ ರಿಫ್ಲಕ್ಸ್ ಮಾತ್ರವಲ್ಲ, ಈ ವಿಷಯಗಳನ್ನೂ ತಿಳಿಯಿರಿ

ರಾತ್ರಿ ನಿದ್ರೆಗೆ ಆದ್ಯತೆ ನೀಡಿ

ಸರಿಯಾದ ನಿದ್ರೆ ಇಲ್ಲದಿರುವುದು ಹಸಿವು ಮತ್ತು ಆಹಾರದ ಆಯ್ಕೆಯ ಮೇಲೆ ಪರಿಣಾಮ ಬೀರಬಹುದು. ವಯಸ್ಕರು ಸಾಮಾನ್ಯವಾಗಿ ರಾತ್ರಿ ಏಳರಿಂದ ಒಂಬತ್ತು ಗಂಟೆಗಳ ನಿದ್ರೆ ಪಡೆಯಲು ಪ್ರಯತ್ನಿಸಬೇಕು. ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಅಭ್ಯಾಸವೂ ಸಹಾಯಕವಾಗಬಹುದು.

ರಾತ್ರಿ ಅನ್ನ ಅಥವಾ ಚಪಾತಿಯನ್ನು ಸಂಪೂರ್ಣವಾಗಿ ಬಿಡಬೇಡಿ

ತೂಕ ಇಳಿಸಲು ರಾತ್ರಿ ಅನ್ನ ತಿನ್ನಬಾರದು ಎಂಬ ನಿಯಮವಿಲ್ಲ. ಬದಲಾಗಿ, ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ಅನ್ನ ಅಥವಾ ಚಪಾತಿಯೊಂದಿಗೆ ತರಕಾರಿಗಳು, ಬೇಳೆಕಾಳುಗಳು ಮತ್ತು ಪ್ರೋಟೀನ್‌ಯುಕ್ತ ಆಹಾರವನ್ನು ಸೇವಿಸುವುದು ಉತ್ತಮ.

ಒತ್ತಡದಿಂದ ಆಹಾರವನ್ನು ಸೇವನೆ ಮಾಡಬೇಡಿ

ವಾಸ್ತವವಾಗಿ ಹಸಿವಿಲ್ಲದಿದ್ದರೂ ಒತ್ತಡ ಅಥವಾ ಬೇಸರದಿಂದ ತಿಂಡಿ ತಿನ್ನುವ ಅಭ್ಯಾಸದ ಜೊತೆಗೆ ಚಿಂತೆ, ಯಾವುದೋ ಆಲೋಚನೆಯಲ್ಲಿ ಇರುತ್ತೀರಾ ಎಂಬುದನ್ನು ಗಮನಿಸಿ. ಅಗತ್ಯವಿದ್ದರೆ ಸ್ವಲ್ಪ ನಡೆಯುವುದು ಅಥವಾ ವಿಶ್ರಾಂತಿ ಪಡೆಯುವುದು ಸಹಾಯ ಮಾಡಬಹುದು. ನಿಜವಾದ ಹಸಿವನ್ನು ನಿರ್ಲಕ್ಷಿಸಬಾರದು.

ತೂಕ ಇಳಿಕೆಗೆ ಮುಖ್ಯ ಸಲಹೆ: ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆಗೆ ಆದ್ಯತೆ ನೀಡಿ. ವೇಗವಾಗಿ ತೂಕ ಇಳಿಸಿಕೊಳ್ಳಲು ಊಟ ಬಿಡುವುದು ಅಥವಾ ಕಠಿಣ ಡಯಟ್ ಅನುಸರಿಸುವುದನ್ನು ತಪ್ಪಿಸಿ. ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:15 pm, Sun, 11 October 26

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಬೆಣ್ಣೆ ಹಳ್ಳದ ನೀರನ್ನು ಕೆರೆಗೆ ತುಂಬಿಸಲು ಹೊಸ ತಂತ್ರಜಾನ ಯುವ ರೈತನ ಸಾಧನೆ
ಬೆಣ್ಣೆ ಹಳ್ಳದ ನೀರನ್ನು ಕೆರೆಗೆ ತುಂಬಿಸಲು ಹೊಸ ತಂತ್ರಜಾನ ಯುವ ರೈತನ ಸಾಧನೆ
ನಮಗೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿದ್ದಲ್ಲ: ಪ್ರಮೋದಾದೇವಿ
ನಮಗೆ ಅರಮನೆಯಲ್ಲಿ ಉಳಿದುಕೊಳ್ಳಲು ಸರ್ಕಾರ ಜಾಗ ಕೊಟ್ಟಿದ್ದಲ್ಲ: ಪ್ರಮೋದಾದೇವಿ
ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಇದುವೇ ಕಾರಣ! ಸಚಿವ ಬೈರತಿ ಹೇಳಿದ್ದೇನು ನೋಡಿ
ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಇದುವೇ ಕಾರಣ! ಸಚಿವ ಬೈರತಿ ಹೇಳಿದ್ದೇನು ನೋಡಿ
ಬೆಂಗಳೂರಿನ ಜನರಿಗೆ ಬಿಗ್​​ ಶಾಕ್
ಬೆಂಗಳೂರಿನ ಜನರಿಗೆ ಬಿಗ್​​ ಶಾಕ್
ಲೆಟರ್ ಪಡೆಯಲು ಜಗದೀಶ್​ಗೆ ಮತ್ತೊಂದು ಅವಕಾಶ: ಶುರುವಾಯ್ತು ರೋಚಕ ಸವಾಲು
ಲೆಟರ್ ಪಡೆಯಲು ಜಗದೀಶ್​ಗೆ ಮತ್ತೊಂದು ಅವಕಾಶ: ಶುರುವಾಯ್ತು ರೋಚಕ ಸವಾಲು
ಹಾಸನಾಂಬೆ ಸನ್ನಿಧಿಯಲ್ಲಿ ಧರ್ಮದರ್ಶನ ಸಾಲು ಖಾಲಿ ಖಾಲಿ! ಯಾಕೆ ಗೊತ್ತಾ?
ಹಾಸನಾಂಬೆ ಸನ್ನಿಧಿಯಲ್ಲಿ ಧರ್ಮದರ್ಶನ ಸಾಲು ಖಾಲಿ ಖಾಲಿ! ಯಾಕೆ ಗೊತ್ತಾ?
ಅಕ್ಕಿ ಬೆಲೆ ಮತ್ತೆ ದಿಢೀರ್ ಏರಿಕೆ: 2-3 ತಿಂಗಳಲ್ಲಿ ಶೇ 25-30ರಷ್ಟು ಹೆಚ್ಚಳ
ಅಕ್ಕಿ ಬೆಲೆ ಮತ್ತೆ ದಿಢೀರ್ ಏರಿಕೆ: 2-3 ತಿಂಗಳಲ್ಲಿ ಶೇ 25-30ರಷ್ಟು ಹೆಚ್ಚಳ
ಸೌಜನ್ಯ ಪ್ರಕರಣ: ಅದೊಂದು ರಿಪೋರ್ಟ್ ನಲ್ಲಿದೆ ಸೌಜನ್ಯ ಸಾವಿನ ರಹಸ್ಯ!
ಸೌಜನ್ಯ ಪ್ರಕರಣ: ಅದೊಂದು ರಿಪೋರ್ಟ್ ನಲ್ಲಿದೆ ಸೌಜನ್ಯ ಸಾವಿನ ರಹಸ್ಯ!
ರಾಮನಗರ ವಿವಿಧೆಡೆ ಸುರಿದ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮುಖದಲ್ಲಿ ಮಂದಹಾಸ!
ರಾಮನಗರ ವಿವಿಧೆಡೆ ಸುರಿದ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮುಖದಲ್ಲಿ ಮಂದಹಾಸ!
ಗಗನ್ vs ಯಶಸ್: ಪತ್ರ ಪಡೆಯಲು ಟಫ್ ಟಾಸ್ಕ್ ಕೊಟ್ಟ ಬಿಗ್ ಬಾಸ್
ಗಗನ್ vs ಯಶಸ್: ಪತ್ರ ಪಡೆಯಲು ಟಫ್ ಟಾಸ್ಕ್ ಕೊಟ್ಟ ಬಿಗ್ ಬಾಸ್