ಬೆಳ್ಳಂಬೆಳಿಗ್ಗೆ ಮನೆಯವರು ಹಸಿವು ಅಂದಾಗ ಥಟ್​ ಅಂತ ದೋಸೆ ಮಾಡಿಬಿಡಿ; ಕೇವಲ 10 ನಿಮಿಷಗಳಲ್ಲಿ ದೋಸೆ ಮಾಡುವ ವಿಧಾನ ಗೊತ್ತೇ?

ಹಿಟ್ಟಿಗೆ ಉಪ್ಪು ಹದವಾಗಿರಬೇಕು, ಚಟ್ನಿಯು ಕೊಂಚ ಖಾರವಿರಬೇಕು. ಬೆಳ್ಳಂಬೆಳಿಗ್ಗೆ ದೋಸೆ ತಿನ್ನುತ್ತಿದ್ದರೆ ಅದೇನೋ ಒಂದು ರೀತಿ ಖುಷಿ ಅಲ್ವೇ? ಹಾಗಿದ್ದಾಗ ಹಸಿವಿನಿಂದಾಗ ಹೊಟ್ಟೆ ತುಂಬಿಸಲು ದೋಸೆಯೇ ಸರಿ. ಹತ್ತೇ ಹತ್ತು ನಿಮಿಷಗಳಲ್ಲಿ ದೋಸೆ ಸಿದ್ಧ ಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಬೆಳ್ಳಂಬೆಳಿಗ್ಗೆ ಮನೆಯವರು ಹಸಿವು ಅಂದಾಗ ಥಟ್​ ಅಂತ ದೋಸೆ ಮಾಡಿಬಿಡಿ; ಕೇವಲ 10 ನಿಮಿಷಗಳಲ್ಲಿ ದೋಸೆ ಮಾಡುವ ವಿಧಾನ ಗೊತ್ತೇ?
ದೋಸೆ
Follow us
shruti hegde
| Updated By: ಆಯೇಷಾ ಬಾನು

Updated on: May 28, 2021 | 7:24 AM

ಆಹಾ ದೋಸೆ.. ಬೆಳ್ಳಂಬೆಳಿಗ್ಗೆ ಬಿಸಿ ಬಿಸಿ ದೋಸೆ ಚಟ್ನಿ ಸವಿಯುತ್ತಿದ್ದರೆ ಬೇರೆ ಲೋಕವೇ ಬೇಡ. ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವುದು ದೋಸೆ. ಬೆಳಿಗ್ಗಿನ ಉಪಹಾರಕ್ಕೂ ಆಗಬಹುದು, ಸಂಜೆಯ ತಿಂಡಿಗೂ ಆಗಬಹುದು ಇಲ್ಲವೊಮ್ಮೆ ರಾತ್ರಿಯ ಊಟದಲ್ಲಿ ಸವಿಯಬಹುದು. ರುಚಿಕರವಾದ ದೊಸೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಆದರೆ ದೋಸೆ ಮಾಡುವದೂ ಒಂದು ಕಲೆ. ದೊಡ್ಡ ಸವಾಲೇ ಸರಿ.

ದೋಸೆಯಲ್ಲಿ ಹಲವಾರು ವಿಧ. ಸ್ಪಂಜಿನಂತಹ ದಪ್ಪವಾದ ಮೃದು ದೋಸೆ, ಗರಿಗರಿ ದೋಸೆ, ಪೇಪರ್​ನಂತೆ ತೆಳ್ಳಗಿರುವ ದೋಸೆ ಹೀಗೆ ಹತ್ತು ಹಲವು. ತಿನ್ನುವಾಗ ದೋಸೆ ಬಿಸಿ ಬಿಸಿಯಾಗಿರಬೇಕು. ಬಂಡಿಯಿಂದ ನೇರವಾಗಿ ನಮ್ಮ ಪ್ಲೇಟಿನಲ್ಲೇ ಬೀಳಬೇಕು. ಅಂದಾಗ ಮಾತ್ರ ಸವಿಯಲು ಆನಂದ.

ಹಿಟ್ಟಿಗೆ ಉಪ್ಪು ಹದವಾಗಿರಬೇಕು, ಚಟ್ನಿಯು ಕೊಂಚ ಖಾರವಿರಬೇಕು. ಬೆಳ್ಳಂಬೆಳಿಗ್ಗೆ ದೋಸೆ ತಿನ್ನುತ್ತಿದ್ದರೆ ಅದೇನೋ ಒಂದು ರೀತಿ ಖುಷಿ ಅಲ್ವೇ? ಹಾಗಿದ್ದಾಗ ಹಸಿವಿದ್ದಾಗ ಹೊಟ್ಟೆ ತುಂಬಿಸಲು ದೋಸೆಯೇ ಸರಿ. ಹತ್ತೇ ಹತ್ತು ನಿಮಿಷಗಳಲ್ಲಿ ದೋಸೆ ಸಿದ್ಧ ಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಸ್ಪಂಜ್​ನಂತೆಯೇ ಮೃದುವಾದ ದಪ್ಪ ದೋಸೆ ಮಾಡುವ ವಿಧಾನ ಎರಡು ಕಪ್​ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಿ. ಅಕ್ಕಿ ಸಂಪೂರ್ಣ ನೆನೆದ ಬಳಿಕ ಅದನ್ನು ನುಣ್ಣಗೆ ರುಬ್ಬಿ ಪಾತ್ರೆಯಲ್ಲಿ ಶೇಖರಿಸಿ.

ರುಬ್ಬಿದ ಹಿಟ್ಟಿಗೆ ಒಂದು ಕಪ್​ ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ವಿಶ್ರಣ ಮಾಡಿ. ಹಿಟ್ಟು ದಪ್ಪವಾಗಿರಬೇಕು. ದೋಸೆ ಹೊಯ್ಯಲು ಬೇಕಾದಷ್ಟು ನೀರಿನ ಪ್ರಮಾಣವನ್ನು ಸೇರಿಸಿ ಹಿಟ್ಟು ಮಿಶ್ರಣ ಮಾಡಿ. 10 ನಿಮಿಷಗಳ ಕಾಲ ಹಾಗೆಯೇ ಬಿಟ್ಟುಬಿಡಿ

ನಂತರ ಎರಡು ಚಮಚ ಎಣ್ಣೆ, ಸಾಸಿವೆ, ಕತ್ತರಿಸಿದ ಮೆಣಸಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಹಾಕಿ ಮಸಾಲೆ ತಯಾರಿಸಿಕೊಳ್ಳಿ. ಅದನ್ನು ಹಿಟ್ಟಿಗೆ ಹಾಕಿ ಮಿಶ್ರಣ ಮಾಡಿ

ನಂತರ ದೋಸೆ ತಯಾರಿಸುವ ಪ್ಯಾನ್​ಗೆ(ಬಂಡಿ) ತುಪ್ಪ ಸವೆದು ಬಿಸಿ ಕಾವಲಿಯಲ್ಲಿ ದೋಸೆ ಹಾಕಿ. ತಟ್ಟೆಯಿಂದ ಸ್ವಲ್ಪ ಹೊತ್ತು ಮುಚ್ಚಿಡಿ. ಕೆಲವು ನಿಮಿಷಗಳಲ್ಲಿ ದೋಸೆ ಸಿದ್ದವಾಗುತ್ತದೆ. ನಂತರ ಒಮ್ಮೆ ದೋಸೆಯ ಮೆಲ್ಮೈಅನ್ನು ತಿರುಗಿಸಿ ಹಾಕಿ ಚೆನ್ನಾಗಿ ಬೇಯಿಸಿ. ಇದೀಗ ರುಚಿಕರವಾದ ದಪ್ಪ ದೋಸೆ ಸಿದ್ದಗೊಳ್ಳುತ್ತದೆ. ದೋಸೆಗೆ ಮಸಾಲೆ ಸೇರಿಸಿದ್ದರಿಂದ ಒಳ್ಳೆಯ ಘಮ ಬರುತ್ತದೆ.

ಚಟ್ನಿ ತಯಾರಿಸುವುದು ಹೇಗೆ? ಎರಡರಿಂದ-ಮೂರು ಹಸಿರು ಮೆಣಸಿನಕಾಯಿ, ಎರಡು ಚಮಚ ಕಡಲೆಕಾಯಿ, ನಾಲ್ಕು ಲವಂಗ, ನಾಲ್ಕು ಚಮಚ ತೆಂಗಿನ ತುರಿ, ನಾಲ್ಕರಿಂದ ಐದು ಎಲೆಗಳಷ್ಟು ಕೊತ್ತಂಬರಿ ಸೊಪ್ಪು, ಮೂರು ಚಮಚ ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸಿದ್ಧವಿಟ್ಟುಕೊಳ್ಳಿ

ಇವುಗಳೆಲ್ಲವನ್ನು ಮಿಕ್ಸಿ ಪಾತ್ರೆಗೆ ಹಾಕಿ ಚೆನ್ನಾಗಿ ರುಬ್ಬಿ. ಇದೀಗ ಹಸಿರು ಚಟ್ನಿ ಸಿದ್ಧವಾಗುತ್ತದೆ. ಖಾರ ಹೆಚ್ಚು ತಿನ್ನುವವರು ಮೆಣಸಿನಕಾಯಿಯನ್ನು ಹೆಚ್ಚು ಹಾಕಿಕೊಳ್ಳಬಹುದು. ದೋಸೆಯೊಂದಿಗೆ ಈ ಚಟ್ನಿ ಸವಿಯಲು ರುಚಿಕರವಾಗಿರುತ್ತದೆ.

ಇದನ್ನೂ ಓದಿ: Cooking oil: ಅಡುಗೆಗೆ ಬಳಸುವ ಎಣ್ಣೆ ಬೆಲೆಯಲ್ಲಿ ವರ್ಷದಲ್ಲಿ ಶೇ 62ರಷ್ಟು ಏರಿಕೆ; ಒಂದಲ್ಲ, ಎರಡರಲ್ಲೂ ಇದು ಎಲ್ಲದರ ಕಥೆ