World Anaesthesia Day 2023: ಆಪರೇಷನ್​ಗೆ ಅನಸ್ತೇಷಿಯಾದಿಂದ ಏನು ಪ್ರಯೋಜನ? ಅರಿವಳಿಕೆಯ ಅಪಾಯಗಳೇನು?

ಅರಿವಳಿಕೆ ಕಂಡುಹಿಡಿಯುವ ಮೊದಲು, ಶಸ್ತ್ರಚಿಕಿತ್ಸೆಯನ್ನು ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು. ಆಗ ಅರಿವಳಿಕೆ ಇಲ್ಲದೆ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿದರೆ ಆ ಸಮಯದಲ್ಲಿ ರೋಗಿ ಅಸಹನೀಯ ನೋವನ್ನು ಅನುಭವಿಸಬೇಕಾಗಿತ್ತು. ರೋಗಿಯ ಕಿರುಚಾಟದ ನಡುವೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬೇಕಾಗಿತ್ತು. ಇದು ಭಾವನಾತ್ಮಕ ಯಾತನೆಯನ್ನೂ ಉಂಟುಮಾಡುತ್ತಿತ್ತು.

World Anaesthesia Day 2023: ಆಪರೇಷನ್​ಗೆ ಅನಸ್ತೇಷಿಯಾದಿಂದ ಏನು ಪ್ರಯೋಜನ? ಅರಿವಳಿಕೆಯ ಅಪಾಯಗಳೇನು?
ಅನಸ್ತೇಷಿಯಾImage Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 18, 2023 | 11:48 AM

ವಿಶ್ವ ಅನಸ್ತೇಷಿಯಾ (ಅರಿವಳಿಕೆ) ದಿನವನ್ನು ಪ್ರತಿ ವರ್ಷ ಅಕ್ಟೋಬರ್ 16ರಂದು ಆಚರಿಸಲಾಗುತ್ತದೆ. ಈ ದಿನದಂದು ಆರೋಗ್ಯ ಸೇವೆಗಳಲ್ಲಿ ಅನಸ್ತೇಷಿಯಾವನ್ನು ಬಳಸುವುದರ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗಿದೆ. ಅರಿವಳಿಕೆ ತಜ್ಞರ ಗೌರವಾರ್ಥವಾಗಿಯೂ ಈ ದಿನವನ್ನು ಆಚರಿಸಲಾಗುತ್ತದೆ. ಶಸ್ತ್ರಚಿಕಿತ್ಸೆಯನ್ನು ಸುಲಭಗೊಳಿಸುವಲ್ಲಿ ಅನಸ್ತೇಷಿಯಾ ತಜ್ಞರು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. 1846ರ ಅ. 16ರಂದು ಅರಿವಳಿಕೆಯನ್ನು ಮೊದಲ ಬಾರಿಗೆ ಬಳಸಲಾಯಿತು. ಅರಿವಳಿಕೆಯ ಆವಿಷ್ಕಾರಕ್ಕೂ ಮೊದಲು ಶಸ್ತ್ರಚಿಕಿತ್ಸೆಯು ವೈದ್ಯರಿಗೆ ಮತ್ತು ರೋಗಿಗೆ ತುಂಬಾ ಕಷ್ಟಕರವಾಗಿತ್ತು ಮತ್ತು ನೋವಿನಿಂದ ಕೂಡಿರುತ್ತಿತ್ತು. ಅರಿವಳಿಕೆಯನ್ನು ಕಂಡುಹಿಡಿಯುವ ಮೊದಲು ಶಸ್ತ್ರಚಿಕಿತ್ಸೆಯನ್ನು ಹೇಗೆ ಮಾಡಲಾಯಿತು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

1846ರಲ್ಲಿ ಈ ದಿನದಂದು ಅರಿವಳಿಕೆಯನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಬಳಸಲಾಯಿತು. ಈ ದಿನದಂದು ಈಥರ್ ಅನ್ನು ಅರಿವಳಿಕೆಯಾಗಿ ಹೇಗೆ ಬಳಸಬಹುದು ಎಂಬುದನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ಆದ್ದರಿಂದ ಅನೇಕ ದೇಶಗಳಲ್ಲಿ ಈ ದಿನವನ್ನು ಈಥರ್ ಡೇ ಎಂದೂ ಕರೆಯುತ್ತಾರೆ. ವೈದ್ಯಕೀಯ ಕ್ಷೇತ್ರದಲ್ಲಿನ ಈ ಮಹಾನ್ ಸಾಧನೆಯನ್ನು ಸ್ಮರಿಸುವುದಕ್ಕಾಗಿ ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ವೈದ್ಯರ ಎಡವಟ್ಟು, ಬಾಣಂತಿ ಜೀವ ತೆಗೆಯಿತಾ ಅನಸ್ತೇಶಿಯಾ?

ಈ ವರ್ಷದ ಥೀಮ್ “ಅನಸ್ತೇಷಿಯಾ ಮತ್ತು ಕ್ಯಾನ್ಸರ್ ಕೇರ್” ಆಗಿದೆ. ಈ ವಿಷಯದ ಮೂಲಕ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅರಿವಳಿಕೆ ಯಾವ ರೀತಿಯ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಬಗ್ಗೆ ವಿವರಿಸಲಾಗುತ್ತದೆ. ಭವಿಷ್ಯದಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅರಿವಳಿಕೆಯ ಸುರಕ್ಷಿತ ಬಳಕೆಯನ್ನು ಉತ್ತೇಜಿಸಲು ಈ ಥೀಮ್ ಅನ್ನು ಆಯ್ಕೆ ಮಾಡಲಾಗಿದೆ.

ಅನಸ್ತೇಷಿಯಾಕ್ಕೂ ಮೊದಲು ಶಸ್ತ್ರಚಿಕಿತ್ಸೆಯನ್ನು ಹೇಗೆ ಮಾಡಲಾಗುತ್ತಿತ್ತು?:

ಅರಿವಳಿಕೆ ಕಂಡುಹಿಡಿಯುವ ಮೊದಲು, ಶಸ್ತ್ರಚಿಕಿತ್ಸೆಯನ್ನು ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು. ಆಗ ಅರಿವಳಿಕೆ ಇಲ್ಲದೆ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿದರೆ ಆ ಸಮಯದಲ್ಲಿ ರೋಗಿ ಅಸಹನೀಯ ನೋವನ್ನು ಅನುಭವಿಸಬೇಕಾಗಿತ್ತು. ರೋಗಿಯ ಕಿರುಚಾಟದ ನಡುವೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬೇಕಾಗಿತ್ತು. ಇದು ಭಾವನಾತ್ಮಕ ಯಾತನೆಯನ್ನೂ ಉಂಟುಮಾಡುತ್ತಿತ್ತು. ನಂತರದ ಶಸ್ತ್ರಚಿಕಿತ್ಸಕರು ಅಫೀಮಿನ ರಸವನ್ನು ರೋಗಿಯ ದೇಹಕ್ಕೆ ಹಚ್ಚುತ್ತಿದ್ದರು. ಇದು ಸ್ವಲ್ಪ ನೋವನ್ನು ಕಡಿಮೆ ಮಾಡುತ್ತಿತ್ತು. ಆದರೆ ಇದು ಆಪರೇಷನ್​ಗೆ ಹೆಚ್ಚು ಸಹಾಯಕವಾಗಲಿಲ್ಲ. ಇದಲ್ಲದೆ, ಡ್ವೆಲ್ ಎಂಬ ಜ್ಯೂಸ್ ಅನ್ನು ಸಹ ಬಳಸಲಾಗುತ್ತಿತ್ತು. ಇದನ್ನು ಕುಡಿದ ನಂತರ ರೋಗಿಗಳು ನಿದ್ರೆಗೆ ಜಾರುತ್ತಿದ್ದರು. ಆಗ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿತ್ತು.

1600ರ ವೇಳೆಗೆ ಅಫೀಮು ಮತ್ತು ಮದ್ಯವನ್ನು ಬೆರೆಸಿ ದ್ರವವನ್ನು ತಯಾರಿಸಲಾಯಿತು. ಇದು ನೋವಿನಿಂದ ಪರಿಹಾರವನ್ನು ನೀಡಿತು. ಈ ದ್ರವಗಳ ಪರಿಣಾಮವು ಅಲ್ಪಾವಧಿಗೆ ಮಾತ್ರ ಇರುತ್ತಿತ್ತು. ಇದರಿಂದಾಗಿ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಬೇಗ ಮುಗಿಸಬೇಕಾಗಿತ್ತು. ಇದಾದ ನಂತರ 1846ರಲ್ಲಿ ಮೊದಲ ಬಾರಿಗೆ ಈಥರ್ ಅನ್ನು ಅರಿವಳಿಕೆಯಾಗಿ ಬಳಸಲಾಯಿತು. ಇದರ ನಂತರ, 1848ರಲ್ಲಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನೋವನ್ನು ಕಡಿಮೆ ಮಾಡಲು ಕ್ಲೋರೊಫಾರ್ಮ್ ಬಳಸಲಾಯಿತು.

ಇದನ್ನೂ ಓದಿ: Liver Health: ಆಲ್ಕೋಹಾಲ್ ಮಾತ್ರವಲ್ಲ ಈ ಆಹಾರಗಳು ಕೂಡ ಲಿವರ್​​​ನ ಆರೋಗ್ಯವನ್ನು ಹದಗೆಡಿಸಬಹುದು ಎಚ್ಚರ!

ಈ ರೀತಿ ಅನೇಕ ಪ್ರಯೋಗಗಳ ನಂತರ, ಆಧುನಿಕ ಅರಿವಳಿಕೆಯನ್ನು ಕಂಡುಹಿಡಿಯಲಾಯಿತು. ಇದು ಶಸ್ತ್ರಚಿಕಿತ್ಸೆಯನ್ನು ತುಂಬಾ ಸುಲಭಗೊಳಿಸಿತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಗಳಿಗೆ ನೋವು ಸಹ ಗೊತ್ತಾಗುವುದಿಲ್ಲ.

ಅನಸ್ತೇಷಿಯಾದ ಅಡ್ಡಪರಿಣಾಮಗಳು ಮತ್ತು ಅಪಾಯಗಳೇನು?:

– ದೇಹದ ಉಷ್ಣತೆ ಕಡಿಮೆಯಾಗುವುದು

– ಮೂತ್ರ ವಿಸರ್ಜನೆಯಲ್ಲಿ ತೊಂದರೆ

– ಆಯಾಸ

– ತಲೆನೋವು

– ಗಂಟಲು ಕೆರೆತ

– ವಾಂತಿ

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್