World Blood Donor Day 2022 : ರಕ್ತದಾನದಿಂದ ನಿಮ್ಮ ಆರೋಗ್ಯ ಹೇಗೆ ಸುಧಾರಿಸುತ್ತದೆ?

Benefits of Donating Blood : ಇತರರಿಗೆ ಅವಶ್ಯಕತೆ ಬಿದ್ದಾಗಲಷ್ಟೇ ರಕ್ತದಾನ ಮಾಡಬೇಕಂತಿಲ್ಲ. ನಿಮ್ಮ ಆರೋಗ್ಯ ವೃದ್ಧಿಗಾಗಿಯೂ ನಿಯಮಿತವಾಗಿ ರಕ್ತದಾನ ಮಾಡಬಹುದು. ಪ್ರಯೋಜನಗಳನ್ನು ತಿಳಿಯಿರಿ.

World Blood Donor Day 2022 : ರಕ್ತದಾನದಿಂದ ನಿಮ್ಮ ಆರೋಗ್ಯ ಹೇಗೆ ಸುಧಾರಿಸುತ್ತದೆ?
ಸೌಜನ್ಯ ; ಅಂತರ್ಜಾಲ
Follow us
| Updated By: ಶ್ರೀದೇವಿ ಕಳಸದ

Updated on:Jun 13, 2022 | 11:50 AM

World Blood Donor Day : ರಸ್ತೆ ಅಪಘಾತ, ಹೃದಯ ಚಿಕಿತ್ಸೆ, ಯಕೃತ್ತು, ಮೂತ್ರಪಿಂಡ ಕಸಿ, ತಲೆಸ್ಸೀಮಿಯಾ, ಲ್ಯುಕೇಮಿಯಾದಂಥ ಗಂಭೀತ ಸಮಸ್ಯೆಗಳಿದ್ದಾಗ ಶಸ್ತ್ರಚಿಕಿತ್ಸೆ ಅಥವಾ ನಿಯಮಿತವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಸರಿಹೊಂದುವ ರಕ್ತದ ವರ್ಗಾವಣೆ ಅವಶ್ಯವಾಗಿರುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಆದರೆ, ರಕ್ತದಾನವನ್ನು ಕೇವಲ ಇತರರ ಜೀವ ಉಳಿಸಲು ಎಂದಷ್ಟೇ ಪರಿಗಣಿಸಬೇಕಿಲ್ಲ. ರಕ್ತದಾನದಿಂದ ಸ್ವತಃ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ. ರಕ್ತದಾನಕ್ಕೆ ಒಳಗಾದ ಪ್ರಕ್ರಿಯೆಯಿಂದಾಗಿ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇತರರಿಗೆ ರಕ್ತದಾನ ಮಾಡಿದೆ ಎಂಬ ಸಮಾಧಾನ ಸಂತೃಪ್ತಿ ಮನಸಿಗೆ ಉಂಟಾಗಿ ಮನಸ್ಸು ಭಾವನಾತ್ಮಕವಾಗಿ ಉಲ್ಲಸಿತವಾಗುತ್ತದೆ. ದೈಹಿಕವಾಗಿ ನೋಡುವುದಾದರೆ, ಹೊಸ ರಕ್ತಕಣಗಳು ಸೃಷ್ಟಿಯಾಗಿ ದೇಹವನ್ನು ಸುಸ್ಥಿತಿಯಲ್ಲಿ ಇಡುತ್ತದೆ. ಅಲ್ಲದೆ, ಹೃದಯಾಘಾತ ಮತ್ತು ಯಕೃತ್ತಿನ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡವಲ್ಲಿ ರಕ್ತದಾನ ಪಾತ್ರ ಅಪಾರ. ಜೊತೆಗೆ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ. ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ. ಹಾಗಾಗಿ ರಕ್ತವನ್ನು ನಿಯಮಿತವಾಗಿ ದಾನ ಮಾಡುವುದು ನಮ್ಮ ಆರೋಗ್ಯಕ್ಕೂ ಒಳ್ಳೆಯದು.

ರಕ್ತದಾನ ಮಾಡುವ ವ್ಯಕ್ತಿಯು 18ರಿಂದ 65 ವರ್ಷದವರಾಗಿದ್ದು ಅವರ ಹಿಮೋಗ್ಲೋಬಿನ್ ಮಟ್ಟ 12.5 ಗ್ರಾಂ ನಷ್ಟಿರಬೇಕು. ಆಗ ಅವರು ರಕ್ತದಾನ ಮಾಡಬಹುದು. ಜೊತೆಗೆ, ಸ್ವಯಂಪ್ರೇರಿತ ಮತ್ತು ಲಾಭದ ಆಕಾಂಕ್ಷೆ ಇಲ್ಲದ ದಾನಿಗಳ ರಕ್ತ ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅಂಥವರು ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡುತ್ತಲೇ ಇರುತ್ತಾರೆ ಹಾಗಾಗಿ ರಕ್ತದಿಂದ ಹರಡುವ ರೋಗಗಳಿಂದ ಅವರ ದೇಹ ಸುರಕ್ಷಿತವಾಗಿರುತ್ತದೆ.

ಇದನ್ನೂ ಓದಿ : Blood Pressure: ರಕ್ತದೊತ್ತಡ ಕಡಿಮೆ ಮಾಡಲು ಇಲ್ಲಿವೆ ಕೆಲವು ಉಪಯುಕ್ತ ಸಲಹೆಗಳು

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಮೆಂಟಲ್ ಹೆಲ್ತ್ ಫೌಂಡೇಶನ್ ವರದಿಯ ಪ್ರಕಾರ, ಇತರರಿಗೆ ಸಹಾಯ ಮಾಡುವುದರಿಂದ ನಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ಭಾವನಾತ್ಮಕ ಸಮತೋಲವನ್ನೂ ಕಾಪಾಡಿಕೊಳ್ಳಬಹುದು. ಹೀಗಿದ್ದಾಗ ದೈಹಿಕ ಆರೋಗ್ಯ ಸುಧಾರಿಸಿ ನಕಾರಾತ್ಮಕ ಅಂಶಗಳಿಂದ ಮನಸ್ಸು ದೇಹ ಮುಕ್ತವಾಗುತ್ತದೆ.

ನಿಮ್ಮ ಹತ್ತಿರದ ಆಸ್ಪತ್ರೆ, ಬ್ಲಡ್​ ಬ್ಯಾಂಕ್​ಗಳಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ತಂತ್ರಜ್ಞಾನದಿಂದಾಗಿ ದಾನಿಗಳಿಗೂ, ಪಡೆಯುವವರಿಗೆ ಅನುಕೂಲಕರವಾಗುವಂಥ ಅಪ್ಲಿಕೇಶನ್​ಗಳು ಲಭ್ಯವಿದ್ದು ಅಲ್ಲಿಯೂ ವಿವರಗಳೊಂದಿಗೆ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ತುರ್ತು ಬಿದ್ದಾಗಲಷ್ಟೇ ರಕ್ತದಾನ ಮಾಡುವುದಕ್ಕಿಂತ ನಿಮ್ಮ ಆರೋಗ್ಯದ ಸದೃಢತೆ ಕಾಪಾಡಿಕೊಳ್ಳಲು ವೈದ್ಯರ ಮಾರ್ಗದರ್ಶನದೊಂದಿಗೆ ನಿಯಮಿತವಾಗಿ ರಕ್ತದಾನ ಮಾಡುವುದು ಒಳಿತು. ಸಾಮಾಜಿಕ ಜಾಲತಾಣಗಳಲ್ಲಿ ಅನವಶ್ಯಕ ತಮಾಷೆ, ಗಾಳಿಸುದ್ದಿ, ಹರಟೆಗಳ ಬದಲಾಗಿ ರಕ್ತದಾನಕ್ಕೆ ಸಂಬಂಧಿಸಿದ ಗುಂಪುಗಳನ್ನು ಸೇರಿಕೊಂಡು ರಕ್ತದಾನ ಮಾಡಲು ಸಹಕರಿಸಬಹುದು ಹಾಗೂ ಅವಶ್ಯವಿದ್ದವರಿಗೆ ಸಂಪರ್ಕವನ್ನೂ ಕಲ್ಪಿಸಬಹುದು.

ಇದನ್ನೂ ಓದಿ : Blood Sugar Level: ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾದರೆ ಏನೆಲ್ಲಾ ತೊಂದರೆಯಾಗಬಹುದು?

ರಕ್ತದಾನದಿಂದ ಆಗುವ ಪ್ರಯೋಜನಗಳು 

• ಹೃದಯಾಘಾತ ಮತ್ತು ಯಕೃತ್ತಿನ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

• ಹೊಸ ರಕ್ತಕಣಗಳನ್ನು ಸೃಷ್ಟಿಸುತ್ತದೆ.

• ತೂಕವನ್ನು ಕಾಪಾಡಿಕೊಳ್ಳಲು ಸಹಕಾರಿ.

• ಅಕಾಲಿಕ ವೃದ್ಧಾಪ್ಯ ತಡೆಯುತ್ತದೆ.

• ರೋಗನಿರೋಧಕ ಶಕ್ತಿ ತೀವ್ರಗೊಳಿಸುತ್ತದೆ.

• ಕೊಲೆಸ್ಟ್ರಾಲ್​ ನಿಯಂತ್ರಣದಲ್ಲಿರಿಸುತ್ತದೆ.

Published On - 11:45 am, Mon, 13 June 22

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್