AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಅನಿರೀಕ್ಷಿತ ಗೆಲುವು ನಿಮಗೆ ಖುಷಿ ನೀಡಲಿದೆ, ನೀವು ಯಶಸ್ಸು ಗಳಿಸದಂತೆ ಶತ್ರುಗಳು ಅಡ್ಡಗಾಲು ಹಾಕುವರು

ಭವಿಷ್ಯದ ಬಗ್ಗೆ ಚಿಂತೆ ಎಲ್ಲರು ಮಾಡುತ್ತಾರೆ. ಹೀಗಾಗಿ ಒಂದಷ್ಟು ಮಂದಿ ನಿತ್ಯಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಫೆಬ್ರವರಿ 16, 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Horoscope: ಅನಿರೀಕ್ಷಿತ ಗೆಲುವು ನಿಮಗೆ ಖುಷಿ ನೀಡಲಿದೆ, ನೀವು ಯಶಸ್ಸು ಗಳಿಸದಂತೆ ಶತ್ರುಗಳು ಅಡ್ಡಗಾಲು ಹಾಕುವರು
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Feb 16, 2024 | 12:10 AM

Share

ರಾಶಿ ಭವಿಷ್ಯ (Horoscope) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ: ಬ್ರಹ್ಮ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 57 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 6 ಗಂಟೆ 36 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:20 ರಿಂದ 12:47ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:41 ರಿಂದ 05:09ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:25 ರಿಂದ 09:52ರ ವರೆಗೆ.

ಮೇಷ ರಾಶಿ: ಕುಂಟುತ್ತ ಸಾಗುವ ಉದ್ಯಮವು ನಿಮಗೆ ಬೇಸರವನ್ನು ತರಿಸೀತು. ಅಭಾವ ವೈರಾಗ್ಯದಲ್ಲಿ ನೀವಿರುವಿರಿ. ಕೃಷಿಯಲ್ಲಿ ಆಸಕ್ತಿ ಇದ್ದರೂ ಅದರಲ್ಲಿ ತೊಡಗಿಕೊಳ್ಳುವ ಅವಕಾಶ ಇರದು. ಭೂಮಿಯಲ್ಲಿ ಹೂಡಿಕೆ ಮಾಡುವ ಪ್ರಯತ್ನದಲ್ಲಿ ನೀವಿರುವಿರಿ. ನೌಕರರ ತಪ್ಪಿನಿಂದ ನೀವು ಹಣವನ್ನು ಖರ್ಚು ಮಾಡಬೇಕಾದೀತು. ಕೃಷಿಯಲ್ಲಿ ನಿಮಗೆ ಆಸಕ್ತಿ ಹೆಚ್ಚಾಗುವುದು. ಮಕ್ಕಳು ನಿಮ್ಮಿಂದ ಪ್ರೀತಿಯನ್ನು ಬಯಸುವರು. ಒತ್ತಡ ನಿವಾರಣೆಗೆ ಧ್ಯಾನ ಹಾಗೂ ಯೋಗಾಭ್ಯಾಸವು ಬೇಕಾಗುವುದು. ಅಪರಿಚಿತರು ಆಪ್ತರಾಗುವ ಸಾಧ್ಯತೆ ಇದೆ.‌ ದುರಭ್ಯಾಸಕ್ಕೆ ಅವಕಾಶಗಳು ಬರಲಿದ್ದು ಆಲೋಚಿಸಿ ಮುಂದುವರಿಯಿರಿ. ನಿಮ್ಮ ವರ್ತನೆಯನ್ನು ಕಂಡು ಯಾರಾದರೂ ನಕ್ಕಾರು. ನಿಮ್ಮ‌ ವೇಷಭೂಷಣದ ಬಗ್ಗೆ ಟೀಕಿಸುವರು.ಹೂಡಿಕೆಯ ಬಗ್ಗೆ ಸಂಗಾತಿಯ ನಿಲುವಿಗೆ ಬದ್ಧರಾಗಬೇಲಾದೀತು. ವ್ಯವಹಾರದಲ್ಲಿ ಸಡಿಲಿಕೆ ಬೇಡ.

ವೃಷಭ ರಾಶಿ: ಇಂದು ಹಲವು ದಿನಗಳಿಂದ ಸ್ಥಿರಾಸ್ತಿ ಖರೀದಿಯ ನಿಮ್ಮ ಪ್ರಯತ್ನಗಳು ಫಲಿಸುವುದು. ಉದ್ಯಮಕ್ಕೆ ಸಂಬಂಧಿಸಿದಂತೆ ಹೊಸ ದಿಕ್ಕಿನತ್ತ ನೀವು ಯೋಚಿಸುವುದು ಉತ್ತಮ. ಉದ್ಯೋಗದಲ್ಲಿನ ಆರ್ಥಿಕ ಸಮಸ್ಯೆಗಳು ಹೇಗೋ ಪರಿಹಾರವಾಗುವುದು. ಬಂಧುಗಳಿಂದ ಶುಭ ಸುದ್ದಿ ಸಿಗಲಿದೆ. ಅನಿರೀಕ್ಷಿತವಾಗಿ ಬರುವ ಗೆಲುವಿನಿಂದ ನಿಮಗೆ ಖುಷಿಯಾಗಲಿದೆ. ನಿಂದನೆಗಳು ಸಹಜವೆಂಬಂತೆ ಆಗಲಿದೆ.‌ ನೀವು ಯಶಸ್ಸನ್ನು ಗಳಿಸದಂತೆ ಹಿತಶತ್ರುಗಳು ಅಡ್ಡಗಾಲು ಹಾಕುವಿರಿ. ಆಭರಣದ ವಿಚಾರದಲ್ಲಿ ಜಾಗರೂಕತೆ ಇರಲಿ. ಮನಸ್ಸಿನ ಚಾಂಚಲ್ಯವನ್ನು ನಿಲ್ಲಿಸಲಾಗದು. ಎಲ್ಲರ ಜೊತೆ ಬೆರೆಯುವುದು ಇಷ್ಟವಾಗದು. ಇಂದು ನೀವು ಖುಷಿ ಕೊಡುವ ಕಾರ್ಯವನ್ನು ಮಾತ್ರ ಮಾಡುವಿರಿ.‌ ನಿಮ್ಮ ಸ್ವಭಾವವು ಕೆಲವರಿಗೆ ಇಷ್ಟವಾಗದೇ ಹೋಗುವುದು. ಸ್ವತಂತ್ರವಾಗಿರಲು ನೀವು ಹೆಚ್ಚು ಇಷ್ಟಪಡುವಿರಿ. ಯಾರ ಮಾತನ್ನೂ ಕೇಳದೇ ನಿಮ್ಮದೇ ದಾರಿಯಲ್ಲಿ ಸಾಗುವಿರಿ.

ಮಿಥುನ ರಾಶಿ: ನಿಮಗೆ ಉದ್ಯೋಗ ಬದಲಾವಣೆಯ ಮನಸ್ಸಾಗುವುದು. ದೇವರ ಮೇಲೆ ಭಕ್ತಿಯು ಹೆಚ್ಚಾಗುವುದು. ನಿಮ್ಮ ಕಾರಣಕ್ಕೆ ಬೇರೆಯವರಿಗೆ ಕಷ್ಟವಾಗುವುದು. ನಿಮಗೆ ಏಕಾಂತವು ಬೇಕು ಎನಿಸಬಹುದು. ಸಂಗಾತಿಯ ಮೇಲೆ ಅನುಮಾನವನ್ನು ವ್ಯಕ್ತಪಡಿಸುವಿರಿ. ಅಭಿನಯ ಕ್ಷೇತ್ರದಲ್ಲಿ ನಿಮಗೆ ಅವಕಾಶಗಳು ಸಿಗಲಿವೆ. ನ್ಯಾಯಾಲಯದ ವಿಚಾರವನ್ನು ಬೇಗ ಮುಗಿಸಿಕೊಳ್ಳಲು ಪ್ರಯತ್ನಿಸುವಿರಿ. ಭೋಗವಸ್ತುಗಳ ಖರೀದಿಯನ್ನು ಹೆಚ್ಚು ಮಾಡುವಿರಿ. ಕಛೇರಿಯಲ್ಲಿ ಅನಿರೀಕ್ಷಿತ ಒತ್ತಡವು ಬಂದು ಮುತ್ತಿಕೊಂಡು ದಿಕ್ಕು ತೋಚದಂತೆ ಆಗುವುದು. ದಾಂಪತ್ಯ ಕಲಹವು ಸುಖಾಂತವಾಗಲಿದೆ. ಇಂದು ನಿಮ್ಮ ಸಂತೋಷಕ್ಕೆ ಕಾರಣವಿರದು. ಉದ್ಯೋಗದ ಕಾರಣ ಪ್ರಯಾಣ ಮಾಡುವ ಸನ್ನಿವೇಶವು ಬರಲಿದೆ. ನಿಷ್ಠುರ ಮಾತುಗಳನ್ನು ಆಡುವುದು ಬೇಡ.

ಕರ್ಕ ರಾಶಿ: ನಿಮ್ಮ ವ್ಯಾಪಾರದ ವಿಸ್ತರಣೆಗೆ ಅಡೆತಡೆಗಳು ಬರುವುದು. ನಿಮ್ಮವರೇ ನಿಮ್ಮ ಆಲೋಚನೆಗಳನ್ನು ಇಷ್ಟಪಡುವುದಿಲ್ಲ. ಮಕ್ಕಳಿಂದ ನಿಮಗೆ ಸಹಕಾರವು ಸಿಗದೇಹೋಗಬಹುದು. ಉದ್ಯಮಕ್ಕೆ ನೌಕರರ ಕೊರತೆ ಕಾಣಿಸೀತು. ಸಾಲವನ್ನು ನೀವು ಯೋಗ್ಯತೆಗೆ ಅನುಸಾರವಾಗಿ ಮಾಡಿ. ಸಂಬಂಧಿಕರ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲನ್ನು ಕೇಳುವ ಸ್ಥಿತಿ ಬರಬಹುದು. ವಿದ್ಯಾಭ್ಯಾಸವನ್ನು ಪೂರ್ಣ ಮಾಡಿದ ಸಂತೋಷವು ಸಿಗುವುದು. ನಿಮ್ಮ ಮಾತಿನಿಂದ ಇತರರಿಗೆ ನೋವಾಗುವುದು. ಪ್ರೇಮವು ಅಪಾಯಕ್ಕೆ ಸಿಕ್ಕಿಕೊಳ್ಳಬಹುದು. ವೇತನವನ್ನು ಹೆಚ್ಚಿಸಲು ಅಧಿಕಾರಿಗಳನ್ನು ಕೇಳಿಕೊಳ್ಳುವಿರಿ. ದೂರದ ಬಂಧುಗಳ ಭೇಟಿಯಿಂಸ ನಿಮಗೆ ಸಂತೋಷವಾಗುವುದು. ಸಹೋದ್ಯೋಗಿಗಳ ಜೊತೆ ವಾದವನ್ನು ಮಾಡುವಿರಿ. ವ್ಯವಹಾರದಲ್ಲಿ ಮಾತನಾಡುವಾಗ ನಿಮ್ಮನ್ನು ಅಳೆಯಬಹುದು.