Daily Horoscope 20 July 2024: ಈ ರಾಶಿಯವರು ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಪಡೆಯುವರು, ತಾಳ್ಮೆಯಿಂದ ವರ್ತಿಸಿ

ಜುಲೈ 20,​​ 2024ರ​​ ನಿಮ್ಮ ರಾಶಿಭವಿಷ್ಯ: ಅನೇಕ ಜನರು ಮನರಂಜನೆ, ಮಾರ್ಗದರ್ಶನ ಅಥವಾ ತಮ್ಮ ಜೀವನದಲ್ಲಿ ಘಟಿಸುವ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ತಮ್ಮ ಜಾತಕವನ್ನು ಓದುತ್ತಾರೆ. ಹಾಗಾದರೆ ಜುಲೈ 20ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope 20 July 2024: ಈ ರಾಶಿಯವರು ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಪಡೆಯುವರು, ತಾಳ್ಮೆಯಿಂದ ವರ್ತಿಸಿ
ಈ ರಾಶಿಯವರು ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗ ಪಡೆಯುವರು, ತಾಳ್ಮೆಯಿಂದ ವರ್ತಿಸಿ
Follow us
| Updated By: ವಿವೇಕ ಬಿರಾದಾರ

Updated on:Jul 20, 2024 | 6:17 AM

ಜಾತಕವು ಒಬ್ಬ ವ್ಯಕ್ತಿಯ ಹುಟ್ಟಿನ ಸಮಯದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನಗಳ ಆಧಾರದ ಮೇಲೆ ಭವಿಷ್ಯದ (Horoscope) ಮುನ್ಸೂಚನೆ ನೀಡಲಾಗುತ್ತದೆ. ಇದು ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದೊಂದಿಗೆ ಸಂಬಂಧಿಸಿದೆ. ಜ್ಯೋತಿಷ್ಯವು ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ಚಿಹ್ನೆಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಪೂರ್ವಾಷಾಢಾ, ಯೋಗ: ವೈಧೃತಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:27ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:03ರಿಂದ 03:51ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:14ರಿಂದ 07:50ರ ವರೆಗೆ.

ಮೇಷ ರಾಶಿ: ಪಾಲುದಾರಿಕೆಯಲ್ಲಿ ಹೊಸ ಉದ್ಯಮವನ್ನು ಆರಂಭಿಸುವಿರಿ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯನ್ನು ಕಂಡು ಖುಷಿಯಾಗುವುದು. ಸ್ತ್ರೀಯರಿಂದ ಧನಸಹಾಯವು ಆಗಲಿದೆ. ಇಂದು ನಿಮಗೆ ಸಾಕಷ್ಟು ಸಮಯವಿರಲಿದ್ದು ಸದುಪಯೋಗ ಮಾಡಿಕೊಳ್ಳಬೇಕಿದೆ. ಸಂಗಾತಿಯ ನಡೆವಳಿಕೆಯನ್ನು ಪ್ರಶಂಸಿಸುವರು. ನಿಮ್ಮವರು ನಿಮಗೆ ಕೆಲವು ಕಿವಿಮಾತನ್ನು ಹೇಳಬಹುದು. ವ್ಯಾಪಾರದಲ್ಲಿ ಸ್ವಲ್ಪ ನಷ್ಟವಾಗಲಿದೆ. ನಿಮ್ಮ ಮಕ್ಕಳ ಬಗ್ಗೆ ಅತಿಯಾದ ಚಿಂತೆನೆ ಬೇಡ. ಆಭರಣ ಖರೀದಿಗೆ ಹಣವನ್ನು ಖರ್ಚು ಮಾಡುವಿರಿ. ದ್ವೇಷವನ್ನು ಬೆಳೆಸಿಕೊಳ್ಳುವುದು ಯೋಗ್ಯವೆನಿಸದು. ಸ್ನೇಹಿತರ ಕೆಲವು ವರ್ತನೆಗಳು ನಿಮಗೆ ಇಷ್ಟವಾಗದೇ ಇರಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ. ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುವಿರಿ.

ವೃಷಭ ರಾಶಿ: ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಿರಿ. ನಿಮ್ಮ ಗುರಿಯನ್ನು ಬಹಳ ಪ್ರಯತ್ನದಿಂದ ಇಂದು ಮುಟ್ಟುವಿರಿ. ರಾಜಕೀಯವಾಗಿ ಪ್ರಭಾವವಿರುವ ವ್ಯಕ್ತಿಗಳ ಸಂಪರ್ಕವು ಇಂದು ಆಗಲಿದೆ. ವೈವಾಹಿಕ ಜೀವನದಲ್ಲಿ ಮನಸ್ತಾಪ ಇರಲಿದೆ. ತಿಳಿವಳಿಕೆಯ ಕೊರತೆಯಿಂದ ವ್ಯವಹಾರದಲ್ಲಿ ನಷ್ಟವಾದೀತು. ಧಾರ್ಮಿಕವಾಗಿ ಶ್ರದ್ಧೆ, ಭಕ್ತಿಗಳು ಕಡಿಮೆ ಆದೀತು. ಈ ದಿನ ನೀವು ಸಕಾರಾತ್ಮಕವಾಗಿ ಚಿಂತನೆಯನ್ನು ಮಾಡುವಿರಿ. ನಿಮ್ಮ ಬಂಧುಗಳು ನಿಮ್ಮ ಯೋಜನೆಗಳನ್ನು ಇಷ್ಟ ಪಡುವರು. ದೂರ ಪ್ರಯಾಣದ ಉತ್ಸುಕತೆ ಇರಲಿದೆ. ಪ್ರೇಮಪಾಶವು ನಿಮಗೆ ಹಿತಕರವಾದ ಅನುಭವವನ್ನು ನೀಡೀತು. ಅವಶ್ಯಕ ವಸ್ತುಗಳು ಕಣ್ಮರೆಯಾದಾವು. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ. ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು. ದುಃಖವನ್ನು ಹಂಚಿಕೊಳ್ಳಲು ವ್ಯಕ್ತಿಯನ್ನು ಹುಡುಕುವಿರಿ.

ಮಿಥುನ ರಾಶಿ: ನೀವು ಇಂದು ಅಸಾಧ್ಯವೆಂದು ಬಿಟ್ಟ ಕಾರ್ಯಗಳನ್ನು ಪುನಃ ಕೈಗೆತ್ತಿಕೊಳ್ಳುವಿರಿ. ಇದಕ್ಕೆ ಧನ ಸಹಾಯ ಹಾಗೂ ಜನ ಸಹಾಯವೂ ಸಿಗಲಿದೆ. ಧಾರ್ಮಿಕ ಮತ್ತು ನಿಮ್ಮ ಮಕ್ಕಳು ನಿಮ್ಮನ್ನು ಸಂತೋಷವಾಗಿ ಇಡುವರು. ಅನಿವಾರ್ಯವಾಗಿ ಖರ್ಚು ಮಾಡಬೇಕಾದ ಸಂದರ್ಭ ಬಂದಾಗ ಸ್ನೇಹಿತರ ಸಹಾಯವನ್ನು ಕೇಳುವಿರಿ. ಮಂಗಲ ಕಾರ್ಯವನ್ನು ಸರಿಯಾದ ಸಮಯಕ್ಕೆ ಮಾಡಲಾಗದು. ಇಬ್ಬರ ಮನಸ್ಸೂ ಹಗುರಾಗಲು ಇಷ್ಟವಾದುದನ್ನು ಮಾಡುವುದು ಒಳ್ಳೆಯದು. ನಿಮ್ಮ ಚಾರಿತ್ರ್ಯಿದ ಬಗ್ಗೆ ಪ್ರಶ್ನೆ ಮಾಡಬಹುದು. ನಿಮ್ಮದೇ ಕೆಲಸದದಲ್ಲಿ ನೀವು ಬಹಳ ಚುರುಕಿನಿಂದ ವ್ಯವಹಾರವನ್ನು ಮಾಡುವಿರಿ. ಬದಲಾವಣೆಗಳನ್ನು ಕಾತರದಿಂದ ಕಾಯುವಿರಿ. ಕಾನೂನಾತ್ಮಕ ವಿಚಾರಕ್ಕೆ ಮಾತ್ರ ನಿಮ್ಮ ಬೆಂಬಲವು ಇರಲಿ. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ. ಆಸ್ತಿಯ ವಿಚಾರಕ್ಕೆ ದಾಯಾದಿ ಕಲಹವಾಗಬಹುದು. ನಿಮ್ಮವರ ಪ್ರೀತಿಯಿಂದ ನೀವು ಮನಸೋಲುವಿರಿ.

ಕಟಕ ರಾಶಿ: ಇಂದು ನಿಮ್ಮ ಕಷ್ಟಕರ ಸಂದರ್ಭದಲ್ಲಿಯೂ ಧೈರ್ಯವನ್ನು ಬಿಡದೇ ಎದುರಿಸಬೇಕು. ಇಂದು ನೀವು ದೈವಕ್ಕಿಂತ ಪುರುಷಪ್ರಯತ್ನವೇ ಹೆಚ್ಚು ಪ್ರಭಾವೀ ಎಂದು ಅನ್ನಿಸಬಹುದು. ದೂರಪ್ರಯಾಣದಲ್ಲಿ ಸ್ನೇಹಿತರ ಮನೆಯಲ್ಲಿ ವಾಸ ಮಾಡಬೇಕಾಗಬಹುದು. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಹಿರಿಯರ ಮಾತಿನಿಂದ ನಿಮ್ಮ ಸಂವೇದನಾ ಕೇಂದ್ರವು ತೆರೆದುಕೊಳ್ಳಬಹುದು. ಆಲಸ್ಯದಿಂದ ಮನೆಯಲ್ಲಿ ಬೈಗುಳವನ್ನು ಕೇಳಬೇಕಾಗುವುದು. ಸಹೋದರರ ನಡುವೆ ಸಂಘರ್ಷವಾಗುವ ಸಾಧ್ಯತೆ ಇದೆ. ದಾಂಪತ್ಯದ ಕಲಹವು ಮನೆಯಲ್ಲಿ ಆತಂಕವನ್ನು ಉಂಟುಮಾಡೀತು. ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವು ಹುಟ್ಟಿಕೊಂಡೀತು. ನಂಬಿಕೆ ದ್ರೋಹವು ನಿಮಗೆ ಕಷ್ಟವಾದೀತು. ನಿಮ್ಮ ಕೋಪಕ್ಕೆ ಒಂದು ಮಿತಿ‌ ಇರಲಿ. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ. ಮಕ್ಕಳ‌ ಮೇಲಿನ ಮೋಹವನ್ನು ಕಡಿಮೆ‌ ಮಾಡಿಕೊಳ್ಳಬೇಕಾಗುವುದು.

ಸಿಂಹ ರಾಶಿ: ಇಂದು ನಿಮ್ಮ ನಿಮಗೆ ಹಣವನ್ನು ಉಳಿಸುಕೊಳ್ಳಬೇಕು ಎಂಬ ಇಚ್ಛೆ ಇದ್ದರೂ ಬಂದ ಹಣವು ನಿಲ್ಲದೆ ಖಾಲಿಯಾಬಹುದು. ಕಛೇರಿಯಲ್ಲಿ ನಿಮ್ಮನ್ನು ಸೂಕ್ತ ವ್ಯಕ್ತಿ ಎಂದು ಆಯ್ಕೆ ಮಾಡಿದ್ದರೂ ನಿಮಗೆ ಹಿಂಜರಿಕೆ ಉಂಟಾಗಲಿದೆ. ಶುಷ್ಕಭೂಮಿಯ ಮಾರಾಟದಿಂದ ಲಾಭವಿರಲಿದೆ. ವೃತ್ತಿಯ ಸಾಧನೆಯನ್ನು ಮನೆಯಲ್ಲಿ ಹೇಳಿಕೊಳ್ಳುವಿರಿ. ಇಂದು ನಿಮ್ಮ ತಾಯಿ ನಿಮಗೆ ಮಾನಸಿಕ ಬಲವನ್ನು ತುಂಬುವಳು. ಶತ್ರುಗಳ ಬಗ್ಗೆ ಮಾತನಾಡಿ ಸುಮ್ಮನೇ ಕಾಲಹರಣ ಮಾಡಬೇಡಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಅಪರೂಪದ ವ್ಯಕ್ತಿಗಳ ಜೊತೆ ಇಂದು ಸಮಯವನ್ನು ಕಳೆಯುವಿರಿ. ಮನೆಯೇ ನಿಮಗೆ ಸಮಾಧಾನದ ಸ್ಥಳವಾಗಬಹುದು. ನಿಮ್ಮ ಸಮಯ ಬಂದಾಗ ಅದನ್ನು ಚರ್ಚಿಸಲು ಅವಕಾಶ ಬರುವುದು. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ. ಪಕ್ಷಪಾತ ಧೋರಣೆ ಬೇಡ.

ಕನ್ಯಾ ರಾಶಿ: ನಿಮ್ಮ ಶಿಕ್ಷಣದಿಂದ ಪ್ರತಿಷ್ಠಿತ ಕಂಪೆನಿಯ ಉದ್ಯೋಗವನ್ನು ಪಡೆಯುವಿರಿ. ನಿಮ್ಮ ಹಾಸ್ಯದ ಸ್ವಭಾವವು ಮನೆಯಲ್ಲಿ ಸಂತೋಷದ ವಾತಾವರಣವನ್ನು ಇರಿಸುತ್ತದೆ. ನಿಮ್ಮನ್ನು ನೀವೇ ಹೊಗಳಿಕೊಳ್ಳುವುದು ವಿಚಿತ್ರ ಎನಿಸಬಹುದು. ಇಂದು ಹೂಡಕೆ‌ ಮಾಡಿ ಬಹುದಿನದ ಬಯಕೆಯನ್ನು ತೀರಿಸಿಕೊಳ್ಳುವಿರಿ. ಬೇರೆಯವರ ಬಗ್ಗೆ ಅಭಿಪ್ರಾಯಗಳನ್ನು ಹೇಳುವ ದುರಭ್ಯಾಸ ಒಳ್ಳೆಯದಲ್ಲ. ತಾಳ್ಮೆಯಿಂದ ಆಗುವ ಕೆಲಸವನ್ನು ತಣ್ಣಗೇ ಮಾಡಿ ಮುಗಿಸಿ. ನಿಮ್ಮವರಿಗೆ ನಿಮ್ಮ ಬಗ್ಗೆ ತಿಳಿದುಕೊಳ್ಳುವ ತುಡಿತ ಅತಿಯಾದೀತು‌. ಸಕಾಲದಲ್ಲಿ ಭೋಜನವನ್ನು ಮಾಡಲು ಕಷ್ಟವಾಗುವುದು. ಅಸದರೆ ಸ್ನೇಹಿತರ ಮನೆಯಲ್ಲಿ ಉತ್ತಮ‌ ಭೋಜನ ಮಾಡುವಿರಿ. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ. ರಕ್ಷಣೆಯ ಜವಾಬ್ದಾರಿಯವರಿಗೆ ಆರೋಗ್ಯದ ಕೆಡಬಹುದು. ಕುಚೋದ್ಯ ಮಾಡಲು ಹೋಗಿ ಕೆಂಗಣ್ಣಿಗೆ ಗುರಿಯಾಗುವಿರಿ.

ತುಲಾ ರಾಶಿ: ನೀವು ಬಹಳ ನಾಜೂಕಿನಿಂದ ಕೆಲಸ ಮಾಡಿಕೊಂಡು ಎಲ್ಲಿಯೂ ಸಿಕ್ಕಿಹಾಕಿಕೊಳ್ಳಲಾರಿರಿ. ಇದರಿಂದ ನೀವು ಜಟಿಲವಾದ ಸಮಸ್ಯೆಯನ್ನು ಸರಾಗವಾಗಿ ಪರಿಹರಿಸಿಕೊಳ್ಳುವಿರಿ. ಪುತ್ರೋತ್ಸವವಿರಲಿದೆ. ನಿಮ್ಮ‌ ಆಸಕ್ತಿಯನ್ನು ನೀವು ಬದಲಾಯಿಸಿಕೊಳ್ಳುವುದು ಬೇಡ. ಸಂಗಾತಿಯಿಂದ‌ ನಿರ್ಲಕ್ಷ್ಯಕ್ಕೆ‌ ಒಳಗಾಗುವಿರಿ. ನಿಮ್ಮ ಕೆಲಸದ ಮೇಲೇ ಹೆಚ್ಚು ಗಮನವಿಡುವುದು ಒಳ್ಳೆಯದು.‌ ಮಕ್ಕಳಿಂದ ಹೆಮ್ಮೆ ಪಡುವ ಸಂಗತಿಗಳು ನಿರೀಕ್ಷಿತವಾಗಿ ಬರಲಿದೆ. ಮಕ್ಕಳು ನಿಮಗೆ ಸಂತೋಷವನ್ನು ಕೊಟ್ಟಾರು. ತೀವ್ರತರವಾದ ಒತ್ತಡಗಳು ನಿಮಗೆ ಕಿರಿಕಿರಿ ಮಾಡೀತು. ಒಮ್ಮೆ ನಂಬಿಕೆಯನ್ನು ಇಟ್ಟುಕೊಂಡ ಅನಂತರ ಅನುಮಾನ ಬೇಡ. ನೀವು ಇಂದು ಆಸ್ತಿಯನ್ನು ಖರೀದಿಸಲು ಪ್ರಯತ್ನಿಸುತ್ತಿದ್ದು ನೀವು ಅದನ್ನು ಸುಲಭವಾಗಿ ಸಾಧಿಸುವಿರಿ. ನಿಮ್ಮ ಸದ್ಭಾವವನ್ನು ಆಡಿಕೊಳ್ಳಬಹುದು. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ. ಅಂತಃಕರಣವು ಶುದ್ಧವಿದ್ದರೆ ನಿಮಗೆ ಸಿಗದು ಸಿಕ್ಕಿಯೇ ಸಿಗುವುದು.

ವೃಶ್ಚಿಕ ರಾಶಿ: ಇಂದಿನ ನಿಮ್ಮ‌ ಶ್ರಮವು ಫಲಿಸಿ, ಉತ್ಸಾಹವನ್ನೂ ಹೆಚ್ಚಿಸುವುದು. ಅತಿಯಾಗಿ ಭಾವನಾತ್ಮಕವಾಗುವುದು ಮತ್ತು ನಿಮ್ಮವರಿಂದ ಹೆಚ್ಚಿನದನ್ನು ನಿರೀಕ್ಷಿಸದಿರುವುದು ಒಳ್ಳೆಯದು. ಅಸೂಯೆಯಿಂದ‌ ನಿಮ್ಮ ಕೆಲಸವು ಹಿಂದುಳಿಯುವುದು. ಅನಗತ್ಯ ಕೆಲಸಗಳಿಗೆ ಕೈ ಹಾಕಿ ಹಣವನ್ನು ಕಳೆದುಕೊಳ್ಳಬಹುದು. ದುರಭ್ಯಾಸಕ್ಕೆ ಶರಣಾಗಿ ಹಣವನ್ನು ಕಳೆದುಕೊಳ್ಳಬಹುದು. ಸರ್ಕಾರದ ಕೆಲಸವು ವಿಳಂಬವಾಗಿ ನಿಮಗೆ ಬೇಸರವನ್ನು ಕೊಟ್ಟೀತು. ಕಲಹದ ಸ್ಥಳಕ್ಕೆ ನಿಮ್ಮ ಮಾತನ್ನೂ ಹೇಳುವಿರಿ. ದ್ವೇಷ ಸಾಧಿಸಲು ಹೋಗಿ ಸಮಯವನ್ನೂ ಹಣವನ್ನೂ ಜನರನ್ನೂ ಕಳೆದುಕೊಳ್ಳಬೇಕಾಗಬಹುದು. ಅತಿಯಾದ ನಂಬಿಕೆಯು ಮುಳುವಾದೀತು ನಿಮಗೆ. ಶಾರೀರಿಕ ಪೀಡೆಯಿಂದ ಚಿಂತೆ ಉಂಟಾಗಬಹುದು. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ. ಇಂದು ನಿಮ್ಮ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳಬೇಕಾಗಿಬರಬಹುದು. ವಿದೇಶದ ಕಡೆ ನಿಮ್ಮ ಗಮನವಿರಲಿದೆ.

ಧನು ರಾಶಿ: ಇಂದು ನೀವು ಅಂದುಕೊಂಡಿದ್ದನ್ನು ಸಾಧಿಸಿಕೊಂಡು ನೆಮ್ಮದಿಯಿಂದ ನಿದ್ರಿಸುವಿರಿ. ನಿಮ್ಮ ಪ್ರತಿಭೆಗೆ ಇಂದು ಪರೀಕ್ಷಾಕಾಲವಾಗಲಿದೆ. ಇದರಿಂದ ನಿಮ್ಮ ಆತ್ಮಬಲವು ಅಧಿಕವಾಗುವುದು. ಸಣ್ಣ ವಿಚಾರಗಳಿಗೆ ದ್ವೇಷ ಸಾಧಿಸಿ ಏನು ಮಾಡುವುದಿದೆ. ಮರೆತು ಮುನ್ನಡೆದರೆ ಮಾರ್ಗ ಸುಗಮ. ನಿಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಲು ಬಯಸುವಿರಿ. ಸಂಗಾತಿಯ ಜೊತೆ ಅಪರೂಪಕ್ಕೆ ದೂರಪ್ರಯಾಣವನ್ನು ಮಾಡಲು ಇಚ್ಛಿಸುವಿರಿ. ವೃತ್ತಿಯ ಸ್ಥಳದಲ್ಲಿ ಬೇರೆ ಜವಾಬ್ದಾರಿಗಳು ಬರುವಂತಿದ್ದರೂ ಅದನ್ನು ನಿರಾಕರಿಸುವಿರಿ. ಇನ್ನೊಬ್ಬರನ್ನು ಅನುಕರಿಸಲಿದ್ದೀರಿ. ಅತಿಯಾದ ಉತ್ಸಾಹದಲ್ಲಿ ಏನನ್ನಾದರೂ ಹೇಳುವ ಸಾಧ್ಯತೆ ಇದೆ. ವಿದೇಶದ ವಿನಿಮಯದಿಂದ ಹಠಾತ್ ಲಾಭವು ಕಾಣಿಸುವುದಿ. ಮಕ್ಕಳನ್ನು ನಯವಾದ ಮಾತುಗಳಿಂದ ಸರಿದಾರಿಗೆ ತರಬೇಕಾಗಬಹುದು. ಹಲವಾರು ಗೊಂದಲಗಳು ನಿಮ್ಮ ಮನಸ್ಸಿನಲ್ಲಿ ಓಡಾಡಬಹುದು. ಇಂದು ನಿಮಗೆ ಅನಿರೀಕ್ಷಿತ ಆನಂದವನ್ನು ತರುವ ವಾರ್ತೆಗಳು ಬರಬಹುದು.

ಮಕರ ರಾಶಿ: ಇನ್ನೊಬ್ಬರಿಗೆ ಮಾಡುವ ಸಹಾಯದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಜೀವನದ ಎಲ್ಲ ಪರೀಕ್ಷೆಯನ್ನೂ ಪಾಸಾಗಬೇಕು ಎಂಬುದೇ ನಿಮ್ಮ‌ ನಿಶ್ಚಲ ನಿರ್ಧಾರ. ಹಣಕಾಸಿನ ತೊಂದರೆ ಬಂದರೂ ಅದನ್ನು ನಿಭಾಯಿಸುವ ಚಾಣಕ್ಷತನ ನಿಮಗೆ ಗೊತ್ತಿದೆ. ತಂದೆಯ ಮಾತನ್ನು ಶ್ರದ್ಧೆಯಿಂದ ಪಾಲಿಸುವಿರಿ. ನಿರುದ್ಯೋಗ ಎಂಬ ಕೊರಗು ನಿಮ್ಮನ್ನು ಕಾಡಬಹುದು. ಸಿಕ್ಕ ಉದ್ಯೋಗವನ್ನು ಬಹಳ ಪ್ರೀತಿಸುವಿರಿ. ಸಂಸಾರದ ಬಿಕ್ಕಟ್ಟನ್ನು ಬಿಡಿಸುವ ಪ್ರಯತ್ನ ಮಾಡುವರಿದ್ದೀರಿ. ಸಾಲವನ್ನು ತೀರಿಸಲು ನಿಮಗೆ ಮಾರ್ಗವು ಕಾಣಿಸಬಹುದು. ಬಂಧುಗಳಿಂದಾದ ನೋವನ್ನು ನೀವು ಹೇಳಿಕೊಳ್ಳಲಾರಿರಿ. ಅನವಶ್ಯಕ ಸಂಪರ್ಕವನ್ನು ಕಡಿದುಕೊಳ್ಳಲು ಇಚ್ಛಿಸುವಿರಿ. ಕಾರ್ಯದ ಸ್ಥಳವನ್ನು ಒತ್ತಡದಿಂದ ಮುಕ್ತಮಾಡಿಕೊಳ್ಳಿ. ಉದ್ಯೋಗಕ್ಕಾಗಿ ಬಂದ ಬಂಧುವಿಗೆ ಮಾರ್ಗದರ್ಶನ ಮಾಡುವಿರಿ. ಸಹೋದರನ ಸಹಕಾರವು ಅನುಕೂಲವೇ ಆಗುವುದು.

ಕುಂಭ ರಾಶಿ: ನೀವು ಕೆಲವು ಸಮಸ್ಯೆಗಳು ಇದ್ದರೂ ಅದನ್ನು ಬದಿಗೊತ್ತಿ ಏನೂ ಇಲ್ಲದವರ ತೋರುವಿರಿ. ಆಹಾರವನ್ನು ಕಡಿಮೆ ಮಾಡಲು ವೈದ್ಯರ ಸಲಹೆಯನ್ನು ಪಡೆಯುವಿರಿ. ಕುಟುಂಬದ ಒತ್ತಡವನ್ನು ಕಛೇರಿಗೆ ಒಯ್ಯವುದು ಬೇಡ. ಬಹು ಮುಖ್ಯ ಕೆಲಸಕ್ಕಾಗಿ ಕಾದು ಸಮಯವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಇಂದು ಮಾಡಬೇಕಾದುದನ್ನು ಮಾಡಿ ಮುಗಿಸಿ.‌ ದೈವವನ್ನು ನಂಬಿ ನಿಮ್ಮ ಕಾರ್ಯದಲ್ಲಿ ಯಶಸ್ಸನ್ನು ಕಾಣುವಿರಿ. ಹೊಸ ವಿಷಯವನ್ನು ತಿಳಿದುಕೊಳ್ಳಲು ನಿರ್ಧಾರವನ್ನು ಮಾಡುವಿರಿ. ಕುಟುಂಬದ ಪ್ರೀತಿಯನ್ನು ಇಂದು ಕಳೆದುಕೊಳ್ಳುವ ಸಾಧ್ಯತೆ ಇದೆ. ದೇಹವನ್ನು ದಂಡಿಸಲು ನಿಮಗೆ ಆಗದು. ಕಾರ್ಯದ ನಿಮಿತ್ತ ನಿಮ್ಮ ಓಡಾಟವು ವ್ಯರ್ಥವಾಗಬಹುದು. ಸ್ವತಂತ್ರ ನಿರ್ಧಾರವು ನಿಮಗೆ ಭಯ ಹುಟ್ಟಿಸೀತು. ದುಷ್ಕೃತ್ಯಕ್ಕೆ ಪ್ರೇರಣೆ ಸಿಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ. ಯಾರದೋ ತೊಂದರೆಯನ್ನು ನೀವು ಪರಿಹರಿಸಬೇಕಾಗಬಹುದು.

ಮೀನ ರಾಶಿ: ನೀವು ಉತ್ತಮ ಕ್ರಮವನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿ. ಮನೆಯಲ್ಲಿ ಶಿಸ್ತಿನ ವಾತಾವರಣವು ಸಂತೋಷವನ್ನು ತರುವುದು. ನಿಮ್ಮ ದುರಭ್ಯಾಸಗಳು ನಿಮ್ಮವರಿಗೆ ಅಪಮಾವನ್ನು ಮಾಡಿಸೀತು. ಆಯಾಸವಾಗಿದ್ದರೆ ವಿಶ್ರಾಂತಿಯನ್ನು ಸ್ವಲ್ಪ ಪಡೆಯಿರಿ. ಪ್ರಾಪಂಚಿಕ ವಿಷಯದಲ್ಲಿ ಆಸಕ್ತಿ ಕಡಿಮೆ ಇರಲಿದೆ. ಯೋಗ್ಯ ಜನರನ್ನು ಭೇಟಿಯಾಗಿ ನಿಮ್ಮ ಬಗ್ಗೆ ತಿಳಿಸಿ. ಒತ್ತಾಯಕ್ಕೆ ಮಣಿದು ಏನನ್ನಾದರೂ ಮಾಡಲು ಹೋಗಬೇಕಾದೀತು. ಸಂದರ್ಭೋಚಿತ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿರದು. ಮಕ್ಕಳನ್ನು ಬಹಳ ಪ್ರೀತಿಸುವಿರಿ. ಬಂದಿದ್ದನ್ನು ಸ್ವೀಕರಿಸುವ ಮನಃಸ್ಥಿತಿ ಇಂದು ಇರಲಿದೆ. ಬಹಳ ಹುಡುಕಾಟದ ಅನಂತರದ ಉತ್ತಮ‌ ವಿವಾಹ ಸಂಬಂಧವು ಬರುವುದು. ಕರ್ತವ್ಯದ ವಿಚಾರದಲ್ಲಿ ಆಲಸ್ಯವೋ ಬೇಜವಾಬ್ದಾರಿಯೋ ಒಳ್ಳೆಯದಲ್ಲ. ಬಂಧುಗಳಿಂದ ಬೇಗ ಹಣವನ್ನು ಕೊಡುವುದಾಗಿ ಪಡೆಯುವಿರಿ. ಪುರುಷಪ್ರಯತ್ನದಿಂದ ಇಂದು ಹೆಚ್ಚು ಇರುವುದು. ಸಂಗಾತಿಯ ಜೊತೆ ಆಪ್ತವಾದ ಮಾತುಕತೆ ಇರಲಿದೆ.

ಲೋಹಿತ ಹೆಬ್ಬಾರ್-8762924271 (what’s app only)

Published On - 12:10 am, Sat, 20 July 24

ತಾಜಾ ಸುದ್ದಿ
ಸಿಂಗಾಪುರದಲ್ಲಿ ಪ್ರಧಾನಿ ಮೋದಿಯವರನ್ನು ನೋಡಲು ಮುಗಿಬಿದ್ದ ಭಾರತೀಯರು
ಸಿಂಗಾಪುರದಲ್ಲಿ ಪ್ರಧಾನಿ ಮೋದಿಯವರನ್ನು ನೋಡಲು ಮುಗಿಬಿದ್ದ ಭಾರತೀಯರು
‘ಚಿತ್ರರಂಗಕ್ಕೆ ತೊಂದರೆ ಆಗಿದೆ, ಆದರೆ ಕಾನೂನಿಗೆ ತಲೆ ಬಾಗಲೇ ಬೇಕು’
‘ಚಿತ್ರರಂಗಕ್ಕೆ ತೊಂದರೆ ಆಗಿದೆ, ಆದರೆ ಕಾನೂನಿಗೆ ತಲೆ ಬಾಗಲೇ ಬೇಕು’
ದರ್ಶನ್ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ; ರೇಣುಕಾ ಸ್ವಾಮಿ ತಂದೆ ರಿಯಾಕ್ಷನ್
ದರ್ಶನ್ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ; ರೇಣುಕಾ ಸ್ವಾಮಿ ತಂದೆ ರಿಯಾಕ್ಷನ್
ಸಿದ್ದರಾಮಯ್ಯಗೆ ರಾಜೀನಾಮೆ ಕೊಡುವ ಪರಿಸ್ಥಿತಿ ನೂರಕ್ಕೆ ನೂರು ಬರುತ್ತೆ
ಸಿದ್ದರಾಮಯ್ಯಗೆ ರಾಜೀನಾಮೆ ಕೊಡುವ ಪರಿಸ್ಥಿತಿ ನೂರಕ್ಕೆ ನೂರು ಬರುತ್ತೆ
ಭಾರೀ ಮಳೆಯಿಂದ ಕಣ್ಣೆದುರೇ ಕುಸಿದು ಬಿದ್ದ ಮನೆ; ವಿಡಿಯೋ ವೈರಲ್
ಭಾರೀ ಮಳೆಯಿಂದ ಕಣ್ಣೆದುರೇ ಕುಸಿದು ಬಿದ್ದ ಮನೆ; ವಿಡಿಯೋ ವೈರಲ್
ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ
ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ
ಸಿಂಗಾಪುರದಲ್ಲಿ ಡೋಲು ಬಾರಿಸಿ ಸಂಭ್ರಮಿಸಿದ ಪ್ರಧಾನಿ ಮೋದಿ
ಸಿಂಗಾಪುರದಲ್ಲಿ ಡೋಲು ಬಾರಿಸಿ ಸಂಭ್ರಮಿಸಿದ ಪ್ರಧಾನಿ ಮೋದಿ
ಮೈಸೂರು: ದಸರಾ ಆನೆಗಳ ಮಾವುತರ ಮಕ್ಕಳ ಜತೆ ವಾಲಿಬಾಲ್ ಆಡಿದ ಸಚಿವ ಮಹದೇವಪ್ಪ
ಮೈಸೂರು: ದಸರಾ ಆನೆಗಳ ಮಾವುತರ ಮಕ್ಕಳ ಜತೆ ವಾಲಿಬಾಲ್ ಆಡಿದ ಸಚಿವ ಮಹದೇವಪ್ಪ
ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಕೇಳುವುದರಲ್ಲಿ ತಪ್ಪಿಲ್ಲ: ಡಿಕೆ ಸುರೇಶ್​
ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಕೇಳುವುದರಲ್ಲಿ ತಪ್ಪಿಲ್ಲ: ಡಿಕೆ ಸುರೇಶ್​
ಇದಪ್ಪ ಕ್ಯಾಚ್ ಅಂದ್ರೆ... ಕೈಲ್ ಮೇಯರ್ಸ್ ಫೀಲ್ಡಿಂಗ್​ಗೆ ಬಹುಪರಾಕ್
ಇದಪ್ಪ ಕ್ಯಾಚ್ ಅಂದ್ರೆ... ಕೈಲ್ ಮೇಯರ್ಸ್ ಫೀಲ್ಡಿಂಗ್​ಗೆ ಬಹುಪರಾಕ್