Daily Horoscope 5 September 2024: ದೂರಾದ ಪ್ರೇಮಿಯ ನೆನೆದು ದುಃಖಿಸುವಿರಿ, ಮೋಜಿನ ಆಟಕ್ಕೆ ಬಲಿಯಾಗುವ ಸಾಧ್ಯತೆಯಿದೆ
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಸಾಧ್ಯ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:41 ಗಂಟೆ, ರಾಹು ಕಾಲ ಮಧ್ಯಾಹ್ನ 12:31 ರಿಂದ ಸಂಜೆ 02:04, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:27ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:59 ರಿಂದ 12:31ರ ವರೆಗೆ.
ಮೇಷ ರಾಶಿ : ಬಂಡವಾಳದ ವಿಚಾರದಲ್ಲಿ ಯಾರ ಮಾತೂ ಪಥ್ಯವಾಗದು. ಇಂದು ನಿಮ್ಮ ನಿರೀಕ್ಷೆಯಂತೆ ಬರಬೇಕಾದ ಹಣವು ಬರಬಹುದು. ಪರಿಶ್ರಮವು ಎಂದಿಗಿಂತ ಅಧಿಕವಾಗಿದ್ದು, ಅದಕ್ಕೆ ಯೋಗ್ಯವಾದ ಫಲವು ಸಿಗುವುದು. ನಿಮ್ಮ ಸರ್ಕಾರಿ ಕೆಲಸಗಳಿಗೆ ಹೆಚ್ಚು ಓಡಾಟ ಆಗಬಹುದು. ಸಂಗಾತಿಯ ಜೊತೆ ಉದ್ಯಮದ ಕುರಿತು ಚರ್ಚಿಸಿ, ಕಲಹದಲ್ಲಿ ಅಂತ್ಯವಾಗಲಿದೆ. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು. ಮನೆಯಿಂದ ಹೊರಡುವಾಗ ಶುಭ ಸೂಚನೆಗಳನ್ನು ಗಮನಿಸಿ, ಕಾರ್ಯದ ಸಾಧ್ಯಾಸಾಧ್ಯತೆಗಳ ಬಗ್ಗೆ ತಿಳಿಯುವಿರಿ. ಮಕ್ಕಳ ಸಂತೋಷಕ್ಕಾಗಿ ಹಣವನ್ನು ಖಾಲಿ ಮಾಡುವಿರಿ. ಅದೃಷ್ಟವನ್ನು ನಂಬಿ ಕೆಲಸವನ್ನು ಮಾಡುವಿರಿ. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ಕುಟುಂಬಕ್ಕೆ ಕಿಂಚಿತ್ ಸಹಾಯವನ್ನು ಯಾವುದೋ ಒಂದು ರೀತಿಯಲ್ಲಿ ಮಾಡುವಿರಿ. ತಾಳ್ಮೆಯನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು. ಇಂದು ಚರಾಸ್ತಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ.
ವೃಷಭ ರಾಶಿ : ಸಿಟ್ಟನ್ನು ಯಾವುದಾದರೂ ಒಂದು ದಾರಿಯಲ್ಲಿ ಹೊರಹಾಕಿದೆ ಸಮಾಧಾನಪಟ್ಟುಕೊಳ್ಳುವಿರಿ. ಇಂದು ನಿಮ್ಮ ಮುಂದೆ ಸಾಲದ ವಿಚಾರ ಬಂದರೆ ಮೌನವಹಿಸುವಿರಿ. ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ನ್ಯಾಯಾಲಯದ ಓಡಾಟವು ನಿಮಗೆ ಬೇಸರ ತರಿಸಬಹುದು. ಮಿತ್ರರೆಂದು ಬಂದವರ ವಿಚಾರದಲ್ಲಿ ಜಾಗರೂಕತೆ ಇರಲಿ. ಮಾನಸಿಕವಾಗಿ ನಿಮಗೆ ಇಂದು ಅವರು ತೊಂದರೆ ಕೊಡಬಹುದು. ಕುಟುಂಬದ ಚರ ಆಸ್ತಿಯನ್ನು ನಯವಾಗಿ ಪಡೆಯಲು ಯತ್ನಿಸುವಿರಿ. ಬರಬೇಕಾದ ಹಣವು ಬಾರದೇ ಸಾಲವನ್ನು ಮಾಡಬೇಕಾಗಬಹುದು. ಕುಟುಂಬ ನಿರ್ವಹಣೆಯ ವಿಚಾರದಲ್ಲಿ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಬರಬಹುದು. ಚಂಚಲವಾದ ಮನಸ್ಸಿನ ಕಾರಣ ಕೆಲವಕಳೆದುಕೊಳ್ಳುವಿರಿ. ಕೈಲಾಗದ್ದನ್ನು ಮಾಡುವ ಉತ್ಸಾಹ ಬೇಡ. ಆಸೆಯಿಂದ ಕಳೆದುಕೊಳ್ಳುವುದು ಹೆಚ್ಚಾಗಬಹುದು. ಬೇಡವೆಂದರೂ ಬೇಡದ ವಿಚಾರಗಳು ತಲೆಯಲ್ಲಿ ಗಿರಿಕಿಯಾಗಬಹುದು.
ಮಿಥುನ ರಾಶಿ : ಎಲ್ಲ ಸಮಯದಲ್ಲಿಯೂ ಇನ್ನೊಬ್ಬರಿಗೆ ಪ್ರಶಂಸೆ ಕೊಡಲಾರಿರಿ. ಇಂದು ಹಳೆಯ ಪ್ರಣಯವು ಆರಂಭದ ಸೂಚನೆ ಸಿಗುವುದು. ಸ್ತ್ರೀಯರು ಮನೆಯಲ್ಲಿ ಆದ ಘಟನೆಯಿಂದ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಬಂಧುಗಳ ಅಸಹಾಯವು ನಿಮಗೆ ಬೇಸರ ತರಿಸುವುದು. ಶುಭಸೂಚನೆಯನ್ನು ನೀವು ಗಮನಿಸುವುದು ಉತ್ತಮ. ಪೂರ್ವ ಆಲೋಚನೆಗಳು ದಿಕ್ಕು ತಪ್ಪಬಹುದು. ದ್ವೇಷವನ್ನು ಮುಂದುವರಿಸದೇ ಮುಕ್ತಾಯ ಮಾಡಿಕೊಳ್ಳಿ. ವಿದ್ಯುತ್ ವಸ್ತುಗಳಿಂದ ನಿಮಗೆ ಭಯ ಹಾಗೂ ಕೋಪವೂ ಬರುವುದು. ದೂರಾದ ಪ್ರೇಮಿಯನ್ನು ನೆನಪುಮಾಡಿಕೊಂಡು ದುಃಖಿಸುವಿರಿ. ಮೋಜಿನ ಆಟಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಆಟದಲ್ಲಿ ಎಚ್ಚರವಿರಲಿ. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆಯಿದೆ. ಲಲಿತಕಲೆಗಳಲ್ಲಿ ನಿಮ್ಮ ಛಾಪು ಮೂಡಿಸುವ ಪ್ರಯತ್ನ ಇರುವುದು. ಕೆಲವನ್ನು ನೀವು ಅನುಭವಿಸುವುದು ಅನಿವಾರ್ಯ.
ಕರ್ಕಾಟಕ ರಾಶಿ : ಮನೆಗೆ ಬೇಕಾದ ವಸ್ತುಗಳನ್ನು ತರಲು ಸಂಗಾತಿಯ ಅನುಮತಿ ಪಡೆಯದೇ ಮಾಡುವಿರಿ. ಇಂದು ನೀವು ವಹಿಸಿಕೊಂಡ ಕಾರ್ಯವನ್ನು ಬಿಡದೇ ಮುನ್ನಡೆಸುವಿರಿ. ಕಛೇರಿಯಲ್ಲಿ ಉದ್ಯೋಗದ ಕಾರಣ ನಿಮ್ಮನ್ನು ದೂರದ ಊರಿಗೆ ಕಳುಹಿಸಬಹುದು. ನಿಮಗೆ ಯಾರನ್ನಾದರೂ ಸೋಲಿಸುವ ಖಯಾಲಿ ಶುರುವಾಗುವುದು. ನಿಮ್ಮ ಗುರಿಯನ್ನು ತಪ್ಪಿಸಲು ಬೇಕಾದ ಪಿತೂರಿಯು ನಡೆಯಬಹುದು. ನಿಮ್ಮ ಮಾತಿನ ವೇಗವನ್ನು ಅರ್ಥಮಾಡಿಕೊಳ್ಳಲು ಕಷ್ಟವಾದೀತು. ಕಛೇರಿಯಲ್ಲಿ ಸ್ತ್ರೀಯರಿಂದ ಸಹಕಾರವನ್ನು ಪಡೆಯುವಿರಿ. ಭಯದಲ್ಲಿ ನೀವು ಬಹಳ ಇಂದಿನ ದಿನವನ್ನು ಕಳೆಯಬೇಕಾದೀತು. ನಿಮ್ಮನ್ನು ನೀವೇ ತಮಾಷೆಗೆ ಅವಮಾನ ಮಾಡಿಕೊಳ್ಳುವಿರಿ. ಖಾಸಗಿ ಉದ್ಯೋಗದಲ್ಲಿ ಇರುವವರಿಗೆ ಆತಂಕವಿರಲಿದೆ. ಸುಲಭವಾಗಿ ಸಿಕ್ಕುವುದನ್ನು ಬಿಟ್ಟಕೊಳ್ಳುವಿರಿ. ನೆರಮನೆಯವರ ಜೊತೆ ವಾದ ಮಾಡಬೇಕಾದೀತು. ಎಲ್ಲವನ್ನೂ ಬೇರೆಯವರ ದೃಷ್ಟಿಯಲ್ಲಿ ನೋಡುವುದು ಸರಿಯಾಗದು.
ಸಿಂಹ ರಾಶಿ : ಮನೆಯಲ್ಲಿ ನಿಮ್ಮ ಆರ್ಥಿಕ ವ್ಯವಹಾರದ ಬಗ್ಗೆ ವಿಚಾರಿಸಬಹುದು. ಇಂದು ನೀವು ವಾಹನವನ್ನು ಚಲಾಯಿಸುವುದು ಬೇಡ. ಹೊಸ ಆದಾಯದ ಮೂಲವನ್ನು ಹುಡುಕುವುದು ಉತ್ತಮ. ನಿಮ್ಮ ಸಾಲವನ್ನು ಮನೆಯವರು ತೀರಿಸಬೇಕಾದೀತು. ಅಧಿಕ ಆದಾಯಕ್ಕೆ ನಿಮ್ಮ ಉದ್ಯಮವನ್ನು ವಿಸ್ತರಿಸುವಿರಿ. ನಿಮ್ಮ ಬಳಿ ಇರುವ ವಸ್ತುಗಳನ್ನು ಬಳಸಿಕೊಂಡು ಆಗಬೇಕಾದುದನ್ನು ಮಾಡಿ. ಅನಗತ್ಯ ಓಡಾಟದಿಂದ ಶರೀರವು ದಣಿಯಬಹುದು. ದುರಭ್ಯಾಸವು ಆರೋಗ್ಯವನ್ನೂ ಗೌರವವನ್ನೂ ಹಾಳುಮಾಡಲಿದೆ. ಮನಸ್ಸಿಗೆ ಶಾಂತಿಯು ಇರಲಿದ್ದು ಉದ್ವೇಗದ ಸಂದರ್ಭವನ್ನು ಆರಾಮಾಗಿ ದಾಟುವಿರಿ. ಇಂದು ಕೆಲವರ ವರ್ತನೆಯು ಬೇಸರ ತರಿಸಬಹುದು. ಇಂದು ನಿಮ್ಮಪೂರ್ವಜರ ಜ್ಞಾನವು ಸಿಗಲಿದೆ. ಸತ್ಸಂಗ ಮೂಲಕ ಸಮಯವನ್ನು ಕಳೆಯುವಿರಿ. ರಾಜಕೀಯ ನೇತಾರರ ಸಹವಾಸವನ್ನು ಹೇಗೋ ಸಂಪಾದಿಸುವಿರಿ. ನಿಮ್ಮ ರಕ್ಷಣೆಯಲ್ಲಿ ನೀವಿರಿ. ಯಾರ ಮೇಲೋ ಅವಲಂಬಿತರಾಗಿರುವುದು ನಿಮಗೆ ಇಷ್ಟವಾಗದು.
ಕನ್ಯಾ ರಾಶಿ : ಬಿಡುವಿನ ವೇಳೆಯನ್ನು ಮಕ್ಕಳು ದುರುಪಯೋಗ ಮಾಡಿಕೊಳ್ಳುವರು. ಏನಾದರೂ ಕೆಲಸವನ್ನು ಕೊಡುತ್ತಲೇ ಅವರನ್ನು ಸರಿಯಾದ ದಾರಿಗೆ ತರಬೇಕಾದೀತು. ಇಂದು ನಿಮ್ಮ ದುರಭ್ಯಾಸಗಳು ಇತರರಿಗೆ ಗೊತ್ತಾಗುವುದು. ತಂದೆ ತಾಯಿಗಳನ್ನು ಬಹಳ ಸಂತೋಷದಿಂದ ನೋಡಿಕೊಳ್ಳುವಿರಿ. ಅವರು ಅಪೇಕ್ಷಿಸಿದ ಸ್ಥಳಕ್ಕೆ ಅವರನ್ನು ಕರೆದೊಯ್ಯುವಿರಿ. ನಿಮ್ಮ ಕೈಲಾದವರಿಗೆ ಸಹಾಯವನ್ನು ಮಾಡುವುದು ಒಳ್ಳೆಯದು. ವಿರೋಧಿಗಳಿಗೆ ನಿಮ್ಮ ಬಲ ಪ್ರದರ್ಶನವಾಗಲಿದೆ. ಕೃಷಿಕರಿಗೆ ತೊಂದರೆ, ಒತ್ತಡಗಳು ಕಾಣಿಸಿಕೊಳ್ಳುವುದು. ಹೊಸ ಜನರ ಭೇಟಿಯು ನಿಮಗೆ ಹೊಸ ದಾರಿಯನ್ನು ಮಾಡಿಕೊಟ್ಟೀತು. ನಿಮ್ಮದಲ್ಲದ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟವಾದೀತು. ಸ್ನೇಹಿತರಿಂದ ಉದ್ಯೋಗದ ಪ್ರಾಪ್ತಿಯನ್ನು ನೀವು ನಿರೀಕ್ಷಿಸುವಿರಿ. ನೀವು ಹೊಸ ಯೋಜನೆಯ ಬಗ್ಗೆ ಅಧಿಕ ಆಲೋಚನೆ ಇರಲಿದೆ. ಆಚಾತುರ್ಯದಿಂದ ಅನಂತರ ಪಶ್ಚಾತ್ತಾಪ ಪಡುವಿರಿ. ಯಾರ ಪ್ರೀತಿಯನ್ನೂ ಕಡೆಗಾಣಿಸುವುದು ಬೇಡ. ಶತ್ರುಗಳು ನಿಮಗೆ ನೇರವಾಗಿ ತೊಂದರೆ ಕೊಡದಿದ್ದರೂ, ಪರೋಕ್ಷವಾಗಿ ತೊಂದರೆ ಕೊಡುವರು.
ತುಲಾ ರಾಶಿ : ನಿಮಗೆ ಒಳ್ಳೆಯ ಭೂಮಿಯ ಲಾಭವಾಗುವುದು. ಆದರೆ ಅದನ್ನು ಖರೀದಿಸುವ ಶಕ್ತಿ ನಿಮಗೆ ಸಿಗದೇ ಕೈಬಿಡಬೇಕಾದೀತು. ಇಂದು ನಿಮ್ಮ ಹಣವು ಬಲವಂತದಿಂದ ಬರಲಿದೆ. ವೈದ್ಯಕೀಯ ವೃತ್ತಿಯಲ್ಲಿ ಚುರುಕುತನ ಬೇಕಾಗಬಹುದು. ನಿಮ್ಮ ಬಗ್ಗೆ ಸದ್ಭಾವನೆ ಇರುವವರು ನಿಮಗೆ ಶ್ರೇಯಸ್ಸನ್ನು ಹರಸುವರು. ಹಣಕಾಸಿನ ವಿಚಾರಕ್ಕೆ ಸಲ್ಲದ ಅಪವಾದ ಬಂದೀತು. ಇಂದು ಕುಟುಂಬದ ಮಂಗಲ ಕಾರ್ಯದಲ್ಲಿ ಭಾಗಿಯಾಗುವಿರಿ. ಇಷ್ಟವಿಲ್ಲದಿದ್ದರೂ ಸಂಗಾತಿಯ ಮಾತನ್ನು ಅನುಸರಿಸಿ. ಮಕ್ಕಳನ್ನು ವಿದ್ಯಾಭಾಸಕ್ಕೆ ನೀವು ಪ್ರೇರೇಪಿಸುವಿರಿ. ನಿಮ್ಮ ಲಾಭಾಂಶವನ್ನು ದಾನ ಮಾಡುವಿರಿ. ನಿಮ್ಮ ಒಳಗುಟ್ಟನ್ನು ಬಿಟ್ಟುಕೊಡಬೇಡಿ. ನಿಮ್ಮನ್ನು ಹಗುರಾಗಿ ಕಾಣಬಹುದು. ಯಾವ ಪ್ರಯೋಜನವೂ ಇರದೇ ನೀವು ಏನನ್ನೂ ಮಾಡಲಾರಿರಿ. ಬಂಧುಗಳ ಸಲಹೆಯು ಸಮಸ್ಯೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ನಿಮಗೆ ಸಹಾಯ ಮಾಡುತ್ತದೆ. ಸಣ್ಣ ಲೆಕ್ಕಾಚಾರವೇ ನಿಮ್ಮ ಉಳಿತಾಯದ ಮೂಲವಾಗಿದೆ. ಅನಿರೀಕ್ಷಿತವಾಗಿ ದೂರದ ಊರಿಗೆ ಪ್ರಯಾಣ ಮಾಡಬೇಕಾಗಬಹುದು.
ವೃಶ್ಚಿಕ ರಾಶಿ : ಬಹಳ ಒತ್ತಡವಿರುವ ಕಾರಣ ಬರುವ ಕಾರ್ಯವನ್ನು ಬಹಳ ಚಾಚಕ್ಯತೆಯಿಂದ ಮಾಡಬೇಕಾಗುವುದು. ಇಂದು ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ವ್ಯಯಿಸುವಿರಿ. ವಿದ್ಯುತ್ ಉಪಕರಣಗಳ ಮಾರಾಟವನ್ನು ನೀವು ಮಾಡುತ್ತಿದ್ದರೆ ಲಾಭವನ್ನು ಪಡೆಯಬಹುದಾಗಿದೆ. ನಿಮ್ಮ ಬಳಿ ಬಂದ ಕಾರ್ಯವನ್ನು ನೀವು ಬಿಟ್ಟುಕೊಡಲಾರಿರಿ. ಸಾರ್ವಜನಿಕವಾಗಿ ನೀವು ಹೆಚ್ಚು ಪ್ರಭಾವ ಉಳ್ಳವರಾಗಿದ್ದು ನಿಮಗೆ ಗೌರವವೂ ಸಿಗಲಿದೆ. ಸಹೋದ್ಯೋಗಿಗಳು ನಿಮ್ಮ ಮೇಲೆ ಒತ್ತಡ ಕೊಡುವ ಪ್ರಯತ್ನ ಮಾಡಬಹುದು. ಲೆಕ್ಕಪತ್ರಗಳ ದಾಖಲೆಗಳು ಕಾಣೆಯಾಗಿದ್ದು ನಿಮಗೆ ಆತಂಕ ಉಂಟಾಗಬಹುದು. ಹೊಸ ಕೆಲಸಕ್ಕೆ ಹೋಗುವ ಸಾಧ್ಯತೆ ಇದೆ. ನಿಮ್ಮಿಂದ ಆಗುವ ಕೆಲಸಕ್ಕೆ ಹೆಚ್ಚು ಒತ್ತು ಕೊಡಿ. ಮಕ್ಕಳಿಗೆ ಸಮಯವನ್ನು ಕೊಡುವಿರಿ. ಸಣ್ಣ ವಿವಾದಗಳು ಆಗಬಹುದು. ಅಲ್ಲಿಯೇ ಬಗೆಹರಿಸಿಕೊಳ್ಳಿ. ದೊಡ್ಡ ಮಾಡಿಕೊಳ್ಳುವುದು ಬೇಡ. ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ನೀವು ಕೋಪವನ್ನು ನಿಯಂತ್ರಣ ಮಾಡಿಕೊಳ್ಳಬೇಕಾಗಬಹುದು. ವಾಹನ ದುರಸ್ತಿ ಮಾಡಿಸಬೇಕಾಗುವುದು.
ಧನು ರಾಶಿ : ಮಾನಸಿಕವಾಗಿ ನಿಮಗೆ ಇಂದು ಏರಿಳಿತಗಳು ಹೆಚ್ಚಾಗುವುದು. ಎಲ್ಲವನ್ನೂ ನಕಾರಾತ್ಮಕವಾಗಿ ಭಾವಿಸುವಿರಿ. ಇಂದು ನಿಮ್ಮ ನಿರ್ಲಕ್ಷ್ಯದಿಂದ ವ್ಯಾಪಾರದಲ್ಲಿ ವಂಚನೆ ಸಾಧ್ಯವಾದೀತು. ತೊಂದರೆಗಳಿಂದ ಮನಸ್ಸು ಕುಗ್ಗಬಹುದು. ನಿಮ್ಮ ಸುಳ್ಳು ಇತರರಿಗೆ ಗೊತ್ತಾಗಲಿದೆ. ಸೃಜನಾತ್ಮಕ ಕಾರ್ಯಗಳಿಗೆ ತಡೆಯಾಗಲಿದೆ. ಯಾವುದನ್ನು ಮಾಡಲು ಬುದ್ಧಿ ಸೂಚಿಸದು. ದೊಡ್ಡ ಕೆಲಸಕ್ಕೆ ಸೇರಲು ಯೋಚಿಸಬಹುದು. ನಿಮ್ಮ ಸರ್ಕಾರಿ ಸಂಬದ್ಧವಾದ ಕೆಲಸವು ಅಂತಿಮ ಘಟ್ಟವನ್ನು ತಲುಪಿದ್ದು ಪೂರ್ಣವಾಗಲು ಸಮಯವನ್ನು ತೆಗೆದುಕೊಳ್ಳಬಹುದು. ಮಾತಿನ ಮೇಲೆ ಯಾರನ್ನೂ ಅಳೆಯಬೇಡಿ. ನಿಮ್ಮನ್ನು ನೀವು ಹೊಗಳಿಕೊಳ್ಳುವಿರಿ. ದೂರದ ಪ್ರಯಾಣವನ್ನು ಅಪೇಕ್ಷಿಸುವಿರಿ. ಸ್ತ್ರೀಯರಿಗೆ ಅಪನಿಂದೆಯಾಗುವ ಸಾಧ್ಯತೆ ಇದೆ. ಧಾರ್ಮಿಕವಾದ ಚಿಂತನೆಯನ್ನು ನಡೆಸಬಹುದು. ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಯಬಹುದು. ಬಂಧುಗಳ ಎದುರು ಸ್ವಾಭಿಮಾನವನ್ನು ಇಟ್ಟುಕೊಳ್ಳುವಿರಿ.
ಮಕರ ರಾಶಿ : ಆಸ್ತಿ ಹಂಚಿಕೆಯ ಬಗ್ಗೆ ನಿಮಗೆ ಸಮಾಧಾನ ಸಿಗದು. ಯಾವ ಸೋಲಿಗೂ ಹತಾಶರಾಗುವುದು ಬೇಡ. ಮರೆಯಲು ಬೇಕಾದ ಚಟುವಟಿಕೆಗಳನ್ನು ಮಾಡಿ. ಚಂಚಲಸ್ವಭಾವವನ್ನು ನಿಯಂತ್ರಿಸಲು ಕಷ್ಟವಾದೀತು. ಅಲಂಕಾರಿಕಕ್ಕೆ ಹೆಚ್ಚು ಒತ್ತನ್ನು ನೀಡುವಿರಿ. ನಿಮ್ಮೆದರೇ ಮತ್ತಾರನ್ನಾದರೂ ಪ್ರಶಂಸಿಸಿಯಾರು. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಮನಸ್ಸು ಮಾಡುವರು. ತಾಯಿಯ ಸಂಪತ್ತನ್ನು ಪಡೆಯುವ ಸಾಧ್ಯತೆ ಇದೆ. ಹೆಚ್ಚಿನ ಸಮಯವನ್ನು ಮಾತುಕತೆಯಲ್ಲಿ ಕಳೆಯುವಿರಿ. ಯಾರದೋ ಕಾರ್ಯಕ್ಕೆ ನಿಮಗೆ ಲಾಭವಾಗುವುದು. ಸಂಗಾತಿಯನ್ನು ಜೊತೆ ಹೊಸ ಉದ್ಯಮವನ್ನು ಆರಂಭಿಸುವ ಹುನ್ನಾರ ನಡೆಯಲಿದೆ. ನಿಮ್ಮ ಸುತ್ತಮುತ್ತಲಿನವರಿಂದ ಸಾಕಷ್ಟು ಪ್ರಶಂಸೆ ಪಡೆಯಲಿದ್ದೀರಿ. ಮಾತಿನಿಂದ ಹತ್ತಿರದವರನ್ನು ದೂರಮಾಡಿಕೊಳ್ಳುವಿರಿ. ಕಾರ್ಯವನ್ನು ಹಾಳುಮಾಡಲು ನಿಮ್ಮ ಗಮನವನ್ನು ಬೇರೆ ಕಡೆ ಸೆಳೆಯಬಹುದು.
ಕುಂಭ ರಾಶಿ : ನಿಮ್ಮ ಹಿಡಿತದಿಂದ ಜವಾಬ್ದಾರಿ ತಪ್ಪಿಹೋಗಬಹುದು. ಸುಮ್ಮನೇ ಇಂದು ಯಾರದೋ ಮೇಲೆ ದ್ವೇಷವನ್ನು ಸಾಧಿಸುತ್ತ ಇರುವುದು ಬೇಡ. ಕಾರ್ಯದಲ್ಲಿ ವಿಳಂಬಗತಿಯಾಗಲಿದೆ. ನಂಬಿಕೆಯನ್ನು ಉಳಿಸಿಕೊಳ್ಳಲು ಬೇಕಾದ ಪ್ರಯತ್ನ ಮಾಡುವಿರಿ. ಅಪ್ರಾಮಾಣಿಕ ಪ್ರಯತ್ನವು ನಿಮಗೆ ಯಶಸ್ಸು ಕೊಡದು. ಹಾಗೆಂದು ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಬೇಡಿ. ಹಣವನ್ನು ಹೊಂದಿಸುವ ವಿಚಾರದಲ್ಲಿ ಬಹಳ ತೊಂದರೆಪಡುವಿರಿ. ಆಪ್ತರ ಮಾತು ನಿಮ್ಮನ್ನು ಚೇತರಿಸಿಕೊಳ್ಳಲು ಸಹಾಯ ಮಾಡಬಹುದು. ವಿದೇಶದ ಕಡೆಗೆ ನಿಮ್ಮ ಗಮನ ಅಧಿಕವಾಗಿರುವುದು. ಸಂಗಾತಿಯ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಬಯಸುವಿರಿ. ಉತ್ತಮವಾದುದನ್ನು ಪಡೆಯಲು ಪ್ರಯತ್ನಿಸಿ. ಕುಟುಂಬದ ಸದಸ್ಯರ ಸಲಹೆಯಿಂದ ನೀವು ಪ್ರಯೋಜನ ಪಡೆಯಬಹುದು. ನಿಮ್ಮ ಬಗೆಗಿನ ಊಹಾಪೋಹಗಳಿಗೆ ಬೆಲೆಯನ್ನು ಕೊಡುವ ಅಗತ್ಯವಿಲ್ಲ. ಕೊಡುವುದನ್ನು ಕೊಟ್ಟು ಅನಂತರ ಸಂಕಟಪಡುವಿರಿ.
ಮೀನ ರಾಶಿ : ದೊಡ್ಡ ಉದ್ಯೋಗವನ್ನು ಪಡೆಯುವ ಆಸೆ ಇರುವುದು. ನೀವು ಬೇಕಾಗಿರುವುದನ್ನು ಮಾಡುವುದಕ್ಕಿಂತ ಬೇರೆಯದನ್ನೇ ಮಾಡುವಿರಿ. ನಿಮಗೆ ಹಣಕ್ಕಿಂತ ಪ್ರತಿಷ್ಠೆಯನ್ನು ತೋರುವ ಮಬಲವಿದೆ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದೆ ಸಾಗಿರಿ. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯಬಯಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಅಸ್ವಂತ್ರರು. ನಿಮ್ಮ ನಿರೀಕ್ಷೆಗೆ ತಕ್ಕಂತೆ ಕಾರ್ಯವನ್ನೂ ಮಾಡಬೇಕಾದೀತು. ಒಳ್ಳೆಯದರ ನಿರೀಕ್ಷೆಯಲ್ಲಿ ನೀವು ಇದ್ದು, ದಿನಾಂತ್ಯದಲ್ಲಿ ಸಿಗುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆಗಳನ್ನು ಮಾಡಲು ಇಷ್ಟಪಡಬಹುದು. ನಿಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಲು ಪ್ರಯತ್ನಿಸಿ. ಉದ್ಯೋಗಾವಕಾಶಗಳನ್ನು ಹುಡುಕುವಿರಿ. ಬಂಧುಗಳ ಭೇಟಿಯು ಖುಷಿ ಕೊಡಬಹುದು. ನಿಮ್ಮನ್ನು ಬಹು ದಿನಗಳಿಂದ ಬಾಧಿಸುತ್ತಿದ್ದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ. ಅತಿಯಾದ ಓಡಾಟವನ್ನು ನಿಲ್ಲಿಸಿ. ನೀವು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಪ್ರತಿ ಗುರಿಯನ್ನು ಸಾಧಿಸುವಿರಿ. ಸಮಾಜ ಸೇವಕರ ಒಡನಾಟ ಸಿಗಲಿದೆ.
-ಲೋಹಿತ ಹೆಬ್ಬಾರ್-8762924271 (what’s app only)
Published On - 12:01 am, Wed, 4 September 24