AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರು ಎಲ್ಲದಕ್ಕೂ ಹೇಳಿಸಿಕೊಂಡು ಕಾರ್ಯ ಮಾಡುವರು…

Horoscope Today 30 August: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ದ್ವಿತೀಯಾ ತಿಥಿಯ ಭಾನುವಾರದಂದು ತಾತ್ಸಾರದ ಕೋಪ, ಧಾರ್ಮಿಕ ಒಲವು, ಉದಾತ್ತ ಮನೋಭಾವ, ವ್ಯಾಪಾರದಲ್ಲಿ ರೂಪಾರಂತರ, ಹಣಕ್ಕೆ ಒತ್ತಾಯ ಇವೆಲ್ಲ ಈ ದಿನದ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರು ಎಲ್ಲದಕ್ಕೂ ಹೇಳಿಸಿಕೊಂಡು ಕಾರ್ಯ ಮಾಡುವರು...
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 30, 2026 | 12:38 AM

Share

ಮೇಷ ರಾಶಿ :

ಸಾಮರಸ್ಯದ ಕೊರತೆಯಿಂದ ಮನಸ್ಸು ಉದ್ವೇಗಕ್ಕೆ‌ ಒಳಗಾಗಬಹುದು. ನಿಮಗೆ ಇನ್ನಷ್ಟು ವಿದ್ಯಾಭ್ಯಾಸದ ಅವಶ್ಯಕತೆ ಬೇಕು ಎನಿಸಲಿದೆ. ಉಚಿತವಾದುದನ್ನು ಪಡೆದುಕೊಳ್ಳಲು ಪ್ರಯತ್ನಿಸುವಿರಿ. ನಿಮಗೆ ಬೇಕಾದವರಲ್ಲಿ ಮಾತ್ರ ಸಹಾಯ ಕೇಳಬಹುದು. ಮನೋರಂಜನೆಯು ಅತಿಯಾದಂತೆ ನಿಮಗೆ ಅನ್ನಿಸಲಾರದು. ಯಾವುದನ್ನಾದರೂ ಪರಸ್ಪರ ಮಾತುಕತೆಯ ಮೂಲಕ‌ ಪರಿಹಾರವನ್ನು ಕಂಡುಕೊಳ್ಳಬೇಕಾಗುವುದು.

ವೃಷಭ ರಾಶಿ:

ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಯಾರದೋ ಮೂಲಕ ನಿಮಗೆ ಅಪಾಯದ ಸೂಚನೆ ಬರಬಹುದು. ನಿಮ್ಮ ನಿಷ್ಪಕ್ಷಪಾತ ನಿಲುವು ಕೆಲವರಿಗೆ ಇಷ್ಟವಾಗದೇ ಹೋಗಬಹುದು. ನಿರ್ಮಾಣ ಹಂತದ ಕೆಲಸಗಳು ನಿಧಾನಗತಿಯಲ್ಲಿ ಸಾಗಬಹುದು. ಸ್ವಾಧೀನತೆಯನ್ನು ಕಳೆದುಕೊಂಡರೆ ಮುಂದೆ ಸಾಗುವುದು ಕಷ್ಟ. ಬರಲಿರುವ ಜವಾಬ್ದಾರಿಯನ್ನು ಜಾಣತನದಿಂದ ತಪ್ಪಿಸಿಕೊಳ್ಳುವಿರಿ. ನಿಮ್ಮ ಹೊಣೆಗಾರಿಕೆ ಕಡಿಮೆ ಆದಂತೆ ಅನ್ನಿಸುವುದು.

ಮಿಥುನ ರಾಶಿ:

ಸ್ನೇಹಿತರಿಗೆ ಧನಸಹಾಯವನ್ನು ಮಾಡುವಿರಿ. ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಕ್ಕಿ ಅವರ ಜೊತೆ ಮಾತಮಾಡುವಿರಿ. ಪೂರ್ವಪುಣ್ಯದಿಂದ ದೊಡ್ಡ ಅಪಾಯವೊಂದು ತಪ್ಪಿಹೋಗುವ ಸಂಭವವಿದೆ. ತಿಳಿವಳಿಕೆಯು ಕಡಿಮೆ ಎನ್ನುವುದು ನಿಮಗೇ ಗೊತ್ತಾಗಿ ಆ ಕುರಿತು ಪ್ರಯತ್ನ ಮಾಡುವಿರಿ. ಸ್ಪರ್ಧಾಮನೋಭಾವವು ನಿಮ್ಮನ್ನು ಎಚ್ಚರಿಸುವುದು. ನೀವು ಪ್ರೇಮಿಗಳಿಗೆ ದೂರವಾಗುವ ಸಾಧ್ಯತೆ ಇದೆ. ಅಹಂಕಾರದ ಮಾತುಗಳು ಇತರರಿಗೆ ಹಿಂಸೆಯಾದೀತು.

ಕರ್ಕಾಟಕ ರಾಶಿ:

ಪಾಲುದಾರಿಕೆಯು ಕಲಹದಲ್ಲಿ ಕೊನೆಯಾಗುವುದು. ವೃತ್ತಿಪರರು ಕಛೇರಿಯಲ್ಲಿ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳುವರು. ನಿಮ್ಮ ಅಭ್ಯಾಸವು ಮುಂದುವರಿಯುವುದು ಉತ್ತಮ. ನಿಮಗೆ ಸಿಗುವ ಸಂಗಾತಿಯು ಬಹಳ ಬುದ್ಧಿವಂತನಾಗಿರುವನು. ಎಲ್ಲ ಸಮಯಕ್ಕೂ ನಿಮಗೆ ಸಹಕಾರ ಸಿಗುತ್ತದೆ ಎಂಬ ಯೋಚನೆ ಬೇಡ. ನಿಮ್ಮದಲ್ಲದ್ದನ್ನು ನಿಮ್ಮದೆಂದು ವಾದಿಸಲು ಹೋಗಬೇಡಿ. ಇಂದಿನ ಕಛೇರಿಯ ಕೆಲಸಕ್ಕೆ ಸಮಯ ಮಿತಿ ಇರುವುದು.

ಸಿಂಹ ರಾಶಿ:

ತಪ್ಪಿಗೆ ನೀವು ಸಮಜಾಯಿಷಿ ಕೊಟ್ಟು ತಪ್ಪಿಸಿಕೊಳ್ಳುವಿರಿ. ಆಲಸ್ಯದಿಂದ ಇಂದು ಕಛೇರಿಗೆ ವಿಳಂಬವಾಗಿ ಹೋಗುವಿರಿ. ಇದು ವೃತ್ತಿಜೀವನ ಮೊದಲ ಕಪ್ಪುಚುಕ್ಕೆಯಾಗಲಿದೆ. ಒತ್ತಾಯ ಪೂರ್ವಕವಾಗಿ ಯಾರನ್ನೂ ಇಟ್ಟಕೊಳ್ಳುವ ಕೆಲಸಕ್ಕೆ ಹೋಗಬೇಡಿ. ಯೋಗ್ಯವಾದ ಮಾತುಗಳಿಂದ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ. ವ್ಯಾಪರಕ್ಕೆ ಸಂಬಂಧಿಸಿದಂತೆ ನಿಮಗೆ ಆದಾಯ ಕಡಿಮೆ ಆಗಬಹುದು.

ಕನ್ಯಾ ರಾಶಿ:

ನಿಮ್ಮ ಶುದ್ಧ ನಡತೆಯು ಎಲ್ಲವನ್ನೂ ಮಾಡಿಸೀತು. ಸಂಗಾತಿಯಿಂದ ಉಡುಗೊರೆಯನ್ನು ಪಡೆಯುವಿರಿ. ಸ್ವಲ್ಪ ಆದಾಯವೂ ನಿಮಗೆ ಸುಖವನ್ನು ಕೊಡುವುದು. ವಿವಾಹದ ವಿಚಾರವನ್ನು ತಂದೆಯೇ ನಿಮ್ಮ ಬಳಿ‌ ಮಾತನಾಡಬಹುದು. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ತಯಾರಿಸಿಕೊಳ್ಳುವುದು ಕಷ್ಟವಾದೀತು. ನಿಮ್ಮ ಸ್ಥಾನವನ್ನು ಕಳೆದುಕೊಳ್ಳುವುದು ಬೇಡ. ನೌಕರರಿಂದ ನಿಮಗೆ ಕಷ್ಟವಾಗಲಿದೆ.

ತುಲಾ ರಾಶಿ:

ನಿಮ್ಮೊಳಗೆ ಹತ್ತಾರು ದ್ವಂದ್ವಗಳು ಇರಲಿವೆ. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಕುಗ್ಗಿಸಬಹುದು. ಕೆಲವರ ಮಾತಗಳನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳಬಹುದು ಎಂಬ ಗೊಂದಲ ಕಾಡಬಹುದು. ಆದಷ್ಟು ಸಕಾರಾತ್ಮಕವಾಗಿ ಯೋಚಿಸಲು ಪ್ರಯತ್ನಿಸಿ. ಮನಸ್ಸನ್ನು ಖಾಲಿ ಇಡದೇ ಸದ್ವಿಚಾರಗಳಲ್ಲಿ ತೊಡಗಿಸಿ. ಕೂಡಿಟ್ಟ ಸ್ವಲ್ಪ‌ ಹಣವು ನಿಮಗೆ ಸಿಗಬಹುದು. ಸಮಾಜದ‌ ಕೆಲಸಗಳನ್ನು ಸಣ್ಣ ಪ್ರಮಾಣದಲ್ಲಿ ಮಾಡುವಿರಿ. ನಿಮ್ಮ ಸ್ವಭಾವವು ಇತರರಿಗೂ ಗೊತ್ತಾದೀತು.

ವೃಶ್ಚಿಕ ರಾಶಿ:

ಸ್ವಾವಲಂಬಿಯಾಗಲು ಎಲ್ಲ ರೀತಿಯಿಂದ ಪ್ರಯತ್ನಿಸುವಿರಿ. ಎಲ್ಲದಕ್ಕೂ ನೀವು ಇಂದು ಆಕರ್ಷಿತರಾಗುವಿರಿ. ಎಲ್ಲ ವಿಚಾರವನ್ನೂ ಆಮೂಲಾಗ್ರವಾಗಿ ತಿಳಿಯಬೇಕು ಎಂಬ ಹಂಬಲವಿರುವುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಗಿಸಿ ಕಾರ್ಯದಲ್ಲಿ ತೊಡಗುವರು. ಯಾರ ಮಾತನ್ನೂ ಕೇಳದೇ ಸ್ವೇಚ್ಛೆಯಾಗಿ ಇರುವುದು ನಿಮಗೆ ಇಷ್ಟದ ಸಂಗತಿಯಾಗಲಿದೆ. ಚಿತ್ತವನ್ನು ಸಮಾಧಾನದಲ್ಲಿ ಇಟ್ಟುಕೊಳ್ಳುವುದು ಉತ್ತಮ.

ಧನು ರಾಶಿ:

ವ್ಯವಹಾರದಲ್ಲಿ ನಿಮಗೆ ಇಂದು ನಿಮಗೆ ನಿಂದನೆ ಸಿಗಬಹುದು. ಇಂದು ನಿಮಗೆ ಶ್ರೇಷ್ಠವ್ಯಕ್ತಿಗಳ ಸಹವಾಸ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಇಂದು ಬಂಧುಗಳು ನಿಮ್ಮ ಮನೆಯಲ್ಲಿ‌ ಇರುವರು. ದುರಭ್ಯಾಸದಿಂದ ದೂರವಿರುವುದು ಉತ್ತಮ. ಉಪಕಾರದ ಸ್ಮರಣೆಯು ನಿಮ್ಮಲ್ಲಿ ಇರದು. ಚಂಚಲವಾದ ಮನಸ್ಸನ್ನು ಒಮ್ಮೆಲೇ ಪಕ್ವಗೊಳ್ಳದು. ನಿಮ್ಮ ವಿದ್ಯೆಯನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳುವಿರಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಬಹುದು.

ಮಕರ ರಾಶಿ:

ಒತ್ತಡವನ್ನು ಪರಿಹರಿಸಿಕೊಳ್ಳಲು ದೂರದ ಊರಿಗೆ ಹೋಗುವಿರಿ. ವಿವಾಹಕ್ಕೆ ಬೇಕಾದ ತಯಾರಿಯಲ್ಲಿ ನೀವಿರುವಿರಿ. ಸಂಗಾತಿಯ‌ ಜೊತೆ ಪ್ರಯಾಣವನ್ನು ಇಚ್ಛಿಸುವಿರಿ. ಅನುಭವಿ ವ್ಯಕ್ತಿಯ ಸಲಹೆ ನಿಮಗೆ ಪ್ರಯೋಜನ ಆಗುವುದು. ಯಂತ್ರ ನಡುವೆ ಇದ್ದು ಕಾರ್ಯ ಹೆಚ್ಚು ಮಾಡುವಿರಿ. ಸಣ್ಣ ವಿಚಾರಗಳ ಬಗ್ಗೆ ಗಮನವಿರದು. ಅದೇ ದೊಡ್ಡದಾಗಬಹುದು. ತಂದೆಯ ಪ್ರೀತಿ ಸಿಗಲಿದೆ. ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಬರುವುದು.

ಕುಂಭ ರಾಶಿ:

ಹೊಸಬರನ್ನು ಪರಿಚಯಿಸಿಕೊಳ್ಳುವ ಹಂಬಲವು ಇರುವುದು. ನಿಮ್ಮ ಮೇಲೆ‌ ಕೆಟ್ಟ ದೃಷ್ಟಿಯು ಬೀಳುವ ಸಾಧ್ಯತೆ ಇದೆ. ವಿಶೇಷ ಕಾರ್ಯವನ್ನು ಪೂರ್ಣಗೊಳಿಸುವುದರ ಮೇಲೆ ಭವಿಷ್ಯ ಇರುತ್ತದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಿಮ್ಮ ಜೊತೆಗಾರನ್ನು ಗುರುತಿಸಿಕೊಳ್ಳುವುದು ಕಷ್ಟ. ಮನಸ್ಸಿನ‌ ಏಕಾಗ್ರತೆ ಕೆಡಬಹುದು. ಸರಳವಾದುದನ್ನು ಕ್ಲಿಷ್ಟ ಮಾಡಿಕೊಳ್ಳುವಿರಿ.

ಮೀನ ರಾಶಿ:

ಹೂಡಿಕೆ ಮಾಡಲು ಬಯಸಿದರೆ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಬಹುದು. ನಿಮ್ಮ ಸಹೋದರರೊಂದಿಗಿನ ನಿಮ್ಮ ಸಂಬಂಧವು ಹಾಳಾಗಲು ಬಿಡಬೇಡಿ. ಸ್ವಂತ ವಾಹನದ ಬಗ್ಗೆ ನಿಮಗೆ ಮೋಹವು ಹೆಚ್ಚಾಗುವುದು. ಯಾರದೋ ಮಾತಿನ ಆಧಾರದ ಮೇಲೆ ನಿಮಗೆ ನಂಬಿಕೆ ಬಾರದು. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಬಯಸುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಧೃತಿ, ಕರಣ : ಗರಜ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 31 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:58 – 18:31, ಯಮಗಂಡ ಕಾಲ 12:20 – 13:53, ಗುಳಿಕ ಕಾಲ 15:25 – 16:58

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us