Gemini Personality Horoscope: ಮಿಥುನ ರಾಶಿಯವರ ವ್ಯಕ್ತಿತ್ವ ಹೇಗಿರಲಿದೆ? ನಿಮಗೆ ಗೊತ್ತಾದರೆ ಅಚ್ಚರಿಪಡುವುದು ಖಂಡಿತಾ..!

ಮಿಥುನ ರಾಶಿಯಲ್ಲಿ ಜನಿಸಿದ ಪುರುಷರಿಗೆ ಸ್ತ್ರೀಯರಲ್ಲಿ ಆಸಕ್ತಿ ಹೆಚ್ಚು. ಸ್ತ್ರೀಯರಿಗೆ ಪುರುಷರಲ್ಲಿ ಆಸಕ್ತಿ ಅಧಿಕವಾಗಿರುತ್ತದೆ. ಎಲ್ಲ‌ ಕಾರ್ಯಗಳನ್ನು ಬಲ್ಲವನಾಗುವನು. ಮಾತ್ರವಲ್ಲ ಅದನ್ನು ಮಾಡುವ ರೀತಿಯೂ ಚೆನ್ನಾಗಿ ಗೊತ್ತಾಗುವುದು. ‌ಬಹಳ ಕುಶಲತೆಯಿಂದ ಎಲ್ಲವನ್ನೂ ಮಾಡುವರು.

Gemini Personality Horoscope: ಮಿಥುನ ರಾಶಿಯವರ ವ್ಯಕ್ತಿತ್ವ ಹೇಗಿರಲಿದೆ? ನಿಮಗೆ ಗೊತ್ತಾದರೆ ಅಚ್ಚರಿಪಡುವುದು ಖಂಡಿತಾ..!
ಮಿಥುನ ರಾಶಿ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Digi Tech Desk

Updated on:Jul 15, 2024 | 12:57 PM

ಜ್ಯೋತಿಷ್ಯ ಶಾಸ್ತ್ರವು ಕಣ್ಣಿನಂತೆ. ನಮ್ಮ ಜೀವನವನ್ನು ನೋಡಲು ಅತ್ಯುಪಯುಕ್ತ ವಿದ್ಯೆ ಇದು. ಹಿಂದಿನವರು ತಮ್ಮ ಬದುಕನ್ನು ಇದೆಲ್ಲದರ ಆಧಾರದ ಮೇಲೆ ನಿರ್ಮಿಸಿಕೊಳ್ಳುತ್ತಿದ್ದರು. ಹನ್ನೆರಡು ರಾಶಿಗಳು, ಒಂಭತ್ತು ಗ್ರಹಗಳು, ಇಪ್ಪತ್ತೇಳು ನಕ್ಷತ್ರಗಳಲ್ಲಿ ಬದುಕನ್ನು ಕಟ್ಟಿಕೊಳ್ಳುವ ಬಗೆ ಭಾರತೀಯರದ್ದು.

ರಾಶಿ ಚಕ್ರದ ಮೂರನೇ ರಾಶಿ ಮಿಥುನ ರಾಶಿ. ಈ ರಾಶಿಯ ಸ್ವರೂಪ ಒಬ್ಬ ಪುರುಷ ಹಾಗೂ ಒಬ್ಬಳು ಸ್ತ್ರೀ. ಪುರುಷನು ಕೈಯಲ್ಲಿ ಗದೆ ಇದೆ. ಸ್ತ್ರೀಯ ಕೈಯಲ್ಲಿ ವೀಣೆ. ಇದರ ಅಧಿಪತಿ ಬುಧ. ಬುಧನು ಚಂದ್ರನ ಮಗನೆಂದು ಪ್ರಸಿದ್ಧ. ಹಾಗಾಗಿಯೇ ಬುಧನಿಗೆ ಸೌಮ್ಯ ಎಂದು ಕರೆಯುವುದು. ಸೋಮನ ಮಗ ಎಂದರ್ಥ. ಈ ಬುಧನು ಚಂದ್ರನಿಗೆ ಸಮಾನನಾಗಿರುವನು. ಆದರೆ ಚಂದ್ರನು ಬುಧನಿಗೆ ಶತ್ರುವಾಗಿರವನು. ಹಾಗಾಗಿ‌ ಇದು ಒಂದು ಕಡೆಯಿಂದ ಸಕಾರಾತ್ಮಕ ಹಾಗೂ ಮತ್ತೊಂದು‌ ಕಡೆಯಿಂದ ನಕಾರಾತ್ಮಕವಾಗಿ ಇರಲಿದೆ.

ಈ ರಾಶಿಯಲ್ಲಿ ಜನಿಸಿದ ಪುರುಷರಿಗೆ ಸ್ತ್ರೀಯರಲ್ಲಿ ಆಸಕ್ತಿ ಹೆಚ್ಚು. ಸ್ತ್ರೀಯರಿಗೆ ಪುರುಷರಲ್ಲಿ ಆಸಕ್ತಿ ಅಧಿಕವಾಗಿರುತ್ತದೆ.

ಎಲ್ಲ‌ ಕಾರ್ಯಗಳನ್ನು ಬಲ್ಲವನಾಗುವನು. ಮಾತ್ರವಲ್ಲ ಅದನ್ನು ಮಾಡುವ ರೀತಿಯೂ ಚೆನ್ನಾಗಿ ಗೊತ್ತಾಗುವುದು. ‌ಬಹಳ ಕುಶಲತೆಯಿಂದ ಎಲ್ಲವನ್ನೂ ಮಾಡುವರು.

ಯಾವುದಾದರೊಂದು ವಿದ್ಯೆಯಲ್ಲಿ‌ ವಿಶೇಷ ಪಾಂಡಿತ್ಯವುಳ್ಳವನಾಗುವನು. ದೂತ ಕಾರ್ಯವನ್ನು ನಿಷ್ಣಾತನಾಗಿ ನಿರ್ವಹಿಸುವನು. ವ್ಯವಹಾರದಲ್ಲಿ ಚುರುಕಾದ ಬುದ್ಧಿಯುಳ್ಳವರಾಗುವರು. ಇನ್ನೊಬ್ಬರ ಸ್ವಭಾವವನ್ನು ಅರಿಯುವ ವಿದ್ಯೆಯನ್ನು ತಾನಾಗಿಯೇ ಒಲಿಸಿಕೊಳ್ಳುವರು‌.

ಹಾಸ್ಯ ಸ್ವಭಾವವು ಇವರಲ್ಲಿ ಅಧಿಕ.‌ ಎಲ್ಲವನ್ನೂ ತಮಾಷೆಯಾಗಿ ನೋಡುವರು.‌ ಗಂಭೀರವಾದ ವಿಚಾರಗಳು ಇವರ ತಲೆಗೆ ಸುಲಭಕ್ಕೆ ಹೋಗದು. ಹೋದರೂ ಅದು ಹಾಸ್ಯವಾಗಿ ಪರಿವರ್ತನೆಯಾಗುವುದು.

ದುರಭ್ಯಾಸದಲ್ಲಿ ಆಸಕ್ತಿ ಹೆಚ್ಚಿರುವುದು. ಆಕರ್ಷಕ ರೂಪವನ್ನು ಹೊಂದಿರುವರು. ಎಲ್ಲರೂ ಮೆಚ್ಚುವಂತೆ ಮಾತನಾಡುವರು. ಅಷ್ಟೇ ಅಲ್ಲದೇ ಹೆಚ್ಚು ಆಹಾರವನ್ನು ತಿನ್ನುವರು ಅಥವಾ ಸದಾ ತಿನ್ನವ ಕಡೆ ಮನಸ್ಸಿರುವುದು.‌ ಹೊಸ ರುಚಿಗಳ ಬಗ್ಗೆ ಆಸಕ್ತಿ ಇರುವುದು.

ಸಂಗೀತ ವಾದ್ಯ ನೃತ್ಯ ಮುಂತಾದ ಕಲೆಗಳನ್ನು ಇಷ್ಟಪಡುವರು ಅಥವಾ ಕಲಿಯುವ ಹವ್ಯಾಸವಿರುವುದು. ಇವರು ಅಪುಂಸಕರ ಸಹವಾಸವನ್ನು ಹೆಚ್ಚು ಮಾಡುವರು.

ಇದನ್ನೂ ಓದಿ: ವೃಷಭ ರಾಶಿಯಲ್ಲಿ ಜನಿಸಿದ್ದೀರಾ ನೀವು? ಹಾಗಾದರೆ ನೀವು ಹೀಗಿರುವಿರಿ…!

ಇದೆಲ್ಲವನ್ನೂ ವಿಶೇಷವಾಗಿ ಆರ್ದ್ರಾ ನಕ್ಷತ್ರದಲ್ಲಿ‌ ಜನಿಸಿದ ವ್ಯಕ್ತಿಗಳಲ್ಲಿ ನೋಡಲು ಸಾಧ್ಯ. ಚಂದ್ರನು ತಮ್ಮ ಸಂಚಾರ ಕಾಲದಲ್ಲಿ ಮಿಥುನ ರಾಶಿಗೆ ಬಂದಾಗ ಕೆಲವನ್ನು ಉಂಟುಮಾಡಿಸುವನು.

– ಲೋಹಿತ ಹೆಬ್ಬಾರ್ – 8762924271

Published On - 12:49 pm, Mon, 15 July 24

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ