AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 28 April: ಇಂದು ಈ ರಾಶಿಯವರು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು

Daily Horoscope, 28 April 2026: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ಏಕಾದಶೀ ತಿಥಿಯ ಮಂಗಳವಾರದಂದು ಆರ್ಥಿಕ ನಷ್ಟ, ಗೌಪ್ಯತೆ, ಉದ್ಯೋಗದಲ್ಲಿ ಭೀತಿ, ಪಶ್ಚಾತ್ತಾಪ, ಕುಟುಂಬದ ಮೇಲೆ ಪ್ರೀತಿ, ಬಂಧನದಿಂದ ರಕ್ಷಣೆ, ಇದೆಲ್ಲ ಈ ದಿನದ ವಿಶೇಷ.

Horoscope Today 28 April: ಇಂದು ಈ ರಾಶಿಯವರು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Apr 28, 2026 | 2:00 AM

Share

ಇಂದಿನ ಪಂಚಾಂಗ

ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಗಂಡ, ಕರಣ : ಬವ, ಸೂರ್ಯೋದಯ – 06 – 04 am, ಸೂರ್ಯಾಸ್ತ – 06 – 39 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:31 – 17:05, ಯಮಗಂಡ ಕಾಲ 09:13 – 10:48, ಗುಳಿಕ ಕಾಲ 12:22 – 13:56

ಮೇಷ ರಾಶಿ:

ಸಾಮಾಜಿಕ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಎಲ್ಲ ಬೇಸರಕ್ಕೂ ಅನ್ಯರೇ ಕಾರಣವಾಗಿರಲು ಸಾಧ್ಯವಿಲ್ಲ. ಹಣದ ಅಭಾವವನ್ನು ಹೇಳಿಕೊಳ್ಳಲಾರಿರಿ. ನಿಮ್ಮನ್ನು ಯಾರಾದರೂ ಬಂಧುಗಳು ಮಾತನಾಡಸಲು ಬರಬಹುದು. ಎಲ್ಲರೂ ನಾನಾ ಪ್ರಶ್ನೆಗಳನ್ನು ಕೇಳುವರು. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು. ಸೌಂದರ್ಯ ಇಂದು ಪ್ರಜ್ಞೆ ಹೆಚ್ಚು. ಹೂಡಿಕೆಯಲ್ಲಿ ನಿಮಗೆ ನಷ್ಟವಾಗಲಿದೆ. ಹೊಸ ವಸ್ತುಗಳನ್ನು ಖರೀದಸಲು ಹೋಗಿ ಸಮಯ ವ್ಯರ್ಥವಾಗುವುದು.‌

ವೃಷಭ ರಾಶಿ:

ನಿಮ್ಮ ಬುದ್ಧಿವಂತಿಕೆ ಹಾಗೂ ಪ್ರಬುದ್ಧತೆಯ ಕಾರಣಕ್ಕೆ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೀರಿ. ವ್ಯಥೆಗಳನ್ನು ಕಳೆಯಲು ಹೊಸ ಮಾರ್ಗವನ್ನು ಅನ್ವೇಷಿಸುವಿರಿ. ನಷ್ಟದ ಪ್ರಮಾಣಗಳು ಅಧಿಕವಾಗಬಹುದು. ಉದ್ಯಮದಲ್ಲಿ ಹಿನ್ನಡೆ ಇರಲಿದೆ. ಮರೆವಿನಿಂದ ನಿಮ್ಮ ವಸ್ತುಗಳು ಕಷ್ಟವಾಗಬಹುದು. ನಿಮ್ಮನ್ನು ಅರ್ಥಮಾಡಿಕೊಳ್ಳಲು ಸ್ನೇಹಿತರಿಗೆ ಕಷ್ಟವಾದೀತು. ನಿಮಗೆ ನಿಮ್ಮ ಸ್ವಭಾವವು ಬದಲಾಗಬೇಕಾದಂತೆ ಅನ್ನಿಸುವುದು.

ಮಿಥುನ ರಾಶಿ:

ತಾನು ಮಾಡಿದ್ದೇ ಸರಿ ಎಂಬ ಹುಂಬುತನ ಇರಲಿದೆ. ಸ್ವಂತ ವಿಮರ್ಶೆ ಮಾಡಿಕೊಂಡು, ಅಂತಿಮ ನಿರ್ಧಾರಕ್ಕೆ ಬನ್ನಿ. ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯವರಾಗುವಿರಿ. ನಿಮ್ಮನ್ನು ನೀವೇ ಬೈದುಕೊಳ್ಳುವ ಸ್ಥಿತಿ ಬರಬಹುದು. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು. ನಾನಾ ಪ್ರಕಾರದ ಖರ್ಚುಗಳಿಂದ ಇಂದಿನ ದಿನದ ಸಮಯವು ದುಬಾರಿ ಎನಿಸಬಹುದು. ನಿಮ್ಮ ಲಾಭಕ್ಕೆ ಪೂರಕವಾದ ಅವಕಾಶಗಳು ಸಿಗುತ್ತವೆ.

ಕರ್ಕಾಟಕ ರಾಶಿ:

ಯಾವುದಾದರೂ ಮುಖ್ಯ ದಾಖಲೆಯನ್ನು ಎಲ್ಲಿಯೋ ಎತ್ತಿಟ್ಟು, ಅದಕ್ಕಾಗಿ ವಿಪರೀತ ಹುಡುಕುವಂಥ ಸನ್ನಿವೇಶ ಸೃಷ್ಟಿಯಾಗುತ್ತದೆ. ನಿಮಗೆ ನಿಮ್ಮದೇ ಸರಿ ಎನಿಸುವುದು ಸಹಜ. ವಿದ್ಯುತ್ ಉಪಕರಣವನ್ನು ಹೆಚ್ಚು ಬಳಸುವಿರಿ. ವಾಹನವನ್ನು ಖರೀದಿಸುವ ಯೋಜನೆಯನ್ನು ಮುಂದೂಡುವುದು ಉತ್ತಮ. ಅನಾರೋಗ್ಯದ ಕಾರಣದಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆಗುವುದು. ಇಂದಿನ ಆರ್ಥಿಕತೆಯಿಂದ ನಿಮಗೆ ತೃಪ್ತಿ. ಆರ್ಥಿಕ ಚಿಂತೆಗಳು ಸಕಾರಾತ್ಮಕ ಮಾರ್ಗದಲ್ಲಿ ಇರಲಿ.

ಸಿಂಹ ರಾಶಿ:

ಯಾವುದೋ ನಿಶ್ಚಿತ ಮೂಲದಿಂದ ಹಣ ಬರುವ ಖಾತ್ರಿ ಸಿಕ್ಕು, ಹೆಚ್ಚಿನ ಖರ್ಚು ಮಾಡಲು ಮುಂದಾಗುತ್ತೀರಿ. ಎಲ್ಲವನ್ನೂ ನಿಮ್ಮ ನೇರಕ್ಕೇ ಆಗಬೇಕು ಎನ್ನುವುದು ಆಗದು. ನಿಮ್ಮ ಕಾರಣದಿಂದ ಕುಟುಂಬವು ಸಂಕಷ್ಟದಲ್ಲಿ ಸಿಕ್ಕಿಕೊಳ್ಳಬಹುದು. ನಿಮ್ಮ ಉಡುಗೊರೆಯಿಂದ ಸಂತೋಷವಾಗಲಿದೆ. ಬಂಧುಗಳು, ಸ್ನೇಹಿತರು ನಿಮ್ಮ ಸಮಯಪ್ರಜ್ಞೆಯನ್ನು ಮೆಚ್ಚುತ್ತಾರೆ. ಕಣ್ಣು ನೋವು ನಿಮ್ಮನ್ನು ಕಾಡಬಹುದು. ಕೆಲವನ್ನು ಅನುಭವಿಗಳ ಜೊತೆ ಚರ್ಚಿಸಿ ತೀರ್ಮಾನಿಸುವುದು ಒಳ್ಳೆಯದು.

ಕನ್ಯಾ ರಾಶಿ: 

ಕುಟುಂಬದ ಹಿರಿಯರ ಸಲಹೆ ಪಡೆದು, ಮುಖ್ಯ ಕೆಲಸಗಳಲ್ಲಿ ಮುಂದುವರಿಯಿರಿ. ಯಾರ ಜೊತೆಗೂ ವಾಗ್ವಾದ ನಡೆಸದಿರಿ. ಮಕ್ಕಳ ಭವಿಷ್ಯದ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಿರಿ. ನಿಮ್ಮ ಬಗ್ಗೆ ಇರುವ ಆಕ್ಷೇಪಗಳು ಎಲ್ಲವು ಮುರಿದು ಬೀಳಬಹುದು. ನ್ಯಾಯ ನೀತಿಯ ವಿರುದ್ಧ ನಡೆಯುವುದು ಬೇಡ. ವಿದ್ಯಾಭ್ಯಾಸದಲ್ಲಿ ಅಸ್ಥಿರತೆ ಕಾಡಬಹುದು. ನಿಮ್ಮ ವರ್ತನೆಗಳ ಬಗ್ಗೆ ಆಕ್ಷೇಪ ಬರಬಹುದು.

ತುಲಾ ರಾಶಿ:

ಹಣಕಾಸಿನ ಸಂಗತಿಗಳನ್ನು ಸಂಗಾತಿ ಜತೆಗೆ ಚರ್ಚಿಸಿ, ಅನಂತರ ಮುಂದಿನ ತೀರ್ಮಾನ ಕೈಗೊಳ್ಳಿ. ಅನಿವಾರ್ಯ ಸಂದರ್ಭದಲ್ಲೂ ಸುಳ್ಳು ಹೇಳಬೇಡಿ. ಶತ್ರುಗಳು ನಿಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ಮಕ್ಕಳನ್ನು ನೋಡಬೇಕೆನಿಸುವುದು. ಎಲ್ಲವನ್ನೂ ನೀವು ನಿಶ್ಚಯ ಮಾಡಿಕೊಳ್ಳಲು ಆಗದು. ಆಲಸ್ಯದಿಂದ ಹೊರಬರುವ ಮನಸ್ಸಾಹುವುದು. ಎರಡು ಮನಸ್ಸನ್ನು ಮಾಡಿಕೊಂಡು ಮುಂದುವರಿಯುವುದು ಬೇಡ.

ವೃಶ್ಚಿಕ ರಾಶಿ:

ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಒಂದು ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ. ನಿರೀಕ್ಷೆ ಮಾಡಿದಂತೆ ಆದಾಯ ಬರುವುದಿಲ್ಲ. ಆಲಸ್ಯದಿಂದ ಎಲ್ಲ ಕಾರ್ಯದಲ್ಲಿಯೂ ನಿರಾಸಕ್ತಿ ಇರಲಿದೆ. ಉದ್ಯೋಗದ ಹೊಸ ಸ್ಥಳದಲ್ಲಿ ಸ್ನೇಹಿತರಾಗುವರು. ವಿದ್ಯಾಭ್ಯಾಸದ ಹಿನ್ನಡೆಯು ನಿಮಗೆ ಅವಮಾನ ಎನಿಸುವುದು. ದುಃಸ್ವಪ್ನಗಳಿಂದ ನಿಮ್ಮ ಮನಸ್ಸು ವಿಕಾರವಾಗುವುದು. ಉನ್ನತ ವಿದ್ಯಾಭ್ಯಾಸದ ಚಿಂತೆ ಕಾಡಬಹುದು.

ಧನು ರಾಶಿ:

ಹೆಚ್ಚಿನ ಪ್ರತಿಫಲಾಪೇಕ್ಷೆ ಇಲ್ಲದೆ ನೀವು ಈ ಕೆಲಸವನ್ನು ಮಾಡಬೇಕಾಗುತ್ತದೆ. ಪ್ರಾಮಾಣಿಕತೆಯನ್ನು ಬಿಟ್ಟು ವ್ಯವಹಾರ ಮಾಡುವುದು ಬೇಡ. ಯಾವುದೇ ಆಕ್ಷೇಪ ಮಾಡಬೇಡಿ. ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗಬಹುದು. ಈ ದಿನ ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಬೇಕಾದೀತು. ಉದ್ಯೋಗದಲ್ಲಿ ಒತ್ತಡಗಳು ಇರುವುದುರಿಂದ ಕುಟುಂಬಕ್ಕೆ ಸಮಯವನ್ನು ಕೊಡಲಾಗದು. ಬಂಗಾರದ ಮೇಲೆ ಹೂಡಿಕೆ ಮಾಡುವಿರಿ. ಶಿಸ್ತಿನಿಂದ ನೀವು ವ್ಯವಹಾರವನ್ನು ಇಟ್ಟುಕೊಳ್ಳುವಿರಿ.

ಮಕರ ರಾಶಿ:

ನಿಮ್ಮಿಂದ ಸಾಧ್ಯವಾದಲ್ಲಿ ಅಗತ್ಯ ಇರುವ ಒಬ್ಬರಿಗೆ ಊಟದ ವ್ಯವಸ್ಥೆ ಮಾಡಿ. ಸಂಗಾತಿ ಮಕ್ಕಳ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಿ. ವಿದ್ಯಾಭ್ಯಾಸದ ಗಮನವು ಬೇರೆ ಕಡೆಗೆ ಹೋಗಬಹುದು. ಹಣಕಾಸಿನ‌ ವಿಚಾರದಲ್ಲಿ ಸಹೋದರನಿಂದ ಅಪವಾದ ಸಾಧ್ಯತೆ. ಶುಭ ಸುದ್ದಿಯು ನಿಮ್ಮನ್ನು ಪ್ರೋತ್ಸಾಹಿಸಬಹುದು. ಶತ್ರುಗಳ ಕಾಟಗಳು ನಿಮ್ಮ ಉತ್ಸಾಹವನ್ನು ಭಂಗ ಮಾಡಬಹುದು. ದೈವದ ಭೀತಿಯು ನಿಮ್ಮನ್ನು ಕಾಡಬಹುದು. ರಾಜಕಾರಣಿಗಳಿಂದ ನಿಮ್ಮ ಕೆಲಸವು ಪೂರ್ಣ.

ಕುಂಭ ರಾಶಿ:

ಸ್ವಂತ ವ್ಯಾಪಾರ, ವ್ಯವಹಾರ ಮಾಡುವವರಿಗೆ ಅಲ್ಪ ಹಿನ್ನಡೆ. ಪ್ರಯಾಣದಿಂದ ಆಗಬೇಕಾದ ಕೆಲಸವಾದರೂ ಆಯಾಸ ಕಾಡಬಹುದು. ಕಾರ್ಯ ಕ್ಷೇತ್ರದಲ್ಲಿ ಒತ್ತಡವಿರುವ ಕಾರಣ ಮನಸ್ಸಿಗೆ ಸಿಗಬೇಕಾದ ಶಾಂತಿಯ ಕೊರೆತೆಯೂ ಇರಲಿದೆ. ಹಳೆಯ ಸಾಲವನ್ನು ಮರುಪಡೆಯಲು ಸಾಧ್ಯವಾಗದು. ಉದ್ಯಮದಲ್ಲಿ ಪ್ರಗತಿಯನ್ನು ಕಂಡು ಖುಷಿಯಾಗುವುದು. ನಿಮಗೆ ಯಾರಿಂದಲೋ ರಕ್ಷಣೆ ಇದೆ ಎನ್ನಿಸಬಹುದು. ಮನೆಯಲ್ಲೂ ತಾಳ್ಮೆಯನ್ನು ಇಟ್ಟುಕೊಳ್ಳಿ. ನಂಬಿಕೆಯು ಹುಸಿಯಾಗುವುದು.

ಮೀನ ರಾಶಿ:

ಮಕ್ಕಳ ವ್ಯವಹಾರಕ್ಕೆ ಹಣಕಾಸು ನೆರವು ನೀಡಲು ಪ್ರಯತ್ನಿಸುತ್ತೀರಿ. ರಾಜಕೀಯದ ಪ್ರೇರಣೆಪಡೆಯುವ ಸಾಧ್ಯತೆ ಇದೆ. ಹಳೆಯ ವಾಹನಗಳ ಮಾರಾಟ ಮಾಡುವ ಬಗ್ಗೆ ಆಲೋಚನೆ ಬರುತ್ತದೆ. ಈ ಹಿಂದೆ ಷೇರು ಪೇಟೆಯಲ್ಲಿ ಮಾಡಿದ್ದ ಹೂಡಿಕೆಯನ್ನು ಹಿಂಪಡೆಯಲಿದ್ದೀರಿ. ಹೇಗಾದರೂ ಮಾಡಿ ಭಯವನ್ನು ದೂರ ಮಾಡಿಕೊಳ್ಳುವಿರಿ. ತೆಗಳಿಕೆಯನ್ನು ಛಲವಾಗಿ ತೆಗೆದುಕೊಳ್ಳುವಿರಿ. ಯಾರ ಮೇಲೂ ಅವಮಾನ ಬೇಡ.

-ಲೋಹಿತ ಹೆಬ್ಬಾರ್ – 8762924271 (what’s app only)

Follow Us