AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today– ದಿನ ಭವಿಷ್ಯ; ಶುಭ ಭಾನುವಾರದ ಭವಿಷ್ಯ; ಯಾರ್ಯಾರಿಗೆ ಶುಭ?

ಪ್ಲವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣಪಕ್ಷ, ತ್ರಯೋದಶಿ ತಿಥಿ, ಭಾನುವಾರ, ಮೇ 09, 2021 ದಿನ ಭವಿಷ್ಯ.

Horoscope Today– ದಿನ ಭವಿಷ್ಯ; ಶುಭ ಭಾನುವಾರದ ಭವಿಷ್ಯ; ಯಾರ್ಯಾರಿಗೆ ಶುಭ?
ದಿನ ಭವಿಷ್ಯ
ರಾಜೇಶ್ ದುಗ್ಗುಮನೆ
| Edited By: |

Updated on: May 09, 2021 | 6:41 AM

Share

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣಪಕ್ಷ, ತ್ರಯೋದಶಿ ತಿಥಿ, ಭಾನುವಾರ, ಮೇ 09, 2021. ರೇವತಿ ನಕ್ಷತ್ರ, ರಾಹುಕಾಲ: ಇಂದು ಸಂಜೆ 5:1 ಇಂದ ಇಂದು ಸಂಜೆ 6:37 ತನಕ.  ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.46. ಸೂರ್ಯಾಸ್ತ: ಸಂಜೆ 6.38.

ತಾ.09-05-2021 ರ ಭಾನುವಾರದ ರಾಶಿಭವಿಷ್ಯ

ಮೇಷ: ಉದ್ಯೋಗ ಪ್ರಾಪ್ತಿ, ಉದ್ಯಮದಲ್ಲಿ ಪ್ರಗತಿ ಇರುವದು. ಹಳೆಯ ಸಾಲ ತೀರುವದು. ಅನೇಕ ಮೂಲಗಳಿಂದ ಧನಪ್ರಾಪ್ತಿಯ ಯೋಗವಿದೆ. ಬಂಧುವರ್ಗದಲ್ಲಿಯ ಅಸಮಾಧಾನಗಳು ಪರಿಹಾರವಾಗುವವು. ಶುಭ ಸಂಖ್ಯೆ:  6

ವೃಷಭ: ನಿರೀಕ್ಷೆಗೆ ತಕ್ಕಂತೆ ಕೆಲಸ ಆಗದೇ ಮಾನಸಿಕ ಅಶಾಂತಿ ಕಂಡುಬರುವದು. ವ್ಯವಹಾರಗಳಲ್ಲಿ ಹಾನಿಯಾಗುವ ಭಯ ಇರುವದು. ಪರಿಣಿತರ ಅಥವಾ ಹಿರಿಯರ ಸಲಹೆಯಂತೆ ಮುಂದುವರೆಯಿರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲವಿದೆ. ಶುಭ ಸಂಖ್ಯೆ: 9

ಮಿಥುನ: ಆತುರತೆಯ ನಿರ್ಣಯಗಳು ಅಪಾಯ ತರಬಹುದು. ಆತ್ಮೀಯರೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅರ್ಧಕ್ಕೆನಿಂತ ಕೆಲಸಗಳು ಮುಂದುವರೆಯುವದು. ಸ್ವಸಾಮಥ್ರ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಶುಭ ಸಂಖ್ಯೆ: 5

ಕರ್ಕ: ಹಾನಿ ತಪ್ಪಿಸಲು ಪ್ರಯತ್ನಿಸುವಿರಿ. ಕಠಿಣ ಆತಂಕದಿಂದ ಪಾರಾಗುವಿರಿ. ಅಧಿಕಾರಿಗಳ ಉಪದ್ರವಕ್ಕೆ ಮಣಿಯದೇ ಡಿಟ್ಟತನದಿಂದ ಕೆಲಸ ನಿರ್ವಹಿಸಿ.ವ್ಯಾಪಾರವೃದ್ಧಿಯಾಗುವದು. ಆರ್ಥಿಕ ಸಂಕಷ್ಟ ದೂರಾಗುವದು. ಶುಭ ಸಂಖ್ಯೆ: 3

ಸಿಂಹ: ಗಣ್ಯರೊಂದಿಗೆ ವ್ಯವಹಾರಿಕ ಬಾಂಧವ್ಯ ವೃದ್ಧಿಯಾಗುವದು. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಶುಭ ಸಂಖ್ಯೆ: 9

ಕನ್ಯಾ: ತಪ್ಪುಗಳನ್ನು ಸಮರ್ಥಿಸುವದರಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ಅಧಿಕಾರಿಗಳ ಕಿರಿಕಿರಿಗೆ ಮಣಿಯದೇ ಧೈರ್ಯದಿಂದ ಕೆಲಸ ನಿರ್ವಹಿಸಿರಿ. ಮತ್ತೊಬ್ಬರ ಮೇಲೆ ಅತಿಯಾದ ವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ಶುಭ ಸಂಖ್ಯೆ: 1

ತುಲಾ: ಶತ್ರುಗಳ ಉಪಟಳವು ಆಗಾಗ ಕಂಡುಬಂದರೂ ಧೈರ್ಯದಿಂದ ಕಾರ್ಯ ಸಾಧಿಸುವಿರಿ. ಇಷ್ಟಸಿದ್ಧಿಯ ಕಾಲ ಇರುವದರಿಂದ ಅನೇಕ ರೀತಿಯ ಭೋಗಭಾಗ್ಯಗಳು ಕೂಡಿಬರಲಿವೆ. ಸಾಂಸಾರಿಕ ಸಮಸ್ಸಯೆಗಳು ಪರಿಹಾರವಾಗುವವು. ಶುಭ ಸಂಖ್ಯೆ: 7

ವೃಶ್ಚಿಕ: ಆಶೆ ಆಕಾಂಕ್ಷಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವದು. ಸಹೋದರ ಸಹಕಾರ ತೋರುವದರಿಂದ ನಿರಾತಂಕವಾಗಿ ಕಾರ್ಯ ಪೂರ್ಣವಾಗುವದು. ಮನೆಯಲ್ಲಿ ಸಂತಸದ ವಾತಾವರಣ ಇರುವದು. ಶುಭ ಸಂಖ್ಯೆ: 2

ಧನು: ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ. ಶುಭ ಸಂಖ್ಯೆ:  6

ಮಕರ: ಅನವಶ್ಯಕ ಅಲೆದಾಟದ ಸಾದ್ಯತೆ ಇದೆ. ಕರ್ತವ್ಯಕ್ಕೆ ಚ್ಯುತಿಯಾಗದಂತೆ ನಡೆದುಕೊಳ್ಳಲು ಪ್ರಯತ್ನ ಮಾಡುವಿರಿ. ಹಿತಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆÉ ಇದೆ. ಆರ್ಥಿಕಬಲ ಕುಗ್ಗುವ ಸಂಭವವಿದೆ. ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. ಶುಭ ಸಂಖ್ಯೆ: 3

ಕುಂಭ: ವ್ಯಾಪಾರದಲ್ಲಿ ಪ್ರಗತಿ ಇರುವದು. ವೈವಾಹಿಕ ತೊಂದರೆಗಳು ಪರಿಹಾರವಾಗುವವು. ಸಂಕುಚಿತ ಭಾವನೆ ಅಥವಾ ಸಂದೇಹಗಳಿಂದ ದೂರವಿರಿ. ಮನೆಯಲ್ಲಿ ಸಂತಸದ ವಾತಾವರಣ ಇರುವದು. ಶುಭ ಸಂಖ್ಯೆ:  4

ಮೀನ: ಮನೆ, ನಿವೇಶನ, ಆಸ್ತಿ ಖರೀದಿ ಯೋಗವಿದೆ. ವ್ಯವಹಾರದಲ್ಲಿ ಜಾಗ್ರತೆ ಇರಲಿ. ವ್ಯಾಪಾರ ಉತ್ತಮವಾಗಿರುವದು. ಉತ್ಸಾಹ ಮೂಡುವದು. ದೋಷ ಪರಿಹಾರಕ್ಕೆ ಜಲದಾನ ಮಾಡಿರಿ. ಶುಭ ಸಂಖ್ಯೆ: 8

Dina Bhavishya

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ