Horoscope Today- ದಿನ ಭವಿಷ್ಯ; ಈ ರಾಶಿಯವರ ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ

Horoscope ಅಕ್ಟೋಬರ್ 04, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today- ದಿನ ಭವಿಷ್ಯ; ಈ ರಾಶಿಯವರ ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ
ದಿನ ಭವಿಷ್ಯ
Follow us
TV9 Web
| Updated By: preethi shettigar

Updated on: Oct 04, 2021 | 6:32 AM

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ವರ್ಷ ಋತು, ಕೃಷ್ಣಪಕ್ಷ, ತ್ರಯೋದಶಿ ತಿಥಿ, ಸೋಮವಾರ, ಅಕ್ಟೋಬರ್ 04, 2021. ಪುಬ್ಬೆ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 7.35 ರಿಂದ ಇಂದು ಬೆಳಿಗ್ಗೆ 9.04ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.06. ಸೂರ್ಯಾಸ್ತ: ಸಂಜೆ 6.03

ತಾ.04-10-2021 ರ ಸೋಮವಾರದ ರಾಶಿಭವಿಷ್ಯ.

ಮೇಷ: ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ. ಅಕಾಲಿಕ ಒತ್ತಡಗಳಿಂದ ಕಾರ್ಯಹಾನಿ. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವುದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಶುಭ ಸಂಖ್ಯೆ: 6

ವೃಷಭ: ಕೆಲಸಕ್ಕೆ ತಕ್ಕ ಪ್ರೋತ್ಸಾಹ ದೊರೆಯುವುದು. ಶಾಂತಿ, ನೆಮ್ಮದಿಯುಕ್ತ ಜೀವನ ಇರುವುದು. ನಡೆಯುತ್ತಿರುವ ದಾರಿ ಸರಿಯಾಗಿ ಇರುವುದರಿಂದ ಗುರಿ ಮುಟ್ಟುವುದು ನಿಶ್ಚಿತ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುವುದು. ಶುಭ ಸಂಖ್ಯೆ: 9

ಮಿಥುನ: ಕಾಯಕನಿಷ್ಠೆ ನಿಮಗೇ ಹೊರೆಯಾಗದಂತೆ ನೋಡಿಕೊಳ್ಳಿರಿ. ನಿರಂತರ ದುಡಿಮೆಯಿಂದ ಅನಾರೋಗ್ಯ ಅಥವಾ ಮಾನಸಿಕ ಕಿರಿಕಿರಿ ಆಗುವ ಸಂಭವವಿದೆ. ಹಣಕಾಸಿನಿನ ವ್ಯವಹಾರದಲ್ಲಿ ಎಚ್ಚರಿಕೆವಹಿಸಿರಿ. ಶುಭ ಸಂಖ್ಯೆ: 1

ಕಟಕ: ವ್ಯಾಪಾರದಲ್ಲಿ ಅಭಿವೃದ್ಧಿಯಾಗುವದು. ಆರ್ಥಿಕ ಸಂಕಷ್ಟಗಳು ಪರಿಹಾರವಾಗುವವು. ಮಹಿಳೆಯರಿಗೆ ಹೆಚ್ಚಿನ ಉನ್ನತಿ ಕಂಡುಬರುವದು.ಅನಾವಶ್ಯಕ ಖರ್ಚಿನ ಸಾಧ್ಯತೆ ಇದೆ. ಶುಭ ಸಂಖ್ಯೆ: 8

ಸಿಂಹ: ಅಗೌರವ ಆಗುವ ಸಂಭವ ಇರುವುದರಿಂದ ಸೂಕ್ಷ್ಮವಾಗಿರುವದು ಉತ್ತಮ. ಅನಪೇಕ್ಷಿತರಿಗೆ ಉಪಕಾರ ಮಾಡುವುದು ಸರಿಯಲ್ಲ. ಮಕ್ಕಳ ಚಿಂತೆ ಇರುವುದು. ವಧುವರರಿಗೆ ಮದುವೆಯ ಯೋಗ ಕೂಡಿಬರುವುದು. ಶುಭ ಸಂಖ್ಯೆ: 2

ಕನ್ಯಾ: ಆರೋಗ್ಯಕ್ಕೆ ಸಂಬಂಧಿಸಿದ ವಿಪತ್ತಿನಿಂದ ಪಾರಾಗುವಿರಿ. ಕಷ್ಟದ ಸಮಯದಲ್ಲಿಯೂ ಸಂಯಮ ಕಳೆದುಕೊಳ್ಳದೇ ಮುಂದುವರೆಯುವಿರಿ. ಉದ್ಯೋಗದಲ್ಲಿ ವರ್ಗಾವಣೆಯ ಯೋಗವಿದೆ. ಆರ್ಥಿಕಬಲ ಕುಗ್ಗುವ ಸಂಭವವಿದೆ. ಶುಭ ಸಂಖ್ಯೆ: 5

ತುಲಾ: ಮಾನಸಮ್ಮಾನಗಳು ದೊರೆಯುವವು. ಕಂಕಣಬಲ ಕೂಡಿಬರುವುದು. ಮನೋಭಿಲಾಷೆಗಳು ಈಡೇರುವವು. ಆದರೆ ಉದ್ಯೋಗದಲ್ಲಿ ನಿರಾಸಕ್ತಿಯನ್ನು ಇರುವುದು ಮತ್ತು ವ್ಯವಹಾರದಲ್ಲಿ ಅಸಮಾಧಾನ ಕಂಡುಬರುವುದು. ಶುಭ ಸಂಖ್ಯೆ: 7

ವೃಶ್ಚಿಕ: ಮನಸ್ಸು ಚಂಚಲವಾಗಿ ಮಾಡುವ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ. ಕಷ್ಟಕಾಲದಲ್ಲಿಯೂ ಪರೋಪಕಾರದ ಬುದ್ಧಿ ತೋರುವಿರಿ. ಸಹಕಾರಿ ವಲಯದದಲ್ಲಿ ಅಪೇಕ್ಷಿತ ಲಾಭ ದೊರೆಯುವದು. ವಿದೇಶ ಪ್ರಯಾಣದ ಯೋಗವಿದೆ. ಶುಭ ಸಂಖ್ಯೆ: 3

ಧನು: ವೃತ್ತಿಪರೆತೆಯಿಂದ ಕಾರ್ಯ ಕೈಗೂಡುವುದು. ಪರಿವಾರದೊಂದಿಗೆ ದೂರ ಪ್ರವಾಸದ ಯೋಗವಿದೆ. ಉತ್ತಮವಾದ ಸಮಯ ಇರುವದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು. ಶುಭ ಸಂಖ್ಯೆ: 9

ಮಕರ: ಸಜ್ಜನರಲ್ಲಿ ಮನಸ್ತಾಪ. ದೇಹಾರೋಗ್ಯವೂ ಸರಿಯಿರದೆ ತಾಪದಾಯಕವಾಗುತ್ತದೆ. ಆದರೆ ಶ್ರೇಷ್ಠ ಜನರಿಂದ ಪುರಸ್ಕಾರ. ಸಾಂಸಾರಿಕ ದೃಷ್ಟಿಯಲ್ಲೂ ತೃಪ್ತಿದಾಯಕವಿದ್ದು ನೆಮ್ಮದಿ ಉಂಟಾಗುತ್ತದೆ. ಶುಭ ಸಂಖ್ಯೆ: 3

ಕುಂಭ: ವ್ಯವಹಾರಿಕ ಏಳ್ಗೆ ಇರುವುದು. ದೂರ ಪ್ರಯಾಣದ ಸಂಭವ. ಗುಪ್ತ ಧನ, ಲಾಟರಿ, ವ್ಯಾಪಾರದಲ್ಲಿ ಬೆಲೆಗಳ ಹೆಚ್ಚಳದಿಂದ ಲಾಭ. ವಿವಿಧ ಸೌಭಾಗ್ಯಪ್ರಾಪ್ತಿ. ಅನಾವಶ್ಯಕ ಮಾತು, ಸಿಟ್ಟು, ಅಹಂಕಾರದಿಂದ ಹಾಗೂ ಅಗ್ನಿ, ವಿದ್ಯುತ್, ವಾಹನ, ಮಶಿನರಿಗಳಿಂದ ತೊಂದರೆ. ಶುಭ ಸಂಖ್ಯೆ: 5

ಮೀನ: ದೂರ ಪ್ರಯಾಣದ ಅವಶ್ಯಕತೆ ಕಂಡುಬರುವುದು. ಗುಪ್ತ ಧನ, ಲಾಟರಿ, ವ್ಯಾಪಾರದಲ್ಲಿ ಬೆಲೆಗಳ ಹೆಚ್ಚಳದಿಂದ ಲಾಭ. ಅನೇಕ ರೀತಿಯ ಸೌಭಾಗ್ಯಗಳು ದೊರೆಯುವವು. ಅನಾವಶ್ಯಕ ಮಾತು, ಸಿಟ್ಟು, ಅಹಂಕಾರದಿಂದ ಹಾಗೂ ಅಗ್ನಿ, ವಿದ್ಯುತ್, ಮಶಿನರಿಗಳಿಂದ ತೊಂದರೆ ಸಾಧ್ಯತೆ. ಶುಭ ಸಂಖ್ಯೆ: 6

Dina Bhavishya

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937

ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್