Horoscope Today- ದಿನ ಭವಿಷ್ಯ; ಸಿಂಹ ರಾಶಿಯವರಿಗೆ ನಿರೀಕ್ಷೆಗೆ ತಕ್ಕಂತೆ ಕೆಲಸ ಆಗದೇ ಮಾನಸಿಕ ಅಶಾಂತಿ ಕಂಡುಬರುವುದು

Horoscope ಅಕ್ಟೋಬರ್ 08, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today- ದಿನ ಭವಿಷ್ಯ; ಸಿಂಹ ರಾಶಿಯವರಿಗೆ ನಿರೀಕ್ಷೆಗೆ ತಕ್ಕಂತೆ ಕೆಲಸ ಆಗದೇ ಮಾನಸಿಕ ಅಶಾಂತಿ ಕಂಡುಬರುವುದು
ದಿನ ಭವಿಷ್ಯ
Follow us
TV9 Web
| Updated By: ಆಯೇಷಾ ಬಾನು

Updated on:Oct 08, 2021 | 6:52 AM

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಆಶ್ವಯುಜ ಮಾಸ, ಶರದೃತು, ಶುಕ್ಲಪಕ್ಷ, ಬಿದಿಗೆ ತಿಥಿ, ಶುಕ್ರವಾರ, ಅಕ್ಟೋಬರ್ 08, 2021. ಸ್ವಾತಿ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 10.34 ರಿಂದ ಇಂದು ಬೆಳಿಗ್ಗೆ 12.03ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.07. ಸೂರ್ಯಾಸ್ತ: ಸಂಜೆ 5.59

ತಾ.08-10-2021 ರ ಶುಕ್ರವಾರದ ರಾಶಿಭವಿಷ್ಯ.

ಮೇಷ: ವಿನಾಕಾರಣ ನಿಂದೆಯ ಸಂಭವವಿದೆ. ಖರ್ಚುಹೆಚ್ಚಾಗುವುದು ಯೋಗ ಇರುವುದರಿಂದ ಉಳಿತಾಯದ ಯೋಜನೆ ಮಾಡಿರಿ. ಮನೆಯಲ್ಲಿ ಶಾಂತಿಯುತ ನೆಮ್ಮದಿಯ ವಾತಾವರಣ ಇರುವದು. ಶುಭ ಸಂಖ್ಯೆ: 9

ವೃಷಭ: ಮನಸ್ಸು ಹಿಡಿತದಲ್ಲಿರಲಿ. ಎಷ್ಟು ಪ್ರಯತ್ನಿಸಿದರೂ ಸಮಸ್ಯೆಗಳಿಗೆ ಪರಿಹಾರ ದೊರೆಯದೇ ಕ್ಲೇಷ ಉಂಟಾಗುವುದು. ತೋರಿಕೆಯ ಸ್ವಭಾವದಿಂದ ದೃಷ್ಟಿದೋಷ ಆಗುವ ಸಾಧ್ಯತೆ ಇದೆ. . ಶುಭ ಸಂಖ್ಯೆ: 1

ಮಿಥುನ: ಶುಭಫಲಗಳು ಕಂಡುಬರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಕೌಟುಂಬಿಕ ಸಮಸ್ಯಗಳು ದೂರಾಗುವವು. ಕೊಟ್ಟಸಾಲ ಪಾವತಿಯಾಗುವುದು. . ಶುಭ ಸಂಖ್ಯೆ: 2

ಕಟಕ: ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಅನವಶ್ಯಕ ಭಯ ಅಗತ್ಯವಿಲ್ಲ, ನಿಮ್ಮ ಸೇವೆ ಫಲ ನೀಡುವದು. ಸಂಕಷ್ಟದ ಮಧ್ಯೆಯೂ ಸಂತೋಷದ ದಿನಗಳಿವೆ. ಆಗಂತುಕರೊಂದಿಗೆ ಜಾಗೃತೆ ಅಗತ್ಯ. . ಶುಭ ಸಂಖ್ಯೆ: 8

ಸಿಂಹ: ನಿರೀಕ್ಷೆಗೆ ತಕ್ಕಂತೆ ಕೆಲಸ ಆಗದೇ ಮಾನಸಿಕ ಅಶಾಂತಿ ಕಂಡುಬರುವುದು. ವ್ಯವಹಾರಗಳಲ್ಲಿ ಹಾನಿಯಾಗುವ ಭಯ ಇರುವುದು. ಪರಿಣಿತರ ಅಥವಾ ಹಿರಿಯರ ಸಲಹೆಯಂತೆ ಮುಂದುವರೆಯಿರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲವಿದೆ. ಶುಭ ಸಂಖ್ಯೆ: 3

ಕನ್ಯಾ: ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವುದು. ಉನ್ನತ ವ್ಯಾಸಂಗದ ಯೋಗವಿದೆ. ವಿದೇಶಗಮನ, ವ್ಯವಹಾರಿಕ ತಿರುಗಾಟದ ಸಾಧ್ಯತೆ ಇದೆ. ಶತ್ರುಬಾಧೆ ಕಂಡುಬರುವುದು. ಆರೋಗ್ಯದ ಮೇಲೆ ನಿಗಾ ಇರಲಿ. ಶುಭ ಸಂಖ್ಯೆ: 5

ತುಲಾ: ಎಲ್ಲವನ್ನು ಹಗುರವಾಗಿ ಕಾಣುವುದರಿಂದ ಸಣ್ಣ ವಿಷಯವೂ ದೊಡ್ಡ ಸಮಸ್ಯೆಯಾಗುವುದು. ಹಣಕಾಸಿನ ತೊಂದರೆಗಳು ಕಂಡುಬರುವವು. ಮಹತ್ವದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಎಚ್ಚರಿಕೆ ವಹಿಸಿರಿ. ಶುಭ ಸಂಖ್ಯೆ: 6

ವೃಶ್ಚಿಕ: ಬಂಧುವರ್ಗದಲ್ಲಿ ನಕಾರಾತ್ಮಕ ಚಿಂತನೆ ಇರುವುದು. ಸತತ ಪ್ರಯತ್ನವಿಲ್ಲದೇ ಫಲ ದೊರೆಯಲಾರದು. ದಿನನಿತ್ಯದ ಕೆಲಸಕ್ಕೂ ವಿನಾಕಾರಣ ಅಡೆತಡೆ ಕಂಡುಬರುವ ಲಕ್ಷಣವಿದೆ. ಬುದ್ದಿಯಿಂದ ತಾಳ್ಮೆಕಳೆದುಕೊಳ್ಳದೇ ಮುಂದುವರೆಯಿರಿ. ಶುಭ ಸಂಖ್ಯೆ: 1

ಧನು: ಮನಸ್ಸಿನಂತೆಯೇ ಎಲ್ಲ ಕೆಲಸಗಳೂ ಪೂರ್ಣವಾಗುವವು. ಉದ್ಯೋಗಸ್ಥಾನದಲ್ಲಿ ಕಾರ್ಯಭಾರ ಹೆಚ್ಚುವದು. ಆಸ್ತಿ ಸಂಬಂಧಿತ ವಿಷಯದಲ್ಲಿ ವಂಚನೆಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ಕಾರ್ಯಗಳು ನೆರವೇರುವವು. ಶುಭ ಸಂಖ್ಯೆ: 7

ಮಕರ: ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ. ಶುಭ ಸಂಖ್ಯೆ: 9

ಕುಂಭ: ಆರೋಗ್ಯಪೂರ್ಣತೆ, ಪ್ರಸನ್ನತೆ ಇರುವದು. ಎಲ್ಲ ಕಾರ್ಯಗಳೂ ತಮ್ಮ ಮನಸ್ಸಿನಂತೆ ನಡೆಯುವವು. ಧನಲಾಭ, ಧಾರ್ಮಿಕ ಕಾರ್ಯ, ದೇವತಾ ಕ್ಷೇತ್ರ ದರ್ಶನ ಯೋಗವಿರುವದು. ವ್ಯಾಪಾರ ಸಾಧಾರಣ. ಶುಭ ಸಂಖ್ಯೆ: 5

ಮೀನ: ಬಹುಜನರ ಪ್ರಶಂಸೆಗೆ ಪಾತ್ರವಾಗುವ ಆಡಳಿತಾತ್ಮಕ ನಿರ್ಧಾರ. ಇದ್ದಕ್ಕಿದಂತೆ ಶುಭಕರ ಒಲವು. ಸಲ್ಲುವ ವಿಚಾರದಲ್ಲಿ ಕುಟುಂಬದ ಒಗ್ಗಟ್ಟು ವೃದ್ಧಿ. ಆರ್ಥಿಕಾನೂಕೂಲದಿಂದ ಸರಳ ವ್ಯವಹಾರ. ಹೆಂಗಳೆಯರದು ಮೌನವಾದ ಕೆಲಸ. ಆದರೆ ಪರಿಣಾಮ ಜಾಸ್ತಿ. ಶುಭ ಸಂಖ್ಯೆ: 3

Dina Bhavishya

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937

Published On - 6:50 am, Fri, 8 October 21

ಪೊಲೀಸರು ಬಂಧಿಸಿರುವ ದುಷ್ಟವ್ಯಕ್ತಿ ಮಾನಸಿಕ ಅಸ್ವಸ್ಥನಲ್ಲ: ಕರ್ಣ
ಪೊಲೀಸರು ಬಂಧಿಸಿರುವ ದುಷ್ಟವ್ಯಕ್ತಿ ಮಾನಸಿಕ ಅಸ್ವಸ್ಥನಲ್ಲ: ಕರ್ಣ
ಕಾಶ್ಮೀರದಲ್ಲಿಂದು ಝಡ್​-ಮೋಡ್​ ಸುರಂಗ ಮಾರ್ಗ​ ಉದ್ಘಾಟಿಸಲಿದ್ದಾರೆ ಮೋದಿ
ಕಾಶ್ಮೀರದಲ್ಲಿಂದು ಝಡ್​-ಮೋಡ್​ ಸುರಂಗ ಮಾರ್ಗ​ ಉದ್ಘಾಟಿಸಲಿದ್ದಾರೆ ಮೋದಿ
ಚನ್ನಪಟ್ಟಣದದಲ್ಲಿ ನಿಖಿಲ್ ಸೋಲಿನಿಂದ ವಿಚಲಿತರಾಗಿರುವ ಜೆಡಿಎಸ್ ನಾಯಕರು
ಚನ್ನಪಟ್ಟಣದದಲ್ಲಿ ನಿಖಿಲ್ ಸೋಲಿನಿಂದ ವಿಚಲಿತರಾಗಿರುವ ಜೆಡಿಎಸ್ ನಾಯಕರು
ಕಿರುತೆರೆಯಲ್ಲಿ ಹಲವಾರು ಧಾರಾವಹಿಗಳನ್ನು ನಿರ್ದೇಶಿಸಿರುವ ಸರಿಗಮವಿಜಿ
ಕಿರುತೆರೆಯಲ್ಲಿ ಹಲವಾರು ಧಾರಾವಹಿಗಳನ್ನು ನಿರ್ದೇಶಿಸಿರುವ ಸರಿಗಮವಿಜಿ
ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು 7 ಮಂದಿಗೆ ಗಂಭೀರ ಗಾಯ
ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು 7 ಮಂದಿಗೆ ಗಂಭೀರ ಗಾಯ
ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ
ಇಂದು ಬನದ ಹುಣ್ಣಿಮೆ, ಈ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಇಂದು ಬನದ ಹುಣ್ಣಿಮೆ, ಈ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ