AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mars- Venus conjunction: ಕುಜ- ಶುಕ್ರ ಒಟ್ಟಾಗಿ ಏನೇನು ಸಮಸ್ಯೆ ತರುತ್ತಾರೋ? ಇನ್ನು ಮೂರ್ನಾಲ್ಕು ತಿಂಗಳು ಎಚ್ಚರ ಎಚ್ಚರ!

ಮಕರ ರಾಶಿಯಲ್ಲಿ ಈಗ ಶುಕ್ರ ಹಾಗೂ ಕುಜ ಗ್ರಹರು ಒಟ್ಟಿಗೆ ಇದ್ದು, ಇದರಿಂದ ದೇಶದಲ್ಲಿ ಆಗುವಂಥ ಪ್ರಭಾವ ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಅದಕ್ಕೂ ಮುನ್ನ ಜ್ಯೋತಿಷದ ಕೆಲವು ಪ್ರಾಥಮಿಕ ಸಂಗತಿಗಳನ್ನು ಸಹ ತಿಳಿಸಲಾಗಿದೆ. ಭವಿಷ್ಯ ನುಡಿಯುವುದು ಒಂದು ಭಾಗವಾದರೆ, ಹಾಗೆ ಆಗುವುದಕ್ಕೆ ಕಾರಣ ಏನು ಎಂಬುದನ್ನು ವಿವರಿಸುವುದು ಸಹ ಅಗತ್ಯ. ಅದನ್ನೇ ಈ ಲೇಖನದಲ್ಲಿ ತಿಳಿಸಲಾಗಿದೆ.

Mars- Venus conjunction: ಕುಜ- ಶುಕ್ರ ಒಟ್ಟಾಗಿ ಏನೇನು ಸಮಸ್ಯೆ ತರುತ್ತಾರೋ? ಇನ್ನು ಮೂರ್ನಾಲ್ಕು ತಿಂಗಳು ಎಚ್ಚರ ಎಚ್ಚರ!
ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ
TV9 Web
| Updated By: ಆಯೇಷಾ ಬಾನು

Updated on: Feb 17, 2024 | 6:34 AM

Share

ಇದೊಂದು ಲೇಖನವನ್ನು ಒಂದಿಷ್ಟು ಗಂಭೀರವಾಗಿ ಓದಿಕೊಳ್ಳಿ. ಏಕೆಂದರೆ ಜ್ಯೋತಿಷದ ಹಲವು ಸಂಗತಿಗಳು ಇದೊಂದು ಲೇಖನದಲ್ಲಿ ನಿಮಗೆ ಗೊತ್ತಾಗಲಿದೆ. ಆ ಕಾರಣದಿಂದ ನಿಧಾನವಾಗಿಯೂ ಓದಿಕೊಳ್ಳಿ, ಸಾಧ್ಯವಾದರೆ ಮನನ ಮಾಡಿಕೊಳ್ಳಿ. ಜ್ಯೋತಿಷ್ಯದಲ್ಲಿ ಹನ್ನೆರಡು ರಾಶಿಗಳು. ಮತ್ತು ಪ್ರತಿ ರಾಶಿಗೆ ಗ್ರಹಗಳ ಆಧಿಪತ್ಯ ಇರುತ್ತದೆ. ಅದೇ ರೀತಿ ಕಾರಕತ್ವ ಮತ್ತು ಮಾರಕತ್ವ ಸಹ ಇರುತ್ತದೆ. ಮೊದಲಿಗೆ ಆಧಿಪತ್ಯದ ಬಗ್ಗೆ ತಿಳಿಸಿಬಿಡುತ್ತೇನೆ. ಮೇಷ- ವೃಶ್ಚಿಕಕ್ಕೆ ಕುಜ ಅಧಿಪತಿ, ವೃಷಭ- ತುಲಾಗೆ ಶುಕ್ರ, ಮಿಥುನ- ಕನ್ಯಾಗೆ ಬುಧ, ಕರ್ಕಾಟಕ ರಾಶಿಗೆ ಚಂದ್ರ, ಸಿಂಹಕ್ಕೆ ರವಿ, ಧನು- ಮೀನಕ್ಕೆ ಗುರು, ಮಕರ- ಕುಂಭಗಳಿಗೆ ಶನಿ ಅಧಿಪತಿ.

ಇನ್ನು ಶನಿ ಮತ್ತು ಬುಧ ಕ್ಷೇತ್ರಗಳಿಗೆ ಕಾರಕ ಗ್ರಹ ಶುಕ್ರನಾದರೆ, ರವಿ, ಗುರು, ಚಂದ್ರ ಕ್ಷೇತ್ರಗಳಿಗೆ ಕುಜನ ಕಾರಕತ್ವ ಇರುತ್ತದೆ. ಶುಕ್ರ ಕ್ಷೇತ್ರಗಳಿಗೆ ಶನಿಯ ಕಾರಕತ್ವ, ಕುಜ ಕ್ಷೇತ್ರಗಳಿಗೆ ರವಿ, ಗುರು ಗ್ರಹಗಳು ಕಾರಕ ಗ್ರಹ ಆಗುತ್ತವೆ. ಕಾರಕತ್ವ ಅಂದರೆ ಸತ್ಪ್ರಭಾವ ಬೀರುವಂಥವರು ಎಂದರ್ಥ. ಉದಾಹರಣೆಗೆ, ರವಿ, ಗುರು, ಚಂದ್ರ ಕ್ಷೇತ್ರಗಳು ಅಂದರೆ, ಸಿಂಹ, ಧನು- ಮೀನ ಹಾಗೂ ಕರ್ಕಾಟಕ ರಾಶಿ. ಈ ರಾಶಿ ಅಥವಾ ಲಗ್ನಕ್ಕೆ ಕುಜನ ಕಾರಕತ್ವ ಇರುತ್ತದೆ. ಕುಜ ಗ್ರಹ ಸತ್ಪ್ರಭಾವ ಬೀರುತ್ತದೆ.

ಆದರೆ, ಮಕರ ರಾಶಿಗೆ ಶನಿಯೇ ಅಧಿಪತಿ ಆಗಿದ್ದರೂ ಅಲ್ಲಿ ಕುಜ ಗ್ರಹಕ್ಕೆ ಉಚ್ಚ ಕ್ಷೇತ್ರ. ಹಾಗೆಂದರೆ ಕುಜನಿಗೆ ವಿಶೇಷ ಶಕ್ತಿ ಇರುತ್ತದೆ. ಇನ್ನು ಶುಕ್ರನ ಆಧಿಪತ್ಯ ಇರುವ ತುಲಾ ರಾಶಿಯಲ್ಲಿ ಶನಿಗೆ ಉಚ್ಚ ಕ್ಷೇತ್ರ. ಚಂದ್ರನ ಆಧಿಪತ್ಯದ ಕರ್ಕಾಟಕವು ಗುರುವಿಗೆ ಉಚ್ಚ. ಮೇಷ ರಾಶಿಗೆ ಕುಜ ಅಧಿಪತಿಯಾದರೂ ಅಲ್ಲಿ ರವಿಗರ ಉಚ್ಚ. ಬುಧನಿಗೆ ಕನ್ಯಾ, ಶುಕ್ರನಿಗೆ ಮೀನ ಹಾಗೂ ಚಂದ್ರನಿಗೆ ವೃಷಭ ರಾಶಿಯು ಉಚ್ಚ ಕ್ಷೇತ್ರವಾಗುತ್ತದೆ.

ವಿಷಯ ಏನೆಂದರೆ, ಎಷ್ಟು ಡಿಗ್ರಿಯಲ್ಲಿ ಈ ಗ್ರಹಗಳು ಸ್ಥಿತವಾಗಿವೆ ಎಂಬುದನ್ನು ತಿಳಿದುಕೊಂಡಿರಬೇಕು. ಉಚ್ಚ ಆರೋಹಿಗೆ ಬಲ ಜಾಸ್ತಿ, ಅವರೋಹಿಗೆ ಬಲ ಕ್ಷಯ ಆಗುತ್ತದೆ. ಅದೇ ರೀತಿ ನೀಚ ಆರೋಹಿ ದುರ್ಬಲವಾದರೆ, ಅವರೋಹಿ ಬಲಶಾಲಿ ಆಗುತ್ತದೆ. ಇನ್ನು ಗ್ರಹಗಳು ತ್ರಿಕೋಣದಲ್ಲಿದ್ದರೆ (ಐದು, ಒಂಬತ್ತನೇ ಸ್ಥಾನ) ಅತ್ಯಧಿಕ ಬಲ ದೊರೆಯುತ್ತದೆ.

ಇದನ್ನೂ ಓದಿ: ಸ್ನಾನಗೃಹದಲ್ಲಿಯೂ ವಾಸ್ತು ದೋಷಗಳಿವೆಯೇ? ಈ ಸರಳ ಸಲಹೆಗಳನ್ನು ಪಾಲಿಸಿ

ಈಗ ಮುಖ್ಯ ವಿಷಯಕ್ಕೆ ಬರುತ್ತಿದ್ದೇನೆ:

ಸದ್ಯಕ್ಕೆ ಗ್ರಹ ಸ್ಥಿತಿಯ ವಿಶ್ಲೇಷಣೆ ಮಾಡುವುದಾದರೆ, ಮಕರ ರಾಶಿಗೆ ಕಾರಕ ಗ್ರಹವಾದ ಶುಕ್ರ ಅದೇ ರಾಶಿಯಲ್ಲಿದ್ದರೆ, ಉಚ್ಚ ಆರೋಹಿ ಕುಜ ಅದೇ ರಾಶಿಯಲ್ಲಿ ಇದೆ. ಹೀಗಾದಲ್ಲಿ ಗ್ರಹ ಯುದ್ಧವಾಗುತ್ತದೆ. ಇಂಥ ಸ್ಥಿತಿಯಲ್ಲಿ ಬಲಾಬಲ ವಿಮರ್ಶೆ ಮಾಡಿ, ಈ ರೀತಿ ಗ್ರಹ ಯುದ್ಧದಲ್ಲಿ ಯಾವ ಗ್ರಹಕ್ಕೆ ಜಯ ಎಂಬುದನ್ನು ನಿರ್ಧರಿಸಬೇಕಾಗುತ್ತದೆ.

ಕುಜನು ಬಲಿಷ್ಠ ಕಲಹ ಕಾರಕನಾದರೆ, ಶುಕ್ರ ಸೌಮ್ಯ ಗ್ರಹ. ಆದರೆ ನ್ಯಾಯ- ಧರ್ಮ ವಿಮರ್ಶಕ.

ಕುಜ- ಶುಕ್ರರ ಯುತಿ (ಒಂದೇ ರಾಶಿಯಲ್ಲಿ ಇರುವ ಸ್ಥಿತಿಯನ್ನು ಯುತಿ ಎನ್ನಲಾಗುತ್ತದೆ) ರೈತರ ದೊಡ್ಡ ಚಳವಳಿ ಶುರುವಾಗಿದೆ. ನೈಸರ್ಗಿಕವಾಗಿ (ಮೇಷದಿಂದ ಮೀನ) ಲಗ್ನದ ಪ್ರಜಾಪ್ರತಿನಿಧಿತ್ವ ರಾಶಿ ತುಲಾ ಹಾಗೂ ವಾಕ್ ಸ್ಥಾನವಾದ ವೃಷಭಕ್ಕೆ ಅಧಿಪತಿ ಶುಕ್ರ ಆಗುತ್ತದೆ. ಅದೇ ರೀತಿ ನೈಸರ್ಗಿಕ ಲಗ್ನದ ಮೊದಲ ಸ್ಥಾನ ಮೇಷ ಹಾಗೂ ಮರಣಾಧಿಪತಿ ಕುಜ ಆಗುತ್ತದೆ. ಆ ಕಾರಣದಿಂದ ಶುರುವಿನಲ್ಲಿ ಹೋರಾಟಗಾರರಿಗೆ ಜಯ ಆದಂತೆಯೇ ಗೋಚರಿಸುತ್ತದೆ.

ಆದರೆ, ಇಪ್ಪತ್ತೇಳು ಡಿಗ್ರಿ ದಾಟಿದ ಮೇಲೆ (ಮಕರ ರಾಶಿಯ ಇಪ್ಪತ್ತೇಳು ಡಿಗ್ರಿ ಅಂದರೆ ಧನಿಷ್ಠಾ ನಕ್ಷತ್ರದ ಒಂದನೇ ಪಾದ ದಾಟಿ, ಎರಡನೇ ಪಾದ ಪ್ರವೇಶಿಸಿದ ಮೇಲೆ) ಕುಜನಿಗೆ ಬಲ ಕಡಿಮೆ ಆಗುತ್ತದೆ. ಹಾಗೂ ಅದೇ ವೇಳೆ ಶುಕ್ರನ ಕಾನೂನು ಶಕ್ತಿ ವೃದ್ಧಿ ಆಗುತ್ತದೆ. ಒಂದು ವೇಳೆ ಈ ಹೋರಾಟದ ಹಿಂದಿನ ಉದ್ದೇಶ ಕಾನೂನಿಗೆ ಸಮಸ್ಯೆ ಮಾಡುವುದಾದರೆ ಅದು ಬಯಲಾಗುತ್ತದೆ.

ಇದನ್ನೂ ಓದಿ: ಯಾವ ರಾಶಿಯವರು ತುಂಬಾ ಜಗಳವಾಡುತ್ತಾರೆ? ಯಾವ ರಾಶಿಯವರು ಹೆಚ್ಚು ಕೋಪ ಮಾಡಿಕೊಳ್ಳುತ್ತಾರೆ ಗೊತ್ತಾ?

ಇನ್ನೇನು ಲೋಕಸಭೆ ಚುನಾವಣೆ ಕೂಡ ಸನ್ನಿಹಿತವಾಗಿದೆ. ಇಂಥ ಸನ್ನಿವೇಶದಲ್ಲಿ ಕುಜ- ಶುಕ್ರರು ಒಂದೇ ಮನೆಯಲ್ಲಿ ಇರುವುದರಿಂದ ಕೋಮು ದಳ್ಳುರಿಯು ವಿಪರೀತ ಹೆಚ್ಚಾಗಲಿದೆ. ಅದು ಕೂಡ ಆರಂಭದಲ್ಲಿ ವಿಪರೀತಕ್ಕೆ ಹೋಗುತ್ತದೆ. ಅದು ಕೂಡ ಕ್ರಮೇಣ ತಣ್ಣಗಾಗುತ್ತದೆ.

ಇದಕ್ಕೆಲ್ಲ ನಿಯಂತ್ರಣ ಹೇಗೆ ಎಂಬುದನ್ನು ನೀಡುವುದಾದರೆ, ಗ್ರಹಗಳ ಪೈಕಿ ಮಹಾ ಮುತ್ಸದ್ಧಿಯಾದ ಶನಿಗೆ ತ್ರಿಕೋಣ ಬಲವಿದೆ. ಶನಿಯು ಧರ್ಮಕ್ಕೆ ಜಯ ನೀಡಲಿದ್ದಾನೆ. ಈ ಅವಧಿಯಲ್ಲಿ ಸಾರ್ವಜನಿಕರಿಗೆ ತೊಂದರೆ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಇತ್ಯಾದಿ ಆಗಲಿದೆ. ಮಾರ್ಚ್ ಏಳನೇ ತಾರೀಕಿನವರೆಗೆ ಒಂದು ಹಂತದ ತನಕ ಕಲಹ ಉಚ್ಛ್ರಾಯಕ್ಕೆ ಹೋಗಿ, ಆ ನಂತರ ನಿಲ್ಲುತ್ತದೆ.

ಆದರೆ, ಈ ಕುಜ- ಶುಕ್ರ ಯುತಿ ಇದೆಯಲ್ಲ, ಅದು ಕುಂಭ- ಮೀನದಲ್ಲೂ ಆಗಲಿದೆ. ಕುಂಭದಲ್ಲಿ ಕುಜ ಬಲ ಹೀನನೂ ಶುಕ್ರ ಬಲಿಷ್ಠನೂ ಇರುತ್ತಾನೆ. ಮೀನದಲ್ಲಿ ಕುಜನಿಗೆ ಕಾರಕತ್ವದ ಬಲ, ಶುಕ್ರನಿಗೆ ಉಚ್ಚತ್ವದ ಬಲ. ಅಲ್ಲೂ ಕಲಹಗಳನ್ನು ನಿರೀಕ್ಷಿಸಬಹುದು. ಅಂದರೆ ಹತ್ತಿರಹತ್ತಿರ ಲೋಕಸಭೆ ಚುನಾವಣೆ ತನಕ ಜಾಗ್ರತೆಯಿಂದ ಇರಲೇಬೇಕು.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)

(ಈ ಲೇಖನದಲ್ಲಿನ ಅಭಿಪ್ರಾಯಗಳು ಹಾಗೂ ವಿವರಣೆ ಲೇಖಕರದೇ ಆಗಿರುತ್ತದೆ. ಜ್ಯೋತಿಷದ ಆಧಾರದ ಮೇಲೆ ಬರೆದಿರುವ ಲೇಖನ ಇದಾಗಿದ್ದು, ಇದು ಟಿವಿ ನೈನ್ ಕನ್ನಡ ಅಥವಾ ಅದರ ಸೋದರ ಸಂಸ್ಥೆಗಳ ಅಭಿಪ್ರಾಯ ಆಗಿರುವುದಿಲ್ಲ. ಹಾಗೂ ಇದನ್ನು ಸಂಸ್ಥೆಯು ಅನುಮೋದಿಸುವುದಿಲ್ಲ. – ಸಂಪಾದಕರು)

Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?