Horoscope 22 Oct: ದಿನಭವಿಷ್ಯ, ಈ ರಾಶಿಯ ಸ್ತ್ರೀಯರು ಸಂತೋಷದಿಂದ ದಿನ ಕಳೆಯುವಿರಿ

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಅಕ್ಟೋಬರ್ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 22 Oct: ದಿನಭವಿಷ್ಯ, ಈ ರಾಶಿಯ ಸ್ತ್ರೀಯರು ಸಂತೋಷದಿಂದ ದಿನ ಕಳೆಯುವಿರಿ
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 22, 2023 | 12:02 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಸುಕರ್ಮಾ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 07 ನಿಮಿಷಕ್ಕೆ, ರಾಹು ಕಾಲ ಸಂಜೆ 04:40 ರಿಂದ 06:08ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:17 ರಿಂದ 01:45ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:12 ರಿಂದ 04:40ರ ವರೆಗೆ.

ಮೇಷ ರಾಶಿ: ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದ್ದು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನು ಮಾಡಲು ಸರಿಯಾದ ವ್ಯಕ್ತಿಗಳು ಸಿಗುವರು. ಕಾರ್ಯದಲ್ಲಿ ಶ್ರದ್ಧೆಯಿರುವ ಕಾರಣ ಅನ್ಯ ಆಲೋಚನೆಯನ್ನು ಮಾಡಲಾರಿರಿ. ನಿಮ್ಮ ಬಗ್ಗೆ ಸುಳ್ಳು ವದಂತಿಗಳನ್ನು ಹರಡುವುದು. ನೀವು ಇಂದು ಸೌಂದರ್ಯಕ್ಕೆ ಬೆಲೆ‌ ಕೊಡುವಿರಿ. ನಿಮ್ಮಿಂದ ಉಪಕಾರವನ್ನು ಪಡೆದವರೇ ನಿಮ್ಮ ಶತ್ರಗಳಾದಾರು.‌ ಸಂಗಾತಿಯು ನಿಮ್ಮನ್ನು ನಿರ್ಲಕ್ಷಿಸಬಹುದು. ನಿಮ್ಮ ಬಗ್ಗೆ ನಿಮಗೇ ನಂಬಿಕೆ ಕಡಿಮೆ ಆಗಬಹುದು. ಮುದುವಾದ ಮಾತು ಕೃತಕತೆಯಂತೆ ತೋರಬಹುದು. ‌ನೀವೊಬ್ಬ ಸುಳ್ಳುಗಾರರೆನ್ನುವಂತೆ ಇತರರು ಬಿಂಬಿಸುವರು. ಬಂಧುಗಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ.

ವೃಷಭ ರಾಶಿ: ಯಾರೊಂದಿಗೂ ಮುಕ್ತವಾಗಿ ಮಾತನಾಡಲು ಆಗದು. ಕೆಲವು ಸನ್ನಿವೇಶವು ನಿಮಗೆ ಇಷ್ಟವಾಗದು. ಅದರೂ ಅನಿವಾರ್ಯ ಎನಿಸೀತು. ಕೋಪವನ್ನು ಬಿಟ್ಟರೂ ಬಿಡಲಾಗದು.‌ ಯಾವುದಾದರೂ ರೀತಿಯಲ್ಲಿ ಮತ್ತೆ ನಿಮ್ಮನ್ನು ಸೇರಿಕೊಳ್ಳುವುದು.‌ ನಕಾರಾತ್ಮಕ ಸೂಚನೆ ನಿಮಗೆ ಸಿಗಲಿದ್ದು, ಅದನ್ನು ನಿರ್ಲಕ್ಷ್ಯ ಮಾಡುವಿರಿ. ಸಮಾಧಾನದ ಚಿತ್ತವು‌ ಅನೇಕ ವಿಚಾರಕ್ಕೆ ಪೂರಕ. ನಿಮ್ಮ‌ ಮನೋಬಲದ ಪ್ರದರ್ಶನವನ್ನು ತೋರಿಸಬೇಕಾದೀತು. ಸುಮ್ಮನೇ ವಾಗ್ವಾದವನ್ನು ಮಾಡಲು ಹೋಗಿ ಸಮಯವನ್ನು ಹಾಗೂ ಇತರರ‌‌ ಸಮಯವನ್ನೂ ಹಾಳು ಮಾಡುವಿರಿ. ಹಲವರ ಕಾರಣದಿಂದ ನಿಮ್ಮ ಗುರಿಯು ಬದಲಾಗಬಹುದು. ಹೃದಯ ವೈಶಾಲ್ಯವನ್ನು ತೋರಿಸುವಿರಿ.

ಮಿಥುನ ರಾಶಿ: ಮನೆಯಲ್ಲಿ ಹರ್ಷದ ವಾತಾವರಣ ಇದ್ದು ಬಂಧುಗಳು ನಿಮ್ಮ ಜೊತೆಗಿರುವರು. ಸರಳವಾದ ನಿಮ್ಮ ವ್ಯಕ್ತಿತ್ವಕ್ಕೆ ಯಾರೂ ಮನಸೋಲುವರು. ಕರ್ತವ್ಯವನ್ನು ನಿಷ್ಠೆಯಿಂದ ಮಾಡುವಿರಿ. ಪ್ರೀತಿಗೆ ಮಿತ್ರರಿಂದ‌ ಸಹಕಾರವು ಇರುವುದು. ಸ್ನೇಹ ಸಂಬಂಧವನ್ನು ಹೆಚ್ಚು ಆಪ್ತ ಎನಿಸುವುದು. ಅಪೇಕ್ಷಿಸದಿದ್ದರೂ ನಿಮ್ಮ ಪರಿಶ್ರಮಕ್ಕೆ ಯೋಗ್ಯವಾದ ಗೌರವವು ಸಿಗುವುದು. ಕೆಟ್ಟ ಕೆಲಸಕ್ಕೆ ಯಾರಾದರೂ ಪ್ರೇರಣೆ ಕೊಡಬಹುದು. ದುರಭ್ಯಾಸವು ನಿಮಗೆ ಬೇಡವೆನಿಸುವುದು. ಸಂಗಾತಿಯ ಮೇಲೇ ಪ್ರೀತಿಯು ಹೆಚ್ಚಾಗಿ ಅದನ್ನು ಹೇಳಿಕೊಳ್ಳಲು ಸಂಕೋಚಪಡುವಿರಿ. ನಿಮಗೆ ಏಕಾಂಗಿಯಂತೆ ಅನ್ನಿಸಬಹುದು. ಪ್ರಾಣಿಗಳ ಸಹಾವಾಸದಿಂದ ಮನಸ್ಸಿಗೆ ಹಿತ ಎನಿಸುವುದು.

ಕರ್ಕ ರಾಶಿ: ವಾಹನ ಮುಂತಾದ ಉದ್ಯಮವನ್ನು ನಡೆಸುತ್ತಿದ್ದರೆ ಲಾಭವಿರಲಿದೆ. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ. ವಾಹನದಲ್ಲಿ ಸಣ್ಣ ಅಪಘಾತವಾಗಲಿದೆ. ಆಕಸ್ಮಿಕವಾಗಿ ವಿವಾಹ ಮಾತುಕತೆಗೆ ತಯಾರಿಯಾಗಬಹುದು. ಇನ್ನೊಬ್ಬರ ಬಗ್ಗೆ ದೋಷವನ್ನೇ ಹುಡುಕುತ್ತ ಕುಳಿತುಕೊಳ್ಳುವ ಬದಲು ಗುಣಗಳನ್ನು ಸ್ವೀಕರಿಸಿ ಸಖ್ಯ ಮಾಡಿಕೊಳ್ಳುವುದು ಉತ್ತಮ. ಉಪಕಾರದ ಸ್ಮರಣೆಯನ್ನು ನೀವು ಮಾಡಿಕೊಳ್ಳುವುದಿಲ್ಲ. ಮುಂಗೋಪವು ಸಂಬಂಧವನ್ನು ಹಾಳು ಮಾಡುವುದು. ವಿವಿಧ ವಸ್ತುಗಳ ಖರೀದಿಯನ್ನು ಮಾಡಲಿದ್ದೀರಿ. ಸಂಗಾತಿಯ ಒರಟಾದ ಮಾತಿಗೆ ಉತ್ತರ‌ಕೊಡಲು ಹೋಗುವುದು ಬೇಡ.

ಸಿಂಹ ರಾಶಿ: ಎಲ್ಲ‌ ಕಡೆಯಿಂದ‌ ನಿಮಗೆ ಅನುಕೂಲವಾಗಬೇಕು ಎಂದುಕೊಳ್ಳುವುದು ಬೇಡ. ಅನಿಶ್ಚಿತತೆಯು‌ ನಿಮ್ಮ ಮೇಲೆ ದಟ್ಟವಾದ ಪ್ರಭಾವವನ್ನು ಬೀರಬಹುದು. ಅಮೂಲ್ಯವಾದ ಸಂಪತ್ತು ಅಥವಾ ಸಂಬಂಧವನ್ನು ಕಳೆದುಕೊಳ್ಳಬೇಕಸದೀತು. ಕುಟುಂಬದಲ್ಲಿ ಪರಸ್ಪರ ಪ್ರೀತಿಯು ತೋರುವುದು. ಪ್ರಯಾಣದಿಂದ ಪ್ರಯಾಸವಾಗಲಿದೆ. ಹೊಸ ವ್ಯವಹಾರದ ಬಗ್ಗೆ ನಿಮಗೆ ಆಪ್ತರ ಸಲಹೆಯು ಸಿಗಲಿದೆ. ಮಕ್ಕಳ ಸ್ವಭಾವವು ಇಷ್ಟವಾಗದೇ ಹೋಗುವುದು. ಖಾಸಗಿ ಸಂಸ್ಥೆಯೊಂದು ನಿಮ್ಮನ್ನು ಮುಖ್ಯಸ್ಥರನ್ನಾಗಿ ಮಾಡುವ ಯೋಚನೆಯನ್ನು ಇಟ್ಟುಕೊಂಡಿದೆ. ಹಣಕಾಸಿನ ಕಾರಣಕ್ಕೆ ನೀವು ಮೋಸ ಹೋಗಬಹುದು. ಹೊಸ ವಸ್ತ್ರವನ್ನು ಖರೀದಿಸಿ ಧರಿಸುವಿರಿ.

ಕನ್ಯಾ ರಾಶಿ: ಮಕ್ಕಳ ವಿದ್ಯಾಭ್ಯಾಸಕ್ಕೆ ಕಳುಹಿಸಿ ಬೇಸರಗೊಳ್ಳುವಿರಿ.‌ ನಿಮ್ಮ ಮಕ್ಕಳ ಬಾಂಧವ್ಯದಿಂದೆ‌ ನಿಮಗೆ ಅಗಲಿಕೆ ಕಷ್ಟವಾದೀತು. ಸಹೋದ್ಯೋಗಿಗಳನ್ನು ಅನೌಪಚಾರಿಕವಾಗಿ ಭೇಟಿಯಾಗುವಿರಿ. ಭೂಮಿಯ ವ್ಯವಹಾರವು ನಿಮಗೆ ಹಿನ್ನಡೆಯಾಗಬಹುದು.‌ ಓಡಾಟದಿಂದ ಸಮಯ ವ್ಯರ್ಥ ಮಾಡುವಿರಿ. ಸ್ಥಾನಮಾನವನ್ನು ಕಳೆದುಕೊಳ್ಳುವ ಸನ್ನಿವೇಶವು ಬರಬಹುದು. ಉದ್ಯೋಗವೇ ಸಾಕು ಎಂದು ಅನ್ನಿಸುವಷ್ಟು ಹಿಂಸೆಯನ್ನು ಮನಸ್ಸಿನಲ್ಲಿ ಅನುಭವಿಸುವಿರಿ. ಹೊಸ ಮನೆಗೆ ಸ್ಥಳಾಂತರ ಮಾಡಿಕೊಳ್ಳುವಿರಿ. ತಾಯಿಯ ಪ್ರೀತಿಯನ್ನು ಅನುಭವಿಸುವಿರಿ. ಸಂಪತ್ತಿನ ಬಗ್ಗೆ ನಿಮಗೆ ಆಸಕ್ತಿಯು ಇರದು. ಸಂಗಾತಿಯು ನಿಮ್ಮಿಂದ ಏನನ್ನೋ‌ ಮುಚ್ಚಿಡುತ್ತಾನೆ ಎಂದು ಅನ್ನಿಸಬಹುದು. ನೀವು ಕರ್ತವ್ಯವನ್ನು ಬಿಡದೇ ಕೈಯ್ಯಲ್ಲಿ ಆಗುವ ಕೆಲಸವನ್ನು ಮಾಡಿ.

ತುಲಾ ರಾಶಿ: ವಾಹನ ಖರೀದಿಯ ಬಗ್ಗೆ ಮನೆಯಲ್ಲಿ ಪೂರ್ಣ ಬೆಂಬಲ ಇರುವುದು.‌ ಹಳೆಯ ಘಟನೆಯನ್ನು ನೆನಪಿಸಿಕೊಂಡು ಸಂಕಟಪಡುವುದು ಬೇಡ. ಕಳ್ಳರ ಭೀತಿಯು ಇರಲಿದೆ. ದೇಹವು ವಾತದಿಂದ ತೊಂದರೆಗೆ ಸಿಲುಕಬಹುದು. ಧಾರ್ಮಿಕ ಆಚರಣೆಗೆ ಇನ್ನೊಬ್ಬರಿಂದ‌ ಪ್ರೇರಣೆ ಪಡೆಯುವಿರಿ. ಸ್ತ್ರೀಯರು ನಿಮ್ಮನ್ನು ಮೆಚ್ಚಿಕೊಳ್ಳುವರು. ನಿಮ್ಮ ಲಾಭದ ಉದ್ಯಮದ ಮೇಲೆ ಕೆಟ್ಟ ದೃಷ್ಟಿ ಬೀಳಬಹುದು. ಸಮಾಜಮುಖೀ ಕಾರ್ಯಗಳನ್ನು ನಿರಪೇಕ್ಷೆಯಿಂದ ಮಾಡುವಿರಿ. ಆರೋಗ್ಯವು ಚೆನ್ನಾಗಿ ಇರಲಿದ್ದು ಮಾನಸಿಕವಾದ ನೆಮ್ಮದಿಯು ಇರುವುದು. ತಾಳ್ಮೆ ಕಡಿಮೆ ಆದಂತೆ ತೋರುವುದು. ನಿಮ್ಮ ಗುಣವು ದುರುಪಯೋಗ‌ ಆಗಬಹುದು. ಬಂಧುಗಳ ಸಲಹೆಯನ್ನು ಸ್ವೀಕರಿಸದೇ ಇದ್ದುದಕ್ಕೆ ಅವರು ಬೇಸರವಾಗುವುದು. ದ್ವಿಚಕ್ರ ವಾಹನವನ್ನು ಚಲಾಯಿಸುವಾಗ ಎಚ್ಚರಿಕೆ ಇರಲಿ.

ವೃಶ್ಚಿಕ ರಾಶಿ: ಆರೋಗ್ಯದ ಬಗ್ಗೆ ಕಾಳಜಿ ಮುಖ್ಯವಾಗಿರಲಿ.‌ ಸ್ನೇಹಿತರ ಮಾತಿನಿಂದ ನಿಮಗೆ ನೋವಾಗಬಹುದು. ಹಣಕಾಸಿನ ವಿಚಾರಕ್ಕೆ ತಂದೆಯ ನಡುವೆ ವಾಗ್ವಾದವು ಆಗಬಹುದು. ನೆರ ಮನೆಯವರ ವರ್ತನೆಯಿಂದ ನೀವು ಸಿಟ್ಟಾಗುವಿರಿ. ಅಧ್ಯಾತ್ಮ ಸಾಧನೆಯ ಕಡೆ ನಿಮ್ಮ ಮನಸ್ಸು ಇರಲಿದೆ. ವಾಹನವನ್ನು ಚಲಿಸುವಾಗ ಒತ್ತಡವನ್ನು ಇಟ್ಟುಕೊಳ್ಳುವುದು ಬೇಡ. ಹಿರಿಯರು ಬೇಡ ಎಂದು ಹೇಳಿದ ಕೆಲಸವನ್ನು ಹಠದಿಂದ ಅವರ ಮಾತನ್ನು ವಿರೋಧಿಸಿ ಮಾಡುವಿರಿ. ಚರಾಸ್ತಿಗಳನ್ನು ನಷ್ಟ ಮಾಡಿಕೊಳ್ಳಬೇಕಾಗುವುದು. ನಿಮಗೆ ಯಾರಾದರೂ ದಾನಕ್ಕೆ ಯೋಗ್ಯರಾದವರು ಅನ್ನಿಸಿದವರಿಗೆ ದಾನವನ್ನು ಮಾಡಿ. ಸಾಲವಾಗಿ ನೀಡಿದ ಹಣವನ್ನು ಮತ್ತೆ ಬರುವುದು ಕಷ್ಟವಾದೀತು. ಸಂಗಾತಿಯನ್ನು ನಿರ್ಲಕ್ಷಿಸಿದಂತೆ ತೋರುವುದು. ನಿಮ್ಮಿಂದ ಆಗದ ಕೆಲಸಕ್ಕೆ ಮಾಡಿ ಕೈ ಸುಟ್ಟುಕೊಳ್ಳುವಿರಿ. ಪ್ರೀತಿ ಪಾತ್ರರನ್ನು ನೀವು ಚೆನ್ನಾಗಿ ನೋಡಿಕೊಳ್ಳುವಿರಿ.

ಧನು ರಾಶಿ: ತುರ್ತು ಹಣವು ಬೇಕಿದ್ದರಿಂದ ಸ್ನೇಹಿತರನ್ನು ಕೇಳುವಿರಿ. ಮನೆಯ ಕಾರ್ಯದಲ್ಲಿ ನಿಮ್ಮ ಇಡೀ ದಿನವು ಕಳೆದು ಹೋದುದ್ದು ಗೊತ್ತಾಗದೇ ಹೋಗಬಹುದು. ಧಾರ್ಮಿಕ ನಂಬಿಕೆಯು ನಿಮ್ಮಲ್ಲಿ ಜಾಗೃತವಾಗಬಹುದು. ದುರಭ್ಯಾಸದ ಕಾರಣ ಮರ್ಯಾದಿಯನ್ನು ಕಳೆದುಕೊಳ್ಳಬೇಕಾದೀತು. ಮಹಿಳೆಯರಿಗೆ ಸಹಾಯ ಮಾಡಲು ಹೋಗಿ ಅಪವಾದಕ್ಕೆ ಸಿಕ್ಕುವಿರಿ. ನಿಮ್ಮ ನಿರುದ್ಯೋಗಕ್ಕೆ ಸೂಕ್ತ ಪರಿಹಾರ ಸಿಗಲಿದೆ. ಅನಿರೀಕ್ಷಿತವಾಗಿ ಇಂದು ಮನೆಯಲ್ಲಿಯೇ ಕಛೇರಿಯ ಕಾರ್ಯವನ್ನು ಮಾಡಬೇಕಾಗುವುದು. ನಿಮ್ಮ ವ್ಯಕ್ತಿತ್ವವು ಗೌರವವನ್ನು ಹೆಚ್ಚಿಸುವುದು. ದುಃಖವನ್ನು ಹಂಚಿಕೊಂಡು ಕಡಿಮೆ‌ ಮಾಡಿಕೊಳ್ಳುವಿರಿ. ಸ್ವತಂತ್ರ ಆಲೋಚನೆಯು ನಿಮಗೆ ಉಪಯುಕ್ತವಾಗಲಿದೆ.

ಮಕರ ರಾಶಿ: ಸಂಗಾತಿಯ ಜೊತೆಗಿನ‌ ಕಲಹವು ನಿಮ್ಮ ಇಡೀ ದಿನವನ್ನು ಸರಿಯಾಗಿ ಕಳೆಯುವಂತೆ ಮಾಡದು. ದೂರಪ್ರಯಾಣವು ಆಯಾಸವನ್ನು ಕೊಡಬಹುದು. ಪಂಡಿತರ ಸಹವಾಸ ತೊರೆಯುವುದು. ಸಂಶೋಧನೆಯ ಮನಸ್ಸಿನಲ್ಲಿ ಇದ್ದರೆ ಹೊಸ ವಿಷಯವು ನಿಮ್ಮ ಮನಸ್ಸಿಗೆ ಬರಬಹುದು. ಆರ್ಥಿಕತೆಯು ದುರ್ಬಲವಾದ ಕಾರಣ ಆತಂಕವು ಉಂಟಾಗಬಹುದು. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮ್ಮ ಉತ್ಸಾಹಕ್ಕೆ ಭಂಗ ಬರುವುದು. ಆಪತ್ಕಾಲಕ್ಕಾಗಿ ಕೂಡಿಟ್ಟ ಹಣವು ಇಂದು ಖರ್ಚು ಮಾಡಬೇಕಾಗುವುದು. ಭವಿಷ್ಯದ ಬಗ್ಗೆ ಅಸ್ಪಷ್ಟತೆ ಇರುವ ಕಾರಣ ಮನಸ್ಸಿಗೆ ಕಿರಿಕಿರಿ ಇರುವುದು. ದೃಷ್ಟಿದೋಷಕ್ಕೆ ಸೂಕ್ತ ಔಷಧಿಯು ಸಿಗಲಿದೆ. ನಿಮ್ಮ ಅರೋಗ್ಯ ಸಮಸ್ಯೆಯನ್ನು ಆಪ್ತರ ಜೊತೆ ಚರ್ಚಿಸಿ. ದಾಂಪತ್ಯದ ಸುಖದಲ್ಲಿ ಮಕ್ಕಳನ್ನು ಮರೆಯದಿರಿ.

ಕುಂಭ ರಾಶಿ: ಶತ್ರುಬಾಧೆಯಿಂದ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗುಬುದು. ನಿಮ್ಮ ಏಳ್ಗೆಯನ್ನು ಇತರರು ಸಹಿಸಿಕೊಳ್ಳುವುದು ಕಷ್ಟವಾಗುವುದು. ಯಾರ ಬಗ್ಗೆಯೂ ಸಲ್ಲದ ಮಾತನಾಡಿ ಸಿಕ್ಕಿಕೊಳ್ಳುವಿರಿ. ಸ್ವಯಂ ಕೃತ ಅಪರಾಧದಿಂದ ಪಶ್ಚಾತ್ತಾಪವಾಗುವುದು. ಸಂಗಾತಿಯ ವಿಷಯದಲ್ಲಿ ನಿಮಗೆ ಸಮಾಧಾನ ಇರದು. ನಿಮ್ಮ ಬಾಲಿಶ ಮಾತುಗಳಿಂದ ಇತರರು ನಕ್ಕಾರು. ಕ್ರೀಡೆಯಲ್ಲಿ ಉತ್ಸಾಹವು ತೋರುವಿರಿ. ಮನೆಯಲ್ಲಿ ಇಂದು ಸ್ನೇಹ ಕೂಟವು ಏರ್ಪಡುವುದು. ನಿಮ್ಮ ಬಳಿ ಇರುವ ಸಂಪತ್ತನ್ನು ಎಲ್ಲರಿಗೂ ಹೇಳಬೇಕಾದೀತು. ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವಿರಿ. ಕಛೇರಿಯ ವ್ಯವಹಾರವನ್ನು ಮನೆಯಲ್ಲಿ ಚರ್ಚಿಸುವುದು ಬೇಡ. ಸ್ನೇಹಿತರಿಗಾಗಿ ಧನ ನಷ್ಟ ಮಾಡಿಕೊಳ್ಳುವಿರಿ.‌

ಮೀನ ರಾಶಿ: ನಿಮ್ಮ ಹಣವನ್ನು ಬಲಾತ್ಕಾರದಿಂದ ಪಡೆಯಬೇಕಾಗಬಹುದು. ಸ್ತ್ರೀಯರು ಸಂತೋಷದಿಂದ ದಿನ ಕಳೆಯುವಿರಿ. ಸಹೋದರರ ಪಾಲಿಗೆ ಬಂದ ಆಸ್ತಿಯು ನಿಮಗೆ ಸಿಗುವ ಸಾಧ್ಯತೆ ಇದೆ. ನಿಮಗೆ ಇಂದು ಧಾರ್ಮಿಕ ಕಾರ್ಯದಲ್ಲಿ ತೃಪ್ತಿಯು ಸಿಗಲಿದೆ. ಸಂಗಾತಿಯ ಪ್ರೀತಿಯು ನಿಮಗೆ ಅಚ್ವರಿಯಾಗಬಹುದು. ನೌಕರರಿಗೆ ಇಂದು ಸಂತೋಷವನ್ನು ಕೊಡುವಿರಿ. ಸಂತೋಷದ ನಡುವೆ ಯಾರನ್ನೂ ಬೇಸರಿಸುವುದು ಬೇಡ. ನಿಮ್ಮ ಅಧ್ಯಾತ್ಮ ಜೀವನದಿಂದ ಪ್ರಭಾವಿತರಾಗುವರು. ಅತಿಯಾದ ಭೋಜನದಿಂದ ಕಷ್ಟವಾದೀತು. ತಾಯಿಯ ಬಂಧುಗಳು ನಿಮಗೆ ಸಹಕಾರವನ್ನು ನೀಡಬಹುದು. ಮನೆಯ ಗಂಭೀರ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳುವುದು ಬೇಡ.

-ಲೋಹಿತಶರ್ಮಾ – 8762924271 (what’s app only)

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ