Horoscope 23 Oct: ದಿನಭವಿಷ್ಯ, ಹಿರಿಯರಿಂದ ಹಿತೋಪದೇಶ ಕೇಳಬೇಕಾದೀತು, ವ್ಯಾಪಾರದಲ್ಲಿ ಇಕ್ಕಟ್ಟು ಉಂಟಾಗಬಹುದು
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಅಕ್ಟೋಬರ್ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಶೂಲ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 06 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:12 ರಿಂದ 04:39ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:22 ರಿಂದ 10:49ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:17 ರಿಂದ 01:44ರ ವರೆಗೆ.
ಮೇಷ ರಾಶಿ: ಸ್ನೇಹಿತರಿಂದ ಬೆಂಬಲ ಸಿಕ್ಕ ಬೆಂಬಲವು ನಿಮಗೆ ಭವಿಷ್ಯಕ್ಕೆ ಉತ್ಸಾಹವನ್ನು ಕೊಡುವುದು. ಪಾಲುದಾರಿಕೆಯು ನಿಮಗೆ ಮೋಸದಂತೆ ಕಾಣುವುದು. ಶತ್ರುಗಳ ಬಗ್ಗೆ ಯಾರಾದರೂ ಕಿವಿಚುಚ್ಚುವರು. ನೀರಿನ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಿ. ಆಪಾಯದ ಸೂಚನೆಯನ್ನು ಗಮನಿಸಿಕೊಳ್ಳಿ. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮುಗಿಸುವ ಕೌಶಲವು ನಿಮ್ಮಲ್ಲಿರುವುದು. ಆಮದು ವ್ಯವಹಾರವು ಸ್ವಲ್ಪ ಲಾಭವನ್ನು ಕೊಡುವುದು. ಉದ್ಯಮಿಗಳ ಭೇಟಿ ಮಾಡುವಿರಿ. ಭೂಮಿಯ ಖರೀದಿಗೆ ಸೂಕ್ತ ಸಮಯವಿದ್ದು ಇಷ್ಟಪಟ್ಟ ಭೂಮಿಯು ಸಿಗುವುದು. ಸಂಗಾತಿಯ ಮಾತಿನಿಂದ ನೀವು ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಮನಸ್ಸಿನ ಚಾಂಚಲ್ಯವನ್ನು ಯೋಗವೇ ಮದ್ದಾಗಲಿದೆ. ಅಧಿಕೃತ ಮೂಲದಿಂದ ಬಂದ ವಿಚಾರಗಳನ್ನು ಮಾತ್ರ ನಂಬಿ. ಗಾಳಿ ಸುದ್ದಿಯನ್ನಲ್ಲ. ನಿಮ್ಮ ಬಗ್ಗೆ ಅತಿಯಾದ ಆತ್ಮವಿಶ್ವಾಸವು ಇರಲಿದೆ.
ವೃಷಭ ರಾಶಿ: ನಿಮ್ಮ ಪ್ರಯತ್ನಕ್ಕೆ ಸರಿಯಾದ ಫಲವು ಸಿಗುವುದು. ಆದಾಯವನ್ನು ನಿರೀಕ್ಷಿತ ಖರ್ಚಿನ ಬಗ್ಗೆ ನಿಯಂತ್ರಣ ಬೇಕು. ನಿಮ್ಮ ಗುರಿಯನ್ನು ಬದಲಾಯಿಸುವುದು ಬೇಡ. ಹೇಳಬೇಕಾದ ವಿಷಯದಲ್ಲಿ ಮುಚ್ಚು ಮರೆ ಇಲ್ಲದೇ ಸರಿಯಾಗಿ ಹೇಳಿ. ಬೇರೆಯವರನ್ನು ಗೊಂದಲಕ್ಕೆ ಸಿಕ್ಕಿಹಾಕಿಸುವುದು ಬೇಡ. ನಿಮ್ಮ ಕಾರ್ಯದಲ್ಲಿನ ಶಿಸ್ತು ಉಳಿದವರಿಗೆ ಕಷ್ಟವಾದೀತು. ನೀವು ಹೋದಕಡೆ ನಿಮಗೆ ಬೇಕಾದ ಹಾಗೆ ವಾತಾವರಣವನ್ನು ಸೃಷ್ಟಿಸಿಕೊಳ್ಳುವಿರಿ. ಕೇಳಿ ಬಂದವರಿಗೆ ನೀವು ಇಂದು ಧನ ಸಹಾಯವನ್ನು ಮಾಡುವಿರಿ. ಮಕ್ಕಳ ಆರೋಗ್ಯವು ಕೆಡಬಹುದು. ಹೆಚ್ಚಿನ ಆದಾಯಕ್ಕೆ ನೀವು ಚಿಂತನೆ ನಡೆಸುವಿರಿ. ಅಧ್ಯಾತ್ಮದಲ್ಲಿ ನಿಮಗೆ ನಿರಾಸಕ್ತಿಯು ಉಂಟಾಗಬಹುದು. ಏಕತಾನತೆಯಿಂದ ಹೊರಬರುವಿರಿ.
ಮಿಥುನ ರಾಶಿ: ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ. ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು. ಅನಗತ್ಯ ಅಲೆದಾಟವನ್ನು ನಿಲ್ಲಿಸಿ ಕಾರ್ಯದಲ್ಲಿ ಮಗ್ನರಾಗಿ. ಅಲ್ಪ ಕಾರ್ಯದಿಂದ ಎಲ್ಲವೂ ಸಿದ್ಧಿಸುವುದಾದರೂ ಅಧಿಕ ಶ್ರಮವಿರುವುದು. ಕಲಾವಿದರು ಹೆಚ್ಚಿನ ಪ್ರಶಂಸೆಗೆ ಪಾತ್ರರಾಗಲಿದ್ದಾರೆ. ಯಾರೋ ಮಾಡಬೇಕಾದ ಕೆಲಸಕ್ಕೆ ನೀವು ಹೋಗಬೇಕಾದೀತು. ಹಣವಿದ್ದರೂ ಸಮಯಕ್ಕೆ ಸರಿಯಾಗಿ ಸಿಗದ ಕಾರಣ ತುರ್ತಾಗಿ ಸಾಲವನ್ನು ಮಾಡಬೇಕಾಗುವುದು. ಸ್ನೇಹಿತರ ಜೊತೆ ಪ್ರವಾಸ ಹೋಗುವಿರಿ. ನಿಮ್ಮ ವೃತ್ತಿಯಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸುವಿರಿ. ಸಂಗಾತಿಯು ನಿಮ್ಮನ್ನು ಬೆಂಬಲಿಸರು.
ಕಟಕ ರಾಶಿ: ನಿಮ್ಮನ್ನು ವಿರೋಧಿಸುವವರು ಹೆಚ್ಚಾದಾರು. ವಿರೋಧಿಗಳನ್ನು ಲೆಕ್ಕಿಸದೇ ನಿಮ್ಮಷ್ಟಕ್ಕೆ ಇರುವಿರಿ. ನಿಂತ ಕಾರ್ಯಕ್ಕೆ ಚಾಲನೆ ನೀಡುವಿರಿ. ನಿದ್ರೆ ಇಲ್ಲದೇ ಮಾನಸಿಕವಾಗಿ ಕುಗ್ಗುವಿರಿ. ಸ್ಪರ್ಧೆಗಾಗಿ ನಡೆಸಿದ ನಿಮ್ಮ ಶ್ರಮವು ವ್ಯರ್ಥವಾದೀತು. ಆಸ್ತಿಯ ವಿಚಾರಕ್ಕೆ ನೆರಮನೆಯವರ ಜೊತೆ ಕಲಹವಾಗಲಿದೆ. ಸಂಗಾತಿಯಿಂದ ನಿರೀಕ್ಷಿತ ಬೆಂಬಲವು ಸಿಗದು. ಧಾರ್ಮಿಕ ವಿಷಯದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗಲಿದೆ. ಸಕಾರಾತ್ಮಕ ಚಿಂತನೆಯನ್ನು ದೂರ ಮಾಡಿಕೊಳ್ಳುವಿರಿ. ಸದಾ ಅನುಮಾನದಿಂದಲೇ ಇರುವಿರಿ. ನಿಮ್ಮ ಗೌರವಕ್ಕೆ ತೊಂದರೆಯಾಗುವ ಕಡೆ ನೀವು ಹೋಗುವುದು ಬೇಡ. ಜನಸಾಮಾನ್ಯರ ಜೊತೆ ಬೆರೆಯುವುದು ಇಷ್ಟವಾಗದು. ಕುತೂಹಲದಲ್ಲಿ ಈ ದಿನವನ್ನು ಕಳೆಯುವಿರಿ.
ಸಿಂಹ ರಾಶಿ: ನಂಬಿಕೆಯಲ್ಲಿ ದ್ರೋಹವಾಗಿದ್ದು ಯಾರನ್ನು ನಂಬಬೇಕು ಎನ್ನುವ ಗೊಂದಲ, ಹತಾಶೆಗಳು ಕಾಣಿಸುವುದು. ಎಲ್ಲವೂ ಆಗಿಹೋದಂತೆ ನಿಮಗೆ ಅನ್ನಿಸಬಹುದು. ವಸತಿಯಲ್ಲಿ ತೊಂದರೆ ಬಂದ ಕಾರಣ ಬದಲಾಯಿಸುವ ಸಂದರ್ಭವೂ ಬರಬಹುದು. ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು. ಮೇಲಧಿಕಾರಿಗಳು ನಿಮ್ಮ ಮೇಲೆ ಒತ್ತಡ ತಂದು ಕೆಲಸವನ್ನು ಮಾಡಿಸಿಕೊಳ್ಳುವರು. ಅನಾರೋಗ್ಯವನ್ನೂ ನೀವು ಲೆಕ್ಕಿಸದೇ ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ನಿಮ್ಮ ಬಯಕೆಗಳನ್ನು ಯಾರ ಬಳಿಯೂ ಪ್ರಕಟಪಡಿಸುವುದಿಲ್ಲ. ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಿರಿ. ಸಣ್ಣ ವಿಚಾರಕ್ಕೆ ಯಾರನ್ನೋ ದ್ವೇಷ ಮಾಡುವುದು ಸರಿಯಲ್ಲ. ಸ್ಪರ್ಧಾತ್ಮಕ ಪರೀಕ್ಷೆಗೆ ಇನ್ನೂ ಹೆಚ್ಚಿನ ಶ್ರಮವು ಬೇಕು. ಎಂದೋ ಕಾಣೆಯಾದ ವಸ್ತುವು ಅನಿರೀಕ್ಷಿತವಾಗಿ ಸಿಗುವುದು. ತಂದೆಯ ಪ್ರೀತಿಯು ಸಿಗುವುದು.
ಕನ್ಯಾ ರಾಶಿ: ಇಂದು ಹಿರಿಯರಿಂದ ಕೆಲವು ಹಿತೋಪದೇಶವನ್ನು ಕೇಳಬೇಕಾದೀತು. ವ್ಯಾಪಾರದ ಸ್ಥಳದಲ್ಲಿ ಇಕ್ಕಟ್ಟು ಉಂಟಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ರಾಜಕೀಯ ಏರಿಳಿತವನ್ನು ನೀವು ಊಹಿಸುವುದು ಕಷ್ಟವಾದೀತು. ಸಾಲದಿಂದ ಬಿಡುಗಡೆ ಸಿಕ್ಕ ಕಾರಣ ಕುಟುಂಬದಲ್ಲಿ ಸೌಖ್ಯವಿರುವುದು. ಎಲ್ಲ ಕೆಲಸಗಳೂ ಅಪೂರ್ಣವಾಗಿದ್ದು ನಿಮಗೆ ಅಸಮಾಧನ ಇರುವುದು. ಕಾರ್ಯದ ಒತ್ತಡದಿಂದ ತಾಳ್ಮೆಯನ್ನು ಕಳೆದುಕೊಳ್ಳಬೇಕಾಗುವುದು. ಇಷ್ಟು ದಿನ ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ ಇಂದು ಕಛೇರಿಗೆ ಕರೆಯುವರು. ಇಂದಿನ ನಿಮ್ಮ ತುರ್ತು ಕಾರ್ಯಗಳನ್ನು ನೀವು ಬಿಡಬೇಕಾದೀತು. ಯಾವ ಕಾರ್ಯಕ್ಕೂ ಉತ್ಸಾಹವೇ ಇಲ್ಲದಂತಾದೀತು. ಯಾರಿಂದಲಾದರೂ ಪ್ರಚೋದನೆ ಸಿಕ್ಕೀತು.
ತುಲಾ ರಾಶಿ: ಪಾಲುದಾರಿಕೆಯ ಭೂ ಸಂಬಂಧದ ಕಾರ್ಯದಿಂದ ಲಾಭವಾಗಲಿದೆ. ದಾಂಪತ್ಯವು ಪರಸ್ಪರ ಸೌಹಾರ್ದದ ಮಾತುಗಳಿಂದ ನೆಮ್ಮದಿ ಸಿಗುವುದು. ಮಕ್ಕಳ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ. ಅನಿಶ್ಚಿತ ಕೆಲಸದಲ್ಲಿ ಆದಾಯವನ್ನು ಹೆಚ್ಚು ಪಡೆಯುವಿರಿ. ಸರ್ಕಾರಿ ಕೆಲಸಗಳು ಒತ್ತಡದ ಕಾರಣಕ್ಕೆ ಮುಂದುವರಿಯುವುದು. ನೀವು ಮೌನದಿಂದ ಇದ್ದರೆ ಒಪ್ಪಿಗೆ ಕೊಟ್ಟಿದ್ದೀರಿ ಎಂದಾಗುವುದು. ಸಮಯಕ್ಕೆ ಬೆಲೆ ಕೊಟ್ಟು ಎಲ್ಲವನ್ನೂ ಸಕಾಲಕ್ಕೆ ಮುಗಿಸುವುದು ಉತ್ತಮ. ದೇವರ ದರ್ಶನಕ್ಕೆ ನೀವು ಇಂದು ಬಿಡುವು ಮಾಡಿಕೊಂಡು ಹೋಗುವಿರಿ. ಆಪ್ತರನ್ನು ದೂರ ಮಾಡಿಕೊಳ್ಳಬೇಕಾಗುವುದು. ಒಂಟಿಯಾಗಿ ವಾಹನವನ್ನು ಚಲಾಯಿಸುವುದು ಬೇಡ. ಯಾವ ತೀರ್ಮಾನಕ್ಕೆ ಬರಲು ಮೊದಲು ಹತ್ತು ಬಾರಿ ಯೋಚಿಸಿ.
ವೃಶ್ಚಿಕ ರಾಶಿ: ಇಷ್ಟದ ಕಾರ್ಯವು ಸಿದ್ಧಿಯಾಗಿ ನಿಮಗೆ ಉತ್ಸಾಹವು ಹೆಚ್ಚಾಗುವುದು. ನಿಮ್ಮ ಕೆಲವು ವರ್ತನೆಯನ್ನು ಮಿತ್ರರು ವಿರೋಧಿಸುವರು. ಅಮೂಲ್ಯ ವಸ್ತುಗಳನ್ನು ಖರೀದಿಸುವುದು ಕಷ್ಟವಾದರೂ ಮಾಡುವಿರಿ. ಕಛೇರಿಯಲ್ಲಿ ನಾನಾ ಕಡೆಗಳಿಂದ ಒತ್ತಡ ಬರಬಹುದು. ನಿಮ್ಮ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸಿ ಪಡೆದುಕೊಳ್ಳುವಿರಿ. ನೀವು ಮಾಡುವ ವೃತ್ತಿಯಲ್ಲಿ ಗೊಂದಲವಿದ್ದರೆ ಅನುಭವಗಳನ್ನು ಕೇಳಿ ಮಂದುವರೆಯಿರಿ. ಸಂಗಾತಿಯ ಕೆಲವು ಮಾತುಗಳಿಂದ ನಿಮಗೆ ಬೇಸರವಾಗುವುದು. ಅಗತ್ಯವಿರುವ ಸಂಪತ್ತನ್ನು ಸ್ನೇಹಿತರಿಂದ ಸಾಲವಾಗಿ ಪಡೆಯುವಿರಿ. ದುರಭ್ಯಾಸವನ್ನು ಬೆಳೆಸಿಕೊಳ್ಳುವುದು ಬೇಡ. ಮನೋರಂಜನೆಗೆ ಹಣವು ಖರ್ಚಾಗುವುದು. ಬೆನ್ನು ನೋವಿಗೆ ಸರಿಯಾದ ಔಷಧವನ್ನು ಮಾಡಿ.
ಧನು ರಾಶಿ: ಇಂದು ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದಂತೆ ಹೆಚ್ಚು ತಿರುಗಾಟ ಮಾಡಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಳ್ಳಲು ಹೋಗಿ ನಿಮ್ಮ ಆರ್ಥಿಕತೆಯು ಹಿಂದಡಿ ಇಡಬಹುದು. ಆಕಸ್ಮಿಕ ಧನಪ್ರಾಪ್ತಿಯಿಂದ ಹರ್ಷಗೊಳ್ಳುವಿರಿ. ಶ್ರೇಷ್ಠ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ವಿದ್ಯಾರ್ಥಿಗಳು ಯಾರ ಬೆಂಬಲಕ್ಕೂ ಕಾಯದೇ ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಮುನ್ನುಗ್ಗುವುದು ಸೂಕ್ತ. ನಿಮಗೆ ಇಷ್ಟವಾದ ವಿಚಾರವನ್ನು ತಕ್ಷಣ ಪಡೆಯುವಿರಿ. ಉದ್ಯೋಗವಿಲ್ಲವೆಂಬುದು ನಿಮಗೆ ಅವಮಾನದ ಸಂಗತಿಯಾಗಲಿದೆ. ಸಿಕ್ಕ ಅವಕಾಶವನ್ನು ಸದ್ಯ ಬಳಸಿಕೊಳ್ಳಿ. ನಿಮ್ಮ ನಕಾರಾತ್ಮಕ ಆಲೋಚನೆಗಳಿಂದ ಕುಟುಂಬದ ಆಲೋಚನೆಯನ್ನು ಕೆಡಿಸುವಿರಿ. ನಿಮ್ಮವರನ್ನು ಅವರಷ್ಟಕ್ಕೆ ಬಿಟ್ಟು ಬಿಡಿ. ಅಪರಿಚಿತರು ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಸಲಹೆಯನ್ನು ಕೊಡಬಹುದು. ಪ್ರೀತಿಪಾತ್ರರ ಭೇಟಿಯಿಂದ ಖುಷಿಪಡುವಿರಿ.
ಮಕರ ರಾಶಿ: ಇಂದು ಸ್ತ್ರೀಯರಿಗೆ ಮಾನಿಸಿಕವಾದ ಕಿರಿಕಿರಿ ಇರಲಿದ್ದು ತೊಂದರೆಯಾಗಬಹುದು. ಯಂತ್ರೋತ್ಪನ್ನಗಳ ತಯಾರಿಯಲ್ಲಿ ಹಿನ್ನಡೆಯಾಗಬಹುದು. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ಪಡೆಯುವಿರಿ. ವೈಯಕ್ತಿಕ ಕೆಲಸಗಳು ಬಹಳಷ್ಟು ಇದ್ದು, ಮಾಡಲು ಸಮಯ ಸಾಲದು. ಮಿತ್ರರ ಸಹಾಯದಿಂದ ನಿಮಗೆ ಧನ ಸಹಾಯವು ಸಿಗಬಹುದು. ಸಾರ್ವಜನಿಕವಾಗಿ ಅವಮಾನವಾಗುವ ಸಾಧ್ಯತೆ ಇದೆ. ನಿಮಗೆ ಪರಿಚಿತರನ್ನು ಆಪ್ತರನದನಾಗಿ ಮಾಡಿಕೊಳ್ಳುವಿರಿ. ಸಂಗಾತಿಯ ಭಾವನೆಗಳಿಗೆ ಸ್ಪಂದಿಸದಿದ್ದರೆ ನಿಮ್ಮ ಮೇಲೆ ಕೋಪಗೊಳ್ಳುವರು. ನಿಮ್ಮಇಂದಿನ ಸಂಪಾದನೆಯನ್ನು ಮನೆಯ ಬಳಕೆಗೆ ನೀಡುವಿರಿ. ಗೆಳೆತನದಿಂದ ಸಲ್ಲದ ಮಾತುಗಳು ನಿಮ್ಮ ಬಗ್ಗೆ ಬರಬಹುದು.
ಕುಂಭ ರಾಶಿ: ಮನೆಯಲ್ಲಿ ನಡೆಯುವ ಶುಭ ಕಾರ್ಯಕ್ಕೆ ಹೆಚ್ಚು ಖರ್ಚಾಗಬಹುದು. ನಿಮ್ಮ ಅಂದಾಜು ಮೀರಬಹುದು. ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ. ಆಕಸ್ಮಿಕವಾಗಿ ಆರೋಗ್ಯವು ಹದ ತಪ್ಪಬಹುದು. ವಿದೇಶದ ವ್ಯವಹಾರದಲ್ಲಿ ಪಾಲುದಾರಿಕೆ ಇರಲಿದೆ. ವೃತ್ತಿಯನ್ನು ಹೊರತುಪಡಿಸಿದ ಅವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು. ದಾಂಪತ್ಯದ ಒಳ ಜಗಳವು ಇಂದು ವ್ಯಕ್ತವಾಗಬಹುದು. ನಿಮ್ಮನ್ನು ನಂಬಿದವರಿಗೆ ಸಹಾಯ ಮಾಡಲಾಗದು. ಉತ್ತಮ ಸಮಯದ ನಿರೀಕ್ಷೆಯಲ್ಲಿ ಸಮಾಧಾನ ಇರುವುದು. ನಿಮ್ಮಲ್ಲಿ ಇರುವ ವಸ್ತುಗಳನ್ನು ನೀವು ಯಾರಿಗಾದರೂ ಕೊಡುವುದು ಬೇಡ. ಕೋಪವನ್ನು ಬಿಡಬೇಕು ಎಂದುಕೊಂಡರೂ ಸಂದರ್ಭವು ಅದನ್ನು ಬದಲಿಸಬಹುದು. ಮಕ್ಕಳಿಂದ ನೆಮ್ಮದಿಯು ಪಡೆಯವಿರಿ. ವ್ಯವಹಾರವನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳುವಲ್ಲಿ ಸೋಲುವಿರಿ.
ಮೀನ ರಾಶಿ: ಇಂದು ಆರ್ಥಿಕ ವಿಚಾರದಲ್ಲಿ ಜಾಗರೂಕತೆ ಇರಲಿ. ಇಲ್ಲವಾದರೆ ಯಾವ ಪ್ರಯೋಜನವೂ ಇಲ್ಲದೇ ನಷ್ಟವಾಗುವುದು. ಭೂಮಿಗೆ ಸಂಬಂಧಿಸಿದ ವಿಚಾರಗಳನ್ನು ಇತ್ಯರ್ಥ ಮಾಡಿಕೊಳ್ಳುವುದು ಉಚಿತ. ಉನ್ನತ ವಿದ್ಯಾಭ್ಯಾಸದ ಪ್ರಯುಕ್ತ ಹೊರಗಡೆ ಇರಲಿರುವಿರಿ. ನಿಮ್ಮ ಕಾರ್ಯವು ಆಗಬೇಕಾದರೆ ಓಡಾಟ ಅನಿವಾರ್ಯವಾಗಲಿದೆ. ಅನಾರೋಗ್ಯದ ನಡುವೆಯೂ ಉತ್ಸಾಹದಿಂದ ಇರುವಿರಿ. ಶತ್ರುಗಳ ಮುಖಾಮುಖಿ ಭೇಟಿಯ ಸಂದರ್ಭವು ಬರುವುದು. ನೀವು ಇಂದು ಯಾವ ವಿಚಾರವನ್ನು ಮಾತನಾಡುವುದಿದ್ದರೂ ಎಚ್ಚರವಿರಲಿ. ನಿಮ್ಮ ಸಂಗಾತಿಯು ನಿಮ್ಮನ್ನು ಇತರರಿಗೆ ಹೋಲಿಸಬಹುದು. ಒಂದೊಂದು ರೂಪಾಯಿಯನ್ನೂ ಜೊಪಾನ ಮಾಡುವಿರಿ. ಎಂತಹ ಸನ್ನಿವೇಶದಲ್ಲಿಯೂ ನೀವು ವಿಚಲಿತರಾಗುವುದಿಲ್ಲ.
-ಲೋಹಿತಶರ್ಮಾ – 8762924271 (what’s app only)