Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 24ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 24ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 24ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 24, 2024 | 12:30 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 24ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಈ ದಿನ ಹಬ್ಬದ ಅಡುಗೆ ಊಟ ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ. ನಿಧಾನವಾಗಿ ಆಗುತ್ತಿದೆ ಕೆಲಸ, ಇದರಿಂದ ಹೆಚ್ಚು ಖರ್ಚು ಆಗುತ್ತಿದೆ ಮತ್ತು ಮಾನಸಿಕವಾಗಿಯೂ ಕಿರಿಕಿರಿ ಆಗುತ್ತಿದೆ ಎಂದುಕೊಳ್ಳುತ್ತಿದ್ದಲ್ಲಿ ಈ ದಿನ ಆ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ಸಾಮಾಜಿಕವಾಗಿ ಅತಿ ಮುಖ್ಯ ಎನಿಸುವಂಥ ಹುದ್ದೆ, ಸ್ಥಾನ- ಮಾನಗಳು ನಿಮಗೆ ದೊರೆಯಬಹುದು. ಕೆಲವು ಸಂಘ- ಸಂಸ್ಥೆಗಳಿಂದ ಸನ್ಮಾನ ಸಹ ಆಗುವ ಸಾಧ್ಯತೆಗಳಿವೆ. ಏಕಕಾಲಕ್ಕೆ ಹಲವು ಕಡೆಯಿಂದ ನಿಮಗೆ ಉದ್ಯೋಗದ ಆಫರ್ ಗಳು ಬರಬಹುದು. ಇನ್ನು ಈ ಹಿಂದೆ ನೋಡಿಕೊಂಡು ಬಂದಿದ್ದ ಭೂಮಿ ಅಥವಾ ಸೈಟು ಮತ್ತೆ ಖರೀದಿಗೆ ಅವಕಾಶ ಎಂಬಂತೆ ನಿಮ್ಮ ಬಳಿಯೇ ಬರಬಹುದು. ಬ್ಯಾಂಕ್ ಗಳ ವ್ಯವಹಾರದಲ್ಲಿ ವೇಗವಾಗಿ ಕೆಲಸಗಳು ಆಗಲಿವೆ. ಅಗತ್ಯ ದಾಖಲೆ- ಪತ್ರಗಳು ಹೊಂದಿಸಿಕೊಳ್ಳುವುದಕ್ಕೆ ಕೆಲವರು ಸಹಾಯ ಮಾಡಲಿದ್ದಾರೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಹಣಕಾಸಿನ ಹರಿವು ಅಂದುಕೊಂಡಂತೆ ಇರುವುದಿಲ್ಲ ಎಂಬ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ಒತ್ತಡ ಕಂಡುಬರಲಿದೆ. ನಿಮ್ಮ ಮನಸ್ಸಿಗೆ ಇಷ್ಟವಾಗುವಂಥ ಗೇಟೆಡ್ ಕಮ್ಯುನಿಟಿ ಸೈಟುಗಳು, ವಿಲ್ಲಾಗಳು ನೋಡಿ, ಹೇಗಾದರೂ ಖರೀದಿ ಮಾಡಲೇಬೇಕು ಎಂಬ ಹುಮ್ಮಸ್ಸು ಮೂಡಲಿದೆ. ಈ ಬಗ್ಗೆ ಕುಟುಂಬ ಸದಸ್ಯರ ಜತೆಗೂ ಮಾತುಕತೆ ಆಡಲಿದ್ದೀರಿ. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಎಂದು ಎತ್ತಿಟ್ಟಿದ್ದ ಹಣವೋ ಅಥವಾ ಆಸ್ತಿಯನ್ನೋ ಬೇರೆ ಉದ್ದೇಶಕ್ಕೆ ಬಳಸಬೇಕು ಎಂದು ಆಲೋಚಿಸುವುದಕ್ಕೆ ಶುರು ಮಾಡುತ್ತೀರಿ. ಇನ್ನು ಸಂಬಂಧಿಕರ ಮನೆಯ ಕಾರ್ಯಕ್ರಮಗಳಲ್ಲಿ ಭಾಗೀ ಆಗುತ್ತಿದ್ದೀರಿ ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇರುವ ಕಡೆ ಇದ್ದೀರಿ ಅಂತಾದರೆ ನಿಮ್ಮ ಉದ್ದೇಶಕ್ಕೆ ಕಿಚ್ಚು ಹಚ್ಚುವ ರೀತಿಯಲ್ಲಿ ಜನರು ಮಾತನಾಡಲಿದ್ದಾರೆ. ವಾಹನಗಳ ಪಾರ್ಕಿಂಗ್ ಮಾಡುವಾಗ ಹೆಚ್ಚಿನ ಜಾಗ್ರತೆ ವಹಿಸಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಮಕ್ಕಳ ಶಿಕ್ಷಣ ವಿಚಾರದಲ್ಲಿ ಭಾರೀ ಗೊಂದಲ ಏರ್ಪಡಬಹುದು. ನಿಮಗೆ ಹಾಗೂ ಕುಟುಂಬದ ಇತರ ಸದಸ್ಯರಿಗೆ ಇದೇ ವಿಚಾರಕ್ಕೆ ಅಭಿಪ್ರಾಯ ಭೇದಗಳು ಅಥವಾ ಮನಸ್ತಾಪ ಉದ್ಭವಿಸಬಹುದು. ನಿಮಗೆ ಇಷ್ಟವಿಲ್ಲದ ಕೆಲವು ವಿಷಯಗಳನ್ನು ಒತ್ತಾಯ ಪೂರ್ವಕವಾಗಿ ಒಪ್ಪಿಕೊಳ್ಳಬೇಕಾಗಬಹುದು. ಮುಖ್ಯವಾಗಿ ಪ್ರಯಾಣ, ಹಣದ ವೆಚ್ಚ ಹಾಗೂ ಮನೆಗೆ ಎಲೆಕ್ಟ್ರಿಕ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ತರಬೇಕೋ ಬೇಡವೋ ಎಂಬುದೇ ದೊಡ್ಡ ಚರ್ಚೆಯ ವಿಷಯ ಆಗಲಿದೆ. ಸರ್ಕಾರಿ ಕೆಲಸಗಳನ್ನು ಟೆಂಡರ್ ತೆಗೆದುಕೊಳ್ಳುವವರಿಗೆ ಪ್ರತಿಸ್ಪರ್ಧಿಗಳಿಂದ ತೀವ್ರ ಪೈಪೋಟಿ ಏರ್ಪಡಲಿದೆ. ಕೆಲವು ಸಮಯ ಈ ಕೆಲಸದಿಂದಲೇ ದೂರ ಇದ್ದು ಬಿಡೋಣ ಅಂತಲೂ ಅನಿಸಬಹುದು. ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುವವರಿಗೆ ಸಣ್ಣ- ಪುಟ್ಟ ಅಪಘಾತ, ಗಾಯಗಳಾಗುವ ಸಾಧ್ಯತೆ ಇದೆ, ಎಚ್ಚರಿಕೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಬರಬೇಕಾದ ನಿಮ್ಮದೇ ದುಡ್ಡಿನ ವಿಚಾರಕ್ಕೆ ಇಷ್ಟು ಸಮಯ ಅಲೆದಾಟ ಮಾಡುತ್ತಿದ್ದೀರಿ ಅಂತಾದಲ್ಲಿ ಈ ದಿನ ನಿಮ್ಮ ಕೆಲಸ ಆಗುವಂಥ ಸಾಧ್ಯತೆಗಳು ಹೆಚ್ಚಿವೆ. ಪ್ರಮುಖ ವ್ಯಕ್ತಿಯೊಬ್ಬರು ಸ್ವತಃ ಈ ಕೆಲಸದ ಬಗ್ಗೆ ಆಸ್ಥೆ ವಹಿಸಿ, ಮಾಡಿಕೊಡಲಿದ್ದಾರೆ. ಹೋಟೆಲ್ ಉದ್ಯಮಿಗಳಿಗೆ ಆದಾಯ ಹೆಚ್ಚಳ ಆಗುವಂಥ ಸಾಧ್ಯತೆಗಳಿವೆ. ಒಂದು ವಿಚಾರಕ್ಕೆ ಬಹಳ ಆತಂಕ ಮೂಡಿದ್ದಲ್ಲಿ ಅದರ ಬಗ್ಗೆ ಚಿಂತೆ ದೂರ ಆಗುವಂತಹ ಬೆಳವಣಿಗೆಗಳು ಆಗುತ್ತವೆ. ತಂದೆ- ತಾಯಿಯ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಮನೆಯಲ್ಲಿ ಹೋಮ್ ಥಿಯೇಟರ್ ಮಾಡಿಸಿಕೊಳ್ಳುವುದಕ್ಕೆ ಕೆಲವರು ತೀರ್ಮಾನ ಮಾಡಬಹುದು. ದೂರದ ಊರು ಅಥವಾ ದೇಶಗಳಿಂದ ಶುಭ ಸುದ್ದಿ ಕೇಳುವಂಥ ಯೋಗವಿದೆ. ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಡ್ತಿ, ವೇತನ ಹೆಚ್ಚಳದ ಸುಳಿವು ದೊರೆಯಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಮಾತಿಗೆ, ಆಲೋಚನೆಗೆ ಹಾಗೂ ಯೋಜನೆಗೆ ಇತರರು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ಪ್ರಮುಖ ಜವಾಬ್ದಾರಿಯನ್ನು ಪೂರ್ಣಗೊಳಿಸುವುದಕ್ಕೆ ಉದ್ಯೋಗ ಸ್ಥಳದಲ್ಲಿ ನಿಮ್ಮನ್ನು ಕೇಳಿಕೊಳ್ಳಬಹುದು. ಸರ್ಕಾರದಿಂದ ಬರಬೇಕಾದ ಹಣ ಏನಾದರೂ ಇದ್ದಲ್ಲಿ ಆ ಬಗ್ಗೆ ಮಾಹಿತಿ ತಿಳಿದುಬರಲಿದೆ. ಸಣ್ಣ- ಪುಟ್ಟ ಸಂಗತಿಗಳನ್ನು ಸಹ ತುಂಬ ಅಚ್ಚುಕಟ್ಟಾಗಿ ಮಾಡಿ ಮುಗಿಸಲಿದ್ದೀರಿ. ಸ್ನೇಹಿತರ ಒತ್ತಾಯಕ್ಕೆ ಮಣಿದು, ಕೆಲವರಿಗೆ ಸಾಲ ಕೊಡಿಸಬೇಕಾಗಬಹುದು. ನಿಮ್ಮ ಪ್ರಭಾವವನ್ನು ಇದಕ್ಕಾಗಿ ಬಳಸಲೇ ಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿಗೆ ಒತ್ತಡ ಆಗಬಹುದು. ಆದರೆ ದಿನದ ಕೊನೆಗೆ ಸಂತೋಷವಾಗಿಯೇ ಮುಕ್ತಾಯ ಆಗಲಿದೆ. ನಿಮ್ಮ ಬಳಿ ಇರುವಂಥ ಕೆಲವು ವಸ್ತುಗಳನ್ನು ಕೆಲವು ದಿನಗಳ ಮಟ್ಟಿಗೆ ನೀಡುವಂತೆ ಆಪ್ತರಾದವರು ನಿಮ್ಮನ್ನು ಕೇಳಿಕೊಂಡು ಬರಲಿದ್ದಾರೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಅಂದುಕೊಂಡಂತೆ ಕೆಲಸ- ಕಾರ್ಯಗಳು ತುಂಬ ಚೆನ್ನಾಗಿ ನಡೆಯಲಿವೆ. ಕಟ್ಟಡ ನಿರ್ಮಾಣ ಅಥವಾ ಸೈಟು- ಜಮೀನಿನಲ್ಲಿ ಸ್ವಚ್ಛತಾ ಕಾರ್ಯ ಇತ್ಯಾದಿಗಳು ಬಹಳ ವೇಗವಾಗಿ ನಡೆಯಲಿವೆ. ಇತರರಿಗೆ ಕೊಟ್ಟ ಮಾತಿನಂತೆಯೇ ನೆರವು ನೀಡಲಿದ್ದೀರಿ. ಮನೆಯಲ್ಲಿ ಶುಭ ಕಾರ್ಯಗಳ ಆಯೋಜನೆಗೆ ನಿಮ್ಮ ಸಹಾಯ ಹಾಗೂ ಮುಂದಾಳತ್ವವನ್ನು ವಹಿಸುವಂತೆ ಕೇಳಿಕೊಳ್ಳಬಹುದು. ಸೋದರ ಸಂಬಂಧಿಗಳಿಗೆ ನಿಮ್ಮ ಮೇಲಿನ ಗೌರವಾದರಗಳು ಹೆಚ್ಚಲಿವೆ. ಉದ್ಯೋಗ ಸ್ಥಳದಲ್ಲಿ ಈ ಹಿಂದೆ ನೀವು ತೆಗೆದುಕೊಂಡ ಮುಂಜಾಗ್ರತೆ ಕಾರಣಕ್ಕೆ ಹಲವರಿಗೆ ಅನುಕೂಲವಾಗಲಿದೆ. ತಂದೆ- ತಾಯಿಯಿಂದ ನಿಮಗೆ ಉಡುಗೊರೆಗಳು ದೊರೆಯಬಹುದು. ಚಿನ್ನ ಅಥವಾ ಬೆಳ್ಳಿ ಒಡವೆಗಳನ್ನು ನಿಮಗೆ ನೀಡಬಹುದು. ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗ ಆಫರ್ ಪಡೆಯಬಹುದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಒಂದೇ ಕೆಲಸವನ್ನು ಮುಗಿಸುವುದಕ್ಕೆ ಹಲವು ಸಲ ಪ್ರಯತ್ನಿಸಬೇಕಾಗುತ್ತದೆ. ನಿಯಮದ ಪ್ರಕಾರ ಇಲ್ಲ ಅಂತಲೋ ಅಥವಾ ಆ ಕೆಲಸದ ಅಂತಿಮ ಫಲಿತಾಂಶ ನಿರೀಕ್ಷಿತ ರೀತಿಯಲ್ಲಿ ಇಲ್ಲ ಅಂತಲೋ ಒಟ್ಟಿನಲ್ಲಿ ನಿಮ್ಮ ಶ್ರಮ, ಸಮಯ ಎಲ್ಲವೂ ಸಂಪೂರ್ಣ ಫಲಪ್ರದವಲ್ಲ ಎಂದೆನಿಸಬಹುದು. ಹೊಸದಾಗಿ ಪರಿಚಯ ಆದವರು, ಮೇಲುನೋಟಕ್ಕೆ ಪ್ರಭಾವಿಗಳಂತೆ ಕಾಣುತ್ತಿದ್ದಾರೆ ಅಂತ ಅಂದುಕೊಂಡು, ಅವರ ಬಳಿ ಎಲ್ಲವನ್ನೂ ಹೇಳಿಕೊಂಡು ಬಿಡಬೇಡಿ ಅಥವಾ ಕೆಲಸ ಮಾಡಿಕೊಡುವುದಕ್ಕೆ ಅಂತ ಹಣ ನೀಡುವುದಕ್ಕೆ ಹೋಗಬೇಡಿ. ಬಾಡಿಗೆ ಮನೆಯಲ್ಲಿ ವಾಸ ಇರುವಂಥವರಿಗೆ ಮಾಲೀಕರ ಜತೆಗೆ ಅಸಮಾಧಾನ ಅಥವಾ ಮಾತಿಗೆ ಮಾತು ಬೆಳೆಯಬಹುದು. ತಕ್ಷಣವೇ ಖಾಲಿ ಮಾಡುತ್ತೇವೆ ಎಂದು ನೀವಾದರೂ ಹೇಳಿಬಿಡಬಹುದು ಅಥವಾ ಈ ಕೂಡಲೇ ಮನೆ ಬಿಟ್ಟುಬಿಡಿ ಅಂತ ಮಾಲೀಕರೇ ಹೇಳಬಹುದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಮಕ್ಕಳ ಸಾಧನೆಯಿಂದ ಮನಸ್ಸಿಗೆ ಖುಷಿ, ಸಮಾಧಾನ ಹಾಗೂ ನೆಮ್ಮದಿ ಮೂಡಲಿದೆ. ಒಂದು ವೇಳೆ ಉದ್ಯೋಗ ಬದಲಾವಣೆಗೋ ಅಥವಾ ಈಗಿನ್ನೂ ಉದ್ಯೋಗಕ್ಕೆ ಹೊಸದಾಗಿ ಪ್ರಯತ್ನ ಮಾಡುತ್ತಿರುವವರಿದ್ದರೆ ಸ್ನೇಹಿತರು- ಸಂಬಂಧಿಕರ ಮೂಲಕವಾಗಿ ರೆಫರೆನ್ಸ್ ದೊರೆಯಬಹುದು. ದ್ವಿಚಕ್ರ ವಾಹನವನ್ನೋ ಅಥವಾ ಕಾರು ಖರೀದಿ ಮಾಡಬೇಕು ಎಂದುಕೊಳ್ಳುವ ಸಾಧ್ಯತೆಗಳು ಸಹ ಇವೆ. ಕ್ಯಾಟರಿಂಗ್, ಈವೆಂಟ್ ಮ್ಯಾನೇಜ್ ಮೆಂಟ್ ಇಂಥವುಗಳನ್ನು ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಮಾರ್ಗ ಗೋಚರ ಆಗಲಿದೆ. ಅಥವಾ ದೊಡ್ಡ ಆರ್ಡರ್ ಬರಬಹುದು. ಅಥವಾ ದೀರ್ಘಾವಧಿಗೆ ಆರ್ಡರ್ ನೀಡುವ ಅವಕಾಶವೂ ಇದೆ. ತಾತ್ಕಾಲಿಕವಾಗಿ ಉದ್ಯೋಗ ಮಾಡುತ್ತಿರುವವರಿಗೆ ಕಾಯಂ ಆಗಬಹುದು ಹಾಗೂ ಬಾಕಿ ಉಳಿದ ವೇತನ ಸಹ ಬರಬಹುದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮಗೆ ಬಹಳ ಪ್ರೀತಿಪಾತ್ರರಾದವರ ಜತೆಗೆ ಉತ್ತಮವಾದ ಸಮಯವನ್ನು ಕಳೆಯಲಿದ್ದೀರಿ. ಸಂತಾನ ಅಪೇಕ್ಷಿತ ದಂಪತಿಗೆ ಈ ದಿನ ಉತ್ತಮ ಬೆಳವಣಿಗೆಗಳು ಆಗಲಿವೆ. ಇನ್ನು ಪ್ರೇಮಿಗಳಾಗಿದ್ದಲ್ಲಿ ಮನೆಯಲ್ಲಿ ಈ ವಿಚಾರವನ್ನು ಪ್ರಸ್ತಾವ ಮಾಡುವಂತಹ ಹಾಗೂ ಅದಕ್ಕೆ ಒಪ್ಪಿಗೆ ಸೂಚಿಸುವಂಥ ಯೋಗ ಸಹ ಇದೆ. ಹಣಕಾಸಿನ ವಿಚಾರದಲ್ಲಿ ಸೋದರ- ಸೋದರಿಯರ ಜತೆಗೆ ಸಣ್ಣ ಮಟ್ಟದ ಮನಸ್ತಾಪ ಅಥವಾ ಅಭಿಪ್ರಾಯ ಭೇದ ಕಾಣಿಸಿಕೊಳ್ಳಬಹುದು. ಆದರೆ ಅದು ಕೂಡ ದಿನದ ಕೊನೆ ಹೊತ್ತಿಗೆ ಸರಿ ಹೋಗಲಿದೆ. ಕೋರ್ಟ್-ಕಚೇರಿ ಮೆಟ್ಟಿಲೇರಬಹುದು ಎಂದು ಆತಂಕಗೊಂಡಿದ್ದ ಸಂಗತಿಗಳನ್ನು ಮಾತನಾಡಿಯೇ ಬಗೆಹರಿಸಿಕೊಳ್ಳುವುದಕ್ಕೆ ಒಂದು ವೇದಿಕೆ ದೊರೆಯಲಿದೆ. ಕೆಲವು ಪ್ರಭಾವಿಗಳು ನಿಮಗೆ ನೆರವು ನೀಡಬಹುದು. ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಮಕ್ಕಳ ಬೆಳವಣಿಗೆಯಿಂದ ಸಂತಸ ಇದೆ.

ಲೇಖನ- ಎನ್‌.ಕೆ.ಸ್ವಾತಿ

ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ
ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ
ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?