AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 6ರ ದಿನಭವಿಷ್ಯ

Numerology Prediction: ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 6ರ ಮಂಗಳವಾರದ ನಿಮ್ಮ ದಿನ ಭವಿಷ್ಯ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 6ರ ದಿನಭವಿಷ್ಯ
ದಿನ ಭವಿಷ್ಯ
TV9 Web
| Edited By: |

Updated on:Dec 06, 2022 | 8:57 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು (Numerology Daily Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 6ರ ಮಂಗಳವಾರದ ದಿನ ಭವಿಷ್ಯ (Horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ಈ ದಿನ ಹಣಕಾಸಿನ ಹರಿವಿಗೆ ಅಂಥ ದೊಡ್ಡ ಸಮಸ್ಯೆ ಏನೂ ಕಾಡುವುದಿಲ್ಲ. ಸಾಂಸಾರಿಕವಾಗಿಯೂ ನೆಮ್ಮದಿ ಇರಲಿದೆ. ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ. ಸಂಬಂಧ ವೃದ್ದಿ ಆಗುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸ ಇರುತ್ತದೆ. ಯಾವುದೇ ಕೆಲಸವನ್ನು ಮಾಡಿ ಮುಗಿಸಬಲ್ಲ ಚಾಕಚಕ್ಯತೆ ಬರುತ್ತದೆ.

ಜನ್ಮಸಂಖ್ಯೆ 2

ಸಂಸಾರದಲ್ಲಿ ಸಂತೋಷ, ನೆಮ್ಮದಿಯ ವಾತಾವರಣ, ಹಣಕಾಸಿನ ಸಮಸ್ಯೆಗಳು ಇಳಿಮುಖ ಆಗುವುದು. ನೀವು ಅಂದುಕೊಂಡಂತೆ ಆಸ್ತಿ- ವಾಹನಗಳ ಖರೀದಿಗೆ ಅನುಕೂಲ, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವವರ ಜತೆಗೆ ನಿಮ್ಮ ಸ್ನೇಹ- ಸಂಬಂಧ ವೃದ್ದಿ ಆಗುವುದು ಇತ್ಯಾದಿ ಶುಭ ಫಲಗಳನ್ನು ಈ ದಿನ ಕಾಣಲಿದ್ದೀರಿ.

ಜನ್ಮಸಂಖ್ಯೆ 3

ಆಕಸ್ಮಿಕವಾಗಿ ಭೂಮಿ ಲಾಭ ಆಗುವುದೋ ಅಥವಾ ಯಾವುದಾದರೂ ಬಗೆಯಲ್ಲಿ ನಿಮ್ಮ ಹೆಸರಿಗೆ ಮನೆಯೊಂದು ಬರುವುದೋ ಅಥವಾ ದೊಡ್ಡ ಮೊತ್ತವೊಂದು ಕೈ ಸೇರುವುದೋ ಆಗುತ್ತದೆ. ಈ ಅವಧಿಯಲ್ಲಿ ದುಡ್ಡಿನ ವಿಚಾರಕ್ಕೆ ಎಚ್ಚರಿಕೆಯಿಂದ ಮುಂದಕ್ಕೆ ಹೆಜ್ಜೆ ಇಡಿ. ಸಣ್ಣ- ಪುಟ್ಟ ಅನಾರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡದೆ ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ.

ಜನ್ಮಸಂಖ್ಯೆ 4

ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಮಹತ್ತರವಾದ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದು. ಆದಾಯದ ಮೂಲ ಹೆಚ್ಚಾಗಲಿದೆ. ಸಂಬಳ ಹೆಚ್ಚಳ, ಬಡ್ತಿ, ಹೊಸ ವ್ಯಾಪಾರದ ಆಲೋಚನೆಗಳು ಬರಲಿದೆ. ವ್ಯಾಪಾರವನ್ನು ಹೊಸದಾಗಿ ಆರಂಭಿಸಬೇಕು ಎಂದುಕೊಂಡವರಿಗೆ ಅನುಕೂಲಕರವಾದ ವೇದಿಕೆ ದೊರೆಯಲಿದೆ.

ಜನ್ಮಸಂಖ್ಯೆ 5

ವಯಸ್ಸಾದ, ಅನಾರೋಗ್ಯ ಪೀಡಿತ ತಾಯಿ ಇದ್ದಲ್ಲಿ ಸೂಕ್ತ ವೈದ್ಯೋಪಚಾರ ಮಾಡಿಸಿ. ನಿಮ್ಮಿಂದ ಸಾಧ್ಯ ಆಗುವಂಥದ್ದರ ಬಗ್ಗೆ ಮಾತ್ರ ಮಾತು ನೀಡಿ, ಇಲ್ಲದಿದ್ದರೆ ಮಾತು ತಪ್ಪುವಂತಾಗುತ್ತದೆ. ಮೇಲಧಿಕಾರಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ಜತೆಗೆ ವ್ಯವಹಾರದಲ್ಲಿ ನಿರ್ಲಕ್ಷ್ಯ ಬೇಡ.

ಜನ್ಮಸಂಖ್ಯೆ 6

ಈ ದಿನ ನಿಮ್ಮಲ್ಲಿ ಪಾಪ ಕರ್ಮಗಳ ಬಗ್ಗೆ ಆಸಕ್ತಿ ಹೆಚ್ಚು ಆಗುತ್ತವೆ. ಸಂಗಾತಿ ಬಗ್ಗೆ ಇಲ್ಲ ಸಲ್ಲದ ಅನುಮಾನ, ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಸೆಳೆತ ಇತ್ಯಾದಿ ಅನಪೇಕ್ಷಿತ ಆಲೋಚನೆಗಳು ಬರುತ್ತವೆ. ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಗಣಪತಿ- ಸುಬ್ರಹ್ಮಣ್ಯ ಆರಾಧನೆ ಮಾಡಿ.

ಜನ್ಮಸಂಖ್ಯೆ 7

ದೇಹದ ತೂಕದ ಕಡೆಗೆ ಗಮನ ನೀಡಿ. ಕಾನೂನು ವ್ಯಾಜ್ಯಗಳು, ಜಾಮೀನು ನಿಂತು, ಆ ನಂತರ ಹಣಕಾಸು ಸಂಸ್ಥೆಗಳಿಂದ ನೋಟಿಸ್ ಪಡೆಯುವುದು ಇತ್ಯಾದಿ ಸಾಧ್ಯತೆಗಳಿವೆ. ಆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳು ಕಾಣಿಸಬಹುದು. ಗುಪ್ತಾಂಗ ಕಾಯಿಲೆ ಸಹ ಕಾಣಿಸಿಕೊಳ್ಳಬಹುದು. ಸಂಸಾರದಲ್ಲಿ ಕಲಹ ಆಗದಂತೆ ಎಚ್ಚರಿಕೆ ವಹಿಸಿ.

ಜನ್ಮಸಂಖ್ಯೆ 8

ಆಲಸ್ಯವನ್ನು ತೊರೆಯುವುದು ಮುಖ್ಯ ಹಾಗೂ ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ಪಾವತಿ ಸರಿಯಾದ ಸಮಯಕ್ಕೆ ಮಾಡಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಪಾರ್ಟನರ್‌ಷಿಪ್ ವ್ಯವಹಾರಗಳು ಮಾಡುತ್ತಿರುವವರು ಕಮ್ಯುನಿಕೇಷನ್ ಗ್ಯಾಪ್ ಆಗದಂತೆ ಎಚ್ಚರವಾಗಿರಬೇಕು. ಸಂಗಾತಿಯಿಂದ ಯಾವ ವಿಚಾರವನ್ನು ಮುಚ್ಚಿಡಬೇಡಿ.

ಜನ್ಮಸಂಖ್ಯೆ 9

ಗುರುಗಳ ಅನುಗ್ರಹದಿಂದ ತೀರ್ಥಕ್ಷೇತ್ರ ದರ್ಶನ, ಗುರುಗಳ ಆರಾಧನೆಗೆ ಅವಕಾಶ, ಮನೆಯಲ್ಲಿ ನೆಮ್ಮದಿ ವಾತಾವರಣ, ಸಜ್ಜನರ ಸಹವಾಸ, ವ್ಯಾಪಾರ- ವ್ಯವಹಾರದಲ್ಲಿ ಲಾಭ ಇತ್ಯಾದಿ ಶುಭ ಫಲಗಳನ್ನು ಈ ದಿನ ಕಾಣಲಿದ್ದೀರಿ. ಹಿತಶತ್ರುಗಳು ಹಾಗೂ ನಿಮ್ಮದೇ ವ್ಯಸನಗಳ ಬಗ್ಗೆ ಎಚ್ಚರಿಕೆ ಇರಲಿ.

ಲೇಖನ- ಎನ್‌.ಕೆ.ಸ್ವಾತಿ

Published On - 8:57 am, Tue, 6 December 22