AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಈ ರಾಶಿಯವರು ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ಕೊಡಲಿದ್ದೀರಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಆಗಸ್ಟ್​. 24: ಸಮಯದ ಬೆಲೆಯನ್ನು ನೀವು ಇಂದು ಅರ್ಥಮಾಡಿಕೊಳ್ಳುವಿರಿ. ನಿಮ್ಮ ಬಗ್ಗೆ ಇರುವ ಭಾವನೆಗಳು ಬದಲಾಗಬಹುದು. ಇಷ್ಟಪಟ್ಟಿದ್ದನ್ನು ನೀವು ಪಡೆದುಕೊಳ್ಳುವಿರಿ. ವಿದ್ಯಾಭ್ಯಾಸಕ್ಕೆ ಸಮಯ ಹೊಂದಿಕೆ ಕಷ್ಟವಾದೀತು. ಮನೋವ್ಯಥೆಯನ್ನು ನೀವು ನಿಧಾನವಾಗಿ ಕಳೆದುಕೊಳ್ಳುವಿರಿ. ಹಾಗಾದರೆ ಆಗಸ್ಟ್​ 24ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರು ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ಕೊಡಲಿದ್ದೀರಿ
ಈ ರಾಶಿಯವರು ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ಕೊಡಲಿದ್ದೀರಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 24, 2024 | 12:15 AM

Share

ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದೊಂದಿಗೆ ಸಂಬಂಧಿಸಿದೆ. ಜ್ಯೋತಿಷ್ಯವು ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ಚಿಹ್ನೆಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಶೂಲ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:48 ಗಂಟೆ, ರಾಹು ಕಾಲ ಬೆಳಿಗ್ಗೆ 09:28 ರಿಂದ 11:01, ಯಮಘಂಡ ಕಾಲ ಮಧ್ಯಾಹ್ನ 02:08 ರಿಂದ 03:42ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:21 ರಿಂದ 07:55ರ ವರೆಗೆ.

ಸಿಂಹ ರಾಶಿ: ಇಂದು ಮನೆಯನ್ನು ನೋಡಿಕೊಳ್ಳುವ ಹೊಣೆ ನಿಮಗೆ ಸಿಗಲಿದೆ. ನಿಮ್ಮ ಉತ್ಸಾಹವೇ ನಿಮಗೆ ಶಾಪವಾದೀತು. ತುಂಬಾ ದಿನಗಳಿಂದ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಲಿದೆ. ನಿಮ್ಮ ಉದ್ಯೋಗಕ್ಕೆ ಬೇಕಾದ ಸಲಹೆಗಳನ್ನು ನೀವು ತೆಗೆದುಕೊಳ್ಳಬೇಕಾಗಬಹುದು. ಆದಷ್ಟು ಗುಂಪುಗಾರಿಕೆಯನ್ನು ಸಾಮೂಹಿಕವಾದ ಕಾರ್ಯದಲ್ಲಿ ಮಾಡುವುದು ಬೇಡ. ಹೆಚ್ಚಿನ ಕೆಲಸಗಳನ್ನು ನೀವು ಮುಂದೂಡಲಿದ್ದೀರಿ. ಎಲ್ಲದಕ್ಕೂ ನೀವು ಇನ್ನೊಬ್ಬರನ್ನು ಬೊಟ್ಟು ಮಾಡಿಸಲಿದ್ದೀರಿ. ನಿಮ್ಮ ಮನವೊಲಿಸಲು ಬಹಳ ಕಷ್ಟವಾದೀತು. ಸಂಗಾತಿಯ ವಿಷಯದಲ್ಲಿ ನಿಮಗೆ ಬೇಸರವಾಗಲಿದೆ. ಸುಖವನ್ನು ಪಡೆಯಲು ನೀವು ಬೇರೆ ಮಾರ್ಗವನ್ನು ಹುಡುಕುವಿರಿ.‌ ಕೆಟ್ಟ ಅಭ್ಯಾಸವನ್ನು ಆರಂಭಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಸಾಮರ್ಥ್ಯವನ್ನು ತೋರಿಸುವಿರಿ. ಹಣಸಂಪಾದನೆಯ ವಿಚಾರವೇ ತಲೆಯಲ್ಲಿ ಓಡಾಡಲಿದೆ‌. ತೋರಿಕೆಗೆ ಮಾತ್ರ ದಾನ ಬೇಡ, ಮನಸ್ಸಿನಿಂದ ಇರಲಿ ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು. ನಿಮ್ಮವರೆಂದುಕೊಂಡವರು ನಿಮ್ಮವರಾಗದೇ ಇರಬಹುದು.

ಕನ್ಯಾ ರಾಶಿ: ಇಂದು ನಿಮ್ಮ ಉದ್ಯಮದಲ್ಲಿ ಆದ ನಷ್ಟದಿಂದ ಮನಸಿನೊಳಗೆ ಸಂಕಟಪಡುವಿರಿ. ತಂತ್ರಜ್ಞಾನದಿಂದ ನಿಮ್ಮ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳುವಿರಿ. ಸಮಯದ ಬೆಲೆಯನ್ನು ನೀವು ಇಂದು ಅರ್ಥಮಾಡಿಕೊಳ್ಳುವಿರಿ. ನಿಮ್ಮ ಬಗ್ಗೆ ಇರುವ ಭಾವನೆಗಳು ಬದಲಾಗಬಹುದು. ಇಷ್ಟಪಟ್ಟಿದ್ದನ್ನು ನೀವು ಪಡೆದುಕೊಳ್ಳುವಿರಿ. ವಿದ್ಯಾಭ್ಯಾಸಕ್ಕೆ ಸಮಯ ಹೊಂದಿಕೆ ಕಷ್ಟವಾದೀತು. ಮನೋವ್ಯಥೆಯನ್ನು ನೀವು ನಿಧಾನವಾಗಿ ಕಳೆದುಕೊಳ್ಳುವಿರಿ. ನಿಮಗೆ ಸಮ್ಮಾನ ಮಾಡಲು ಆಪ್ತರು ನಿಶ್ಚಯಿಸುವರು. ನೂತನ ವಸ್ತುಗಳನ್ನು ಪಡೆದುಕೊಳ್ಳುವವರಿದ್ದೀರಿ. ನಿಮ್ಮ ಸಿಟ್ಟಿಗೆ ಮನೆಯಲ್ಲಿ ಭಯ ಉಂಟಾಗಬಹುದು. ಕಲಾವಿದರಿಗೆ ಉತ್ತಮ ವ್ಯವಸ್ಥೆ ಇಂದು ಸಿಗಲಿದೆ. ಕುಟುಂಬದಿಂದ‌ ನಿಮಗೆ ಬೇಕಾದ ಸಹಕಾರ ಸಿಗಲಿದೆ. ಮಕ್ಕಳು ನಿಮ್ಮನ್ನು ಪ್ರೀತಿಸುವರು. ಅನಾರೋಗ್ಯದ ಕಾರಣ ಉತ್ಸಾಹದ ಯಾವ ಕಾರ್ಯವನ್ನೂ ಮಾಡಲಾಗದು. ಕೃಷಿಯ ಚಟುವಟಿಕೆಯಲ್ಲಿ ನೀವು ಭಾಗಿಯಾಗುವಿರಿ.

ತುಲಾ ರಾಶಿ: ನಿಮ್ಮ ಕಾರ್ಯದಕ್ಷತೆಗೆ ಜವಾಬ್ದಾರಿಗಳು ಬದಲಾಗಲಿವೆ. ಚೆನ್ನಾಗಿರುವ ವ್ಯವಸ್ಥೆಯನ್ನು ಇನ್ನೂ ಚೆನ್ನಾಗಿ ಮಾಡಲು ಹೋಗಿ ಹಾಳು ಮಾಡುವಿರಿ. ಮಾನಸಿಕ ತೊಂದರೆಯನ್ನು ಅನುಭವಿಸುವಿರಿ. ತಾಳ್ಮೆಯಿಂದ ಇರುವುದು ಇಂದು ನಿಮಗೆ ಕಷ್ಟವಾದೀತು. ಇನ್ನೊಬ್ಬರ ಮಾತಿಗೆ ಅವಕಾಶವನ್ನು ಮಾಡಿಕೊಡಿ. ಕೃಷಿಯಲ್ಲಿ ನೀವು ಹೊಸ ವಿಧಾನವನ್ನು ರೂಪಿಸಿಕೊಳ್ಳುವಿರಿ‌‌. ಸೌಂದರ್ಯಕ್ಕೆ ಹೆಚ್ಚಿನ ಮಹತ್ತ್ವವನ್ನು ಕೊಡಲಿದ್ದೀರಿ. ವಿದೇಶಕ್ಕೆ ಹೋಗುವುದು ಕಾರಣಾಂತರಗಳಿಂದ ನಿಂತುಹೋದೀತು. ಬಹಳ ದಿನಗಳ ಅನಂತರ ಭೇಟಿಯಾದ ಮಿತ್ರನಿಗೆ ಆತಿಥ್ಯ ಮಾಡುವಿರಿ. ಮಿತ್ರರ ಮೂಲಕ ನಿಮ್ಮ ವಿವಾಹವು ಸಂಭವಿಸುವುದು. ತಂದೆ, ತಾಯಿಗಳು ಮಕ್ಕಳ‌ ಮೇಲೆ ಕಣ್ಣಿಡುವುದು ಒಳ್ಳೆಯದು. ಮಕ್ಕಳ‌ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ. ನಿಮ್ಮ ಮಾತು ಸತ್ಯವೇ ಆದರೂ ಅದನ್ನು ಹೇಳುವ ರೀತಿಯಲ್ಲಿ ಹೇಳಿ.

ವೃಶ್ಚಿಕ ರಾಶಿ: ನಿಮಗೆ ಸಿಗುವ ಸಾಮಾಜಿಕವಾಗಿ ಮನ್ನಣೆಯು ಅಧಿಕ ಕಾರ್ಯವನ್ನು ಮಾಡುವಂತೆ ಮಾಡೀತು. ಮಕ್ಕಳ ಆರೋಗ್ಯದ ಕಾರಣದಿಂದ ನೀವು ಕಛೇರಿಗೆ ವಿರಾಮ‌ ಹಾಕಬೇಕಸದೀತು. ನಿಮ್ಮ ತಪ್ಪನ್ನು ಒಪ್ಪಿಕೊಳ್ಳದೇ ಎಲ್ಲರನ್ನೂ ಶಪಸುವುದು ಸರಿಯಲ್ಲ. ನಿಮ್ಮವರ ಸಲಹೆಯನ್ನು ಪಡೆದು ಕೆಲಸಕ್ಕೆ ಹೋಗುವುದು ಒಳ್ಳೆಯದು. ನಿಮ್ಮ ಪರೀಕ್ಷೆಯ ಕಾಲವಾಗಿದ್ದು ನೀವು ಅದನ್ನು ದಾಟಲು ಶ್ರಮಪಡಬೇಕಾದೀತು. ಆಕಸ್ಮಿಕವಾಗಿ ವಸ್ತುವನ್ನು ಕಳೆದುಕೊಳ್ಳುವಿರಿ. ಅನಿವಾರ್ಯವಿದ್ದಾಗ ಮಾತ್ರ ಪ್ರಯಾಣ ಮಾಡಿ. ಬಂಧುಗಳ ನಡುವೆ ಕಲಹವಾಗಬಹುದು. ಅವರು ನಿಮ್ಮಿಂದ ದೂರ ಉಳಿಯಬಹುದು. ನಿಮಗೆ ಕಿರಿಕರಿಯಾಗುವ ಸ್ಥಳದಿಂದ‌ ದೂರವಿರಲು ಪ್ರಯತ್ನಿಸುವಿರಿ. ದೇಹವನ್ನು ದಂಡಿಸುವುದು ಪ್ರಮಾಣಬದ್ಧವಾಗಿರಲಿ. ಸರಿಯಾದ ಮಾರ್ಗವನ್ನು ಅನುಸರಿಸಿ. ನಿಮ್ಮ‌ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸಿ ಪಡೆದುಕೊಳ್ಳುವಿರಿ.

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!