Weekly Horoscope ವಾರ ಭವಿಷ್ಯ: ಮುಂದಿನ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ

Weekly Horoscope ವಾರ ಭವಿಷ್ಯ: ಮುಂದಿನ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ
ವಾರ ಭವಿಷ್ಯ

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

TV9kannada Web Team

| Edited By: Skanda

Aug 07, 2021 | 6:45 AM

ವಾರ ಭವಿಷ್ಯ: ತಾ.9-08-2021 ರಿಂದ ತಾ.15-08-2021 ರವರೆವಿಗೆ.

ಮೇಷ ರಾಶಿ: ಎಲ್ಲರೊಂದಿಗೂ ಅತಿಯಾದ ಸಲುಗೆ ಬೇಡ. ದೂರದಪ್ರಯಾಣ ದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಅತಿ ಭಾವುಕತೆ ಒಳ್ಳೆಯದಲ್ಲ. ಜಗತ್ತು ನೀವಂದುಕೊಂಡ ಹಾಗೆ ಇಲ್ಲ. ತಂದೆ ತಾಯಿ ಆರೋಗ್ಯದಲ್ಲಿ ಸುಧಾರಣೆ. ಸಿನಿಮಾ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ಅವಕಾಶಗಳು ಸಿಗಲಿವೆ. ಕೆಲಸದಲ್ಲಿ ನಿರೀಕ್ಷಿತ ಪ್ರಗತಿಯಾಗಲಿದೆ. ಅದೃಷ್ಟ ಬಣ್ಣ: ಕೆಂಪು ಬಣ್ಣ ಅದೃಷ್ಟ ಸಂಖ್ಯೆ: 9

ವೃಷಭ ರಾಶಿ: ಏನೋ ಅಂದುಕೊಂಡಿದ್ದರೂ ಆ ಕಡೆಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಹತ್ತಿರದವರೊಂದಿಗೆ ಮೃದುವಾಗಿ ವರ್ತಿಸಿ, ಆರ್ಥಿಕವಾಗಿ ಲಾಭವಾಗಲಿದೆ. ಕೋಪ ಬಂದಾಗ ಹೆಚ್ಚು ಮಾತನಾಡಲು ಹೋಗಬೇಡಿ. ಮಾಡುವ ಕೆಲಸದಲ್ಲಿ ಹೆಚ್ಚು ಶ್ರದ್ಧೆ ಮುಖ್ಯ. ಹೊಸವಸ್ತು ಕೊಳ್ಳುವ ಅನಿವಾರ್ಯ ಎದುರಾಗಲಿದೆ. ಅದೃಷ್ಟ ಬಣ್ಣ: ಹಳದಿ ಬಣ್ಣ ಅದೃಷ್ಟ ಸಂಖ್ಯೆ: 6

ಮಿಥುನ ರಾಶಿ: ದೊಡ್ಡ ದೊಡ್ಡ ನಿರ್ಧಾರಗಳನ್ನು ಹೆಚ್ಚು ಸಮಯ ಮುಂದೂಡಬೇಡಿ. ಮದುವೆ ಮೊದಲಾದ ಶುಭ ಸಂದರ್ಭಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವಿರಿ. ಕೆಲಸ ಕಾರ್ಯಗಳಲ್ಲಿ ಒತ್ತಡ ಹೆಚ್ಚಾಗಲಿದೆ. ಅನಿರೀಕ್ಷಿತ ಘಟನೆಗಳು ಎದುರಾಗಲಿವೆ. ಎಲ್ಲವನ್ನೂ ಶಾಂತ ಚಿತ್ತದಿಂದ ಎದುರಿಸಿದರೆ ಒಳ್ಳೆಯ ಫಲ ದೊರಕಲಿದೆ. ಸ್ವಂತ ಮನೆ ಕನಸು ಕೈಗೂಡಲಿದೆ. ಅದೃಷ್ಟ ಬಣ್ಣ: ಹಸಿವು ಬಣ್ಣ ಅದೃಷ್ಟ ಸಂಖ್ಯೆ: 6

ಕಟಕ ರಾಶಿ: ಲಕ್ಷ್ಮೀ ಮನೆಗೆ ಬರುತ್ತಾಳೆ. ಖುಷಿಯ ವಿಷಯ ವಾದರೂ ಜಾಸ್ತಿ ಸಂಭ್ರಮ ಬೇಡ. ಆರೋಗ್ಯದ ಮೇಲೆ ಜಾಸ್ತಿ ನಿಗಾ ಇರಲಿ. ಕೆಲಸದ ಒತ್ತಡ ನಿಭಾಯಿಸುವ ಶಕ್ತಿಯನ್ನು ಒಟ್ಟು ಮಾಡಿಟ್ಟುಕೊಳ್ಳಿ. ಅಗತ್ಯವಾದ ವಿಚಾರಗಳ ಕಡೆಗೆ ಮಾತ್ರ ನಿಮ್ಮ ಗಮನವಿರಲಿ. ಖರ್ಚು ಕಡಿಮೆ ಮಾಡಿಕೊಳ್ಳಿ. ವಾಸಸ್ಥಳವನ್ನು ಬದಲಾಯಿಸಬೇಕಾಗುತ್ತದೆ. ಅದೃಷ್ಟ ಬಣ್ಣ: ಬಿಳಿಪು ಬಣ್ಣ ಅದೃಷ್ಟ ಸಂಖ್ಯೆ: 2

ಸಿಂಹ ರಾಶಿ: ನಿರ್ಧಿಷ್ಟ ಕಾಲಮಿತಿಯಲ್ಲಿ ಅಂದುಕೊಂಡ ಕಾರ್ಯಗಳನ್ನು ಮಾಡಿ ಮುಗಿಸುವಿರಿ. ನೀವು ಕೈಹಾಕಿದ ಕೆಲಸಗಳೆಲ್ಲಕ್ಕೂ ಒಳ್ಳೆಯ ಫಲಿತಾಂಶ ಸಿಗಲಿದೆ. ಹೆಚ್ಚು ಮೊಬೈಲ್ ಬಳಕೆ ಒಳ್ಳೆಯದಲ್ಲ. ಕೆಲಸದ ಸ್ಥಳದಲ್ಲಿ ಅನಾವಶ್ಯಕ ಕಿರಿಕಿರಿಗಳಿಂದ ಮುಕ್ತಿ ದೊರಕಲಿದೆ. ನಿಮ್ಮಕೆಲಸಗಳಿಂದ ಹೆತ್ತವರು ಹೆಮ್ಮೆ ಪಡಲಿದ್ದಾರೆ. ಅದೃಷ್ಟ ಬಣ್ಣ: ಕೇಸರಿ ಬಣ್ಣ ಅದೃಷ್ಟ ಸಂಖ್ಯೆ: 1

ಕನ್ಯಾ ರಾಶಿ: ಒಂದೇ ವಿಚಾರದ ಬಗ್ಗೆ ಹೆಚ್ಚು ಯೋಚನೆ ಮಾಡುವುದು ಬೇಡ. ನಿಮ್ಮ ಶಕ್ತಿಗೆ ಅನುಗುಣವಾದಕೆಲಸ ಆಯ್ಕೆ ಮಾಡಿಕೊಳ್ಳಿ. ಹೆಚ್ಚಿನ ಭಾರವನ್ನುಹೊತ್ತು ಒದ್ದಾಡುವುದು ತರವಲ್ಲ. ತುಂಬಾ ಹಿಂದೆ ಮಾಡಿದ ಕೆಲಸಕ್ಕೆ ಒಳ್ಳೆಯ ಫಲ ದೊರಕಲಿದೆ. ನಾಳೆಗಳಿಗಾಗಿ ಒಂದಷ್ಟು ಪೂರ್ವ ತಯಾರಿಯನ್ನು ಮಾಡಿಕೊಳ್ಳಿ. ಶುಭವಾರ್ತೆ ಕೇಳುವಿರಿ. ಅದೃಷ್ಟ ಬಣ್ಣ: ಬೂದು ಬಣ್ಣ ಅದೃಷ್ಟ ಸಂಖ್ಯೆ: 5

ತುಲಾ ರಾಶಿ: ಸ್ವಲ್ಪ ಯೋಚಿಸಿ ಮುಂದಡಿಯಿಟ್ಟರೆ ಧನಲಾಭ. ವಾರಪೂರ್ತಿ ಸಂತಸದಿಂದ ಇರುವಿರಿ. ಜಾಣತನದ ಮಾತು ಲಾಭ ತಂದುಕೊಡಲಿದೆ. ನಿಧಾನವಾಗಿ ಯೋಚಿಸಿ ಸಂಬಂಧ ಬೆಸೆಯಲು ಮುಂದಾಗಿ. ಆಗುವುದೆಲ್ಲಾ ಒಳ್ಳೆಯದಕ್ಕೆ ಅನ್ನುವುದರಲ್ಲಿ ನಂಬಿಕೆ ಇರಲಿ. ಮದುವೆಯ ಯೋಗವಿದೆ. ಅದೃಷ್ಟ ಬಣ್ಣ: ಕಂದು ಬಣ್ಣ ಅದೃಷ್ಟ ಸಂಖ್ಯೆ: 3

ವೃಶ್ಚಿಕ ರಾಶಿ: ಮೊದಲು ನಿಮ್ಮ ಕೆಲಸಗಳ ಕಡೆಗೆ ಗಮನವಿಡಿ. ತದನಂತರ ಸ್ನೇಹಿತರಿಗೆ ನೆರವಾಗಿ. ಔದ್ಯೋಗಿಕವಾಗಿ ಇನ್ನಷ್ಟು ವೇಗ ಹೆಚ್ಚಿಸಿಕೊಳ್ಳುವತ್ತ ಗಮನಹರಿಸುವಿರಿ. ಸುಂದರವಾದ ಕ್ಷೇತ್ರಗಳಿಗೆ ಗೆಳೆಯರೊಂದಿಗೆ ಪ್ರವಾಸ ಮಾಡುವ ಯೋಗ ಬರಲಿದೆ. ಆರೋಗ್ಯದಲ್ಲಿ ಸ್ಥಿರತೆ. ಅದೃಷ್ಟ ಬಣ್ಣ: ಆರೆಂಜ್ ಬಣ್ಣ ಅದೃಷ್ಟ ಸಂಖ್ಯೆ: 7

ಧನಸ್ಸುರಾಶಿ: ಸಂಬಂಧದಲ್ಲಿ ಸಣ್ಣ ಕೋಲಾಹಲ. ನಿಮ್ಮ ಹತ್ತಿರದವರಿಗೆ ಸಿಟ್ಟು ಬರಿಸದೇ ಇರುವುದು ಒಳ್ಳೆಯದು. ದುಡ್ಡಿನ ವಿಷಯದಲ್ಲಿ ಅಗತ್ಯಕ್ಕಿಂತ ಜಾಸ್ತಿಯೇ ಹುಷಾರಾಗಿರಿ. ಗೆಳೆಯರ ಮಾತಿಗೆ ಹೆಚ್ಚು ಬೆಲೆನೀಡುವಿರಿ. ಆರೋಗ್ಯದ ಕಡೆ ಗಮನವಿರಲಿ. ಹತ್ತಿರದ ಬಂಧುಗಳಿಗೆ ಆರ್ಥಿಕ ಸಹಾಯ ಮಾಡುವಿರಿ. ಅದೃಷ್ಟ ಬಣ್ಣ: ಗುಲಾಬಿ ಬಣ್ಣ ಅದೃಷ್ಟ ಸಂಖ್ಯೆ: 3

ಮಕರ ರಾಶಿ: ಅತಿಯಾದ ದುಂದು ವೆಚ್ಚ ಬೇಡ. ಹೊಸ ವಾಹನಕೊಳ್ಳುವ ಯೋಜನೆಯನ್ನು ಕೊಂಚ ಮುಂದಕ್ಕೆ ಹಾಕಿ. ದಾಯಾದಿಗಳೊಂದಿಗೆ ಕಲಹ ಬೇಡ. ಮನಸ್ಸು ನಿಮ್ಮಹಿಡಿತದಲ್ಲಿರಲಿ. ಹೊಸ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರದಿಂದಿರಿ. ಹಿರಿಯರ ಸಲಹೆ ಅಗತ್ಯ. ಅದೃಷ್ಟ ಬಣ್ಣ: ಕಪು ಬಣ್ಣ ಅದೃಷ್ಟ ಸಂಖ್ಯೆ: 4

ಕುಂಭ ರಾಶಿ: ನೆಮ್ಮದಿಯ ನಾಳೆಗಾಗಿ ಇಂದಿನಿಂದಲೇ ತಯಾರಿಮಾಡಿಕೊಳ್ಳಿ. ಒತ್ತಡದಿಂದ ಹೊರಗೆ ಬರುವಿರಿ.ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಮಕ್ಕಳವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದೆ. ಸಿಕ್ಕ ಅವಕಾಶಗಳನ್ನುಸರಿಯಾಗಿ ಬಳಕೆ ಮಾಡಿಕೊಳ್ಳಿ. ಅಸಕ್ತರಿಗೆ ನೆರವಾಗುವಿರಿ. ರೈತಾಪಿವರ್ಗಕ್ಕೆ ಲಾಭವಾಗಲಿದೆ. ಕೆಲಸದಲ್ಲಿ ಪ್ರಗತಿ. ಅದೃಷ್ಟ ಬಣ್ಣ: ನೀಲಿ ಬಣ್ಣ ಅದೃಷ್ಟ ಸಂಖ್ಯೆ: 8

ಮೀನ ರಾಶಿ: ವ್ಯಾಪಾರಕ್ಕೆ ಸಂಬಂಧಿಸಿದಂತೆ ದುಡುಕ ಬೇಡ. ಮನೆಯಲ್ಲಿ ಮುನಿಸು ಬೇಡ. ಮಕ್ಕಳ ಪ್ರೀತಿಯಿಂದಹೆಚ್ಚು ಸಂತೋಷಪಡುವಿರಿ. ಅಂದುಕೊಂಡಂತೆಮಹತ್ವದ ಘಟನೆಗಳು ನೆರವೇರಲಿವೆ. ನಿಧಾನವಾಗಿ ಮುಂದಡಿ ಇಡಿ. ಖರ್ಚಿನಲ್ಲಿ ಮಿತ ಸಾಧಿಸಿ. ಮನೆಯ ವಾಸ್ತು ದೋಷ ನಿವಾರಣೆಗಾಗಿ ಸರಿಯಾದ ಮಾರ್ಗ ಕಂಡುಕೊಳ್ಳಿ. ಅದೃಷ್ಟ ಬಣ್ಣ: ಹಳದಿ ಬಣ್ಣ ಅದೃಷ್ಟ ಸಂಖ್ಯೆ: 3

Dina Bhavishya

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

Follow us on

Related Stories

Most Read Stories

Click on your DTH Provider to Add TV9 Kannada