Weekly Horoscope: ವಾರ ಭವಿಷ್ಯ: ಏಪ್ರಿಲ್ 06 ರಿಂದ ಏಪ್ರಿಲ್ 13 ರವರೆಗೆ ವಾರ ಭವಿಷ್ಯ
ಏಪ್ರಿಲ್ ತಿಂಗಳ ಎರಡನೇ ವಾರ 06-03-2025ರಿಂದ 13-04-2025ರವರೆಗೆ ಇರಲಿದೆ. ಗುರುವು ವೃಷಭರಾಶಿಯ ಕೊನೆಯ ಭಾಗದಲ್ಲಿ ಇದ್ದಾನೆ. ಇನ್ನೇನು ಕೆಲವೇ ದಿನಗಳಲ್ಲಿ ರಾಶಿ ಬದಲಾವಣೆ ಆಗಲಿದೆ. ಈ ಸಂದರ್ಭದಲ್ಲಿ ಗುರುವು ಕೆಲವು ರಾಶಿಯವರಿಗೆ ಶುಭವನ್ನೂ ಅಶುಭವನ್ನೂ ಕೊಡಲಿದ್ದಾನೆ. ಗುರುದಶೆಯವರಿಗೆ ಅಥವಾ ಜನ್ಮ ಸಮಯದಲ್ಲಿ ಗುರುವು ಬಲಿಷ್ಠನಾಗಿದ್ದರೆ ಅಶುಭದ ಫಲ ಹೆಚ್ಚು ಇರದು. ಗುರುಚರಿತ್ರೆ ಹಾಗೂ ಗುರುದರ್ಶನ, ಗುರು ಸೇವೆಯನ್ನು ಮಾಡಿ ಬರುವ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.

ಏಪ್ರಿಲ್ ತಿಂಗಳ ಎರಡನೇ ವಾರ 06-03-2025ರಿಂದ 13-04-2025ರವರೆಗೆ ಇರಲಿದೆ. ಗುರುವು ವೃಷಭರಾಶಿಯ ಕೊನೆಯ ಭಾಗದಲ್ಲಿ ಇದ್ದಾನೆ. ಇನ್ನೇನು ಕೆಲವೇ ದಿನಗಳಲ್ಲಿ ರಾಶಿ ಬದಲಾವಣೆ ಆಗಲಿದೆ. ಈ ಸಂದರ್ಭದಲ್ಲಿ ಗುರುವು ಕೆಲವು ರಾಶಿಯವರಿಗೆ ಶುಭವನ್ನೂ ಅಶುಭವನ್ನೂ ಕೊಡಲಿದ್ದಾನೆ. ಗುರುದಶೆಯವರಿಗೆ ಅಥವಾ ಜನ್ಮ ಸಮಯದಲ್ಲಿ ಗುರುವು ಬಲಿಷ್ಠನಾಗಿದ್ದರೆ ಅಶುಭದ ಫಲ ಹೆಚ್ಚು ಇರದು. ಗುರುಚರಿತ್ರೆ ಹಾಗೂ ಗುರುದರ್ಶನ, ಗುರು ಸೇವೆಯನ್ನು ಮಾಡಿ ಬರುವ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.
ಮೇಷ ರಾಶಿ: ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಈ ರಾಶಿಯವರಿಗೆ ಶುಭ. ದ್ವಿತೀಯದಲ್ಲಿ ಸದ್ಯ ಗುರುವಿನ ಸ್ಥಾನ ಇರುವ ಕಾರಣ ಸಂಪತ್ತು ನಿಮ್ಮನ್ನು ಬಂದು ಸೇರುವುದು. ಯಾವುದೇ ಅಪೇಕ್ಷೆ, ಕಾರಣ, ಸಾಧನಗಳಿಲ್ಲದೇ ಸುಖವಾಗಿ ಇರುವಿರಿ. ನಿಮ್ಮ ವ್ಯಾಪಾರ, ವಹಿವಾಟುಗಳು ಸಮಾಧಾನವನ್ನು ತರಬಹುದು. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳಿಗೆ ಸಹಾಯ ಮಾಡುವಿರಿ. ನಿಮ್ಮ ಮಾತಿಗೆ ಹೆಚ್ಚು ಗೌರವ ಸಿಗುವುದು. ನಿಮ್ಮನ್ನು ವಿರೋಧಿಸುವ ವ್ಯಕ್ತಿಗಳನ್ನು ಮಾತಿನ ಮೂಲಕ ಇಲ್ಲವಾಗಿಸುವಿರಿ. ಆರ್ಥಿಕತೆಯ ಸುಧಾರಣೆಗೆ ನಿಮ್ಮದೇ ಯೋಜನೆಗಳನ್ನು ಹಾಕಿಕೊಳ್ಳುವಿರಿ. ದಾಂಪತ್ಯದಲ್ಲಿ ಸುಖವಿದ್ದರೂ ನೆಮ್ಮದಿಯ ಕೊರತೆ ಕಾಣಿಸಬಹುದು. ಬಂಧುಗಳ ಜೊತೆ ದುಃಖವನ್ನು ಹಂಚಿಕೊಳ್ಳುವಿರಿ.
ವೃಷಭ ರಾಶಿ: ಈ ರಾಶಿಯವರಿಗೆ ದೇಶದಿಂದ ದೂರವಾಗುವ ಅಥವಾ ಬೇರೆ ದೇಶದಲ್ಲಿ ವಾಸಿಸುವ ಸಂದರ್ಭ ಬರುವುದು. ಶತ್ರುಗಳ ವೃದ್ಧಿ, ನಿಮ್ಮ ವೈಯಕ್ತಿಕ ಕಾರಣಕ್ಕೆ ಧನನಾಶವಾಗುವುದು. ನೀವು ಮಾಡುವ ವೃತ್ತಿಯು ನಿಮಗೆ ಯಶಸ್ಸನ್ನು ಕೊಡಬಹುದು. ಅನಿರೀಕ್ಷಿತ ತಿರುವುಗಳು ಗೊಂದಲವನ್ನು ಉಂಟುಮಾಡೀತು. ನಿಮ್ಮ ಗೆಳೆತನವು ಖುಷಿ ಕೊಡುವುದು. ಅತಿಯಾದ ಆಲೋಚನೆಗಳು ಮಾನಸಿಕ ನೆಮ್ಮದಿಯನ್ನು ದೂರಮಾಡಲಿವೆ. ಅತಿಯಾದ ಸಲುಗೆ ನಿಮಗೆ ಅಸಹ್ಯವಾದೀತು. ಭವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡುವ ಆಲೋಚನೆಯನ್ನು ಮಾಡುವಿರಿ. ಆರ್ಥಿಕವಾಗಿ ಸ್ವಲ್ಪ ಗಟ್ಟಿಯಾಗಬಹುದಾಗಿದೆ. ಕೃಷಿಯ ಕುರಿತು ಆಸಕ್ತಿ ಬರಲಿದೆ.
ಮಿಥುನ ರಾಶಿ: ರಾಶಿ ಚಕ್ರದ ಮೂರನೇ ರಾಶಿಯವರಿಗೆ ಅಶುಭ. ಗುರು ದ್ವಾದಶದಲ್ಲಿ ಇದ್ದು, ಒಂದಿಲ್ಲೊಂದು ಕಾರಣಕ್ಕೆ ದುಃಖವಾಗುವುದು. ಹಣಕಾಸಿನ ವಿಚಾರದಲ್ಲಿ ಅತಿಭಯ. ಬರಬೇಕಾದ ಹಣ ಬರುತ್ತದೋ ಇಲ್ಲವೋ ಅಥವಾ ಹೂಡಿಕೆಯಿಂದ ನಷ್ಟ, ಕಳ್ಳರಿಂದ ಭೀತಿಯಾಗಲಿದೆ. ದೂರದ ಊರಿಗೆ ಪ್ರಯಾಣ ಹೋಗುವ ಯೋಜನೆಗಳನ್ನು ಹಾಕಿಕೊಳ್ಳುವಿರಿ. ನಕಾರಾತ್ಮಕ ಭಾವನೆಗಳಿಗೆ ಅವಕಾಶವನ್ನು ಕೊಡಬೇಡಿ. ನಿಮ್ಮ ಶತ್ರುಗಳನ್ನು ನೀವು ಕಂಡುಕೊಳ್ಳುವಿರಿ. ನಿಮ್ಮ ವ್ಯಕ್ತಿತ್ವದ ಪರೀಕ್ಷೆ ಆಗಲಿದೆ. ಸಜ್ಜನರ ಸಹವಾಸವು ನಿಮಗೆ ಸಿಗಬಹುದು. ಉತ್ತಮ ಮಾರ್ಗದರ್ಶನವನ್ನು ಪಡೆಯುವಿರಿ. ಸ್ವತಂತ್ರವಾಗಿ ಆಲೋಚನೆಗಳನ್ನು ಮಾಡಲಿದ್ದೀರಿ. ಉದ್ಯೋಗದಲ್ಲಿ ತೃಪ್ತಿ ಇರಲಿದೆ.
ಕರ್ಕಾಟಕ ರಾಶಿ: ಈ ತಿಂಗಳಲ್ಲಿ ನಿಮಗೆ ನೀವು ಶುಭ. ಏಕಾದಶದ ಗುರುವು ಸಂತತಿಯಿಂದ ಸಂತಸ ನೀಡುವನು. ಬಹಳ ಚಾತುರ್ಯದಿಂದ ಕೆಲಸವನ್ನು ಮಾಡುವಿರಿ. ಉನ್ನತ ಸ್ಥಾನ ಅಪೇಕ್ಷೆ ಇದ್ದರೆ ಅಥವಾ ಬಯಸದಿದ್ದರೂ ಇರುವ ಸ್ಥಾನಕ್ಕಿಂತ ಎತ್ತರಕ್ಕೆ ಏರುವಿರಿ. ಆರೋಗ್ಯದ ವಿಚಾರದಲ್ಲಿ ಆತುರರಾಗುವುದು ಬೇಡ. ದುಪ್ಪಟ್ಟು ವ್ಯಯಿಸುವ ಸನ್ನಿವೇಶಗಳು ಬರಬಹುದು. ಗೌರವಗಳು ನಿಮ್ಮನ್ನು ಹುಡುಕಿ ಬರಲಿವೆ. ಉದ್ವೇಗದಿಂದ ಕೆಲವೊಂದು ಸಮಸ್ಯೆಗಳನ್ನು ತಂದುಕೊಳ್ಳುವಿರಿ. ನ್ಯಾಯಾಲಯದಲ್ಲಿ ಗೆಲುವು ಸಿಗುವ ಸಾಧ್ಯತೆ ಇದೆ. ಸಂಬಂಧಗಳ ವಿಚಾರದಲ್ಲಿ ನೀವು ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಳ್ಳಿ. ಇಷ್ಟ ಪಟ್ಟು ಮಾಡುವ ಕೆಲಸವು ಸಂತೋಷವನ್ನು ಕೊಡಲಿದೆ. ಸಮಯವಿದೆ ಎಂದು ಸುಮ್ಮನೆ ಕುಳಿತುಕೊಳ್ಳಬೇಡಿ.
ಸಿಂಹ ರಾಶಿ: ಈ ರಾಶಿಯವರಿಗೆ ಅಶುಭ. ವೃತ್ತಿಯಲ್ಲಿ ಸಹೋದ್ಯೋಗಿ ಅಥವಾ ಅಧಿಕಾರಿಗಳ ಕಿರಿಕಿರಿ. ಸಂಬಂಧಗಳ ಬೆಲೆಯಯ ಅರ್ಥವಾಗಲಿದೆ. ಎಲ್ಲವುದನ್ನೂ ವಿರೋಧಿಸುವುದು ನಿಮ್ಮ ಸ್ವಭಾವವಾಗಿರಲಿದೆ. ಮನೆಯಲ್ಲಿಯೇ ಇದ್ದು ಬೇಸರವಾಗಲಿದೆ. ಹೊರಗೆ ಸುತ್ತಾಡಲು ಹೋಗಲಿದ್ದೀರಿ. ಕಛೇರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ನಿಮ್ಮ ಸೇವೆಗೆ ಮೆಚ್ವುಗೆ ಸಿಗಬಹುದು. ಸ್ಥಾನ ಮಾನಗಳು ಇದ್ದಕ್ಕಿದ್ದಂತೆ ತಪ್ಪಿಹೋಗುವುದು. ಮಕ್ಕಳು ನಿಮ್ಮ ನಿಯಂತ್ರಣ ಮೀರಿ ವರ್ತಿಸುವರು. ಸ್ನೇಹಿತರು ನಿಮ್ಮ ಮಾತಿಗೆ ಬೆಲೆ ಕೊಡುವರು. ಸಕಾರಾತ್ಮಕೆ ಚಿಂತನೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಅಪರಿಚಿತ ಕರೆಗಳಿಗೆ ಕಿವಿಗೊಡದೇ ನಿಮ್ಮ ಕೆಲಸವನ್ನು ಮಾಡಿ.
ಕನ್ಯಾ ರಾಶಿ: ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ವಾರ ಶುಭ. ನಿಮ್ಮ ಪುಣ್ಯ ಫಲಕೊಡುವುದು. ಹೊಸದಾಗಿ ಉದ್ಯೋಗವನ್ನು ಅರಸುತ್ತಿದ್ದರೆ ಕೆಲಸಕ್ಕೆ ಹೆಚ್ಚು ಓಡಾಟಗಳು ಆಗುವುದು. ಅಂದುಕೊಂಡ ಕೆಲಸವನ್ನು ಸುಮ್ಮನೆ ಮಾಡಿ ಮುಗಿಸುವಿರಿ. ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ನಿರಂತರ ಯತ್ನವನ್ನು ಮಾಡುವಿರಿ. ಉತ್ತಮವಾದ ಆಹಾರವನ್ನು ತಿನ್ನಬೇಕು ಎಂದು ಬಯಸಿ ಮನೆಯಿಂದ ದೂರ ಹೋಗುವಿರಿ. ಕೃಷಿಯಿಂದ ಸಂಪತ್ತು ಅಥವಾ ಕೃಷಿಭೂಮಿಯಿಂದ ಸಂಪತ್ತು ಸಿಗುವುದು. ಮನೆಯನ್ನು ಕಟ್ಟುವ ವಿಚಾರವು ಸಂಗಾತಿಯಿಂದ ಬರಲಿದ್ದು ಬಹಳ ಸಂತೋಷವಾಗಲಿದೆ. ತಾಯಿಯ ಆರೋಗ್ಯವು ಕೆಡಲಿದ್ದು ಚಿಕಿತ್ಸೆಯನ್ನು ಕೊಡಿಸುವಿರಿ. ಅಲ್ಪ ಭೋಜನದಿಂದ ತೃಪ್ತಿ.
ತುಲಾ ರಾಶಿ: ಈ ರಾಶಿಯವರಿಗೆ ಅಶುಭ. ನೀವು ಮಾಡಬೇಕಾದ ಪ್ರಯಾಣ ಸ್ಥಗಿತವಾಗುವುದು. ಯಾತ್ರೆಯಲ್ಲಿ ನಾನಾರೀತಿಯ ವಿಘ್ನಗಳಿವೆ. ಧನ ನಷ್ಟವಾಗುವುದು. ಆರೋಗ್ಯದಲ್ಲಿ ಅಸ್ಥಿರತೆ, ಅಪಮಾನ, ಚುಚ್ಚು ಮಾತುಗಳು ನಿಮ್ಮನ್ನು ಕುಗ್ಗಿಸುವುದು. ನೀವು ಹೆಚ್ಚು ಧಾರ್ಮಿಕ ಮನಃಸ್ಥಿತಿ ಉಳ್ಳವರಾಗಿದ್ದೀರಿ. ಯಥಾಯೋಗ್ಯ ದಾನವನ್ನೂ ನೀವು ಕೊಡಲಿದ್ದೀರಿ. ಮಾತಗಾರರಾಗಿದ್ದರೆ ನಿಮಗೆ ಪ್ರಶಂಸೆಗಳು ಸಿಗಬಹುದು. ವಂಚನೆ ಮಾಡಿದ್ದೀರಿ ಎಂಬ ಅಪವಾದ ಬರಬಹುದು. ಹೊಸ ವಸ್ತ್ರಗಳನ್ನು ಧರಿಸುವಿರಿ. ಶ್ರಮವಹಿಸದೇ ಫಲವನ್ನು ಅಪೇಕ್ಷಿಸುವುದು ನಿಮ್ಮ ಅಸಾಮರ್ಥ್ಯವನ್ನು ತೋರಿಸುವುದು. ನಿಮ್ಮ ಮಾತುಗಾರಿಕೆಗೆ ಮೆಚ್ಚುಗೆ.
ವೃಶ್ಚಿಕ ರಾಶಿ: ಈ ರಾಶಿಯವರು ಸುರಕ್ಷಿತ ಪ್ರಯಾಣ ಅಥವಾ ಪುಣ್ಯಸ್ಥಳಕ್ಕೆ, ಮಹತ್ಕಾರ್ಯಕ್ಕೆ ಪ್ರಯಾಣ ಮಾಡುವರು. ಸಂಗಾತಿಯ ಸುಖ ಸಿಗುವುದು. ನಿಮ್ಮವರು ಯಾರು ಮತ್ತು ನಿಮ್ಮವರಂತೆ ಕಾಣುವವರು ಯಾರು ಎಂಬುದರ ಸ್ಪಷ್ಟ ನಿಲುವು ಇರಲಿದೆ. ಮಕ್ಕಳ ಪ್ರಾಪ್ತಿಯಾಗುವುದು. ವ್ಯಾಪರ ಅಥವಾ ಉದ್ಯಮವು ನಿಧಾನವಾಗಿ ಒಂದೊಂದೇ ಹೆಜ್ಜೆಯನ್ನು ಇಟ್ಟು ಮೇಲೇರಲು ಆರಂಭಿಸಿದೆ. ಕೃಷಿಯ ಕಾರ್ಯದಲ್ಲಿ ಮನಸ್ಸಾಗಿ ಕೆಲವು ಅಪರೂಪದ ಸಸ್ಯಗಳನ್ನು ನೆಡಲಿದ್ದೀರಿ. ವಿದ್ಯಾರ್ಥಿಗಳಿಗೆ ಸ್ವಲ್ಪ ಹಿಂಜರಿಕೆ ಇರಲಿದೆ. ಸಂಗಾತಿಯನ್ನು ಹುಡುಕುವ ಕೆಲಸವು ನಿಮಗೆ ಬೇಸರವನ್ನು ತರಿಸುವುದು. ಮರ್ಯಾದೆಗೆ ಹೆದರಿ ಮಾಡಬೇಕಾದ ಕೆಲಸವನ್ನು ಮಾಡದೇ ಇರುವಿರಿ.
ಧನು ರಾಶಿ: ಈ ರಾಶಿಯವರಿಗೆ ಅಶುಭ. ಸರ್ಕಾರದಿಂದ ಅಥವಾ ಉನ್ನತ ಮಟ್ಟದಿಂದ ಪೀಡೆ. ಬಲವಾದ ಶತ್ರುಬಾಧೆಯಿಂದ ಕಷ್ಟ. ಬಂಧುಗಳ ಜೊತೆ ಅಸಮಾಧಾನ. ದಿನಗಳಿಂದ ಡೋಲಾಯಮಾನವಾಗಿದ್ದ ಕಂಕಣಭಾಗ್ಯವು ಸ್ಪಷ್ಟ ನಿರ್ಧಾರಕ್ಕೆ ಬರಲಿದೆ. ರಾಜಕೀಯ ಕುಟಂಬದ ವ್ಯಕ್ತಿಯನ್ನು ನೀವು ಭೇಟಿ ಮಾಡಲಿದ್ದು ಕೆಲವು ಅನುಕೂಲತೆಗಳು ಆಗಲಿವೆ. ರೋಗದಿಂದ ಪೀಡಿತರಾಗಿ ಮನಸ್ಸು ಕುಗ್ಗುವುದು. ಸ್ನೇಹಿತರ ಆಗಮನವು ಸಂಕಟವನ್ನು ತಂದರೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಇರುವುದಿಲ್ಲ. ಸ್ವಾವಲಂಬಿಗಳಾಗಿ ಬದುಕಬೇಕು ಎನ್ನುವುದು ನಿಮ್ಮ ದೃಢವಾದ ನಂಬುಗೆಯಾಗಿದೆ. ಯಂತ್ರೋದ್ಯಮವನ್ನು ನಡೆಸುತ್ತಿದ್ದರೆ ನಿಮಗೆ ಲಾಭವಿದೆ. ವೈವಾಹಿಕ ಜೀವನವು ನಿಮಗೆ ಬೇಸರವೆನಿಸಬಹುದು.
ಮಕರ ರಾಶಿ: ಏಪ್ರಿಲ್ ತಿಂಗಳಲ್ಲಿ ಈ ರಾಶಿಯವರಿಗೆ ಶುಭ. ಸಂತಾನೋತ್ಪತ್ತಿಯ ಸುಖ ಒಂದೆಡೆಗಾದರೆ ಸಜ್ಜನರ ಸಹವಾಸ ಸಿಗಲಿದೆ. ರಾಜ ಅಥವಾ ರಾಜನಿಗೆ ಸಮಾನರಾದವರಿಂದ ಲಾಭ. ನೀವು ಹೊಸ ಕೆಲಸವೊಂದನ್ನು ಆರಂಭಿಸಲು ಯೋಚಿಸಿದ್ದೀರಿ. ನಿಮ್ಮವರೇ ನಕಾರಾತ್ಮಕ ಮಾತುಗಳನ್ನು ಹೇಳಿ ದಾರಿ ತಪ್ಪಿಸುವರು ಅಥವಾ ಅವಮಾನ ಮಾಡುವರು. ನೀವು ವೈದ್ಯವೃತ್ತಿಯಲ್ಲಿ ನಿರತರಾಗಿದ್ದರೆ ಅತಿಯಾದ ಮಾನಸಿಕ ಒತ್ತಡದಲ್ಲಿ ಇರುವಿರಿ. ಸಂಪತ್ತನ್ನು ಅಪರಿಚಿತ ಸ್ಥಳದಲ್ಲಿ ಇಟ್ಟು ಕಳೆದುಕೊಳ್ಳುವಿರಿ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಹೋದರಿಂದ ಸಂಪತ್ತಿನ ಸಹಾಯವು ಸಿಗಲಿದೆ. ದ್ವೇಷವನ್ನು ಬಿಟ್ಟು ಮುಂದುವರಿಯುವುದು ಒಳ್ಳೆಯದು.
ಕುಂಭ ರಾಶಿ: ಏಪ್ರಿಲ್ ತಿಂಗಳ ಈ ವಾರದಲ್ಲಿ ಈ ರಾಶಿಯವರಿಗೆ ಅಶುಭ. ಚತುರ್ಥದಲ್ಲಿ ಗುರುವಿದ್ದು ಅವರಿಗೆ ಬಂಧುಗಳಿಂದ ದುಃಖ, ಅಪಮಾನ, ಅಸಹಕಾರ ಎಲ್ಲವೂ ಆಗುವುದು. ದೈನ್ಯಸ್ಥಿತಿ ಅವರಿಗೆ ಬರುವುದು. ಪ್ರಾಣಿಗಳಿಂದ ಅಧಿಕಭಯ ಉಂಟಾಗುವುದು. ಅಪಮಾನದ ನಡುವೆ ಯಾವ ಪ್ರಶಂಸೆಯೂ ಲೆಕ್ಕಕ್ಕೆ ಸಿಗದು. ಯಾವುದನ್ನೂ ಪರಿಶೀಲಿಸದೇ ಸ್ವೀಕರಿಸಬೇಡಿ. ಅನಿರೀಕ್ಷಿತ ಹಣವೂ ಸಿಗಬಹುದು. ಆತ್ಮಗೌರವಕ್ಕೆ ಧಕ್ಕೆ ಬರುವ ಕಾರ್ಯಗಳನ್ನು ಬಿಡುವಿರಿ. ನಿಮ್ಮ ತಲೆಯಲ್ಲಿ ಇರುವ ನೂರಾರು ಯೋಜನೆಯನ್ನು ಹೇಳಲು ಹೋಗಿ ನಿಮ್ಮ ಮೌಲ್ಯವನ್ನು ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನಹರಿಸಬೇಕು. ಸ್ನೇಹಿತರ ಸಹವಾಸದಿಂದ ದುಶ್ಚಟಕ್ಕೆ ಬೀಳುವ ಸಾಧ್ಯತೆ ಇದೆ.
ಮೀನ ರಾಶಿ: ರಾಶಿ ಚಕ್ರದ ಅಂತಿಮ ರಾಶಿಗೆ ಮಿಶ್ರಫಲ. ಗುರು ತೃತೀಯದಲ್ಲಿ ನಿಮ್ಮ ಸದ್ಯದ ಸ್ಥಿತಿಯನ್ನು ಬದಲಿಸುವನು. ಅಪವಾದಗಳನ್ನು ಗೆಲ್ಲಲು ಸಾಧ್ಯವಾಗದು. ನಿಮಗೆ ಇಷ್ಟವಸದವರು ಹಾಗೂ ನಿಮ್ಮನ್ನು ಇಷ್ಟಪಡುವವರು ದೂರಾಗುವರು. ಅತಿಯಾಗಿ ಉದ್ಯೋಗವನ್ನು ಬದಲಾಯಿಸುವುದು ಸೂಕ್ತವಲ್ಲ. ಅವಮಾನವಾಗು ಸಂದರ್ಭವಿದ್ದರೆ ಅಲ್ಲಿಂದ ದೂರನಡೆಯಿರಿ. ಆರೋಗ್ಯದಲ್ಲಿ ವ್ಯತ್ಯಾಸ ಹಾಗೂ ಕಾರ್ಯದಲ್ಲಿ ವಿಘ್ನ ಉಂಟಾಗುವುದು. ನಿಮ್ಮ ವ್ಯಕ್ತಿತ್ವವನ್ನು ಹುಡುಕಿಕೊಂಡು ಬರುವವರಿದ್ದಾರೆ. ಒಳ್ಳೆಯ ಕೆಲಸವು ಆಗಿಲ್ಲ ಎಂಬ ನೋವು ಇರಲಿದೆ. ತಾಳ್ಮೆಯನ್ನು ಇಟ್ಟುಕೊಂಡು ವ್ಯವಹರಿಸವುದು ಉತ್ತಮ.