ಹಣದ ತೊಂದರೆಗೆ ಮನೆಯಿಂದ ಸಹಾಯ ದೊರೆಯಬಹುದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ನವಮೀ ತಿಥಿ, ಭಾನುವಾರ ಬಂಧುಗಳ ಸಹಕಾರ, ಕಲ್ಪನೆಯ ಸಾಕಾರ, ಮಕ್ಕಳ ಮೇಲೆ ಮಮಕಾರ, ತಾನೇ ಎಂಬ ಅಹಂಕಾರ ಕಾಣಿಸಿಕೊಳ್ಳುವ ದಿನ.ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ನವಮೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಅತಿಗಂಡ, ಕರಣ : ಗರಜ, ಸೂರ್ಯೋದಯ – 06: 24 am, ಸೂರ್ಯಾಸ್ತ – 06:44 pm, ಇಂದಿನ ಶುಭಾಶುಭಕಾಲ : ರಾಹು ಕಾಲ 17:12 – 18:44, ಯಮಘಂಡ ಕಾಲ 12:35 – 14:07, ಗುಳಿಕ ಕಾಲ 15:40 – 17:12
ತುಲಾ ರಾಶಿ: ಕರೆ ಮಾಡಿ ನಿಮ್ಮ ಮಾನಹಾನಿ ಮಾಡಬಹುದು. ನೀವು ಇಂದು ಅನುಮಾನ ಬರುವಂತಹ ಹಾವಭಾವದಲ್ಲಿ ಇರುವಿರಿ. ಸ್ವಲ್ಪ ಕಾಲದ ಏನನ್ನೂ ಯೋಚಿಸದೇ ಇರಲು ಪ್ರಯತ್ನಿಸಿ. ಮನಸ್ಸಿನ ಶಕ್ತಿ ದ್ವಿಗಣವಾಗುವುದು. ಪುಣ್ಯಸ್ಥಳದ ದರ್ಶನದಿಂದ ನೆಮ್ಮದಿ. ನಕಾರಾತ್ಮಕತೆ ಆಲೋಚನೆಗಳೂ ದೂರವಾಗುವುದು. ನಿಮಗೆ ಬೇರೆ ಬೇರೆ ಮೂಲಗಳಿಂದ ಸಂಪಾದನೆಗೆ ಇಂದು ಅವಕಾಶಗಳು ಸಿಗುವುದು. ಇಷ್ಟಮಿತ್ರರ ಭೇಟಿಯಿಂದ ಖುಷಿಯು ಹೆಚ್ಚಾಗುವುದು. ವಿಶ್ವಾಸಘಾತಕ ಕಾರ್ಯಗಳಿಗೆ ಮುನ್ನುಗ್ಗಲು ಯಾರಿಂದಲಾದರೂ ಪ್ರೇರಣೆ ಸಿಕ್ಕೀತು. ಪೆಟ್ಟು ತಿಂದರೆ ಮತ್ತೇಳುವುದು ಕಷ್ಟ. ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಇಷ್ಟಪಡಲಾರಿರಿ. ಎಲ್ಲರ ಜೊತೆ ಬೆರೆಯುವುದು ನಿಮಗೆ ಖುಷಿಯ ವಿಚಾರವಾಗಲಿದೆ. ನಾಯಕ ಸ್ಥಾನದಿಂದ ಕೆಳಗಿಳಿಯುವ ಯೋಚನೆ. ನಿಮ್ಮ ಹಿರಿಯರ ಜೊತೆ ಗೌರವವನ್ನು ಕಾಪಾಡಿಕೊಳ್ಳಿ. ಪ್ರಯಾಣದಲ್ಲಿ ಯಾವುದೇ ತೊಂದರೆಗಳು ಬಾರದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ಹೂಡಿಕೆಯ ವಿಚಾರದಲ್ಲಿ ಸಮಸ್ಯೆಯಾಗಬಹುದು. ಕಾನೂನಿನ ತೀರ್ಮಾನಕ್ಕೆ ತಲೆಬಾಗುವುದು ಸೂಕ್ತ.
ವೃಶ್ಚಿಕ ರಾಶಿ: ಮನೆಗೆ ಬೇಕಾದ ಅನೇಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸುವಿರಿ. ನಿಮಗೆ ಕಲ್ಪನೆಯಂತೆ ಬದುಕು ನಡೆಯದು ಎಂಬ ಸತ್ಯ ಇಂದು ಮನವರಿಕೆಯಾಗಲಿದೆ. ದೂರಪ್ರಯಾಣ ಸುಖಕರವಾಗಿ ಇರುವಿದಾದರೂ ಅನಂತರ ಕಷ್ಟಪಡಬೇಕಾದೀತು. ಯಾರನ್ನೋ ಅವಮಾನಿಸಲು ಹೋಗಿ ಹಳ್ಳಕ್ಕೆ ಬೀಳಬೇಡಿ. ಸದ್ದಿಲ್ಲದೇ ಮಾಡುವ ಸಾಮಾಜಿಕ ಕಾರ್ಯಕ್ಕೆ ಪ್ರಶಂಸೆ. ಕಲಾವಿದರಿಗೆ ವಿಶೇಷ ಗೌರವ. ಸಿಟ್ಟಿನ ಮೂಟೆಯನ್ನು ಕೆಳಗಿಳಿಸಿ. ಆಗ ಸಿಗುವ ಆನಂದಕ್ಕೆ ಬೆಲೆಯೆಷ್ಟು? ನಿಮ್ಮ ಆಲೋಚನೆಗಳನ್ನು ಇತರ ಜೊತೆ ಹಂಚಿಕೊಂಡರೆ ನಿಮ್ಮ ಸ್ಥಾನಕ್ಕೆ ಚ್ಯುತಿ ಬಂದೀತು. ನಿಮ್ಮ ಕಾರ್ಯಗಳಿಂದ ಪ್ರೀತಿಪಾತ್ರರ ಹೃದಯವನ್ನು ಗೆಲ್ಲಲು ಸಫಲರಾಗುವಿರಿ. ಬಹಳ ದಿನಗಳ ಅನಂತರ ನಿಮ್ಮ ಸಂಗಾತಿಯ ಜೊತೆ ಸ್ವಲ್ಪ ಸಮಯ ಕುಳಿತು ಆಪ್ತವಾಗಿ ಮಾತನಾಡುವಿರಿ. ಯಾರನ್ನೂ ಅವಲಂಬಿಸುವುದು ನಿಮಗೆ ಕಷ್ಟವಾಗುವುದು. ಮಕ್ಕಳಿಂದ ನಿಮಗೆ ಕೀರ್ತಿಯು ಪ್ರಾಪ್ತವಾಗುವುದು. ಮಾತಿನಿಂದ ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ಹಣವನ್ನು ವ್ಯಯ ಮಾಡುವಿರಿ. ನಿಮಗೆ ಆಗಬೇಕಾದ ಕೆಲಸವನ್ನು ವಿವಾದ ಇಲ್ಲದೇ ಮಾಡಿಕೊಳ್ಳಿ.
ಧನು ರಾಶಿ: ಸ್ಪರ್ಧಾತ್ಮಕ ವಿಚಾರದಲ್ಲಿ ಗೊಂದಲ. ಅನುಭವಿಗಳಿಂದ ಮಾರ್ಗದರ್ಶನ ಪಡೆಯುವಿರಿ. ಸಣ್ಣ ವಿಚಾರಕ್ಕೆ ಸಂಗಾತಿಯ ಜೊತೆ ವೈಮನಸ್ಯ ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ಬಹಳ ಉತ್ಸಾಹದಿಂದ ಉತ್ಸವಗಳಲ್ಲಿ ಭಾಗವಹಿಸುವಿರಿ. ದಿನಚರಿಯ ವ್ಯತ್ಯಾಸದಿಂದ ಆರೋಗ್ಯ ಕೆಡಬಹುದು. ಅನಿರೀಕ್ಷಿತ ಸಂಪತ್ತು ಸಿಗುವ ಸಾಧ್ಯತೆ ಇದೆ. ಮೇಲಧಿಕಾರಿಗಳಿಂದ ಪ್ರಗತಿ ಪರಿಶೀಲನೆ. ಬದಲಾವಣೆಗೆ ಸಲಹೆ. ಇಂದು ಬಂದ ಅತಿಥಿಯ ಜೊತೆ ಹರಟೆಯನ್ನು ಹೊಡೆಯುತ್ತೀರಿ. ಕಲಾತ್ಮಕ ಮತ್ತು ಸೃಜನಶೀಲ ವ್ಯಕ್ತಿತ್ವಕ್ಕೆ ಬಹಳಷ್ಟು ಮೆಚ್ಚುಗೆ ಬರಲಿದೆ. ನಿರೀಕ್ಷೆಗಿಂತಲೂ ಹೆಚ್ಚಿನ ಫಲವು ಸಿಗಲಿದೆ. ನಿಮ್ಮ ಯಾವುದೇ ಸಂಬಂಧದ ಜೊತೆ ರಾಜಿ ಮಾಡಿಕೊಳ್ಳಲು ಹೋಗಬಹುದು. ಅವಿವಾಹಿತರ ಜೀವನದಲ್ಲಿ ಹೊಸ ಅತಿಥಿಯ ಆಗಮನದ ನಿರೀಕ್ಷೆಯು ಇರುವುದು. ವಾಹನ ಚಾಲನೆಯಲ್ಲಿ ಜಾಗರೂಕತೆ ಬೇಕು. ಆಧ್ಯಾತ್ಮದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಸ್ಪರ್ಧೆಯ ವಿಷಯದಲ್ಲಿ ಮುನ್ನುಗ್ಗುವ ಸ್ವಭಾವವು ಇರಲಿದೆ. ಪ್ರೀತಿಪಾತ್ರರ ಜೊತೆ ನಿಮ್ಮ ಆಪ್ತತೆ ಹೆಚ್ಚಾಗಬಹುದು.
ಮಕರ ರಾಶಿ: ನೀರಿನಿಂದ ತೊಂದರೆ ಆಗಬಹುದು. ಸಣ್ಣ ಬುದ್ಧಿಯನ್ನು ಬಿಟ್ಟು ವ್ಯವಹರಿಸಿ. ಅನೇಕ ಶುಭಸೂಚನೆಗಳು ನಿಮಗೆ ಕಾಣಿಸುವುದು. ನಿಮ್ಮನ್ನು ಗಮನಿಸುವವರು ಹತ್ತಾರು ಮಂದಿಯಿರುತ್ತಾರೆ. ಅವರೇನೇ ಹೇಳಿದರೂ ನಿಮ್ಮ ಸನ್ಮಾರ್ಗವನ್ನು ಬಿಡಬೇಡಿ. ನ್ಯಾಯಾಲಯದ ಪ್ರಕರಣವು ನಿಮಗೆ ಸಮಾಧಾನ ನೀಡುವುದು. ಹಣದ ತೊಂದರೆಗೆ ಮನೆಯಿಂದ ಸಹಾಯ ದೊರೆಯಬಹುದು. ನಿಮಗೆ ಕಲಿಸಿದವರ ಒಡನಾಟವು ಬೆಳೆಯುವುದು. ಸಂಬಂಧಿಕರ ಜೊತೆ ವ್ಯವಹಾರವನ್ನು ಮಾಡಬೇಡಿ. ನಿಮ್ಮ ಆದಾಯ ಮತ್ತು ಖರ್ಚುಗಳನ್ನು ನೀವು ಸಮವಲ್ಲದಿದ್ದರೂ ತೊಂದರೆಯಾಗದಂತೆ ನಿಭಾಯಿಸುವಿರಿ. ಅದು ನಿಮಗೆ ಒಳ್ಳೆಯದು. ಆಸ್ತಿಯು ಅನ್ಯರ ವಶವಾಗಬಹುದು. ಇಲ್ಲವಾದರೆ ಹೆಚ್ಚುತ್ತಿರುವ ಖರ್ಚುಗಳ ಬಗ್ಗೆ ನೀವು ಚಿಂತೆ ಮಾಡುತ್ತೀರಿ. ಪಾಲುದಾರಿಕೆಯಲ್ಲಿ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಹಣಿಸುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ. ಇಂದು ಸ್ತ್ರೀಯರಿಗೆ ಅನಿರೀಕ್ಷಿತ ತೊಂದರೆಗಳು ಇರಲಿದೆ. ನೆರೆಹೊರೆಯರ ಜೊತೆ ವಾಗ್ವಾದ ಮಾಡುವಿರಿ. ಬಾಡಿಗೆ ಮನೆಯ ಮಾಲಿಕರಿಂದ ಪೀಡೆ.
ಕುಂಭ ರಾಶಿ: ಉನ್ನತ ಸ್ಥಾನಕ್ಕೆ ಬೇಕಾದ ಎಲ್ಲ ತಯಾರಿ ಮಾಡಿಕೊಳ್ಳುವಿರಿ. ಇಂದು ನಿಮ್ಮವರ ಕೆಲವು ಮಾತುಗಳು ಆತುರದ ನಿರ್ಧಾರವನ್ನು ತೆಗದುಕೊಳ್ಳುವಂತೆ ಮಾಡಬಹುದು. ಕುಟುಂಬದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವ ಸಂದರ್ಭ ಬರಬಹುದು. ಆಪ್ತರನ್ನು ಕಳೆದುಕೊಳ್ಳುವ ಭೀತಿ. ಎಷ್ಟೋ ದಿನದ ಸಾಲ ಇಂದು ಮುಕ್ತಾಯಗೊಳ್ಳುವುದು. ಕಛೇರಿಯಲ್ಲಿ ಅನಿರೀಕ್ಷಿತ ಒತ್ತಡಗಳು ಕಾಣಿಸಿಕೊಳ್ಳುವುದು. ಸಮಾಧಾನದಿಂದ ನಿಭಾಯಿಸಿ. ಕಾಲು ಕೆರೆದುಕೊಂಡು ಪತ್ನಿಯ ಜೊತೆ ಜಗಳವಾಡಬೇಡಿ. ಇಂದು ನೀವು ಬೇರೆ ಬೇರೆ ಕಾರಣಗಳಿಂದ ವಿಶ್ರಾಂತಿ ಪಡೆಯುವುದಿಲ್ಲ. ಕೌಟುಂಬಿಕ ಕಲಹದಿಂದಾಗಿ ನಿಮ್ಮ ತಲೆನೋವು ಇರುತ್ತದೆ. ಬಡ್ತಿಗಾಗಿ ಬಹಳ ಕಾಯುವಿರಿ. ಇದರಿಂದ ನೀವು ಯಾವುದೇ ಕೆಲಸ ಮಾಡಲು ಬಯಸುವುದಿಲ್ಲ. ವ್ಯಾಪಾರ ಮಾಡುವ ಜನರ ಜೊತೆ ಸೇರಿ ಕೆಲವು ಕೆಲಸಗಳನ್ನು ಮಾಡಲು ಅವಕಾಶವಿದೆ. ನೀವು ಎಣಿಸಿದ್ದನ್ನು ಬಂಧುಗಳು ಮಾಡಿಕೊಡುವರು. ನಿಮ್ಮ ವಿನಂತಿಯನ್ನು ಯಾರೂ ಪುರಸ್ಕರಿಸದೇ ಇರಬಹುದು.
ಮೀನ ರಾಶಿ: ಹೂಡಕೆಯ ನಷ್ಟದಿಂದ ಬೇಸರ. ನಿರೀಕ್ಷಿತ ಆದಾಯ ಸಿಗದೇ ಕುಟುಂಬದಲ್ಲಿ ಕಲಹ. ಇಂದು ನೀವು ಧಾರ್ಮಿಕ ಕಾರ್ಯಗಳಿಗೆ ಹಣವನ್ನು ನೀಡುತ್ತೀರಿ. ಇದರಿಂದ ನೀವು ದಿವ್ಯವಾದ ಆನಂದವೊಂದು ನಿಮ್ಮದಾಗಲಿದೆ. ಸರ್ಕಾರದಿಂದ ಆಗುವ ಭೂವ್ಯವಹಾರದಲ್ಲಿ ವಿಳಂಬ. ಸಿಗುವ ಆಸ್ತಿ ಕೈ ತಪ್ಪಬಹುದು. ಹಿರಿಯ ಹಾಗೂ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ನೀವು ಮಾಡುವ ಕಾರ್ಯಕ್ಕೆ ಇತರರ ಸಹಾಯವೂ ಲಭ್ಯವಾಗಲಿದೆ. ನೀವು ಕ್ರಿಯಾ ಯೋಜನೆಯನ್ನು ತಯಾರಿಸಿದರೆ ಯಶಸ್ಸಿಗೆ ಸಮೀಪವಾಗುವಿರಿ. ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರು ತಮ್ಮ ಪ್ರಯತ್ನಗಳಲ್ಲಿ ಯಾವುದೇ ಸಡಿಲಿತೆ ಬೇಡ. ದೂರದ ಪ್ರಯಾಣಕ್ಕೆ ಹೋಗುವ ಯೋಗ ಆಕಸ್ಮಿಕವಾಗಿ ಬರಬಹುದು. ಬಂಧುಗಳು ಮನೆಗೆ ಬಂದ ಕಾರಣ ಖರ್ಚು ಹೆಚ್ಚಾದೀತು. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ. ವ್ಯರ್ಥ ಸುತ್ತಟದಿಂದ ನೀವು ಸಿಟ್ಟಾಗುವಿರಿ.