ವಾರದ ಪ್ರೇಮ – ಪ್ರೀತಿ ಭವಿಷ್ಯ: ಆಗಸ್ಟ್ 30 ರಿಂದ ಸೆಪ್ಟೆಂಬರ್ 5ರವರೆಗೆ ಪ್ರೇಮಿಗಳ ಬಾಳಲ್ಲಿ ಶುಕ್ರ ತರಲಿದ್ದಾನೆ ಹೊಸ ಚೈತನ್ಯ
ಆಗಸ್ಟ್ 30ರಿಂದ ಸಪ್ಟೆಂಬರ್ 05, 2026ರವರೆಗೆ ಅನುರಾಗ ಕಾರಕ ಶುಕ್ರನ ಪ್ರಭಾವದಿಂದ ಪ್ರೇಮ ಸಂಬಂಧಗಳು ಹೊಸ ತಿರುವು ಪಡೆಯಲಿವೆ. ಭಿನ್ನಾಭಿಪ್ರಾಯಗಳು ನಿವಾರಣೆಯಾಗಲು ಸುವರ್ಣಾವಕಾಶವಿದೆ. ಪ್ರತಿ ರಾಶಿಯವರು ಪ್ರೀತಿಯಲ್ಲಿ ಹೇಗೆ ಸಾಗಬೇಕು, ಗ್ರಹಗಳ ಪ್ರಭಾವದಿಂದ ಯಾವ ಬದಲಾವಣೆಗಳು ನಿರೀಕ್ಷಿತವೆಂದು ಈ ವಾರದ ಪ್ರೇಮ ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ. ನಿಮ್ಮ ಪ್ರೇಮ ಜೀವನವನ್ನು ಸುಧಾರಿಸಲು ಈ ಸಲಹೆಗಳು ಸಹಾಯಕವಾಗಿವೆ.

ಆಗಸ್ಟ್ 30ರಿಂದ ಸಪ್ಟೆಂಬರ್ 05, 2026ರವರೆಗೆ ಅನುರಾಗ ಕಾರಕ ಶುಕ್ರನು ತನ್ನ ಸ್ಥಾನದಲ್ಲಿದ್ದು ಪ್ರೇಮವು ಏರ್ಪಡುವಂತೆ ವಾತಾವರಣವನ್ನು ಸಿದ್ಧಗೊಳಿಸುವನು. ಭಿನ್ನಾಭಿಪ್ರಾಯದ ಪ್ರೇಮವು ಸರಿಯಾಗುವ ಹಂತಕ್ಕೆ ಹೋಗಲಿದೆ. ಅತಿಯನ್ನು ಎಲ್ಲಿಯೂ ಮಾಡಿಕೊಳ್ಳದೇ ಸಮಾಧಾನದಿಂದ ಇರಿ.
ಮೇಷ ರಾಶಿ :
ಅಶ್ವಿನಿ ನಕ್ಷತ್ರದ ಲಗ್ನ ಹಾಗೂ ತೃತೀಯದ ಮಂಗಳ ನಿಮ್ಮಲ್ಲಿ ಪ್ರೇಮ ನಿವೇದನೆಗೆ ಅಪಾರ ಧೈರ್ಯ ನೀಡಲಿದೆ. ನೀವೇ ಮುಂಚೂಣಿ ವಹಿಸಿ ಮನಸ್ಸಿನ ಮಾತು ಹೇಳಲು ಇದು ಸೂಕ್ತ ಸಮಯ. ಸಂಗಾತಿಯೊಂದಿಗೆ ಸಣ್ಣ ಸಾಹಸದಿಂದ ಕೂಡಿರುವ ಪಯಣ ಅಥವಾ ಹೊಸ ಚಟುವಟಿಕೆಯಲ್ಲಿ ಭಾಗವಹಿಸುವುದು ಬಾಂಧವ್ಯವನ್ನು ಮತ್ತಷ್ಟು ಬಿಗಿಗೊಳಿಸುತ್ತದೆ.
ವೃಷಭ ರಾಶಿ :
ಷಷ್ಠದ ಶುಕ್ರ ಪ್ರೇಮ ವಿಚಾರದಲ್ಲಿ ತರ್ಕ ಮತ್ತು ಭಾವನೆಗಳ ನಡುವೆ ಸಣ್ಣ ಘರ್ಷಣೆ ತರಬಹುದು. ಸಂಗಾತಿಗೆ ಬೆಲೆಬಾಳುವ ಉಡುಗೊರೆ ನೀಡುವ ಬದಲು, ನಿಮ್ಮ ಸಮಯ ಹಾಗೂ ನಿಷ್ಠೆಯನ್ನು ತೋರಿಸಿ. ಹಳೆಯ ಗೊಂದಲಗಳನ್ನು ಶಾಂತಿಯುತವಾಗಿ ಚರ್ಚಿಸಿ ಮುಗಿಸಲು ಇಂದು ಸೂಕ್ತ ವಾತಾವರಣವಿದೆ.
ಮಿಥುನ ರಾಶಿ :
ನಿಮ್ಮ ರಾಶಿಯಲ್ಲಿ ಮಂಗಳ ಮತ್ತು ಚಂದ್ರರ ಯುತಿ ಇರುವುದರಿಂದ ಮಾತುಕತೆಯಲ್ಲಿ ಚತುರತೆ ಹಾಗೂ ಆಕರ್ಷಣೆ ಎದ್ದು ಕಾಣುತ್ತದೆ. ಒಂಟಿಯಾಗಿರುವವರಿಗೆ ಬೌದ್ಧಿಕ ಸಂಭಾಷಣೆಯ ಮೂಲಕವೇ ಹೊಸ ಪ್ರೇಮದ ತುಡಿತ ಶುರುವಾಗಬಹುದು. ಪ್ರೇಮಿಯಲ್ಲಿ ಸ್ನೇಹಿತನನ್ನು ಕಾಣುವ ಅಪೂರ್ವ ದಿನ.
ಕರ್ಕಾಟಕ ರಾಶಿ :
ಆಶ್ಲೇಷಾ ನಕ್ಷತ್ರದ ಉಚ್ಛ ಗುರು ನಿಮ್ಮಲ್ಲಿ ತಾಯ್ತನದ ರೀತಿಯ ಪ್ರೀತಿ ಮತ್ತು ಕಾಳಜಿಯನ್ನು ಜಾಗೃತಗೊಳಿಸುತ್ತಾನೆ. ಸಂಗಾತಿಯ ಸಣ್ಣ ಅಗತ್ಯಗಳಿಗೂ ಸ್ಪಂದಿಸುವ ನಿಮ್ಮ ಗುಣ ಅವರಿಗೆ ನೆಮ್ಮದಿ ತರುತ್ತದೆ. ಪ್ರೇಮವು ಕೇವಲ ಆಕರ್ಷಣೆಯಾಗದೆ, ಆಧ್ಯಾತ್ಮಿಕ ಹಾಗೂ ಕುಟುಂಬದ ಬೆಂಬಲದ ಹಂತಕ್ಕೆ ತಲುಪಲಿದೆ.
ಸಿಂಹ ರಾಶಿ :
ಪೂರ್ವಫಾಲ್ಗುಣಿಯ ಸೂರ್ಯ ಹಾಗೂ ಕೌಟುಂಬಿಕ ಭಾವದ ಬುಧ, ಕೇತು ನಿಮ್ಮ ಪ್ರೇಮದಲ್ಲಿ ಕೊಂಚ ಅಹಂ ತರಬಹುದು. ಸಂಗಾತಿಯ ಅಭಿಪ್ರಾಯಕ್ಕೂ ಮನ್ನಣೆ ನೀಡುವುದು ಮುಖ್ಯ. ನಿಮ್ಮ ನಾಯಕತ್ವದ ಗುಣವನ್ನು ಪ್ರೀತಿ ತೋರಿಸಲು ಬಳಸಿ ಹೊರತು, ಅವರ ಮೇಲೆ ಆಡಳಿತ ನಡೆಸಲು ಅಲ್ಲ.
ಕನ್ಯಾ ರಾಶಿ :
ಉತ್ತರಫಾಲ್ಗುಣಿಯ ಬುಧನ ಪ್ರಭಾವದಿಂದ ಪ್ರೇಮದಲ್ಲಿ ಪ್ರಬುದ್ಧತೆ ಮತ್ತು ದೂರದೃಷ್ಟಿ ಹೆಚ್ಚಲಿದೆ. ಕೇವಲ ಕ್ಷಣಿಕ ಆಕರ್ಷಣೆಗೆ ಮರುಳಾಗದೆ, ಭವಿಷ್ಯದ ದಾಂಪತ್ಯದ ಯೋಜನೆಯನ್ನು ರೂಪಿಸುತ್ತೀರಿ. ಅವಿವಾಹಿತರಿಗೆ ಕುಟುಂಬದ ಹಿರಿಯರ ಮೂಲಕವೇ ಉತ್ತಮ ಪ್ರೇಮ ಪ್ರಸ್ತಾಪ ಬರುವ ಯೋಗವಿದೆ.
ತುಲಾ ರಾಶಿ :
ಚಿತ್ತಾ ನಕ್ಷತ್ರದ ಶುಕ್ರ ನಿಮ್ಮ ರಾಶಿಯಲ್ಲೇ ಇರುವುದರಿಂದ ಕಲಾತ್ಮಕ ಮತ್ತು ಸೌಂದರ್ಯಾತ್ಮಕ ಪ್ರೇಮದ ವಾತಾವರಣ ನಿರ್ಮಾಣವಾಗಲಿದೆ. ಸಂಗೀತ, ಒಟ್ಟಿಗೆ ಭೋಜನ ಅಥವಾ ಪ್ರವಾಸದಲ್ಲಿ ಕಾಲ ಕಳೆಯುವುದು ಪ್ರೇಮಿಗಳಲ್ಲಿ ಹೊಸ ಚೈತನ್ಯ ತುಂಬಲಿದೆ.
ವೃಶ್ಚಿಕ ರಾಶಿ :
ಅಷ್ಟಮದ ಚಂದ್ರ-ಮಂಗಳ ಒಳಮನಸ್ಸಿನಲ್ಲಿ ತೀವ್ರ ಭಾವನೆಗಳನ್ನು ಎಬ್ಬಿಸಬಹುದು. ಪ್ರೇಮ ವಿಚಾರದಲ್ಲಿ ಯಾವುದೇ ರೀತಿಯ ಅತಿಯಾದ ಸಂಶಯ ಅಥವಾ ಅತಿಯಾದ ಆಧಿಪತ್ಯಕ್ಕೆ ಅವಕಾಶ ನೀಡಬೇಡಿ. ಸಂಗಾತಿಯ ಸ್ವತಂತ್ರ ಆಲೋಚನೆಗೆ ಜಾಗ ನೀಡುವುದು ಸಂಬಂಧದ ಸುಸ್ಥಿರತೆಗೆ ಒಳ್ಳೆಯದು.
ಧನು ರಾಶಿ :
ಭಾಗ್ಯಸ್ಥಾನದ ಗ್ರಹಗಳ ಶುಭ ದೃಷ್ಟಿಯಿಂದ ದೂರದ ಊರಿನಲ್ಲಿರುವ ಪ್ರೇಮಿಯೊಂದಿಗೆ ಮಾತುಕತೆ ಅಥವಾ ಭೇಟಿ ಸಾಧ್ಯವಾಗಲಿದೆ. ಹೊಸ ಸಂಸ್ಕೃತಿ ಅಥವಾ ಭಿನ್ನ ಹಿನ್ನೆಲೆಯ ವ್ಯಕ್ತಿಯತ್ತ ಆಕರ್ಷಿತರಾಗುವ ಸಾಧ್ಯತೆ ಇದೆ. ಪ್ರೇಮ ಸಂಬಂಧದಲ್ಲಿ ಹೊಸತನದ ಅನುಭವ ಸಿಗಲಿದೆ.
ಮಕರ ರಾಶಿ :
ಸಪ್ತಮದ ಉಚ್ಛ ಗುರು ಹಾಗೂ ಶನಿಯ ಬಲದಿಂದ ನಿಮ್ಮ ಸಂಬಂಧಕ್ಕೆ ಸಮಾಜದಲ್ಲಿ ಗೌರವ ಸಿಗಲಿದೆ. ಪ್ರೇಮವನ್ನು ಮದುವೆಯಾಗಿ ಪರಿವರ್ತಿಸಲು ಸೂಕ್ತ ಮಾತುಕತೆಗಳು ನಡೆಯಲಿವೆ. ಪ್ರೇಮದಲ್ಲಿ ಭರವಸೆ ಮತ್ತು ಜವಾಬ್ದಾರಿ ಎರಡನ್ನೂ ಸಮಾನವಾಗಿ ನಿರ್ವಹಿಸುತ್ತೀರಿ.
ಕುಂಭ ರಾಶಿ :
ಧನಿಷ್ಠಾ ನಕ್ಷತ್ರದ ರಾಹು ಹಾಗೂ ಪಂಚಮದ ಮಂಗಳ ನಿಮಗೆ ಸಾಂಪ್ರದಾಯಿಕವಲ್ಲದ ಪ್ರೇಮದ ಹಾದಿ ತೋರಿಸಬಹುದು. ಪ್ರೀತಿಯಲ್ಲಿ ಹಳೆಯ ಪದ್ಧತಿಗಳಿಗಿಂತ ಹೊಸ ಬಗೆಯ ಮುಕ್ತತೆಗೆ ಆದ್ಯತೆ ನೀಡುತ್ತೀರಿ. ಆದರೆ ಮಾತುಗಳಲ್ಲಿ ಸ್ಪಷ್ಟತೆ ಇರಲಿ.
ಇದನ್ನೂ ಓದಿ; ವಾರ ಭವಿಷ್ಯ: ಸೆಪ್ಟೆಂಬರ್ ಮೊದಲ ವಾರದಲ್ಲಿ ಈ ರಾಶಿಯವರಿಗೆ ವೃತ್ತಿರಂಗದಲ್ಲಿ ಗೋಲ್ಡನ್ ಟೈಮ್
ಮೀನ ರಾಶಿ :
ರೇವತಿ ನಕ್ಷತ್ರದ ಶನಿ ಹಾಗೂ ಸಪ್ತಮದ ಮೇಲಿನ ಪ್ರಭಾವದಿಂದಾಗಿ ಕಲ್ಪನಾ ಲೋಕದ ಪ್ರೀತಿಗಿಂತ ವಾಸ್ತವಿಕ ಪ್ರೀತಿ ಹೆಚ್ಚು ಹತ್ತಿರವಾಗುತ್ತದೆ. ಸಂಗಾತಿಯ ಕಷ್ಟ-ಸುಖಗಳಿಗೆ ಹೆಗಲು ಕೊಡುವುದು ಸಂಬಂಧವನ್ನು ಆಳವಾಗಿಸುತ್ತದೆ. ಕಷ್ಟದ ಸಮಯದಲ್ಲಿ ಜೊತೆ ನಿಲ್ಲುವ ನಂಬಿಕೆ ಹೆಚ್ಚಲಿದೆ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




