Compensation to home buyers: ಅಪಾರ್ಟ್​ಮೆಂಟ್ ಸ್ವಾಧೀನಕ್ಕೆ ನೀಡಲು ತಡವಾದಲ್ಲಿ ಖರೀದಿದಾರರಿಗೆ ಪರಿಹಾರ

ಅಪಾರ್ಟ್​ಮೆಂಟ್ ಸ್ವಾಧೀನಕ್ಕೆ ನೀಡುವುದು ತಡವಾದಲ್ಲಿ ಮನೆ ಖರೀದಿದಾರರಿಗೆ ಬಿಲ್ಡರ್​ ಪರಿಹಾರ ನೀಡಬೇಕಾಗುತ್ತದೆ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಹೇಳಿದೆ.

Compensation to home buyers: ಅಪಾರ್ಟ್​ಮೆಂಟ್ ಸ್ವಾಧೀನಕ್ಕೆ ನೀಡಲು ತಡವಾದಲ್ಲಿ ಖರೀದಿದಾರರಿಗೆ ಪರಿಹಾರ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on: Jan 19, 2022 | 11:21 AM

ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (NCDRC) ಈಚೆಗೆ ಮಹತ್ವದ ತೀರ್ಪು ನೀಡಿದ್ದು, ಸಂಪೂರ್ಣಗೊಂಡ ಘಟಕವು ಮನೆ ಖರೀದಿದಾರರ ಸ್ವಾಧೀನಾನುಭವಕ್ಕೆ ಬರುವ ತನಕ ವಿಳಂಬಕ್ಕಾಗಿ ಪರಿಹಾರ ಪಡೆದುಕೊಳ್ಳಲು ಅರ್ಹರು ಎಂಬುದನ್ನು ಎತ್ತಿಹಿಡಿದಿದೆ. ಅಪೂರ್ಣವಾಗಿರುವ ಘಟಕದ ಮೇಲೆ ಕಟ್ಟಡದ ಬಿಲ್ಡರ್ ನೀಡುವ ಸ್ವಾಧೀನವು ಪರಿಹಾರ ಪಡೆಯುವಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಗ್ರಾಹಕ ನ್ಯಾಯಾಲಯ ಹೇಳಿದ್ದು, ‘ಒಬ್ಬ ವ್ಯಕ್ತಿಯು ಸಂಪೂರ್ಣ ಪಾವತಿಯನ್ನು ಮಾಡಿದ ನಂತರ ತನಗೆ ಸೇರಿದ ಘಟಕವನ್ನು ಭೌತಿಕ ಸ್ವಾಧೀನ ಮಾಡಿಕೊಳ್ಳಲು ಇಷ್ಟಪಡದಿರುವುದು ಯೋಚಿಸಲು ಆಗದು,’ ಎಂದು ಅಭಿಪ್ರಾಯ ಪಡಲಾಗಿದೆ. ಬಿಲ್ಡರ್​ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲು ಸಾಧ್ಯವಿಲ್ಲದೆ ಐತಿಹಾಸಿಕವಾದ ತಡೆ ಅನುಭವಿಸುತ್ತಿದ್ದ ಮನೆ ಖರೀದಿದಾರರಿಗೆ ದೊಡ್ಡ ಮಟ್ಟದ ನಿರಾಳ ಎಂಬಂತೆ ಈ ತೀರ್ಪು ಬಂದಿದೆ.

ವಿಕಾಸ್ ಮಿತ್ತಲ್ ಅವರಿಗೆ ಡಿಎಲ್​ಎಫ್ ಹೋಮ್ ಡೆವಲಪರ್ಸ್ ಪ್ರಾಜೆಕ್ಟ್ ದೆಹಲಿಯಲ್ಲಿ ಸ್ವಾಧೀನಕ್ಕೆ ನೀಡಲು ವಿಫಲವಾದ ಮೇಲೆ ಎನ್​ಸಿಡಿಆರ್​ಸಿಯಲ್ಲಿ ಪರಿಹಾರಕ್ಕಾಗಿ ಕೇಳಿದ್ದರು ಮತ್ತು ಅದರಲ್ಲಿ ವಿಜಯಿಯಾಗಿದ್ದರು. ಮಿತ್ತಲ್ 2009ನೇ ಇಸವಿ ಸೆಪ್ಟೆಂಬರ್​ನಲ್ಲಿ 7.5 ಲಕ್ಷ ರೂಪಾಯಿ ಠೇವಣಿ ಮಾಡಿ, ಡಿಎಲ್​ಎಫ್ ಪ್ರಾಜೆಕ್ಟ್​ನಲ್ಲಿ ಒಂದು ಯೂನಿಟ್ ಬುಕ್ ಮಾಡಿ​ದ್ದರು. ಆ ಮನೆಯ ಸ್ವಾಧೀನವನ್ನು 2012ರ ಸೆಪ್ಟೆಂಬರ್​ಗೆ ನೀಡಬೇಕಾಗಿತ್ತು. ಅರ್ಜಿ ಹಾಕಿಕೊಂಡ ಮೂರು ವರ್ಷದೊಳಗೆ ಬಿಟ್ಟುಕೊಡಬೇಕು ಎಂಬುದು ಕರಾರು ಆಗಿತ್ತು.

ಸ್ವಾಧೀನಕ್ಕೆ ನೀಡಲು ಹತ್ತಿರಹತ್ತಿರ ಐದು ವರ್ಷಗಳು ವಿಳಂಬವಾದ ನಂತರ, ಖರೀದಿದಾರರು ಠೇವಣಿ ಮಾಡಿದ ಮೊತ್ತಕ್ಕೆ ವಾರ್ಷಿಕ ದರ ಶೇ 6ರ ಲೆಕ್ಕಾಚಾರದಲ್ಲಿ ಆದೇಶ ನೀಡಿದ ಆರು ವಾರದೊಳಗೆ ಪರಿಹಾರ ನೀಡುವಂತೆ ಬಿಲ್ಡರ್​ಗೆ ಕೋರ್ಟ್ ನಿರ್ದೇಶಿಸಿತು. ಒಂದು ವೇಳೆ ಪರಿಹಾರ ನೀಡುವಲ್ಲಿ ಯಾವುದೇ ತಡ ಮಾಡಿದರೆ ಅದಕ್ಕೆ ವಾರ್ಷಿಕ ಬಡ್ಡಿ ದರ ಶೇ 9ರ ಲೆಕ್ಕದಲ್ಲಿ ಭರಿಸಬೇಕಾಗುವುದು ಎಂದು ಎಚ್ಚರಿಕೆ ಸಹ ನೀಡಲಾಯಿತು.

ಇದನ್ನೂ ಓದಿ: Bank online fraud: ಆನ್​ಲೈನ್ ವಂಚನೆ ಪ್ರಕರಣದಲ್ಲಿ ಬ್ಯಾಂಕ್ ಹಾಗೂ ಗ್ರಾಹಕರ ಜವಾಬ್ದಾರಿ ಏನು?