ಸಚಿವ ಭೈರತಿ ಸುರೇಶ್ ರಿಯಾಲಿಟಿ ಚೆಕ್ ಬೆನ್ನಲ್ಲೇ ಚಾಲಕ-ನಿರ್ವಾಹಕರಿಗೆ ಬಿಎಂಟಿಸಿಯಿಂದ ಖಡಕ್ ಸೂಚನೆ
BMTC, Minister Byrathi Suresh: ಸಾರಿಗೆ ಸಚಿವ ಭೈರತಿ ಸುರೇಶ್ ಶನಿವಾರ ಬಿಎಂಟಿಸಿ ಬಸ್‌ಗಳಲ್ಲಿ ಸ್ವತಃ ಪ್ರಯಾಣಿಸಿ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಯನ್ನು ಪರಿಶೀಲಿಸಿದ ಬೆನ್ನಲ್ಲೇ, ಬಿಎಂಟಿಸಿ ನಿಗಮ ತನ್ನ ಸಿಬ್ಬಂದಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ಬಸ್‌ಗಳಲ್ಲಿ ಸಂಚರಿಸಿ ರಿಯಾಲಿಟಿ ಚೆಕ್ ಮಾಡಿದ ಸಚಿವ ಬೈರತಿ ಸುರೇಶ್
- ಚಾಲಕರು ಕಡ್ಡಾಯವಾಗಿ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸಬೇಕು
- ಪ್ರಯಾಣಿಕರೊಂದಿಗೆ ಗೌರವಯುತ ಹಾಗೂ ಸೌಜನ್ಯದಿಂದ ವರ್ತಿಸಬೇಕು
ಬೆಂಗಳೂರು, ಜುಲೈ 12: ಸಾರಿಗೆ ಸಚಿವರಾಗಿ ಅಧಿಕಾರವಹಿಸಿಕೊಂಡಿರುವ ಭೈರತಿ ಸುರೇಶ್ ಫುಲ್ ಅಲರ್ಟ್ ಆಗಿದ್ದಾರೆ. ತಾವೇ ಖುದ್ದು ಫೀಲ್ಡಿಗಿಳಿದಿದ್ದಾರೆ. ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ನಲ್ಲಿ ಮಾಸ್ಕ್ ಹಾಕಿಕೊಂಡು ಸಂಚಾರ ಮಾಡುವ ಮೂಲಕ ಭೈರತಿ ಸುರೇಶ್ ರಿಯಾಲಿಟಿ ಚೆಕ್ ಮಾಡಿದರು. ಡ್ರೈವರ್, ಕಂಡಕ್ಟರ್ ಕಳ್ಳಾಟ, ಟಿಕೆಟ್ ಕಳ್ಳಾಟದ ಬಗ್ಗೆ ತಾವೇ ಇಂಚಿಂಚೂ ಪರಿಶೀಲಿಸಿ ರಿಪೋರ್ಟ್ ಪಡೆದಿದ್ದಾರೆ.
ಕಂಡಕ್ಟರ್ಗೆ ಭೈರತಿ ಸುರೇಶ್ ಫುಲ್ ತರಾಟೆ
ಬೆಂಗಳೂರಿನ ಭೂಪಸಂದ್ರದಿಂದ ಹೆಬ್ಬಾಳಕ್ಕೆ ಮಾಸ್ಕ್ ಧರಿಸಿದೇ BMTC ಬಸ್‌ನಲ್ಲಿ ಸಂಚಾರ ಮಾಡಿದ ಸಚಿವ ಭೈರತಿ ಸುರೇಶ್, ಎರಡು ಟಿಕೆಟ್ ಕೊಡುವಂತೆ 100 ರೂ ಕಂಡಕ್ಟರ್ಗೆ ಕೊಟ್ಟಿದ್ದಾರೆ. ಈ ವೇಳೆ ಚಿಲ್ಲರೆ ಇಲ್ಲ ಅಂದರೆ ಕೆಳಗಡೆ ಇಳೀರಿ ಅಂತಾ ಕಂಡಕ್ಟರ್ ಹೇಳಿದ್ದಾರೆ. ಇದಕ್ಕೆ ಕಂಡಕ್ಟರ್ಗೆ ಸಚಿವರು ಫುಲ್ ತರಾಟೆ ತೆಗೆದುಕೊಂಡಿದ್ದಾರೆ.
ಇನ್ನು ಸಾರ್ವನಿಕರು ಬಸ್ ಸ್ಟಾಪ್ನಲ್ಲಿ ಬಸ್ನನ್ನ ನಿಲ್ಲಿಸಿ ಅಂತಾ ಮನವಿ ಮಾಡಿದರೂ, ಕಂಡಕ್ಟರ್ ನಿಲ್ಲಿಸಿಲ್ಲ. ಇದನ್ನೇ ಗಮನಿಸಿದ ಸಾರಿಗೆ ಸಚಿವ ಭೈರತಿ ಸುರೇಶ್ ವಾರ್ನಿಂಗ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಹಲವು ಕಡೆಗಳಲ್ಲಿ ಬಿಎಂಟಿಸ್ ಬಸ್ ಕಂಡಕ್ಟರ್, ಡ್ರೈವರ್ಗಳ ಕಳ್ಳಾಟ ಬಗ್ಗೆ ಜಯಮಹಲ್, ಹೆಣ್ಣೂರು ಡಿಪೋ ಸೇರಿ ಹಲವೆಡೆ ಸಾರಿಗೆ ಸಚಿವರು ಪರಿಶೀಲನೆ ಮಾಡಿದ್ದಾರೆ. ಬಸ್ ಡಿಪೋ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದ ಭೈರತಿ ಸುರೇಶ್, ಕೆಲ ಅಧಿಕಾರಿಗಳ ಅಮಾನತಿಗೆ ಸೂಚಿಸಿದ್ದಾರೆ.
ಬಿಎಂಟಿಸಿ ನಿಗಮದಿಂದ ಖಡಕ್ ಸೂಚನೆ
ಇನ್ನು ಬಿಎಂಟಿಸಿ ನಿಗಮ ಕೂಡ ಮಾಧ್ಯಮ ಪ್ರಕಟಣೆ ಹೊರಡಿಸಿ ಖಡಕ್ ಸೂಚನೆ ಕೊಟ್ಟಿದೆ. ಚಿಲ್ಲರೆ ಇಲ್ಲದ ಕಾರಣಕ್ಕೆ ಪ್ರಯಾಣಿಕರನ್ನ ಬಸ್‌ನಿಂದ ಯಾರೂ ಕೂಡ ಇಳಿಸಬಾರದು, ಪ್ರಯಾಣ ನಿರಾಕರಿಸುವುದನ್ನು ಸಹಿಸಲಾಗುವುದಿಲ್ಲ. ಇದಷ್ಟೇ ಅಲ್ಲ, ಎಲ್ಲಾ ಚಾಲಕರು ನಿಗದಿತ ಬಸ್ ನಿಲ್ದಾಣಗಳಲ್ಲಿಯೇ ಬಸ್ಗಳನ್ನ ನಿಲ್ಲಿಸಬೇಕು. ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕಿದೆ. UPI ಪಾವತಿ ಸೌಲಭ್ಯ ಬಳಸಿಕೊಳ್ಳುವಂತೆ ತಿಳಿಸಬೇಕು ಎಂದು ಸೂಚಿಸಲಾಗಿದೆ.
ಚಾಲಕರು ಹಾಗೂ ನಿರ್ವಾಹಕರಿಗೆ ಸಾಫ್ಟ್ ಸ್ಕಿಲ್ಸ್ ತರಬೇತಿ
ETM ಯಂತ್ರಗಳಲ್ಲಿ ನಿಗದಿತ ನಿಲ್ದಾಣಗಳು ಆಗಿ ಪ್ರತಿಬಿಂಬಿಸದಿರುವ ಬಸ್ ಶೆಲ್ಟರ್‌ಗಳನ್ನು ಎಲ್ಲಾ ವಿಭಾಗೀಯ ಅಡಿ ನಿಯಂತ್ರಣಾಧಿಕಾರಿಗಳು ತುರ್ತು ಆದ್ಯತೆಯ ಮೇರೆಗೆ ಗುರುತಿಸಿ ವರದಿ ಸಲ್ಲಿಸಬೇಕು. ಅಂತಹ ನಿಲ್ದಾಣಗಳನ್ನು ETM ವ್ಯವಸ್ಥೆಯಲ್ಲಿ ತಕ್ಷಣ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಂದ ಪದೇ ಪದೇ ದೂರುಗಳು ಬರುತ್ತಿರುವ ಚಾಲಕರು ಹಾಗೂ ನಿರ್ವಾಹಕರನ್ನು ಗುರುತಿಸಿ, ಅವರಿಗೆ ವಡ್ಡರಹಳ್ಳಿ ತರಬೇತಿ ಕೇಂದ್ರದಲ್ಲಿ ಸಾಫ್ಟ್ ಸ್ಕಿಲ್ಸ್ ತರಬೇತಿ ನೀಡಲಾಗುವುದು. ವಿಭಾಗೀಯ ಸಂಚಾರ ಅಧಿಕಾರಿಗಳು ಹಾಗೂ ಘಟಕ ವ್ಯವಸ್ಥಾಪಕರು, ಪ್ರತಿದಿನ ಘಟಕಗಳಿಗೆ ಭೇಟಿ ನೀಡಿ ಚಾಲಕ-ನಿರ್ವಾಹಕರಿಗೆ ರಸ್ತೆ ಸುರಕ್ಷತೆ, ನಿಗದಿತ ನಿಲ್ದಾಣಗಳಲ್ಲಿ, ಬಸ್ ನಿಲ್ಲಿಸುವ ಕುರಿತು ನಿರಂತರ ಮಾರ್ಗದರ್ಶನ ನೀಡಬೇಕು. ಪ್ರಯಾಣಿಕರಿಂದ ಪ್ರಶಂಸೆ ಪಡೆದಿರುವ, ಉತ್ತಮ ಸೇವೆ ಸಲ್ಲಿಸುವ ಚಾಲಕರು ಹಾಗೂ ನಿರ್ವಾಹಕರನ್ನು ಗುರುತಿಸಿ, ಅವರಿಗೆ ಕೇಂದ್ರ ಕಚೇರಿಯಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಬೇಕು ಎಂದು ತಿಳಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:25 pm, Sun, 12 July 26




