AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ನಿವಾಸ ಹಂಚಿಕೆ: 3 ವರ್ಷ ಬಳಿಕ ಮನೆ ಕೊಟ್ಟರೂ ಅಶೋಕ್​​ ಬಯಸಿದ್ದು ಸಿಗಲೇ ಇಲ್ಲ!

Karnataka Political News: ಮೊನ್ನೇ ಅಷ್ಟೇ ಸಚಿವರಿಗೆ ಕಚೇರಿ ಕೊಠಡಿಗಳನ್ನ ಹಂಚಿಕೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಸಚಿವಾಲಯವು ಸರ್ಕಾರಿ ಸರಕಾರಿ ವಸತಿ ಗೃಹಗಳನ್ನು ಸಹ ಹಂಚಿಕೆ ಮಾಡಿದೆ. ಮೂರು ವರ್ಷಗಳ ಬಳಿಕ ವಿಪಕ್ಷ ನಾಯಕ ಆರ್ ಅಶೋಕ್ ಅವರಿಗೆ ನಿವಾಸ ನೀಡಲಾಗಿದೆ. ಆದ್ರೆ, ಅವರು ಬಯಸಿದ್ದು ಮಾತ್ರ ಸಿಕ್ಕಿಲ್ಲ. ಬದಲಾಗಿ ಬೇರೆ ನಿವಾಸವನ್ನು ನೀಡಲಾಗಿದೆ. ಹಾಗಾದ್ರೆ, ಯಾರು ಯಾವುದು ಕೇಳಿದ್ರು, ಯಾವುದು ಸಿಕ್ಕಿದೆ ಎನ್ನುವ ವಿವರ ಇಲ್ಲಿದೆ.

ಸರ್ಕಾರಿ ನಿವಾಸ ಹಂಚಿಕೆ: 3 ವರ್ಷ ಬಳಿಕ ಮನೆ ಕೊಟ್ಟರೂ ಅಶೋಕ್​​ ಬಯಸಿದ್ದು ಸಿಗಲೇ ಇಲ್ಲ!
R Ashok
ಕಿರಣ್​ ಹನಿಯಡ್ಕ
| Edited By: |

Updated on:Jun 25, 2026 | 8:38 PM

Share

ಮುಖ್ಯಾಂಶಗಳು

  • ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಸರ್ಕಾರಿ ನಿವಾಸ ಹಂಚಿಕೆ
  • 3 ವರ್ಷ ಬಳಿಕ ವಿಪಕ್ಷ ನಾಯಕ ಅಶೋಕ್​​​ಗೆ ಮನೆ ಸಿಕ್ಕರೂ ಬಯಸಿದ್ದು ಸಿಕ್ಕಿಲ್ಲ
  • ಖಾದರ್ ಇದ್ದ ಸ್ಯಾಂಕಿ ರಸ್ತೆಯಲ್ಲಿರುವ ನಂ. 31 ಮನೆ ಅಶೋಕ್​ಗೆ ಹಂಚಿಕೆ

ಬೆಂಗಳೂರು, (ಜೂನ್ 25): ಡಿಕೆ ಶಿವಕುಮಾರ್ (DK Shivakumar) ಸಂಪುಟದ ಸಚಿವರಿಗೆ ಇಂದು (ಜೂನ್ 25) ಸರ್ಕಾರಿ ವಸತಿ ಗೃಹಗಳನ್ನು ಹಂಚಿಕೆ ಮಾಡಲಾಗಿದೆ. ಸಚಿವರ ಜೊತೆಗೆ ಮೂರು ವರ್ಷಗಳ ಬಳಿಕ ವಿರೋಧ ಪಕ್ಷದ ನಾಯಕ ಆರ್ ಅಶೋಕ್  (R Ashok) ಅವರಿಗೂ ಸರ್ಕಾರಿ ನಿವಾಸವನ್ನು ನೀಡಲಾಗಿದೆ. ಆದ್ರೆ, ಅಶೋಕ್ ಬಯಸಿದ್ದು ಮಾತ್ರ ಸಿಕಿಲ್ಲ. ಹೌದು…ಆರ್​.ಅಶೋಕ್​ ಕೇಳಿದ್ದ ಕುಮಾರಕೃಪಾ ಪೂರ್ವ ನಂ.1 ನಿವಾಸವನ್ನು ಆರೋಗ್ಯ ಸಚಿವ ಯುಟಿ ಖಾದರ್ ಅವರಿಗೆ ನೀಡಲಾಗಿದೆ. ಇದರಿಂದ ಅಶೋಕ್ ಅವರಿಗೆ ಮೂರು ವರ್ಷಗಳ ನಂತರ ನಿವಾಸ ನೀಡಿದರೂ ಸಹ ಅವರು ಬಯಸಿದ್ದು ಮಾತ್ರ ಕೊಟ್ಟಿಲ್ಲ. ಬದಲಾಗಿ ಸ್ಯಾಂಕಿ ರಸ್ತೆಯಲ್ಲಿರುವ ನಂ. 31 ನಿವಾಸವನ್ನು ಅಶೋಕ್ ಗೆ ನೀಡಲಾಗಿದೆ.

ಯಾರ್ಯಾರಿಗೆ ಯಾವ್ಯಾವ ನಿವಾಸ?

ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕೇಳಿದ್ದ ಸರ್ಕಾರಿ ನಿವಾಸ ಆರೋಗ್ಯ ಸಚಿವ ಯು.ಟಿ. ಖಾದರ್ ಗೆ ಹಂಚಿಕೆ ಮಾಡಲಾಗಿದೆ. ಇನ್ನು ಖಾದರ್ ಸ್ಪೀಕರ್ ಆಗಿದ್ದ ವೇಳೆ ನೀಡಲಾಗಿದ್ದ ಸ್ಯಾಂಕಿ ರಸ್ತೆಯಲ್ಲಿರುವ ನಂ. 31 ನಿವಾಸವನ್ನು  ಇದೀಗ ಅಶೋಕ್ ಅವರಿಗೆ ನೀಡಲಾಗಿದೆ. ಇನ್ನು M.B.ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಅವರು ಈ ಹಿಂದೆ ಸಿದ್ದರಾಮಯ್ಯನವರ ಅವಧಿಯಲ್ಲಿ ನೀಡಲಾಗಿದ್ದ ಮನೆಯನ್ನೇ ಕೇಳಿದ್ದರು. ಅದರಂತೆ ಇದೀಗ ಅವೇ ನಿವಾಸಗಳನ್ನು ಅವರಿಗೆ ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಸಂಪುಟದ 13 ಸಚಿವರಿಗೆ ಕೊಠಡಿ ಹಂಚಿಕೆ, ರಾಮಲಿಂಗಾರೆಡ್ಡಿಗೆ ಬಂಪರ್

3 ವರ್ಷದ ನಂತ್ರ ಕೊಟ್ಟರೂ ಅಶೋಕ್​​ ಬಯಸಿದ್ದು ಸಿಗಲೇ ಇಲ್ಲ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ್ದರೂ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರಿಗೆ ಇನ್ನುವರೆಗೂ ಅಧಿಕೃತ ಸರ್ಕಾರಿ ನಿವಾಸವನ್ನು ಮಂಜೂರು ಮಾಡಿರಲಿಲ್ಲ. ಹೀಗಾಗಿ ಅಶೋಕ್ ಅವರು ಇತ್ತೀಚೆಗೆ ಸರ್ಕಾರಕ್ಕೆ ಪತ್ರ ಬರೆದು ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಸ್ಯಾಂಕಿ ರಸ್ತೆಯಲ್ಲಿರುವ ನಂ. 31 ಮನೆ ಅಶೋಕ್​ಗೆ ಹಂಚಿಕೆ ಮಾಡಲಾಗಿದೆ. ಆದ್ರೆ, ಡಿಕೆ ಶಿವಕುಮಾರ್ ಅವರು ಡಿಸಿಎಂ ಆಗಿದ್ದಾಗ ಇದ್ದ ಕುಮಾರಕೃಪಾ ಪೂರ್ವ ನಂ.1 ನಿವಾಸ, M.B.ಪಾಟೀಲ್ ಅಥವಾ ಪ್ರಿಯಾಂಕ್ ಖರ್ಗೆ ಅವರಿದ್ದ ನಿವಾಸ ಬೇಕೆಂದು ಮನವಿ ಮಾಡಿದ್ದರು. ಆದ್ರೆ, ಅಶೋಕ್ ಕೇಳಿದ್ದ ಯಾವುದೇ ನಿವಾಸವನ್ನು ನೀಡಿಲ್ಲ. ಬದಲಾಗಿ ಈ ಹಿಂದೆ ಖಾದರ್ ಸ್ಪೀಕರ್ ಆಗಿದ್ದ ವೇಳೆ ನೀಡಲಾಗಿದ್ದ ಸ್ಯಾಂಕಿ ರಸ್ತೆಯಲ್ಲಿರುವ ನಂ. 31 ನಿವಾಸವನ್ನು ನೀಡಲಾಗಿದೆ. ಆದ್ರೆ, ಇದನ್ನು ಅಶೋಕ್ ಸ್ವೀಕಾರ ಮಾಡುತ್ತಾರೋ ಇಲ್ವಾ ಎನ್ನುವುದನ್ನು ಕಾದುನೋಡಬೇಕಿದೆ.

ವಿಧಾನಸಭೆ, ಪರಿಷತ್​​ ವಿಪಕ್ಷ ನಾಯಕರಿಗೆ ಸಿಕ್ಕಿರಲಿಲ್ಲ ಸರ್ಕಾರಿ ಗೃಹ

ಹೌದು.. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದೆ. ಆದ್ರೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಸರ್ಕಾರಿ ನಿವಾಸ ಇನ್ನೂ ಸಿಕ್ಕಿರಲಿಲ್ಲ. ಈ ಬಗ್ಗೆ ಐದಾರು ಬಾರಿ ಪತ್ರವನ್ನು ಬರೆದರೂ ಸರ್ಕಾರ ಸ್ಪಂದಿಸಿರಲಿಲ್ಲ. ಈ ಸಂಬಂಧ ಉಭಯ ನಾಯಕರು ಸರ್ಕಾರಕ್ಕೆ ಪತ್ರ ಬರೆದು ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಸರ್ಕಾರ, ಕೊನೆಗೂ ಛಲವಾದಿ ನಾರಾಯಣಸ್ವಾಮಿ ಹಾಗೂ ಅಶೋಕ್ ಅವರಿಗೆ ಸರ್ಕಾರಿ ನಿವಾಸ ಹಂಚಿಕೆ ಮಾಡಿದೆ.

ಅಶೋಕ್ ಬಯಸಿದ್ದ ನಿವಾಸಗಳಾವುವು?

ಸರ್ಕಾರಿ ನಿವಾಸ ಒದಗಿಸುವಂತೆ ಮನವಿ ಮಾಡಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು ನಿರ್ದಿಷ್ಟ ಮೂರು ಸರ್ಕಾರಿ ಬಂಗಲೆ ಕೇಳಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಗೆ ಮತ್ತು ಇಬ್ಬರು ಸಚಿವರಿಗೆ ಈಗಾಗಲೇ ಹಂಚಿಕೆಯಾಗಿರುವ ನಿವಾಸಗಳಿಗೆ ಆರ್.ಅಶೋಕ್ ಬೇಡಿಕೆ ಇಟ್ಟಿದ್ದರು. ಬೆಂಗಳೂರಿನ ಕುಮಾರಕೃಪಾ ದಕ್ಷಿಣದಲ್ಲಿರುವ ನಂಬರ್ 1 ನಿವಾಸ ಒದಗಿಸುವಂತೆ ಅಶೋಕ ಮನವಿ ಮಾಡಿದ್ದರು. ಆದರೆ, ಸದ್ಯ ಈ ನಿವಾಸ ಡಿಸಿಎಂ ಡಿಕೆ‌ ಶಿವಕುಮಾರ್​​ ಗೆ ಹಂಚಿಕೆಯಾಗಿತ್ತು. ಇದೇ ನಿವಾಸದಲ್ಲಿದ್ದು ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿದ್ದರು. ಸದ್ಯ ರೇಸ್ ವ್ಯೂ ಕಾಟೇಜ್​​ನ ನಂಬರ್ 1 ನಿವಾಸ ಸಚಿವ ಎಂಬಿ ಪಾಟೀಲ್ ​​ಗೆ ಹಂಚಿಕೆ ಮಾಡಿದ್ದರೆ, ನಂಬರ್ 3 ನಿವಾಸ ಸಚಿವ ಪ್ರಿಯಾಂಕ್ ಖರ್ಗೆಗೆ ಹಂಚಿಕೆ ಮಾಡಲಾಗಿತ್​ತು. ಹೀಗಾಗಿ ಅಶೋಕ್​​ ಅವರಿಗೆ ಯಾವುದೇ ನಿವಾಸ ಸಿಕ್ಕಿರಲಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:37 pm, Thu, 25 June 26

Follow Us
ಮಂಗಳೂರಿಗೆ ಬಂದ ಶಾರುಖ್ ಖಾನ್, ಬಾದ್​​ಶಾನ ನೋಡಲು ಮುಗಿಬಿದ್ದ ಜನ
ಮಂಗಳೂರಿಗೆ ಬಂದ ಶಾರುಖ್ ಖಾನ್, ಬಾದ್​​ಶಾನ ನೋಡಲು ಮುಗಿಬಿದ್ದ ಜನ
33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ: ಡಿಕೆಶಿ
33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ: ಡಿಕೆಶಿ
ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್ ಸಾವು, ಆಪ್ತ ಗೆಳೆಯ ಹೇಳಿದ್ದೇನು?
ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್ ಸಾವು, ಆಪ್ತ ಗೆಳೆಯ ಹೇಳಿದ್ದೇನು?
ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ
ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ
ಮುತ್ತತ್ತಿ ದುರಂತ: ಕೊನೇ ಕ್ಷಣದ ವಿಡಿಯೋ ವೈರಲ್
ಮುತ್ತತ್ತಿ ದುರಂತ: ಕೊನೇ ಕ್ಷಣದ ವಿಡಿಯೋ ವೈರಲ್
ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಕ್ರಸ್ಟ್ ಗೇಟ್‌ಗಳು ಲೋಕಾರ್ಪಣೆ
ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಕ್ರಸ್ಟ್ ಗೇಟ್‌ಗಳು ಲೋಕಾರ್ಪಣೆ
ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು?
ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು?
ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ
ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ
ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ
ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ
‘11 ವರ್ಷಗಳಾದ್ರೂ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಇಲ್ಲ’
‘11 ವರ್ಷಗಳಾದ್ರೂ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಇಲ್ಲ’