ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿಗೆ ಕೃತಿ ಆಹ್ವಾನ
ಕೃತಿಗಳನ್ನು ಕಳುಹಿಸಿಕೊಡಲು 2021ರ ಮಾರ್ಚ್ 25 ಕೊನೆಯ ದಿನಾಂಕ. ವಿಜೇತರಾದವರಿಗೆ ₹ 25,000 ನಗದು ಬಹುಮಾನ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ.

ಮಂಡ್ಯ: ಪ್ರತಿವರ್ಷವು ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ವತಿಯಿಂದ ಕಥಾಸಂಕಲನಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಅದರಂತೆ 2020ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಲಾಗಿದೆ.
2020ನೇ ಸಾಲಿನಲ್ಲಿ ಪ್ರಕಟವಾದ ಮೊದಲ ಮುದ್ರಣದ ಕಥಾಸಂಕಲನಗಳ ಪ್ರಕಾಶಕರು ಅಥವಾ ಲೇಖಕರು ಕೃತಿಯ ಮೂರು ಪ್ರತಿಗಳನ್ನು ಅಧ್ಯಕ್ಷರು, ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ, ನಂಬರ್ 15, 2ನೇ ಅಡ್ಡರಸ್ತೆ, ನಿಸರ್ಗ ಬಡಾವಣೆ, ಉಲ್ಲಾಳ ಆರ್ಟಿಒ ಕಚೇರಿ ಹತ್ತಿರ, ಬೆಂಗಳೂರು-560 091 ವಿಳಾಸಕ್ಕೆ ಕಳುಹಿಸಿಕೊಡಲು ಟ್ರಸ್ಟ್ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 99803 05837 ಸಂಪರ್ಕಿಸಬಹುದು.
ಕೃತಿಗಳನ್ನು ಕಳುಹಿಸಿಕೊಡಲು 2021ರ ಮಾರ್ಚ್ 25 ಕೊನೆಯ ದಿನಾಂಕ. ವಿಜೇತರಾದವರಿಗೆ ₹ 25,000 ನಗದು ಬಹುಮಾನ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ. ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು 2021 ಜೂನ್ ತಿಂಗಳಲ್ಲಿ ಮಂಡ್ಯದಲ್ಲಿ ನಡೆಸಲಾಗುವುದು. ಅದೇ ದಿನ ಪ್ರಶಸ್ತಿಗಳನ್ನು ವಿಜೇತರಿಗೆ ನೀಡಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಎಚ್.ಆರ್.ಸುಜಾತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ನೋಡದ ನನ್ನ ಅಮ್ಮನನ್ನು ನಾನು ಹೀಗೆ ದಕ್ಕಿಸಿಕೊಳ್ಳುತ್ತಿದ್ದೇನೆ’: ಕಾದಂಬರಿಕಾರ್ತಿ ತ್ರಿವೇಣಿ ಪುತ್ರಿ ಮೀರಾ ಶಂಕರ್
Published On - 6:19 pm, Sun, 7 February 21



