Soldier: ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಗಲಕೋಟೆ ಯೋಧ ಸಾವು

ಭಾರತೀಯ ಸೇನೆಯಲ್ಲಿ ಸುಮಾರು 22 ವರ್ಷ ಸೇವೆ ಸಲ್ಲಿಸಿದ ಯೋಧ, ಪತ್ನಿ ದ್ರಾಕ್ಷಾಯಿಣಿ ಮತ್ತು ಇಬ್ಬರು ಮಕ್ಕಳಾದ 17 ವರ್ಷದ ಸಹನಾ, 10 ವರ್ಷದ ಸಾಯಿ ಪ್ರಜ್ವಲ್ನನ್ನ ಅಗಲಿದ್ದಾರೆ. ಇನ್ನೇನು ನಾಯಕ್ ಸುಬೇದಾರ್ ಪ್ರಮೋಷನ್ ಆಗುವುದಿತ್ತು.

Soldier: ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಗಲಕೋಟೆ ಯೋಧ ಸಾವು
ಯೋಧ ಮಹಾಂತೇಶ್ ದಾಸಪ್ಪನವರ

ಬಾಗಲಕೋಟೆ: ಜಮ್ಮು ಕಾಶ್ಮೀರದ ಶ್ರೀನಗರದ ಕುಪ್ಪಾಡನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಗಲಕೋಟೆ ಯೋಧ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ 41 ವರ್ಷದ ಯೋಧ ಮಹಾಂತೇಶ್ ದಾಸಪ್ಪನವರ ನಿಧನರಾಗಿದ್ದಾರೆ. ಮಹಾಂತೇಶ್ ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದವರು. ಯೋಧ ಎಮ್ಇಜಿ 2 ಇಂಜಿನಿಯರ್ ಬಟಾಲಿಯನ್ ರೆಜಿಮೆಂಟ್​ನಲ್ಲಿದ್ದರು. ಮಹಾಂತೇಶ್ 2000 ಇಸವಿಯಲ್ಲಿ ಭಾರತೀಯ ಸೇನೆಗೆ ಸೇರಿದ್ದರು.

ಭಾರತೀಯ ಸೇನೆಯಲ್ಲಿ ಸುಮಾರು 22 ವರ್ಷ ಸೇವೆ ಸಲ್ಲಿಸಿದ ಯೋಧ, ಪತ್ನಿ ದ್ರಾಕ್ಷಾಯಿಣಿ ಮತ್ತು ಇಬ್ಬರು ಮಕ್ಕಳಾದ 17 ವರ್ಷದ ಸಹನಾ, 10 ವರ್ಷದ ಸಾಯಿ ಪ್ರಜ್ವಲ್​ನನ್ನ ಅಗಲಿದ್ದಾರೆ. ಇನ್ನೇನು ನಾಯಕ್ ಸುಬೇದಾರ್ ಪ್ರಮೋಷನ್ ಆಗುವುದಿತ್ತು. ಆದರೆ ಅದಕ್ಕೂ ಮುನ್ನ ಇಹಲೋಕ ತ್ಯಜಿಸಿದ್ದಾರೆ. ಜುಲೈ 24 ರಂದು ಅನರೋಗ್ಯದಿಂದ ಸಾವನ್ನಪ್ಪಿದ್ದಾರೆ. ಬೆನಕಟ್ಟಿ ಗ್ರಾಮದಲ್ಲಿ ಇಂದು ಯೋಧನ ಅಂತ್ಯಸಂಸ್ಕಾರ ನಡೆಯಲಿದೆ.

ಬೆಳಗ್ಗೆ 10 ಗಂಟೆಗೆ ಗ್ರಾಮದ ಬೆನಕಟ್ಟಿ ಹೇಮರೆಡ್ಡಿ ಹೈಸ್ಕೂಲ್ ಆವರಣದೊಳಗೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಜುಲೈ 24ಕ್ಕೆ ನಡೆದ ಎನ್ಕೌಂಟರ್​ನಲ್ಲಿ ಇಬ್ಬರು ಉಗ್ರರ ಹತ್ಯೆ
ಉತ್ತರ ಕಾಶ್ಮೀರ (North Kashmir)ದ ಬಂಡಿಪೋರಾದಲ್ಲಿ ಜುಲೈ 24ಕ್ಕೆ ಮುಂಜಾನೆ ನಡೆದ ಎನ್​ಕೌಂಟರ್​ನಲ್ಲಿ ಇಬ್ಬರು ಉಗ್ರರ ಹತ್ಯೆ (Terrorists Killed)ಯಾಗಿದ್ದು, ಮೂವರು ಯೋಧರು ಗಾಯಗೊಂಡಿದ್ದರು. ಬಂಡಿಪೋರಾ ಜಿಲ್ಲೆಯ ಸುಮ್ಲಾರ್​ನ ಶೊಕ್ಬಾಬಾ ಎಂಬ ಪ್ರದೇಶದಲ್ಲಿ ರಕ್ಷಣಾ ಪಡೆಗಳು(Security Forces) ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇದರಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾಗಿತ್ತು.

ಇದನ್ನೂ ಓದಿ

ಕಾಶ್ಮೀರದಲ್ಲಿ ಮುಂಜಾನೆ ನಡೆದ ಎನ್​ಕೌಂಟರ್​​; ಇಬ್ಬರು ಉಗ್ರರ ಹತ್ಯೆ, ಮೂವರು ಯೋಧರಿಗೆ ಗಾಯ

CM Basavaraj Bommai: ಉತ್ತರ ಕನ್ನಡ ಪ್ರವಾಹ ಪ್ರವಾಸಕ್ಕೆ ಹೊರಟ ನೂತನ ಸಿಎಂ ಬೊಮ್ಮಾಯಿ, ನೆರೆ ಪೀಡಿತ ಪ್ರದೇಶ ಪರಿಶೀಲನೆ

(Bagalkotte Soldier working in Srinagar has died of illness)

Click on your DTH Provider to Add TV9 Kannada