Banashankari Jatre: ಬಾದಾಮಿ ಜಾತ್ರೆಯಲ್ಲಿ ಅದ್ಧೂರಿ ಮಹಾರಥೊತ್ಸವ, ಈ ಬಾರಿ ಜಾತ್ರೆಯಲ್ಲಿ ಏನೇನಿದೆ?

ಅದು ಉತ್ತರ ಕರ್ನಾಟಕದ ಪ್ರಸಿದ್ದ ಜಾತ್ರೆ, ಶಕ್ತಿದೇವತೆ ಎಂದೇ ಹೆಸರಾದ ದೇವತೆಯ ಜಾತ್ರೆ. ಇದು ಒಂದು ತಿಂಗಳ ಕಾಲ ನಡೆಯುತ್ತೆ. ಇದು ಕೇವಲ ಜಾತ್ರೆಯಲ್ಲ ಕಲಾವಿದರ ಜೀವನಕ್ಕೆ ಆಸರೆ. ಬನಶಂಕರಿ ನೂರಾರು ಕಲಾವಿದರಿಗೆ ಅನ್ನದಾತೆಯಾಗಿದ್ದು, ಬನಶಂಕರಿ ಸನ್ನಿಧಿಯಲ್ಲಿ ಕಾಮಿಡಿ, ನಾಟಕಗಳು ಭರ್ಜರಿ ಪ್ರದರ್ಶನ ಕಾಣುತ್ತವೆ.

Banashankari Jatre: ಬಾದಾಮಿ ಜಾತ್ರೆಯಲ್ಲಿ ಅದ್ಧೂರಿ ಮಹಾರಥೊತ್ಸವ, ಈ ಬಾರಿ ಜಾತ್ರೆಯಲ್ಲಿ ಏನೇನಿದೆ?
ಬನಶಂಕರಿ ಜಾತ್ರೆ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಆಯೇಷಾ ಬಾನು

Updated on: Jan 25, 2024 | 3:37 PM

ಬಾಗಲಕೋಟೆ, ಜ.25: ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ನಾಟಕಗಳ ಕಲರ್ ಕಲರ್ ಪೋಸ್ಟರ್ ಎದ್ದು ಕಾಣುತ್ತವೆ. ನಾಟಕಗಳ ಥಿಯೇಟರ್ ಒಳಗೆ ಕಾಲಿಟ್ಟರೆ ಭರ್ಜರಿ ಹಾಸ್ಯದ ಜಲಕ್, ಮಸ್ತ್ ಡ್ಯಾನ್ಸ್ ಕಂಡು ಕೇಕೆ ಸಿಳ್ಳೆ ಹೊಡೆದು ಎಂಜಾಯ್ ಮಾಡುತ್ತಿರುವ ಕಲಾರಸಿಕರು ಕಾಣಸಿಗುತ್ತಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ (Badami) ಸಮೀಪದ ಬನಶಕರಿ ಜಾತ್ರೆಯಲ್ಲಿ (Banashankari Jatre) ನಾಟಕಗಳ ರಂಗು ಪಸರಿಸಿದೆ. ಹೌದು ಇಂದು ಬನಶಂಕರಿದೇವಿ ಜಾತ್ರೆ ರಥೋತ್ಸವದ ಮೂಲಕ ಆರಂಭವಾಗುತ್ತಿದೆ. ಆದರೆ ರಥೋತ್ಸವಕ್ಕೂ ಎರಡು ದಿನ ಮುನ್ನವೇ ನಾಟಕಗಳು ಶುರುವಾಗಿವೆ. ಒಂದು ತಿಂಗಳ ಕಾಲ ನಡೆಯುವ ಜಾತ್ರೆಯಲ್ಲಿ ಈಗ ನಾಟಕಗಳದ್ದೇ ಸದ್ದು. ಮಧ್ಯಾಹ್ನ ದೇವರ ದರ್ಶನ ಪಡೆವ ಭಕ್ತರಿಗೆ ಸಂಜೆ ಆದರೆ ಸಾಕು ಹಾಸ್ಯ ನಾಟಕಗಳ ಮನರಂಜನೆ ಕೂಡ ಭರಪೂರ ಸಿಗುತ್ತಿದೆ.

ನಾಟಕಗಳ ಹೆಸರುಗಳಂತೂ ಬಾರಿ ಮಸ್ತಾಗಿವೆ. ಹಗರಿಲ್ಲ ಹನುಮವ್ವ, ಗಂಗಿ ಮನ್ಯಾಗ ಗೌರಿ ಹೊಲದಾಗ, ಕಟಗರೊಟ್ಟಿ ಕಲ್ಲವ್ವ, ನಿ ಸಿಗಾಂಗಿಲ್ಲ ನಾ ಬಿಡಾಂಗಿಲ್ಲ, ಸೌಡಿಲ್ಲಸ ಸಾಹುಕಾರ, ಅದು ಬ್ಯಾರೇನ ಐತಿ, ಜವಾರಿ ಹುಡುಗಿ, ಗಡಿಬಿಡಿ ಸಂಗವ್ವ, ಪಾರುನ ಹಾರಾಟ ಹನುಮನ ಚೆಲ್ಲಾಟ, ಹೆಂಡತಿ ಟೂರಿಗೆ ಗಂಡ ಬಾರಿಗೆ ಎಂಬ ಜವಾರಿ ಹೆಸರುಗಳು ಎಲ್ಲರನ್ನೂ ಸೆಳೆಯುತ್ತಿವೆ. ಹಾಸ್ಯ ಕಲಾವಿದರ ಕಾಮಿಡಿ, ಡ್ಯಾನ್ಸ್, ಪೋಷಕ ಪಾತ್ರಧಾರಿಗಳ ಸೆಂಟಿಮೆಂಟ್ ಎಲ್ಲರನ್ನು ಸೆಳೆಯುತ್ತಿದ್ದು ಜಾತ್ರೆಗೆ ಬಂದವರು ನಾಟಕ ನೋಡಿ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಸಾಗರೋಪಾದಿಯಲ್ಲಿ ಜನರು ಬಂದು ನಾಟಕ ನೋಡುತ್ತಾರೆ. ಇದರಿಂದ ಕಲಾವಿದರೂ ಕೂಡ ಖುಷಿಯಾಗಿದ್ದು, ತಾಯಿ ಬನಶಂಕರಿ ಕೃಪೆಯಿಂದ ಒಳ್ಳೆಯ ಕಲೆಕ್ಷನ್ ಇದೆ. ಎಲ್ಲಾ ಕಲಾವಿದರು ಖುಷಿಯಲ್ಲಿದ್ದಾರೆ ಎಂದು ಕಲಾವಿದರಾದ ಸುಜಾತಾ ಅವರು ತಿಳಿಸಿದರು.

ಜಾತ್ರೆಯಲ್ಲಿ ಹತ್ತಾರು ನಾಟಕ ಕಂಪನಿಗಳ ಕಮಾಲ್

ಈ ಬಾರಿ ಒಟ್ಟು ಹತ್ತು ನಾಟಕ ಕಂಪನಿಗಳು ಸ್ಥಳದಲ್ಲಿ ಬೀಡು ಬಿಟ್ಟಿವೆ. ಎಲ್ಲ ನಾಟಕಗಳು ಕೂಡ ಭರ್ಜರಿ ಪ್ರದರ್ಶನ ಕಾಣುತ್ತಿವೆ. ನಾಟಕ ಕಂಪನಿಗಳು ಎಲ್ಲಿಯೇ ಇದ್ದರೂ ಬನಶಂಕರಿ ಜಾತ್ರೆ ವೇಳೆ ಇಲ್ಲಿಗೆ ಬರುತ್ತಾರೆ. ಯಾಕೆಂದರೆ ಬನಶಂಕರಿದೇವಿ ಜಾತ್ರೆ ನಾಟಕ ಕಲಾವಿದರಿಗೆ ಆಶ್ರಯ ತಾಣ ಅಂತ ಹೇಳಬಹುದು. ಬನಶಂಕರಿದೇವಿ ಜಾತ್ರೆಯಲ್ಲಿ ನಾಟಕ ಕಂಪನಿಗಳಿಗೆ ಭರ್ಜರಿ ಕಲೆಕ್ಷನ್ ಇದ್ದು, ನೂರಾರು ನಾಟಕ ಕಲಾವಿದರಿಗೆ ಬನಶಂಕರಿದೇವಿ ಅನ್ನದಾತೆಯಾಗಿದ್ದಾಳೆ ಎಂದರೆ ತಪ್ಪಿಲ್ಲ. ಒಂದೊಂದು ಪ್ರದರ್ಶನದಲ್ಲಿ ಸಾವಿರಕ್ಕೂ ಅಧಿಕ ಜನರು ಬಂದು ವೀಕ್ಷಣೆ ಮಾಡುತ್ತಿದ್ದಾರೆ. ಒಂದು ಪ್ರದರ್ಶನದಿಂದ 50-60 ಸಾವಿರದಷ್ಟು ಒಂದೊಂದು ಕಂಪನಿಗೆ ಕಲೆಕ್ಷನ್ ಆಗುತ್ತಿದೆ, ಅದರಂತೆ ಮೂರು ಪ್ರದರ್ಶನಕ್ಕೆ ಕೋಟಿಗೂ ಅಧಿಕ ಕಲೆಕ್ಷನ್ ಆತ್ತಿದೆ. ಹತ್ತು ನಾಟಕ ಕಂಪನಿಗಳ ವಹಿವಾಟು ಕೋಟಿ ಕೋಟಿಯಾಗಿದ್ದು, ಯಾವುದೇ ಸಿನಿಮಾಗಳಿಗೂ ಕಡಿಮೆಯಿಲ್ಲದಂತೆ ಕಲೆಕ್ಷನ್ ಹಾಗೂ ಪುಲ್ ಮನರಂಜನೆ ನೀಡುತ್ತಿವೆ. ಯಾವುದೇ ಅಶ್ಲೀಲತೆಯಿಲ್ಲದ, ಅವಾಚ್ಯ ಪದ ಬಳಕೆಯಿಲ್ಲದೆ, ಲೇಟೆಸ್ಟ್ ಅಪ್ಡೇಟ್ ಹಾಡುಗಳು, ಸಂಭಾಷಣೆ ಮೂಲಕ ಕಲಾವಿದರು ಜನರನ್ನು ಸೆಳೆಯುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಕುಟುಂಬ ಸಮೇತರಾಗಿ ಪ್ರೇಕ್ಷಕರು ಬಂದು ನಾಟಕ ನೋಡುತ್ತಿದ್ದಾರೆ. ಜಾತ್ರೆಗೆ ಬಂದ ಜನರು ಇದು ಕೇವಲ ಭಕ್ತಿಯಲ್ಲ ಅನ್ನದಾತ ಜಾತ್ರೆ ಎಂದು ಕೊಂಡಾಡಿದ್ದಾರೆ.

ಇದನ್ನೂ ಓದಿ: ಗಣರಾಜ್ಯೋತ್ಸವ: ಬೆಂಗಳೂರು ಸಿಟಿ ಇನ್ಸಿಟ್ಯೂಟ್​​ನಲ್ಲಿ ಅನಾವರಣಗೊಳ್ಳಲಿದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ

ಶಾಕಾಂಬರಿ ಶಕ್ತಿಪೀಠ ಎಂದೇ ಹೆಸರಾದ ಬನಶಂಕರಿ ದೇವಸ್ಥಾನಕ್ಕೆ ದೇಶ-ವಿದೇಶದಲ್ಲೂ ಭಕ್ತರಿದ್ದಾರೆ. ಜಾತ್ರೆ ವೇಳೆ ಭಕ್ತರು ದೇಶವಿದೇಶದಿಂದ ಬರುತ್ತಾರೆ. ಲಕ್ಷಾಂತರ ಜನರು ಸೇರಿ ರಥ ಎಳೆದು ಸಂಭ್ರಮಿಸುತ್ತಾರೆ. ಈ‌ ಜಾತ್ರೆ ವಿಶೇಷತೆ ಏನೆಂದರೆ ಇಲ್ಲಿ ತಿಂಗಳುಗಳ ಕಾಲ ವ್ಯಾಪಾರ ವಹಿವಾಟು ನಡೆಯುತ್ತದೆ. ಇಲ್ಲಿ ತಂದೆ-ತಾಯಿ ಬಿಟ್ಟು ಎಲ್ಲ ಸಿಗುತ್ತದೆ ಎಂದು ಹೇಳುವವರಿದ್ದಾರೆ. ಅದಕ್ಕೆ ಅಪ್ಪ ಅಮ್ಮ ಬಿಟ್ಟು ಎಲ್ಲ ಸಿಗುವ ಜಾತ್ರೆ ಅಂತಾನೆ ಕರೆಯುತ್ತಾರೆ. ಮನೆ ಕಟ್ಟಡಗಳು, ಹಾಸಿಗೆ ದಿಂಬು, ಬಟ್ಟೆ ಬರೆ, ಪಾತ್ರೆ ಪಗಡೆ, ಕೃಷಿ ಸಲಕರಣೆಗಳು, ಅಡುಗೆ ಸಾಮಾನುಗಳು, ಬಳೆ ಸ್ತ್ರೀ ಅಲಂಕಾರಿಕ ವಸ್ತುಗಳು, ಜಾನುವಾರುಗಳು, ಎಲ್ಲವೂ ಸಿಗುತ್ತವೆ. ಪ್ರತಿದಿನ ಐದು ಕೋಟಿಗೂ ಅಧಿಕ ವ್ಯಾಪಾರ ವಹಿವಾಟು ನಡೆಯುತ್ತದೆ. ಒಂದು ತಿಂಗಳ ಜಾತ್ರೆಯಲ್ಲಿ ಬಂದ ಲಾಭದಿಂದ ವ್ಯಾಪಾರಿಗಳು ವರ್ಷವಿಡೀ ಬದಕುವಷ್ಟು ಗಳಿಸುತ್ತಾರೆ. ನಾಟಕ ಕಂಪನಿಗಳು ಕೂಡ ತಿಂಗಳ ಬನಶಂಕರಿ ಜಾತ್ರೆ ಆದಾಯದಲ್ಲೇ ವರ್ಷದ ಅನ್ನ ಕಾಣುತ್ತವೆ.

ಚಾಲುಕ್ಯರ ಅಧಿದೇವತೆ ಬನಶಂಕರಿ ದೇವಿ

ಬನಶಂಕರಿ ದೇವಿ ಮೂಲ ದೇವಸ್ಥಾನ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದೆ. ಚಾಲುಕ್ಯರು ಯಾವುದೇ ಯುದ್ದ ಮಾಡುವಾಗಲೂ ಯುದ್ದಕ್ಕೂ ಮುನ್ನ ಬನಶಂಕರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಆಕೆಯ ಆಶೀರ್ವಾದ ಪಡೆದೇ ಮುನ್ನುಗ್ಗುತ್ತಿದ್ದರು. ಶಾಲಿವಾಹನ ಶಕೆ 604ರಲ್ಲಿ ತಾಯಿ ಮೂರ್ತಿ ಪ್ರತಿಷ್ಟಾಪನೆ ಆಗಿರುವ ಉಲ್ಲೇಖವಿದೆ. ಅಷ್ಟಭುಜ ಹೊಂದಿರುವ ತಾಯಿ ಬೇಡಿ ವರ ಕೊಡುವ ಕಲ್ಪತರುವಾಗಿದ್ದಾಳೆ. 18ನೇ ಶತಮಾನದಲ್ಲಿ ಹೊಸ ದೇವಸ್ಥಾನ ನಿರ್ಮಾಣವಾಗಿದೆ. 500 ವರ್ಷಗಳ ಇತಿಹಾಸ ಇರುವ ಜಾತ್ರೆ ಇದಾಗಿದ್ದು, ನಿರಂತರವಾಗಿ ನಡೆದುಕೊಂಡು ಬಂದಿದೆ. ಉತ್ತರಪ್ರದೇಶದಲ್ಲಿ ಇರುವ ಒಂದು ಶಕ್ತಿ ದೇವತೆ ಹೊರತುಪಡಿಸಿ ದೇಶದಲ್ಲೇ ಮೊದಲ ಶಕ್ತಿ ದೇವತೆ ಬನಶಂಕರಿ ಆಗಿದ್ದಾಳೆ. ಉಳಿದ ಶಕ್ತಿ ಪೀಠಗಳು ಇದರ ‌ನಂತರ ಅಸ್ತಿತ್ವಕ್ಕೆ ಬಂದಿರೋದು ಎಂಬ ಮಾತಿದೆ. ರಥೋತ್ಸವ ದಿನದಂದು ಎರಡು ಲಕ್ಷಕ್ಕೂ ಅಧಿಕ ಜನರು ಇಲ್ಲಿ ಸೇರುತ್ತಾರೆ. ರಥ ಎಳೆದು ಹರಕೆ ತೀರಿಸುತ್ತಾರೆ.

ಸ್ಕಂದ ಪುರಾಣ ಹಾಗೂ ಪದ್ಮ ಪುರಾಣದ ಪ್ರಕಾರ ಬಾದಾಮಿ ಭಾಗದಲ್ಲಿ ರಾಕ್ಷಸರ ಕಾಟ ಅತಿಯಾಗಿತ್ತು. ಆಗ ಭಕ್ತರು ಯಜ್ಞ ಮಾಡುತ್ತಾರೆ. ಆಗ ಭಗವಂತ ಬನಶಂಕರಿ ತಾಯಿಯನ್ನು ಸೃಷ್ಟಿ ಮಾಡುತ್ತಾನೆ. ದುರ್ಗಮಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿ ಭಕ್ತರನ್ನು ರಕ್ಷಿಸಿದವಳು ಬನಶಂಕರಿ ತಾಯಿ. ಬನದ ಹುಣ್ಣಿಮೆಯ ದಿನವೇ ಪ್ರತಿ ವರ್ಷ ಈ ಜಾತ್ರೆ ನಡೆಯುತ್ತದೆ. ಬನದ ಹುಣ್ಣಿಮೆ ಬನಶಂಕರಿ ವಿಶೇಷ ದಿನ ಆಗಿರೋದರಿಂದಲೇ ಬನಶಂಕರಿ ದೇವಿ ಎಂದು ಹೆಸರು ಬಂದಿದೆ. ಇಂದು ರಥೋತ್ಸವದ ದಿನ ಬೆಳಿಗ್ಗೆ ಶ್ರೀಸೂಕ್ತದ, ಆಗಮಶಾಸ್ತ್ರದ ಮೂಲಕ ಪೂಜೆ ಅಭಿಷೇಕ ಮಾಡಲಾಗಿದೆ. ಪಂಚಾಮೃತ, ಕ್ಷೀರಾಭಿಷೇಕ, ರುದ್ರಾಭಿಷೇಕ ನಡೆಸಿ ಬೆಳಿಗ್ಗೆಯಿಂದ ರಾತ್ರಿ ಒಂಭತ್ತರವರೆಗೆ ದರ್ಶನಕ್ಕೆ ಅವಕಾಶ ಇರುತ್ತದೆ‌.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಡಬಲ್ ವೈಲ್ಡ್ ಕಾರ್ಡ್​ ಎಂಟ್ರಿಗೆ ಬಿಗ್ ಬಾಸ್ ಮನೆ ಶೇಕ್; ಪ್ರಬಲರೇ ಟಾರ್ಗೆಟ್
ಡಬಲ್ ವೈಲ್ಡ್ ಕಾರ್ಡ್​ ಎಂಟ್ರಿಗೆ ಬಿಗ್ ಬಾಸ್ ಮನೆ ಶೇಕ್; ಪ್ರಬಲರೇ ಟಾರ್ಗೆಟ್
Video: ಆಂಬ್ಯುಲೆನ್ಸ್​ಗೆ ದಾರಿ ಬಿಡದ ಕಾರು ಚಾಲಕನಿಗೆ 2.5 ಲಕ್ಷ ರೂ. ದಂಡ
Video: ಆಂಬ್ಯುಲೆನ್ಸ್​ಗೆ ದಾರಿ ಬಿಡದ ಕಾರು ಚಾಲಕನಿಗೆ 2.5 ಲಕ್ಷ ರೂ. ದಂಡ
Daily Devotional: ಪುಣ್ಯ ಕ್ಷೇತ್ರಗಳಿಗೆ ಹೋದಾಗ ಆಹಾರ ಪದ್ಧತಿ ಹೇಗಿರಬೇಕು
Daily Devotional: ಪುಣ್ಯ ಕ್ಷೇತ್ರಗಳಿಗೆ ಹೋದಾಗ ಆಹಾರ ಪದ್ಧತಿ ಹೇಗಿರಬೇಕು
ಕಾರ್ತಿಕ ಸೋಮವಾರದಂದು ಯಾವೆಲ್ಲಾ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ
ಕಾರ್ತಿಕ ಸೋಮವಾರದಂದು ಯಾವೆಲ್ಲಾ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ
ಪಾಸ್ ತೋರಿಸಿ ಎಂದಿದ್ದಕ್ಕೆ ಬಿಎಂಟಿಸಿ ಸಿಬ್ಬಂದಿಗೆ ಆವಾಜ್ ಹಾಕಿದ ಪ್ರಯಾಣಿಕ
ಪಾಸ್ ತೋರಿಸಿ ಎಂದಿದ್ದಕ್ಕೆ ಬಿಎಂಟಿಸಿ ಸಿಬ್ಬಂದಿಗೆ ಆವಾಜ್ ಹಾಕಿದ ಪ್ರಯಾಣಿಕ
‘ಪುಷ್ಪ 2’ ಟ್ರೇಲರ್​ ಲಾಂಚ್​ನಲ್ಲಿ ಜನಸಾಗರ; ಅಲ್ಲು ಅರ್ಜುನ್ ಕ್ರೇಜ್ ನೋಡಿ
‘ಪುಷ್ಪ 2’ ಟ್ರೇಲರ್​ ಲಾಂಚ್​ನಲ್ಲಿ ಜನಸಾಗರ; ಅಲ್ಲು ಅರ್ಜುನ್ ಕ್ರೇಜ್ ನೋಡಿ
ಮದ್ವೆ ಮನೆಯಲ್ಲಿ ಕಳ್ಳರ ಕೈಚಳಕ: ಚಿನ್ನ, ಹಣ ದೋಚಿದ ಖದೀಮರು!
ಮದ್ವೆ ಮನೆಯಲ್ಲಿ ಕಳ್ಳರ ಕೈಚಳಕ: ಚಿನ್ನ, ಹಣ ದೋಚಿದ ಖದೀಮರು!
BBK 11: ಕಾಂಟ್ರವರ್ಸಿ ಮೂಲಕವೇ ವೈಲ್ಡ್ ಕಾರ್ಡ್​ ಸ್ಪರ್ಧಿ ಎಂಟ್ರಿ
BBK 11: ಕಾಂಟ್ರವರ್ಸಿ ಮೂಲಕವೇ ವೈಲ್ಡ್ ಕಾರ್ಡ್​ ಸ್ಪರ್ಧಿ ಎಂಟ್ರಿ
ಸ್ವಿಮ್ಮಿಂಗ್ ಫುಲ್​ನಲ್ಲಿ ದುರಂತ ಅಂತ್ಯಕಂಡ ಯುವತಿಯರ ಕೊನೆ ಕ್ಷಣದ ವಿಡಿಯೋ!
ಸ್ವಿಮ್ಮಿಂಗ್ ಫುಲ್​ನಲ್ಲಿ ದುರಂತ ಅಂತ್ಯಕಂಡ ಯುವತಿಯರ ಕೊನೆ ಕ್ಷಣದ ವಿಡಿಯೋ!
ಸ್ಕೂಟಿ​ ಡಿಕ್ಕಿಯೊಳಗೆ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಚಾಲಕ, ಮುಂದೇನಾಯ್ತು
ಸ್ಕೂಟಿ​ ಡಿಕ್ಕಿಯೊಳಗೆ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಚಾಲಕ, ಮುಂದೇನಾಯ್ತು