AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಡಿತರ ಅಕ್ಕಿ ಕಳ್ಳ ಸಾಗಾಣೆದಾರರಿಂದ 3 ಲಕ್ಷ ರೂ. ವಸೂಲಿ! ಬಳ್ಳಾರಿ ಎಸ್ಪಿ ಗನ್ ಮ್ಯಾನ್ ಅಂದರ್

ಬಳ್ಳಾರಿಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಪಿ ಸುಮನ್ ಡಿ. ಪನ್ನೇಕರ್ ಅವರ ಗನ್ ಮ್ಯಾನ್ ದೇವರಾಜ್ ಬಂಧನಕ್ಕೊಳಗಾಗಿದ್ದಾರೆ. ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ಅಕ್ಕಿ ಲಾರಿಗಳನ್ನು ಅಡ್ಡಗಟ್ಟಿ, ಎಸ್ಪಿ ಸ್ಕ್ವಾಡ್ ಹೆಸರಿನಲ್ಲಿ ಮೂರು ಲಕ್ಷ ರೂ. ವಸೂಲಿ ಮಾಡಿದ ಆರೋಪ ಕೇಳಿಬಂದಿದೆ. ದೂರಿನ ಮೇರೆಗೆ ಮೋಕಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಪಡಿತರ ಅಕ್ಕಿ ಕಳ್ಳ ಸಾಗಾಣೆದಾರರಿಂದ 3 ಲಕ್ಷ ರೂ. ವಸೂಲಿ! ಬಳ್ಳಾರಿ ಎಸ್ಪಿ ಗನ್ ಮ್ಯಾನ್ ಅಂದರ್
ಎಸ್ಪಿ ಗನ್ ಮ್ಯಾನ್ ದೇವರಾಜ್
ವಿನಾಯಕ ಬಡಿಗೇರ್​
| Edited By: |

Updated on:May 08, 2026 | 10:28 AM

Share

ಬಳ್ಳಾರಿ, ಮೇ 08: ಬೇಲಿಯೇ ಎದ್ದು ಹೊಲ ಮೇಯ್ದಂತೆ ಜಿಲ್ಲೆಯ ಎಸ್ಪಿ ಗನ್ ಮ್ಯಾನ್​ನಿಂದಲೇ 3 ಲಕ್ಷ ರೂ. ಹಣ ವಸೂಲಿ ನಡೆದಿದೆ. ಅಕ್ರಮ ಪಡಿತರ ಅಕ್ಕಿ ಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ (Ballary) ಎಸ್ಪಿ ಸುಮನ್ ಡಿ. ಪನ್ನೇಕರ್ ಅವರ ಗನ್ ಮ್ಯಾನ್ ದೇವರಾಜ್ ಬಂಧನಕ್ಕೊಳಗಾಗಿದ್ದು, ಅಕ್ರಮ ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿದ್ದ ಶರಭಯ್ಯ ಎಂಬುವವರಿಂದ ಹಣ ವಸೂಲಿ ಮಾಡಿದ ಆರೋಪದಡಿ ದೇವರಾಜ್ ಹಾಗೂ ಆತನ ಸಹಚರರನ್ನು ಮೋಕಾ ಪೊಲೀಸರು ಬಂಧಿಸಿದ್ದಾರೆ.

ಮುಖ್ಯಾಂಶಗಳು

  • ಬಳ್ಳಾರಿ ಎಸ್ಪಿ ಗನ್ ಮ್ಯಾನ್ ದೇವರಾಜ್ ಅಕ್ರಮ ಅಕ್ಕಿ ಸಾಗಾಣಿಕೆದಾರರಿಂದ ಹಣ ವಸೂಲಿ ಮಾಡಿದ ಆರೋಪದಡಿ ಬಂಧನ.
  • ಎಸ್ಪಿ ಸ್ಕ್ವಾಡ್ ಹೆಸರಿನಲ್ಲಿ ಲಾರಿಗಳನ್ನು ಅಡ್ಡಗಟ್ಟಿ ಐದು ಲಕ್ಷ ರೂ. ಬೇಡಿಕೆಯಿಟ್ಟು, ಮೂರು ಲಕ್ಷ ರೂ. ಸುಲಿಗೆ.
  • ಖುದ್ದು ಎಸ್ಪಿ ಸುಮನ್ ಡಿ. ಪನ್ನೇಕರ್ ಅವರ ಸೂಚನೆ ಮೇರೆಗೆ ಗನ್ ಮ್ಯಾನ್ ದೇವರಾಜ್ ಮತ್ತು ಸಹಚರರ ವಿಚಾರಣೆ.

ನಡೆದಿದ್ದೇನು?

ಮಡಕೇರಿಯಿಂದ ಆಂಧ್ರಪ್ರದೇಶದತ್ತ ಪಡಿತರ ಅಕ್ಕಿ ತುಂಬಿಕೊಂಡು ತೆರಳುತ್ತಿದ್ದ ಎರಡು ಲಾರಿಗಳನ್ನು ಅಡ್ಡಗಟ್ಟಿದ್ದ ಆರೋಪಿಗಳು, ತಾವು ಎಸ್ಪಿ ಸ್ಕ್ವಾಡ್ ಅಧಿಕಾರಿಗಳು ಎಂದು ಹೇಳಿ ಐದು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬಳಿಕ ಮೂರು ಲಕ್ಷ ರೂ. ವಸೂಲಿ ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಣ ನೀಡದಿದ್ದರೆ ಲಾರಿಗಳನ್ನು ಸೀಜ್ ಮಾಡಿ ಜೈಲಿಗೆ ಕಳುಹಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆಯೆಂದು ಶರಭಯ್ಯ ಮೋಕಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ ಇನ್ಮುಂದೆ ಒಂದೇ ಕರೆಯಲ್ಲಿ ಸಿಗುತ್ತೆ ಪೊಲೀಸ್-ಆರೋಗ್ಯ-ಅಗ್ನಿಶಾಮಕ ಸೇವೆ; ರಾಜ್ಯದಲ್ಲಿ ಹೈಟೆಕ್ ‘ಹೆಲ್ತ್ ಎಮರ್ಜೆನ್ಸಿ ಸೆಂಟರ್’ ಲೋಕಾರ್ಪಣೆ!

ಆರೋಪಿಗಳ ವಿಚಾರಣೆ

ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಗನ್ ಮ್ಯಾನ್ ದೇವರಾಜ್ ಎಸ್ಪಿ ಸ್ಕ್ವಾಡ್ ಹೆಸರಿನಲ್ಲಿ ಹಣ ವಸೂಲಿ ಮಾಡಿರುವುದು ಖಚಿತವಾಗಿದೆ. ಈ ಹಿನ್ನೆಲೆ ಎಸ್ಪಿ ಸುಮನ್ ಡಿ. ಪನ್ನೇಕರ್ ಅವರೇ ಕ್ರಮ ಕೈಗೊಂಡು ದೇವರಾಜ್ ಬಂಧನಕ್ಕೆ ಸೂಚನೆ ನೀಡಿದ್ದಾರೆ. ಸದ್ಯ ಮೋಕಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:17 am, Fri, 8 May 26

Follow Us
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ